Homeಮುಖಪುಟಮಹಿಳಾ ಅರಣ್ಯಾಧಿಕಾರಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಟಿಆರ್‍ಎಸ್ ಶಾಸಕನ ಸಹೋದರ

ಮಹಿಳಾ ಅರಣ್ಯಾಧಿಕಾರಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಟಿಆರ್‍ಎಸ್ ಶಾಸಕನ ಸಹೋದರ

- Advertisement -
- Advertisement -

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್)ನ ಶಾಸಕರಾದ ಕೊನೇರು ಕೋನಪ್ಪನವರ ಸಹೋದರ ಕೊನೇರು ಕೃಷ್ಣರಾವ್ ಎಂಬುವವರು ಮಹಿಳಾ ಅರಣ್ಯಾಧಿಕಾರಿ ಮೇಲೆ ಬಡಿಗೆಯಿಂದ ಅಮಾನುಷವಾಗಿ ಹಲ್ಲೆ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಖಂಡನೆ ವ್ಯಕ್ತವಾಗಿದೆ.

ಫಾರೆಸ್ಟ್ ರೇಂಜ್ ಆಫಿಸರ್ ಆದ ಸಿ.ಅನಿತಾರವರು, ತೆಲಂಗಾಣದ ಸಿರ್ಪುಲ್ ಮಂಡಲ ವ್ಯಾಪ್ತಿಗೆ ಬರುವ ಸರ್ಸಾಲ ಹಳ್ಳಿಯಲ್ಲಿ ಸರ್ಕಾರಕ್ಕೆ ಸೇರಿದ ಮೀಸಲು ಅರಣ್ಯ ಪ್ರದೇಶದಲ್ಲಿ ‘ಹರಿಥಾ ಹರಾಮ್’ ಎಂಬ ಯೋಜನೆಯಡಿಯಲ್ಲಿ ಸಸಿಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ದಿ ಇಂಡಿಯನ್ ಎಕ್ಸ್ ಪ್ರೆಸ್ ಇದರ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ.

ಮೀಸಲು ಅರಣ್ಯ ಭೂಮಿಯನ್ನು ಈ ಹಿಂದೆಯೇ ಗುರುತಿಸಲಾಗಿತ್ತು ಮತ್ತು ಅಲ್ಲಿ ಇಂದು ಸಸಿನೆಡುವ ಕಾರ್ಯಕ್ರಮ ಇತ್ತು. ಇದಕ್ಕಾಗಿ ಸಿ.ಅನಿತಾರವರು ತಮ್ಮ ಅರಣ್ಯ ಇಲಾಖೆಯ ಸುಮಾರು 20 ಸಿಬ್ಬಂದಿಗಳೊಂದಿಗೆ ಆಗಮಿಸಿ ಕೆಲಸ ಆರಂಭಿಸಿದ್ದರು. ವಿಷಯ ತಿಳಿದ ಕೋನೆರು ಕೃಷ್ಣರಾವ್‍ರವರು ತಮ್ಮ ಬೆಂಬಲಿಗರೊಂದಿಗೆ ಧಾವಿಸಿ ಮನಬಂದಂತೆ ಥಳಿಸಲು ಆರಂಭಿಸಿದ್ದಾರೆ. ಸಿ. ಅನಿತಾರವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಟ್ರಾಕ್ಟರ್ ಹತ್ತಿದರೂ ಸಹ ಬಿಡದ ಶಾಸಕನ ತಮ್ಮ ಕೈಲಿದ್ದ ಬಡಿಗೆಗಳಿಂದ ಥಳಿಸಿದ್ದಾರೆ.

ಈ ಘಟನೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕಿತ್ತು. ಏಕೆ, ಏನು ಮಾಡುತ್ತಿದ್ದಾರೆ ಎಂಬುದನ್ನು ವಿಚಾರಿಸುವ ಸೌಜನ್ಯವೂ ಇಲ್ಲದೇ ಮಹಿಳಾ ಅಧಿಕಾರಿಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಸರಿಯಲ್ಲ, ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಜಾಮೀನು ನೀಡಬಾರದೆಂದು ಕೆಲವರು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...