Homeಮುಖಪುಟಯುಪಿ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಧಿಕಾರಿ ಬರೆದ ಪತ್ರ ವೈರಲ್; ನಮಗೆ ಸಿಕ್ಕಿಲ್ಲವೆಂದ ಪೊಲೀಸರು

ಯುಪಿ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಧಿಕಾರಿ ಬರೆದ ಪತ್ರ ವೈರಲ್; ನಮಗೆ ಸಿಕ್ಕಿಲ್ಲವೆಂದ ಪೊಲೀಸರು

ಉನ್ನತ ಅಧಿಕಾರಿಯೊಬ್ಬರು ಪತ್ರದ ಬಗ್ಗೆ ಸಮಗ್ರ ವಿವರಣೆ ಕೇಳಿದ್ದು, ಅದನ್ನು ಪರಿಶೀಲಿಸಿದಲ್ಲಿ, ಪೊಲೀಸರು ಅಪರಾಧಿಗಳಿಗೆ ಸಹಾಯ ಮಾಡುತ್ತಿರುವುದಕ್ಕೆ ಪ್ರಖರ ಪುರಾವೆಗಳು ಸಿಗಬಹುದು ಎನ್ನಲಾಗಿದೆ

- Advertisement -
- Advertisement -

ಕುಖ್ಯಾತ ದರೋಡೆಕೋರ ವಿಕಾಸ್ ದುಬೆ ಮೇಲೆ ಶುಕ್ರವಾರ ವಿಫಲ ದಾಳಿ ನಡೆಸಿದ ಅಧಿಕಾರಿ ”ಪೊಲೀಸರ ಎಡೆಯಲ್ಲಿ ದುಬೆಯ ಮಾಹಿತಿದಾರ” ಇರುವ ಬಗ್ಗೆ ಬರೆದಿರುವ ಪತ್ರದ ಬಗ್ಗೆ ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉನ್ನತ ಅಧಿಕಾರಿಯೊಬ್ಬರು ಪತ್ರದ ಬಗ್ಗೆ ಸಮಗ್ರ ವಿವರಣೆ ಕೇಳಿದ್ದು, ಅದನ್ನು ಪರಿಶೀಲಿಸಿದಲ್ಲಿ, ಪೊಲೀಸರು ಅಪರಾಧಿಗಳಿಗೆ ಸಹಾಯ ಮಾಡುತ್ತಿರುವುದಕ್ಕೆ ಪ್ರಖರ ಪುರಾವೆಗಳು ಸಿಗಬಹುದು ಎನ್ನಲಾಗಿದೆ.

ಪೊಲೀಸರ ಹತ್ಯಾಕಾಂಡದ ನಂತರ ವಿಕಾಸ್ ದುಬೆ ಕಾಣೆಯಾಗಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿರುವ ಈ ಪತ್ರದ ವಿವಾದ ಹಾಗೂ ಆಕ್ರೋಶದ ಮಧ್ಯೆ,  ಕಾನ್ಪುರದ ಪೊಲೀಸ್ ಮುಖ್ಯಸ್ಥ ಸೋಮವಾರ ರಾತ್ರಿ ಇದು ಪೊಲೀಸ್ ದಾಖಲೆಗಳಲ್ಲಿ ಕಂಡುಬಂದಿಲ್ಲ ಆದರೆ ಅದಕ್ಕಾಗಿ ಶೋಧ ನಡೆಯುತ್ತಿದೆ ಎಂದು ಹೇಳಿದ್ದಾರೆ.

ವಿಕಾಸ್ ದುಬೆ ಮತ್ತು ಅವರ ಜನರು ಹೊಂಚುಹಾಕಿ ಗುಂಡಿಕ್ಕಿ ಕೊಂದಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ದೇವೇಂದ್ರ ಕುಮಾರ್ ಮಿಶ್ರಾ ಅವರು ಮೂರು ತಿಂಗಳ ಹಿಂದೆ ಆಗಿನ ಕಾನ್ಪುರದ ಪೊಲೀಸ್ ಮುಖ್ಯಸ್ಥ ಅನಂತ್ ಡಿಯೋ ತಿವಾರಿ ಅವರಿಗೆ ‘ಈ ಪತ್ರವನ್ನು ಬರೆದಿದ್ದಾರೆ’ ಎಂದು ಹೇಳಲಾಗಿದೆ.

ದರೋಡೆಕೋರರಿಗೆ ಪೊಲೀಸರು ಸಹಾಯ ಮಾಡುವ ಬಗ್ಗೆ ಮತ್ತು ವಿಶೇಷವಾಗಿ ಈಗಾಗಲೇ ಅಮಾನತುಗೊಂಡಿರುವ ಚೌಬೆಪುರ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ವಿನಯ್ ತಿವಾರಿ ಬಗ್ಗೆ ಅಧಿಕಾರಿ ಅದರಲ್ಲಿ  ದೂರು ನೀಡಿದ್ದರು ಎಂದು ಹೇಳಲಾಗುತ್ತಿದೆ.

ವಿನಯ್ ತಿವಾರಿ ಅವರು ಅಪರಾಧಿಗೆ ಸಹಾಯ ಮಾಡಿ, ಪೊಲೀಸರ ತನಿಖೆಯಿಂದ ಅವರನ್ನು ರಕ್ಷಿಸಿದ್ದಾರೆ ಎಂದು ಮಿಶ್ರಾ ಆರೋಪಿಸಿದ್ದಾರೆ. ಆ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಕೋರಲಾಗಿದೆ.

“ಅಂತಹ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ನನಗೆ ತಿಳಿದಿದೆ. ಡಿಎಸ್ಪಿ ಕಚೇರಿ ಮತ್ತು ಕಾನ್ಪುರ ಎಸ್ಎಸ್ಪಿ (ಹಿರಿಯ ಪೊಲೀಸ್ ವರಿಷ್ಠಾಧಿಕಾರಿ) ರವಾನೆ ಮತ್ತು ಸ್ವೀಕರಿಸುವ ವಿಭಾಗಗಳಲ್ಲಿ ಪ್ರಾಥಮಿಕ ಶೋಧವನ್ನು ನಡೆಸಲಾಯಿತು. ಇಲ್ಲಿಯವರೆಗೆ ಈ ಪತ್ರದ ಯಾವುದೇ ದಾಖಲೆಗಳು ಸಿಗಲಿಲ್ಲ. ಆದರೆ ನಾವು ಅದರೊಂದಿಗೆ ಇನ್ನೂ ಹೆಚ್ಚಿನ ವಿವರಗಳನ್ನು ಹುಡುಕುತ್ತಿದ್ದೇವೆ. ಹೆಚ್ಚಿನ ವಿವರಗಳನ್ನು ಸಿಕ್ಕರೆ ಅದನ್ನು ಹಂಚಿಕೊಳ್ಳಲು ನಾವು ಹಿಂಜರಿಯುವುದಿಲ್ಲ” ಎಂದು ಕಾನ್ಪುರದ ಪೊಲೀಸ್ ಮುಖ್ಯಸ್ಥ ದಿನೇಶ್ ಕುಮಾರ್ ಪಿ ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ ವಿಕಾಸ್ ದುಬೆಯನ್ನು ಬಂಧಿಸುವ ಉದ್ದೇಶದಿಂದ ಮೂರು ಪೊಲೀಸ್ ಠಾಣೆಗಳಿಂದ 50 ಪೊಲೀಸರ ತಂಡವನ್ನು ಮಿಶ್ರಾ ಮುನ್ನಡೆಸಿದರು. ದುಬೆ ವಿರುದ್ಧ ಕೊಲೆ, ಅಪಹರಣ, ಸುಲಿಗೆ ಮತ್ತು ಗಲಭೆ ಸೇರಿದಂತೆ 60 ಪ್ರಕರಣಗಳು ದಾಖಲಾಗಿದೆ.

ಪೊಲೀಸರು ನಡೆಸುವ ದಾಳಿಯ ಬಗ್ಗೆ ದುಬೆಗೆ ಮಾಹಿತಿ ನೀಡಲಾಗಿತ್ತು. ಹಾಗಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಸಶಸ್ತ್ರ ಗ್ಯಾಂಗ್‌ನೊಂದಿಗೆ ಅವರು ಸಿದ್ಧರಾಗಿದ್ದರು. ಈ ಅಪರಾಧಿಯೊಂದಿಗಿನ ಸಂಪರ್ಕದ ಅನುಮಾನದ ಮೇಲೆ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಪೊಲೀಸರ ಮಾರಣಹೋಮ ನಡೆದು ನಾಲ್ಕು ದಿನಗಳು ಕಳೆದರೂ ವಿಕಾಸ್ ದುಬೆಯನ್ನು ಉತ್ತರ ಪ್ರದೇಶದ ಪೊಲೀಸರು ಇನ್ನೂ ಬಂಧಿಸಿಲ್ಲ. ಸೋಮವಾರ ಅವರ ಮಾಹಿತಿ ನೀಡಿದವರ ಬಹುಮಾನವನ್ನು 2.5 ಲಕ್ಷ ರೂ.ಗೆ ಏರಿಸಲಾಯಿತು. ಇಲ್ಲಿಯವರೆಗೆ ದುಬೆ ಇಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ನಿನ್ನೆ ಸಂಜೆ ಕಾನ್ಪುರ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ಇನ್ನೂ ಮೂರು ಬಂಧನಗಳಾಗಿರುವುದು ದೃಢಪಟ್ಟಿದೆ. ಅವರಲ್ಲಿ ಒಬ್ಬರು ದುಬೆಯ ನೆರೆಹೊರೆಯವರಾಗಿದ್ದು, ಇನ್ನೊಬ್ಬರು ದುಬೆಯ ಸಹಾಯಕ ಮತ್ತು ಮೂರನೇ ವ್ಯಕ್ತಿ ಮಹಿಳೆ ಎಂದು ತಿಳಿದುಬಂದಿದೆ.

ಅಮಾನತುಗೊಂಡ ಪೊಲೀಸರು ಅದೇ ಪೊಲೀಸ್ ಠಾಣೆ ಚೌಬೆಪುರದವರಾಗಿದ್ದು, ದುಬೆಯ ಜೊತೆಗೆ ನಿಯಮಿತ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪವಿದೆ. ಕಳೆದ ನಾಲ್ಕು ದಿನಗಳಲ್ಲಿ 100 ಕ್ಕೂ ಹೆಚ್ಚು ಪೊಲೀಸರ ಕರೆ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ.


ಇದನ್ನೂ ಓದಿ: ವಿಕಾಸ್ ದುಬೆಗೆ ‘ದಾಳಿಯ ಮಾಹಿತಿ ಸೋರಿಕೆ’: 3 ಕಾನ್ಪುರ ಪೊಲೀಸರ ಮೇಲೆ ಶಂಕೆ – ಅಮಾನತು


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...