ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕಾ ಹೊರಗೆ ಬರಲಿದೆ: ಟ್ರಂಪ್ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕಾ ಹೊರಗೆ ಬರಲಿದೆ,ಟ್ರಂಪ್ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆ (WHO)ಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಚೀನಾದ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಆರಂಭಿಕ ಹಂತಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಗುಳಿಯುವುದಾಗಿ ಪತ್ರ ಬರೆದಿದ್ದಾರೆ.

“ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸುವಲ್ಲಿ ನೀವು ಮತ್ತು ನಿಮ್ಮ ಸಂಸ್ಥೆ ಪುನರಾವರ್ತಿತವಾಗಿ ಮಾಡಿದ ತಪ್ಪುಗಳು ಜಗತ್ತಿಗೆ ಅತ್ಯಂತ ದುಬಾರಿಯಾಗಿದೆ ಎಂಬುದು ಸ್ಪಷ್ಟವಾಗಿದೆ. WHOಗೆ  ಮುಂದುವರೆಯಲು ಇರುವ ಏಕೈಕ ಮಾರ್ಗವೆಂದರೆ ಚೀನಾದಿಂದ ಸ್ವಾತಂತ್ರ್ಯವನ್ನು ಪ್ರದರ್ಶಿಸಿಸುವುದು”ಎಂದು ಟೆಡ್ರೊಸ್ ಅಧಾನೊಮ್‌ಗೆ ಬರೆದ ಪತ್ರದಲ್ಲಿ ಟ್ರಂಪ್ ಹೇಳಿದ್ದಾರೆ.

ಟ್ರಂಪ್ ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ ಕಳೆದ ಡಿಸೆಂಬರ್‌ನಿಂದ ಪ್ರತಿ ಸಂದರ್ಭವನ್ನು ವಿವರಿಸಿದ್ದು, WHO ಜಗತ್ತಿಗೆ ಕೆಟ್ಟ ಸಲಹೆಯನ್ನು ನೀಡಿತು ಎಂದಿದ್ದಾರೆ.

ಪ್ರಮುಖ ಸುಧಾರಣೆಗಳಿಗೆ ಬದ್ಧರಾಗಲು ಟ್ರಂಪ್ ಟೆಡ್ರೊಸ್ ಅಧಾನೊಮ್‌ಗೆ 30 ದಿನಗಳ ಕಾಲಾವಕಾಶ ನೀಡಿದ್ದು, ಹಾಗೂ WHO ಇದನ್ನು ಅನುಸರಿಸದಿದ್ದರೆ, “ನಾನು WHOಗೆ ಅಮೆರಿಕಾದ ಹಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತೇನೆ ಮತ್ತು ನಮ್ಮ ಸದಸ್ಯತ್ವವನ್ನು ಮರುಪರಿಶೀಲಿಸುತ್ತೇನೆ” ಎಂದು ಎಚ್ಚರಿಸಿದ್ದಾರೆ.

WHOದ ನೀತಿ ನಿರೂಪಣಾ ಸಂಸ್ಥೆ ಸೋಮವಾರ ಸಭೆ ಪ್ರಾರಂಭಿಸಿದ ಕೆಲವೇ ಗಂಟೆಗಳ ನಂತರ ಟ್ರಂಪ್‌ರ ಪತ್ರವನ್ನು ಕಳುಹಿಸಲಾಗಿದೆ. ಈ ಸಭೆಯಲ್ಲಿ ಕೊರೊನಾ ವೈರಸ್‌ನ ಮೂಲದ ತನಿಖೆಯನ್ನು ವಿರೋಧಿಸಿದ್ದ ಚೀನಾ ಹಿಂದೆ ಸರಿಯಬೇಕಾಯಿತು. ಔಪಚಾರಿಕ ನಿರ್ಣಯವನ್ನು ಇಂದು ಅಂಗೀಕರಿಸುವ ನಿರೀಕ್ಷೆಯಿದೆ.

ಟ್ರಂಪ್ ಪತ್ರದಲ್ಲಿ “ಸಂಘಟನೆಯನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ನನ್ನ ಆಡಳಿತವು ಈಗಾಗಲೇ ನಿಮ್ಮೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ” ಎಂದು ಬರೆದಿದ್ದಾರೆ.

WHO ಯಾವುದೇ ವಿಪರೀತ ಸುಧಾರಣೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಾದಿಸಲಾಗಿದೆ. 194 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಹೊಂದಿರುವ ವಿಶ್ವ ಆರೋಗ್ಯ ಸಭೆ, ಮೊಟಕುಗೊಂಡ ಅಧಿವೇಶನಕ್ಕಾಗಿ ವೀಡಿಯೊ ಸಮ್ಮೇಳನದಲ್ಲಿ ಸಭೆ ನಡೆಸುತ್ತಿದೆ, ಅದು ಕೆಲವೇ ಗಂಟೆಗಳಲ್ಲಿ ಕೊನೆಗೊಳ್ಳಲಿದೆ.

“ಅಮೇರಿಕಾ ಅಧ್ಯಕ್ಷರು ಹೇಳುತ್ತಿರುವ ಯಾವುದೇ ಪ್ರಮುಖ ಸುಧಾರಣೆಯನ್ನು ಸಾಮಾನ್ಯ ಸಂಸ್ಥೆ, ವಿಶ್ವ ಆರೋಗ್ಯ ಸಭೆ ಅನುಮೋದನೆಯೊಂದಿಗೆ ಮಾತ್ರ ಮಾಡಬಹುದಾಗಿದೆ” ಎಂದು ರಾಜತಾಂತ್ರಿಕರು ಹೇಳಿದ್ದಾರೆ.

ಖಚಿತವಾಗಿ ಹೇಳುವುದಾದರೆ, ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವ ಬಗ್ಗೆ ಟ್ರಂಪ್ ಆಡಳಿತವು ಮಾತನಾಡುತ್ತಿರುವುದು ಇದೇ ಮೊದಲಲ್ಲ. ಆದರೆ WHO ದ ಮುಖ್ಯಸ್ಥರಿಗೆ ಬರೆದ ಪತ್ರವು ಬೆದರಿಕೆಯನ್ನು ಔಪಚಾರಿಕಗೊಳಿಸುತ್ತದೆ.


ಓದಿ: ಕೊರೊನಾ ವೈರಸ್ ಹುಟ್ಟಿದ್ದು ಅಮೆರಿಕಾದ ಮಿಲಿಟರಿ ಲ್ಯಾಬ್‌ನಲ್ಲಿ: ಚೀನಾ ಆರೋಪ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here