ಮಗು ಸಾಯುತ್ತಿದ್ದರೂ ವೈದ್ಯರು ಮುಟ್ಟಿಲ್ಲವೆಂದು ಆರೋಪ; ಹೃದಯ ವಿದ್ರಾವಕಾರಿ ಘಟನೆ

ಹೃದಯ ವಿದ್ರಾವಕಾರಿ ಘಟನೆ; ಮಗು ಸಾಯುತ್ತಿದ್ದರೂ ಮುಟ್ಟದ ವೈದ್ಯರು

ಆಸ್ಪತ್ರೆಯ ಕಟ್ಟಡದೊಳಗೆ ಯುವ ದಂಪತಿಗಳಿಬ್ಬರು ತಮ್ಮ ಒಂದು ವರ್ಷದ ಗಂಡು ಮಗುವನ್ನು ಅಪ್ಪಿ ಹಿಡಿದುಕೊಂಡು ಅಳುತ್ತಿರುವ ಹೃದಯ ವಿದ್ರಾವಕಾರಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದು ಉತ್ತರ ಪ್ರದೇಶದ ಕನೌಜ್ ಪಟ್ಟಣದ್ದೆಂದು ವರದಿಯಾಗಿದೆ.

ತಮ್ಮ ಒಂದು ವರ್ಷದ ಮಗುವಿಗೆ ಜ್ವರ ಹಾಗೂ ಕತ್ತಿನ ಭಾಗ ಊದಿ ಕೊಂಡಿದ್ದರಿಂದ ಆಸ್ಪತ್ರೆಗೆ ಧಾವಿಸಿದ್ದರು. ಆದರೆ ಆಸ್ಪತ್ರೆಯ ವೈದ್ಯರು ಮಗುವನ್ನು ಮುಟ್ಟಲು ನಿರಾಕರಿಸಿ, ಮಗುವನ್ನು ಆಸ್ಪತ್ರೆಯಿಂದ 90 ಕಿ.ಮಿ. ದೂರದ ಕಾನ್ಪುರಕ್ಕೆ ಕರೆದೊಯ್ಯಲು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ಆಸ್ಪತ್ರೆಯ ವೈದ್ಯರು ಮತ್ತು ಕನೌಜ್‌ ಜಿಲ್ಲಾಡಳಿತ ಇದನ್ನು ನಿರಾಕರಿಸಿದೆ.

ನಿನ್ನೆ ಸಂಜೆ 4.45 ರ ಸುಮಾರಿಗೆ ಚಿತ್ರೀಕರಿಸಿದ ವೀಡಿಯೊವೊಂದರಲ್ಲಿ ದಂಪತಿಗಳಾದ ಪ್ರೇಮ್‌‌ ಚಂದ್ ಮತ್ತು ಆಶಾ ದೇವಿ ತಮ್ಮ ಮಗು ಅನುಜ್ ಮೃತ ದೇಹವನ್ನು ಹಿಡಿದು ರೋಧಿಸುತ್ತಿರುವುದು ಕಾಣಬಹುದಾಗಿದೆ.

ಮತ್ತೊಂದು ವೀಡಿಯೋ ಕ್ಲಿಪ್ ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ಹಾಸಿಗೆಯ ಮೇಲೆ ಮಗುವನ್ನು ವೈದ್ಯರು ಪರೀಕ್ಷಿಸುತ್ತಿರುವುದನ್ನು ತೋರಿಸುತ್ತದೆ.

“ಜನರು ತಮ್ಮ ಫೋನ್‌ಗಳಲ್ಲಿ ನಮ್ಮನ್ನು ಚಿತ್ರೀಕರಿಸಲು ಪ್ರಾರಂಭಿಸಿದ ನಂತರವೇ ಆ ಪರೀಕ್ಷೆ ಮಾಡಿದ್ದಾರೆ. ಅದಕ್ಕೂ ಮೊದಲು ಯಾವುದೇ ವೈದ್ಯರು ನನ್ನ ಮಗುವನ್ನು ಮುಟ್ಟಲು ಸಿದ್ಧರಿರಲಿಲ್ಲ. ನಾವು 30 ನಿಮಿಷಗಳ ಕಾಲ ಅಲ್ಲಿದ್ದೆವು. ಅವರು ‘ಕಾನ್ಪುರಕ್ಕೆ ಕರೆದೊಯ್ಯಿರಿ’ ಎಂದು ಹೇಳುತ್ತಲೇ ಇದ್ದರು. ನಾನು ಒಬ್ಬ ಬಡ ವ್ಯಕ್ತಿ ನನ್ನ ಬಳಿ ಹಣವಿಲ್ಲ. ನಾನು ಏನು ಮಾಡಬಹುದಿತ್ತು” ಎಂದು ಪ್ರೇಮ್ ಚಂದ್ ಹೇಳಿದ್ದಾರೆ.

“ಅವನ ಕುತ್ತಿಗೆ ಊದಿಕೊಂಡಿತ್ತು, ಅವರು ನಮ್ಮನ್ನು 30-40 ನಿಮಿಷಗಳ ಕಾಲ ಕಾಯಿಸಿದ್ದರು. ನಂತರ ದಾಖಲಿಸಲಾಯಿತಾದರೂ ಆ ಹೊತ್ತಲ್ಲಿ ಮಗು ಸತ್ತು ಹೋಗಿತ್ತು” ಎಂದು ಮಗುವಿನ ತಾಯಿ ಆಶಾ ದೇವಿ ಹೇಳಿದ್ದಾರೆ.

ಜಿಲ್ಲೆಯ ವೈದ್ಯರು ಮತ್ತು ಅಧಿಕಾರಿಗಳು ಆರೋಪವನ್ನು ನಿರಾಕರಿಸಿ ಯಾವುದೇ ನಿರ್ಲಕ್ಷ್ಯ ನಡೆದಿಲ್ಲ ಎಂದಿದ್ದಾರೆ.

“ನಿನ್ನೆ ಸಂಜೆ 4.15 ಕ್ಕೆ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಯಿತು. ಮಗುವನ್ನು ತುರ್ತು ವಾರ್ಡ್‌ಗೆ ದಾಖಲಿಸಲಾಗಿದೆ. ಪ್ರಕರಣವು ತುಂಬಾ ಗಂಭೀರವಾಗಿತ್ತು, ಅದಕ್ಕೆ ಮಕ್ಕಳ ತಜ್ಞರನ್ನು ತುರ್ತು ವಾರ್ಡ್‌ಗೆ ಕರೆಸಲಾಯಿತು ಆದರೆ 30 ನಿಮಿಷಗಳ ಅಂತರದಲ್ಲಿ ಮಗು ಸಾವನ್ನಪ್ಪಿತು. ವೈದ್ಯರು ಅವರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು ಆದರೆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮೇಲ್ನೋಟಕ್ಕೆ ಯಾವುದೇ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ತೋರುತ್ತದೆ ” ಎಂದು ಕನೌಜ್‌ನ ಸರ್ಕಾರಿ ಉನ್ನತ ಅಧಿಕಾರಿ ರಾಜೇಶ್ ಕುಮಾರ್ ಮಿಶ್ರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಓದಿ: ಉತ್ತರ ಪ್ರದೇಶ: ’ಪರೀಕ್ಷೆ ಇಲ್ಲ-ಕರೋನಾ ಇಲ್ಲ’ ಎಂದ ನಿವೃತ್ತ ಐಎಎಸ್ ಅಧಿಕಾರಿಯ ಮೇಲೆ ಎಫ್‌ಐಆರ್


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here