Homeಮುಖಪುಟಜಾಮಿಯ ವಿವಿ ಹಿಂಸೆ ; ಡಿ.15ರ ಕರಾಳ ದಿನ, ಪುಸ್ತಕ ಮನೆಯಲ್ಲಿ ಪೊಲೀಸರ ಪುಂಡಾಟಿಕೆ

ಜಾಮಿಯ ವಿವಿ ಹಿಂಸೆ ; ಡಿ.15ರ ಕರಾಳ ದಿನ, ಪುಸ್ತಕ ಮನೆಯಲ್ಲಿ ಪೊಲೀಸರ ಪುಂಡಾಟಿಕೆ

- Advertisement -
- Advertisement -

ಫೆಬ್ರವರಿ 15ರ ನಂತರ ದೆಹಲಿಯ ಜಾಮಿಯಾ ವಿವಿಯ ಹಳೆ ಗ್ರಂಥಾಲಯದಲ್ಲಿ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಯವರು ಪುಂಡರಂತೆ ವರ್ತಿಸಿದ ಸಿಸಿಟಿವಿ ವಿಡಿಯೋಗಳು ಹೊರಬೀಳತೊಡಗಿವೆ. ಒಂದಕ್ಕೊಂದು ವಿಡಿಯೋಗಳು ಭಯಾನಕವಾಗಿದ್ದು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಲ್ಲೆ ಮೀರಿರುವುದನ್ನು ತೋರಿಸುತ್ತಿವೆ.

ಎಸ್‌ಐಟಿಯವರು ಮಾಧ್ಯಮಗಳಿಗೆ ಒಂದು ಕ್ಲಿಪ್ಪಿಂಗ್ ನೀಡಿ, ವಿದ್ಯಾರ್ಥಿಯೋರ್ವನ ಕೈಲ್ಲಿ ಕಲ್ಲಿದ್ದವು, ಅದಕ್ಕಾಗಿ ನಾವು ಹಲ್ಲೆ ಮಾಡಬೇಕಾಯಿತು ಎಂದು ಪ್ರಚಾರ ಮಾಡಲು ಯತ್ನಿಸಿದರು. ಅದು ಕಲ್ಲಲ್ಲ ವಾಲೆಟ್ ಎಂಬುದನ್ನು ಅಲ್ಟ್ ನ್ಯೂಸ್ ಸೂಕ್ಷ್ಮ ಪರಿಶೀಲನೆ ಮೂಲಕ ತೋರಿಸಿದೆ.


ಇದನ್ನೂ ಓದಿ: ಜಾಮಿಯಾ ಹಿಂಸೆ | ವಿದ್ಯಾರ್ಥಿಗಳ ಕೈಯಲ್ಲಿ ಇದ್ದುದು ಕಲ್ಲಲ್ಲ, ವಾಲೆಟ್..


ಈಗ ದಿ ಕ್ವಿಂಟ್ 4 ಸಿಸಿಟಿವಿ ಕ್ಯಾಮೆರಾಗಳಿಂದ ಹೆಕ್ಕಿದ 4 ಹೊಸ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ದೇಶದ ಮುಂದೆ ಇಟ್ಟಿದೆ. ಫ್ಯಾಸಿಸ್ಟ್ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ವ್ಯವಸ್ಥೆ ಗೂಂಡಾಗಳ ಲೆವೆಲ್‌ಗೆ ಇಳಿದಿರುವುದಕ್ಕೆ ಇದು ಸಾಕ್ಷ್ಯದಂತಿದೆ. ವಿಡಿಯೋ ನೋಡಿ.

Jamia Violence: 4 New CCTV Footage Show Police Beating Students, Breaking CCTV

Amid uproar over CCTV footage showing police brutality on campus, The Quint got exclusive access to 4 new CCTV footage that show police beating up students and breaking CCTV cameras in Jamia library. The cops can also be seen vandalising the university's property. Watch the video for more.Click here to read: https://bit.ly/2vD4s1b

Posted by The Quint on Monday, February 17, 2020

ಕ್ಯಾಮೆರಾ 1
ಗ್ರಂಥಾಲಯದ ರೀಡಿಂಗ್ ರೂಮ್‌ನಲ್ಲಿ ಪೊಲೀಸರು ಮತ್ತು ಪ್ಯಾರಾ ಮಿಲಿಟರಿಯವರು ವಿದ್ಯಾರ್ಥಿಗಳನ್ನು ಮನ ಬಂದಂತೆ ಲಾಠಿಗಳಿಂದ ಥಳಿಸುತ್ತಿದ್ದಾರೆ. ರಕ್ಷಣೆಗಾಗಿ ವಿದ್ಯಾರ್ಥಿಗಳು ಎದ್ದು ಬಿದ್ದು ಓಡುತ್ತಿದ್ದಾರೆ. ಪೊಲೀಸನೊಬ್ಬ ಸಿಸಿಟಿವಿ ಕ್ಯಾಮೆರಾಕ್ಕೆ ಲಾಠಿಯಿಂದ ಹೊಡೆದು ಅದನ್ನು ಸ್ಥಗಿತಗೊಳಿಸುತ್ತಾನೆ.

ಕ್ಯಾಮೆರಾ 2
ವಿವಿಯ ಹಳೆ ಗ್ರಂಥಾಲಯದ ಪ್ರವೇಶ ದ್ವಾರದಲ್ಲಿ ನಡೆದ ಘಟನೆಗಳನ್ನು ನೋಡಬಹುದು. ಪೊಲೀಸರು ವಿದ್ಯಾರ್ಥಿಗಳಿಗೆ ಲಾಠಿಯಿಂದ ಥಳಿಸುವುದನ್ನು ಮತ್ತು ಕ್ಯಾಮೆರಾ ಒಡೆಯುವುದನ್ನು ಕಾಣಬಹುದು.

ಕ್ಯಾಮೆರಾ 3
ಹಳೆ ಗ್ರಂಥಾಲಯದ ರೀಡಿಂಗ್ ರೂಮಿನಲ್ಲಿ ಪೊಲೀಸನೊಬ್ಬ ಟೇಬಲ್ ಒಡೆಯುವುದನ್ನು, ಅದರ ತುಂಡನ್ನು ಲಾಠಿಯಂತೆ ಬಳಸುವುದನ್ನು ಕಾಣಬಹುದು. ಇನ್ನೊಬ್ಬ ಪೊಲೀಸ್ ಲಾಠಿಯಿಂದ ಕ್ಯಾಮೆರಾ ಒಡೆಯಲು ಯತ್ನಿಸುವ, ನಂತರ ಕ್ಯಾಮೆರಾದತ್ತ ಕುರ್ಚಿಯೊಂದನ್ನು ಎಸೆಯುವ ದೃಶ್ಯ ನೋಡಬಹುದು.

ಕ್ಯಾಮೆರಾ 4
ರೀಡಿಂಗ್ ಹಾಲ್‌ನಲ್ಲಿ ಪೊಲೀಸರು ಟೇಬಲ್ ಹಿಂದುಗಡೆಯಿಂದ ವಿದ್ಯಾರ್ಥಿಗಳನ್ನು ಎಳೆದು ಹೊಡೆಯುವ ದೃಶ್ಯವಿದೆ. ಒಬ್ಬ ವಿದ್ಯಾರ್ಥಿ ತನ್ನ ಟೇಬಲ್ ಬಿಡದೇ ಪಟ್ಟು ಹಿಡಿಯುವ ದೃಶ್ಯವಿದೆ.


ಇದನ್ನೂ ಒದಿ: ಜಾಮಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸರ ದೌರ್ಜನ್ಯ: ವಿಡಿಯೋಗಳಿಂದ ಬಯಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...