ಯಾವ ಕೇಸ್‌ಗೂ ಬಗ್ಗಲ್ಲ, ಜನರ ಪರವಾಗಿ ಹೋರಾಟ ಮಾಡ್ತಿವಿ: ಡಿ.ಕೆ ಶಿವಕುಮಾರ್

ಇದು ಕಾಂಗ್ರೆಸ್ ಹೋರಾಟವಲ್ಲ, ದೇಶದ ರೈತರು, ಕಾರ್ಮಿಕರು, ದಿನಗೂಲಿ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗದ ಜನರ ಬದುಕಿನ ಉಳಿವಿಗಾಗಿ ನಡೆಯುತ್ತಿರುವ ಹೋರಾಟ.

ಅನುಮತಿ ಪಡೆಯದೇ ಪೆಟ್ರೋಲ್ ಡಿಸೇಲ್‌ ಬೆಲೆಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಹೇಳಿಕೆಗೆ ಯಾವ ಕೇಸ್‌ಗೂ ಬಗ್ಗಲ್ಲ, ಜನರ ಪರವಾಗಿ ಹೋರಾಟ ಮಾಡ್ತಿವಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಳಗಾಂನಲ್ಲಿ ನಡೆದ ಸಾವಿರಾರು ಜನ ಸೇರಿದ್ದ ಮಹಾಂತೇಶ್ ಕವಟಗಿಮಠ್‌ ಮಗಳ ಮದುವೆಯಲ್ಲಿ ಮುಖ್ಯಮಂತ್ರಿಗಳೇ ಭಾಗಿಯಾಗಿದ್ರು. ಆರೋಗ್ಯ ಸಚಿವ ಬಿ.ಶ್ರೀರಾಮುಲು ಚಿತ್ರದುರ್ಗದಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿ ಮೆರವಣಿಗೆ ಮಾಡಿದರು. ವೈದ್ಯಕೀಯ ಸಚಿವರು ಸ್ವಿಮ್ಮಿಂಗ್‌ ಫೂಲ್‌ನಲ್ಲಿರುವ ಪೋಟೊ ಪ್ರಕಟಿಸಿದ್ದರು. ಇವರ್ಯಾರ ಮೇಲೂ ಕ್ರಮ ತೆಗೆದುಕೊಳ್ಳದೇ ಕೇವಲ ನಮ್ಮ ಮೇಲೆ ಹೇಗೆ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕೇಸ್ ಹಾಕುವ ಮೂಲಕ ನಮ್ಮನ್ನು ಎದುರಿಸಲು ಸಾಧ್ಯವಿಲ್ಲ. ನಾವು ನಮಗಾಗಿ, ಅಧಿಕಾರಕ್ಕಾಗಿ ಪ್ರತಿಭಟನೆ ಮಾಡಿದ್ದು ಅಲ್ಲ, ನಾವು ಜನರ ಪರವಾಗಿ ಹೋರಾಟ ಮಾಡ್ತಿವಿ. ಅವರ ಪಕ್ಷದವರೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮೊದಲು ಅವರ ಮೇಲೆ ಕ್ರಮ ಜರುಗಿಸಿ ನಂತರ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ಇದು ಕಾಂಗ್ರೆಸ್ ಹೋರಾಟವಲ್ಲ, ದೇಶದ ರೈತರು, ಕಾರ್ಮಿಕರು, ದಿನಗೂಲಿ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗದ ಜನರ ಬದುಕಿನ ಉಳಿವಿಗಾಗಿ ನಡೆಯುತ್ತಿರುವ ಹೋರಾಟ. ಕಾಂಗ್ರೆಸ್ ಅಧಿಕಾರಕ್ಕಾಗಿ ಮಾತ್ರವೇ ಇಲ್ಲ. ಸಂಕಷ್ಟದಲ್ಲಿರುವ ಜನರ ಜೊತೆಗೆ ನಿಂತು ಹೋರಾಟ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಯಾವತ್ತಿಗೂ ಡೀಸೆಲ್-ಪೆಟ್ರೋಲ್ ಬೆಲೆಯಲ್ಲಿ 30% ರಷ್ಟು ವ್ಯತ್ಯಾಸವಿರುತ್ತಿತ್ತು. ಆದರೆ, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ಬೆಲೆ ಪೆಟ್ರೋಲ್ ಗಿಂತಲೂ 30%ರಷ್ಟು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು
ಈ ದಾಖಲೆ ನಿರ್ಮಿಸಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿನದ್ದಾರೆ.

ಕೇಂದ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ

ಕೇಸು ಹಾಕಿ ನಮ್ಮನ್ನು ಎದರಿಸಲು ಸಾಧ್ಯವಿಲ್ಲ. ಅಮಾನವೀಯವಾಗಿ ಕೇಂದ್ರ ಸರ್ಕಾರ ನಡೆದುಕೊಂಡಿದೆ.ರಾಕ್ಷಸಿ ಗುಣ ಇರುವ ಕೇಂದ್ರ ಸರ್ಕಾರ ಬಡವರ ರಕ್ತ ಹೀರುವ ಕೆಲಸ ಮಾಡ್ತಿದೆ. ಬಡವರ ಜೀವನದ ಜೊತೆ ಸರ್ಕಾರ ಚೆಲ್ಲಾಟ ಆಡ್ತಿದೆ. ಕೊರೊನಾ ಸಮಯದಲ್ಲಿ ಬೆಲೆ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ. ಸುಲಿಗೆ ಮಾಡುತ್ತಿರುವ ಅವರಿಗೆ ಮಾನ ಮರ್ಯಾದೆ ಇದೆಯಾ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾಂಗ್ರೆಸ್ ಪಕ್ಷವನ್ನು ಮೌಲ್ಯಾಧಾರಿತವಾಗಿ ಮರುಕಟ್ಟಲು ಡಿಕೆಶಿ ಮುಂದಾಗಲಿ: ಎಚ್.ಎಸ್ ದೊರೆಸ್ವಾಮಿ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here