Homeಕರ್ನಾಟಕಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುತ್ತೇವೆ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿ ಡಿಕೆಶಿ ಪ್ರತಿಜ್ಞೆ

ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುತ್ತೇವೆ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿ ಡಿಕೆಶಿ ಪ್ರತಿಜ್ಞೆ

- Advertisement -
- Advertisement -

ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಮತ್ತೆ ಕಾಂಗ್ರೆಸ್ ಶಾಸಕರು ವಿಧಾನಸೌಧದ ಮೂರನೇ ಮಹಡಿ ಹತ್ತುವಂತೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಜ್ಞೆ ಮಾಡಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಇಂದು ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರೆಲ್ಲಾ ಸೇರಿ ತೆಗೆದುಕೊಂಡಿರುವ ನಿರ್ಧಾರ ನನಗೆ ಸಂತಸ ತಂದಿದೆ. ಈ ಸ್ಥಾನಕ್ಕೆ ಆಕಾಂಕ್ಷಿಯಲ್ಲದಿದ್ದರೂ ಸಹ ಇದು ನನ್ನ ಕರ್ತವ್ಯವೆಂದು ಭಾವಿಸಿ ನೀಡಿರುವ ಜವಾಬ್ದಾರಿಯನ್ನು ಒಂದು ಸವಾಲಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೂ ಹೋರಾಟಗಳಲ್ಲಿ ಭಾಗವಹಿಸುತ್ತಾ ಇಂದಿರಾಗಾಂಧಿಯವರಿಂದ ಪ್ರಭಾವಿತನಾಗಿ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ರಾಜಕೀಯ ಧುರೀಣರೊಂದಿಗೆ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಮೆಟ್ಟಿ ಇಂದು ಈ ಮಟ್ಟಕ್ಕೆ ಬಂದಿದ್ದೇನೆ. ಈಗಲೂ ತೊಂದರೆಯಿದೆ. ಆದರೆ ಆದಾವುದಕ್ಕೂ ಬಗ್ಗದೇ ಪಕ್ಷದ ಸಿದ್ಧಾಂತ ಮತ್ತು ಆದರ್ಶ ಹಾಗೂ ಏಳಿಗೆಗಾಗಿ ಶ್ರಮಿಸುತ್ತೇನೆ. ಎಲ್ಲರೂ ಒಟ್ಟಿಗೆ ಶ್ರಮಿಸೋಣ ಎಂದು ಪಕ್ಷದ ನಿಷ್ಠಾವಂತರಿಗೆ ಕರೆ ನೀಡಿದರು.

16 ಸಾವಿರ ಜಾಗಗಳಲ್ಲಿ ಲಕ್ಷಾಂತರ ಜನರು ಪದಗ್ರಹಣ ಕಾರ್ಯಕ್ರಮ ನೋಡಿದ್ದಾರೆ. ಇದು ಒಬ್ಬ ವ್ಯಕ್ತಿಯ ಕಾರ್ಯಕ್ರಮವಲ್ಲ. ಇದು ಪಕ್ಷದ ಕಾರ್ಯಕ್ರಮ. ಇಡೀ ವಿಶ್ವವೇ ಕಾರ್ಯಕ್ರಮ ನೋಡಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನಾನು ದೊಡ್ಡ ವಿದ್ಯಾವಂತ ಅಲ್ಲ, ನನಗೆ ಇರುವ ತಿಳಿವಳಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ನಮ್ಮ ಕಾರ್ಯಕರ್ತರು ಆಶೀರ್ವದಿಸಿದ್ದಾರೆ. ಇದು ನನಗೆ ದೊಡ್ಡ ಜವಾಬ್ದಾರಿ. ಅವರ ನಂಬಿಕೆ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಜನರ ಭಾವನೆ ಅರಿತು ಕೆಲಸ ಮಾಡುತ್ತೇವೆ. ವಿಧಾನಸೌಧ ಚಪ್ಪಡಿ ಕಲ್ಲಿನಂತೆ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಾತನಾಡಿ, “ಧರ್ಮಗಳನ್ನು ಎತ್ತಿಕಟ್ಟುವ, ರೋಗದಲ್ಲೂ ಧರ್ಮದ ವಿಷ ಬೀಜ ಬಿತ್ತುವ, ದೇಶದ ಸಂವಿಧಾನದ ಬಗ್ಗೆ ಬದ್ಧತೆ ಇಲ್ಲದ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆಯಲು ನಾಲಾಯಕ್” ಎಂದಿದ್ದಾರೆ.

ಬಿಜೆಪಿ ಪಕ್ಷವನ್ನು ಆರ್‌ಎಸ್ಎಸ್ ನಿಯಂತ್ರಿಸುವವರೆಗೆ ದೇಶದಲ್ಲಿ ಬಡವರು, ದಲಿತರು ಮತ್ತು ಅನ್ಯಕೋಮಿನವರ ಬದುಕು ಕಷ್ಟವಾಗಲಿದೆ. ಧರ್ಮವನ್ನು ಎತ್ತಿಕಟ್ಟಿ ಅದರ ಮೂಲಕ ರಾಜಕಾರಣ ಮಾಡುವುದೇ ಇವರು ಗುರಿ ಎಂದು ಕಿಡಿಕಾರಿದ್ದಾರೆ.

ಪ್ರಧಾನಿಯಾಗಿ ನರೇಂದ್ರ ಮೋದಿ ಆರ್‌ಎಸ್ಎಸ್ ಕಾರ್ಯಕ್ರಮಗಳನ್ನಷ್ಟೇ ಜಾರಿ ಮಾಡುತ್ತಿದ್ದಾರೆ. ಕೊರೊನಾ ಹರಡದಂತೆ ತಡೆಯುವಲ್ಲಿ ಮೋದಿ ವಿಫಲರಾಗಿದ್ದಾರೆ. ಈಗ ಮಾಡಬೇಕಾದ ಲಾಕ್‌ಡೌನ್‌ ಆನ್ನು ಮುಂದಾಲೋಚನೆಯಿಲ್ಲದೇ ಆಗಲೇ ಮಾಡಿ ಬಡಜನರು ಕಷ್ಟ ಅನುಭವಿಸುವಂತೆ ಮಾಡಿದರು. ಅವರಿಗೆ ಆಡಳಿತ ಜ್ಞಾನವಿಲ್ಲ ಎಂದಿದ್ದಾರೆ.

ಮೋದಿಯವರು ಇಂಧನ ಬೆಲೆ, ಗ್ಯಾಸ್ ಬೆಲೆಯನ್ನು ಹೆಚ್ಚಿಸುವ ಮೂಲಕ ಜನರ ಸಂಕಷ್ಟದ ಮೇಲೆ ಮತ್ತೆ ಬರೆ ಎಳೆದರು. ವರ್ಷವಿಡೀ ವಿದೇಶ ಪ್ರವಾಸ ಮಾಡಿ ನೆರೆ ರಾಷ್ಟ್ರಗಳ ಜೊತೆಗೆ ವೈಷಮ್ಯ ಹೆಚ್ಚಿಸಿಕೊಂಡರು. ಕೇವಲ ಸುಳ್ಳು ಭರವಸೆಗಳಲ್ಲೇ ಕಾಲ ಕಳೆದರು. ಅಸಲಿಗೆ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಭಾರತ ದೇಶ ಈವರೆಗೆ ಕಂಡಿಲ್ಲ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

“ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಜನ ಆಶೀರ್ವಾದ ಮಾಡಿರಲಿಲ್ಲ. ಹೀಗಾಗಿ ಆಪರೇಷನ್ ಕಮಲದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮತ್ತೆ ಕಾಂಗ್ರೆಸ್ ಪಕ್ಷವನ್ನು ನಾವೆಲ್ಲರೂ ಒಟ್ಟಾಗಿ ಅಧಿಕಾರಕ್ಕೆ ತರುತ್ತೇವೆ ಎಂದರು.


ಇದನ್ನೂ ಓದಿ:ಕಾಂಗ್ರೆಸ್ ಪಕ್ಷವನ್ನು ಮೌಲ್ಯಾಧಾರಿತವಾಗಿ ಮರುಕಟ್ಟಲು ಡಿಕೆಶಿ ಮುಂದಾಗಲಿ: ಎಚ್.ಎಸ್ ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...