ಭಾರತವು ನಮ್ಮನ್ನು ಉತ್ತಮವಾಗಿ ಪರಿಗಣಿಸುತ್ತಿಲ್ಲ: ಟ್ರಂಪ್ ಅನುಮಾನ

ಭಾರತ ಭೇಟಿಯ ಕೆಲವೇ ದಿನಗಳ ಮೊದಲು ಅಮೆರಿಕಾ-ಭಾರತ ವ್ಯಾಪಾರ ಸಂಬಂಧಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಮೆರಿಕಾದ ಅಧ್ಯಕ್ಷ ಟ್ರಂಪ್ “ಭಾರತವೂ ನಮ್ಮನ್ನು ಉತ್ತಮವಾಗಿ ಪರಿಗಣಿಸುತ್ತಿಲ್ಲ” ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ “ದೊಡ್ಡ ವ್ಯವಹಾರವನ್ನು ಬಯಸುತ್ತಿದ್ದೇನೆ” ಎಂದಿದ್ದಾರಲ್ಲದೆ “ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಬಹುದು, ನಂತರದ ದಿನಗಳಲ್ಲಿ ಇನ್ನೂ ದೊಡ್ಡ ವ್ಯವಹಾರವನ್ನು ಬಯಸುತ್ತಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಟ್ರಂಪ್ ಕಳೆದ ವರ್ಷ ಯು.ಎಸ್. ಮಾರುಕಟ್ಟೆಗೆ ಕೆಲವು ಭಾರತೀಯ ಸುಂಕ ರಹಿತ ರಫ್ತು ಪ್ರವೇಶವನ್ನು ನೀಡುವ ಅಭಿವೃದ್ಧಿಶೀಲ ರಾಷ್ಟ್ರಗಳ ಕಾರ್ಯಕ್ರಮದಿಂದ ಭಾರತವನ್ನು ಹೊರಹಾಕಿದರು. ಅಂದಿನಿಂದ ಇಂದಿನವರೆಗೂ ಎರಡೂ ಕಡೆಯ ಅಧಿಕಾರಿಗಳು ಸಾಧಾರಣವಾದ ಒಪ್ಪಂದವನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಭಾರತದ ಆದ್ಯತೆಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಅಮೆರಿಕದ ಕೃಷಿ ಉತ್ಪನ್ನಗಳು ಮತ್ತು ವೈದ್ಯಕೀಯ ಸಾಧನಗಳ ಭಾರತದ ರಫ್ತಿಗೆ ಅವಕಾಶ ಮಾಡಿಕೊಡಲಿದೆ.

“ಭಾರತದೊಂದಿಗೆ ಬಹಳ ದೊಡ್ಡ ವ್ಯಾಪಾರ ಒಪ್ಪಂದವನ್ನು ಮಾಡುತ್ತಿದ್ದೇವೆ. ಅದನ್ನು ಖಂಡಿತ ಮಾಡುತ್ತೇವೆ ಆದರೆ ಅಧ್ಯಕ್ಷೀಯ ಚುನಾವಣೆಯ ಮೊದಲು ಇದನ್ನು ಮಾಡಲಾಗುತ್ತದೆಯೇ ಎಂದು ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

“ನಾವು ಭಾರತದಿಂದ ಉತ್ತಮವಾಗಿ ಪರಿಗಣಿಸಲ್ಪಟ್ಟಿಲ್ಲ, ಆದರೆ ನಾನು ಪ್ರಧಾನಿ ಮೋದಿಯವರನ್ನು ತುಂಬಾ ಇಷ್ಟಪಡುತ್ತೇನೆ” ಎಂದು ಅವರು ಹೇಳಿದರು.

ಅಮೆರಿಕದ ಸ್ಟೆಂಟ್‌ಗಳು ಮತ್ತು ಇತರ ವೈದ್ಯಕೀಯ ಸಾಧನಗಳ ತಯಾರಕರು ಮತ್ತು ಕೃಷಿ ಬಂಡವಾಳಿಗರು ಭಾರತೀಯ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶಕ್ಕಾಗಿ ಕೋರಿರುವ ಅಮೆರಿಕದ ಬೇಡಿಕೆಗಳನ್ನು ಈ ಮಾತುಕತೆಗಳು ಕೇಂದ್ರೀಕರಿಸಿವೆ.

ಫೆಬ್ರವರಿ 24 ಮತ್ತು 25 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here