Homeಮುಖಪುಟತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

ತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

1975ರಲ್ಲಿ ದೇಶದಲ್ಲಿ ಇಂದಿರಾ ಗಾಂಧಿಯವರು ಹೇರಿದ್ದ ಕರಾಳ ತುರ್ತುಪರಿಸ್ಥಿತಿಗೆ ಇಂದಿಗೆ 45 ವರ್ಷ ತುಂಬಿದೆ. ತುರ್ತು ಪರಿಸ್ಥಿತಿಯ ದಿನಗಳನ್ನು, ಅಂದಿಗೂ ಇಂದಿಗೂ ಆದ ಬದಲಾವಣೆಗಳನ್ನು ಮೆಲುಕು ಹಾಕಿದ್ದಾರೆ ಹಿರಿಯ ಹೋರಾಟಗಾರ ಹಿರೇಮಠ್‌ರವರು.

- Advertisement -
- Advertisement -

ನಾನು 11 ವರ್ಷ ಅಮೇರಿಕಾದಲ್ಲಿ ಇದ್ದೆ. ಬಡಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತುವ ಇರಾದೆಯಿಂದ ಕೆಲಸ ಬಿಟ್ಟೆ. ನಮ್ಮ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ 1974 ಜನವರಿ 1 ರಂದು ಇಂಡಿಯಾ ಡೆವಲಪ್‍ಮೆಂಟ್ ಎಂಬ ಸಂಸ್ಥೆಯೊಂದನ್ನು ಮಾಡಿದೆವು. ಯಾವುದೇ ಒಂದು ಮಾನವೀಯ ಅಭಿವೃದ್ಧಿಯನ್ನು ಮಾಡಬೇಕಾದಾರೆ ಒಂದು ಲಾರ್ಜರ್ ಡೆಮಾಕ್ರಿಟಿಕ್ ಫ್ರೇಮ್‍ವರ್ಕ್ ಇರುವ ಪ್ರಜಾಪ್ರಭುತ್ವ ಆಶಯಗಳು ಮತ್ತು ಮೌಲ್ಯಗಳಿಗೆ ಗೌರವ ಇರುವಂತಹ ವಾತಾವರಣ ಇರುವುದು ಬಹಳ ಮುಖ್ಯವಾಗಿದೆ.

1971ರ ಬಾಂಗ್ಲಾದೇಶ ಲಿಬರೇಶನ್‍ನಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಿತು. ಅದರ ನಂತರ ಬರಬರುತ್ತಾ ಇಂದಿರಾ ಗಾಂಧಿಯವರು ಟೊಟಾಲಿಟೇರಿಯನಿಸಂ ಅಂತ ನಾವು ಏನು ಕರಿತೀವಿ, ಹಾಗೆ ಡಿಕ್ಟೇಟರ್‍ಶಿಪ್ ಕಡೆಗೆ ಹೋಗುವುದನ್ನ ನಾವು ನೋಡಿದೆವು. ಯಾಕೆಂದರೆ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಬೇಕಾದರೆ ಪ್ರಜಾಪ್ರಭುತ್ವವನ್ನ ಎತ್ತಿಹಿಡಿಯುವಂತಹ ಸಂಸ್ಥೆಗಳ ಸಶಕ್ತೀಕರಣ ಆಗಬೇಕಾಗುತ್ತದೆ.

ಇಂದಿರಾಗಾಂಧಿ ಮೊದಲನೆಯದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಮಾತುಗಳಿಗೆ ಒಪ್ಪುವಂತಹವರು, ಆ ತರದ ನಿರ್ಣಯಗಳನ್ನ ಕೊಡುವಂತಹವರಾದ ಎ.ಕೆ ರೇ. ಅನ್ನುವವರನ್ನು 1973ರಲ್ಲಿ ಮೂರು ಜನ ಜಡ್ಜಸ್- ಹಿಂದಿನ ಲೋಕಯುಕ್ತ ಸಂತೋಷ್ ಹೆಗೆಡೆ ಅವರ ತಂದೆಯನ್ನು ಒಳಗೊಂಡಂತೆ- ಆಯ್ಕೆ ಮಾಡಿದಾಗ ಈ ಸರ್ವಾಧಿಕಾರದ ಟ್ರೆಂಡ್ ಬರುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಿದೆವು.

ನಾನು ಅಮೆರಿಕಾದಲ್ಲಿ ಇದ್ದಾಗ ನ್ಯೂರ್ಯಾಕ್ ಟೈಮ್ಸ್ ಗಮನಿಸುತ್ತಿದ್ದೆ. ಅದರಲ್ಲಿ ಜಯಪ್ರಕಾಶ್ ನಾರಾಯಣ ಅವರ ಬಗ್ಗೆ 6 ಪುಟಗಳ ವರದಿ ನೋಡಿದೆ. ಅದೇ ಸಮಯದಲ್ಲಿ ಚಿಕಾಗೊಗೆ ಅನಿರಿಕ್ಷಿತವಾಗಿ ಯು.ಆರ್ ಅನಂತಮೂರ್ತಿಯವರು ಬಂದಿದ್ದರು. ಅಲ್ಲಿ ಎಲ್ಲರೂ ಸೇರಿ ಅವರೊಂದಿಗೆ ಸಭೆ ಸೇರಿ ಭಾರತದಲ್ಲಿ ಏನು ನಡಿಯುತ್ತಿದೆ ಎಂದು ತಿಳಿದೆವು. ಅಲಹಾಬಾದ್ ಕೋರ್ಟ್ ಜೂನ್ ತಿಂಗಳಲ್ಲಿ ಇಂದಿರಾಗಾಂದಿಯವರ ಲೋಕಸಭಾ ಸದಸ್ಯತ್ವವನ್ನ ರದ್ದುಗೊಳಿಸಿತು. ಇದು ಸರ್ಕಾರನ್ನು ಅಲುಗಾಡಿಸಿತು. ಇನ್ನು ಕೆಲವು ಘಟನೆಗಳು ಕೂಡ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯ ಕಡೆ ತೆಗೆದುಕೊಂಡು ಹೋಗಲು ಕಾರಣವಾಯಿತು. ಆಗ ತುರ್ತು ಪರಿಸ್ಥಿತಿಯ ಮೂಲಕ ನಮ್ಮ ಸಂವಿಧಾನವನ್ನೆ ಅಪ್ರಸ್ತುತಗೊಳಿಸಲು ಹೊರಟಿದ್ದರು. ಆಗ ನಾವು ವಾಷಿಂಗ್ಟನ್‍ನ ನಮ್ಮ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದೆವು. ನಾವು ಆಗ ಸತ್ಯಗಳನ್ನು ಮಾತಾಡಿದ್ದಕ್ಕಾಗಿ ನಮ್ಮ ಪಾಸ್‍ಪೋರ್ಟ್‍ಗಳನ್ನು ರದ್ದುಮಾಡಿದ್ದರು.

ಈಗ ವಲಸೆ ಕಾರ್ಮಿಕರ ಘಟನೆ ಬಗ್ಗೆ ಕೋರ್ಟ್‍ಗಳೂ ಕೂಡ ಸರಿಯಾಗಿ ಸ್ಪಂದಿಸಿಲ್ಲ. ಆಗಲೂ ಸಹ ಇದೇ ರೀತಿ ಆಯಿತು. ಜನಪರವಾಗಿ ತೀರ್ಪುಕೊಟ್ಟ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದರು. ಮೂಲಭೂತ ಹಕ್ಕುಗಳನ್ನು ತೆಗೆದು ಹಾಕುವಂತಹ ಪರಿಸ್ಥಿತಿ ಬಂತು. ಇವತ್ತಿನ ಮೋದಿಯ ಮೊದಲನೇ ಮತ್ತು ಎರಡನೇ ಅವಧಿಯ ಸರ್ಕಾರ ಬಹಳ ಕರಾಳವಾಗಿದೆ. ತುರ್ತುಪರಿಸ್ಥಿತಿಗಿಂತ ಇಪ್ಪತ್ತು ಪಟ್ಟು ಗಂಭೀರವಾಗಿದೆ. ನೋಡಿ ಸಂವಿಧಾನದ ಮೂಲತತ್ವಗಳಾದ ಸಮಾನತೆ, ಸಹೋದರತೆ, ಭ್ರಾತೃತ್ವಗಳನ್ನು ಎತ್ತಿಹಿಡಿಯುವ ಆನಂದ್ ತೇಲ್ತುಂಬ್ಡೆಯಂತಹ ಬುದ್ಧಿಜೀವಿಗಳನ್ನು ಬಂಧನದಲ್ಲಿ ಇಟ್ಟಿದ್ದಾರೆ ಎಂದರೆ ಇಂದಿರಾಗಾಂದಿಯವರಿಗಿಂತ ಹೆಚ್ಚಿನದಾದ ತುರ್ತುಪರಿಸ್ಥಿತಿ ಇದಾಗಿದೆ. ಇದನ್ನು ಖಂಡಿಸಿ ಆಳವಾದ ಅಧ್ಯಯನದಿಂದ ಆಂದೋಲನವನ್ನು ಕಟ್ಟಬೇಕು.

ಕಾರ್ಮಿಕರ ದುಡಿಮೆಯ ಅವಧಿಯನ್ನೇ ಕಡಿಮೆ ಮಾಡಿ ಮೂರು ವರ್ಷ ಕಾರ್ಮಿಕ ಕಾನೂನುಗಳಿಗೆ ತಿಲಾಂಜಲಿ ಇಡುವುದನ್ನು ಈ ಸರ್ಕಾರ ಮಾಡಿದೆ. ಇದನ್ನು ನಾವು ಬುದ್ದ, ಬಸವ, ಅಂಬೇಡ್ಕರ್‌ರ ಆಶಯದೊಂದಿಗೆ ಎದುರಿಸಲೇಬೇಕು. ಅಂದು ಜಯಪ್ರಕಾಶ್ ನಾರಾಯಣರವರು ಸಮಗ್ರ ಪರಿವರ್ತನೆ ಎನ್ನುವ ಪರಿಕಲ್ಪನೆಯಲ್ಲಿ ಯುವಕರಿಗೆ ಕರೆಕೊಟ್ಟಿದ್ದರು. ಈ ಸ್ವಾತಂತ್ರ್ಯ ಅರ್ಥಪೂರ್ಣವಾಗಬೇಕಾದರೆ ಸಂವಿಧಾನದ ಪೂರಕ ಅಂಶಗಳಿಂದ ಸ್ಫೂರ್ತಿಪಡೆದ ಯುವಜನರು ಈ ದೇಶಕ್ಕೆ ಅವಶ್ಯಕತೆ ಇದ್ದಾರೆ. ಜೆಪಿಯವರು ಎಲ್ಲಾಪಕ್ಷಗಳನ್ನು ಕೂಡಿಸಿ ಹೊಸತೊಂದನ್ನು ಮಾಡಲು ಹೊರಟರು ಆದರೆ ಅವರ ಕಣ್ಣ ಮುಂದೆಯೇ ಜನತಾ ಪಕ್ಷ ಒಡೆದುಹೋಯಿತು. ಇದು ಕೂಡ ಐತಿಹಾಸಿಕ ಪ್ರಮಾದ ಅನಿಸುತ್ತೆ.

ಇಂದು ಯಾವುದೇ ಸ್ವಾತಂತ್ರ್ಯ ಹೋರಾಟ ಹಿನ್ನಲೆ ಇರದ ಆರ್.ಎಸ್.ಎಸ್ ದೇಶವನ್ನು ಹಿಂದಕ್ಕೆ ಒಯ್ಯುವ ಮತ್ತು ಭಯಾನಕ ಸಿದ್ಧಾಂತವನ್ನು ಹೊಂದಿರುವ ಸಂಘಟನೆ. ಸಂವಿಧಾನದ ಪ್ರಸ್ತಾವನೆ ಮತ್ತು ದೇಶದ ಬಾವುಟ ಹಿಡಿದು ಪ್ರತಿಭಟನೆ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವತ್ತಿನ ಆರ್ಥಿಕ ಅಸಮಾನತೆಯ ಜನಕರು ಕಾಂಗ್ರೆಸ್. ಆದರೆ ಇದನ್ನ ಇನ್ನಷ್ಟು ನಾಗಲೋಟದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಬಿಜೆಪಿ. ಗಾಂಧಿ, ಶುಮಾಕರ್ ಅವರುಗಳು ಹೇಳಿದ ಆರ್ಥಿಕ ಸಮಾನತೆ, ಅಂಬೇಡ್ಕರ್ ಅವರು ಹೇಳಿದ ಜಾತಿವಿನಾಶ ಈ ವಿಚಾರಗಳ ಕಡೆಗೆ ನಾವು ಹೋಗಬೇಕು. ನನ್ನ ಪ್ರಕಾರ ಈ ದೇಶದ ಆತ್ಮ ಶರಣ ಸಂತರು. ಅವರು ಸಾವಿರಾರು ವರ್ಷಗಳ ಪರಂಪರೆ, ಜೀವನದ ಅರ್ಥವನ್ನು ಜನಸಾಮಾನ್ಯರಿಗೆ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಆ ಮಾರ್ಗದಲ್ಲಿ ಇರಬೇಕು. ಆದರೆ ಇವತ್ತಿನ ಯಾವ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಂಡಿಲ್ಲ.

ಸಂದರ್ಶನ: ಬಸವರಾಜ ಸೂಳಿಬಾವಿ

( ಲೇಖಕ, ಪ್ರಕಾಶಕ ಬಸವರಾಜ ಸೂಳಿಬಾವಿ ಅವರು ನಡೆಸಿದ ಎಸ್ ಆರ್ ಹಿರೇಮಠರೊಂದಿಗಿನ ದೀರ್ಘ ಸಂದರ್ಶನದ ಸಂಗ್ರಹ ರೂಪ. ಪೂರ್ಣ ಸಂದರ್ಶನದ ವಿಡಿಯೋವನ್ನು ತಾಣದಲ್ಲಿ ನೋಡಬಹುದು)


ಇದನ್ನೂ ಓದಿ: 1% ಅತಿ ಶ್ರೀಮಂತರಿಗೆ 2% ಸಂಪತ್ತಿನ ತೆರಿಗೆ ವಿಧಿಸಿ: ದೇಶಾದ್ಯಂತ ಚಿಂತಕರ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...