Homeಮುಖಪುಟಕೊರೊನಾ ಕೊಲ್ಲುತ್ತಿರುವಾಗ ಗೃಹಮಂತ್ರಿಗಳೆಲ್ಲಿ?: WhereIsAmitShah ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌

ಕೊರೊನಾ ಕೊಲ್ಲುತ್ತಿರುವಾಗ ಗೃಹಮಂತ್ರಿಗಳೆಲ್ಲಿ?: WhereIsAmitShah ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌

- Advertisement -
- Advertisement -

ಕೊರೊನಾ ವೇಗವಾಗಿ ಹರಡುತ್ತಿದೆ. ಭಾರತ ಮೂರನೇ ಹಂತಕ್ಕೆ ಪ್ರವೇಶಿಸಿ ಆಗಿದೆ. 21 ದಿನಗಳು ಭಾರತ ಸಂಪೂರ್ಣ ಲಾಕ್‌ಡೌನ್‌ ಆಗಿದೆ. 873 ಪ್ರಕರಣಗಳು ಭಾರತದಲ್ಲಿ ಕಾಣಿಸಿಕೊಂಡರೆ 19 ಜನ ಇದರಿಂದಾಗಿಯೇ ಸಾವನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಕೊರೊನಾ ವಿರುದ್ಧದ ಸೆಣಸಾಟದಲ್ಲಿ ಮುಂದೆ ಇರಬೇಕಾಗಿದ್ದ ದೇಶದ ಗೃಹಮಂತ್ರಿ ಅಮಿತ್‌ ಶಾ ಎಲ್ಲಿದ್ದಾರೆ ಎಂಬ ವ್ಯಾಪಕವಾಗಿ ಕೇಳಿಬರುತ್ತಿದೆ.

ಹೌದು ಕಳೆದ ಹತ್ತು ಹದಿನೈದು ದಿನಗಳಿಂದ ಅಮಿತ್ ಶಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಇದೇ ಅವಧಿಯಲ್ಲಿ ಕೊರೊನಾ ತೀವ್ರವಾಗಿ ಹರಡುತ್ತಿದೆ. ಹಾಗಾಗಿ ಸಹಜವಾಗಿಯೇ ಅಮಿತ್‌ ಶಾ ವಿರುದ್ಧ ಆಕ್ರೋಶ ಹೊರಬಿದ್ದಿದೆ.

ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅಮಿತ್‌ ಶಾ ವಿರುದ್ಧದ ಕಿಡಿ ಜೋರಾಗಿದ್ದು ಇಂದು WhereIsAmitShah ಹ್ಯಾಸ್‌ಟ್ಯಾಗ್‌ ಟ್ವಿಟ್‌ರ್‌ನಲ್ಲಿ ನಂಬರ್‌ 1 ಸ್ಥಾನದಲ್ಲಿ ಟ್ರೆಂಡಿಂಗ್‌ ಆಗಿದೆ. ನೆಟ್ಟಿಗರ ಸಿಟ್ಟಿನ ಕೆಲ ಟ್ವೀಟ್‌ಗಳು ಕೆಳಗಿನಂತಿವೆ ನೋಡಿ.

ಕೋಣೆಯಲ್ಲಿಲ್ಲದ ಆನೆಯನ್ನು ಉದ್ದೇಶಿಸಿ ಮಾತನಾಡಲು ಸಮಯವಿದೆಯೇ? ಗೃಹ ಸಚಿವರು ಏಕೆ ಕಾಣೆಯಾಗಿದ್ದಾರೆ? ಈ ಯುದ್ಧದ ಮುಂಚೂಣಿಯಲ್ಲಿರಬೇಕಾದವರು ಅವರೇ ಅಲ್ಲವೇ? ಎಂದು ಅಜಯ್‌ ಕಾಮತ್‌ ಎಂಬುವವರು ಪ್ರಶ್ನಿಸಿದ್ದಾರೆ.

ಭಾರತದ ಗೃಹ ಸಚಿವ ಅಮಿತ್ ಶಾ ಎಲ್ಲಿ ಅಡಗಿದ್ದಾರೆ?

ಲಾಕ್‌ಡೌನ್ ಅನ್ನು ಜಾರಿಗೊಳಿಸುವುದು ಅವರ ಕೆಲಸವಲ್ಲವೇ? ಸಾಮೂಹಿಕ ವಲಸೆ ಸಮಸ್ಯೆಯನ್ನು ಪರಿಹರಿಸಲು ಅವರು ಯಾವ ಯೋಜನೆಯನ್ನು ರೂಪಿಸಿದ್ದಾರೆ? ಸಿಎಂಗಳೊಂದಿಗೆ ಹೇಗೆ ಸಹಕರಿಸಿದ್ದಾರೆ? ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲವೇ?

ಒಂದು ಮಾತನ್ನೂ ಹೇಳಿಲ್ಲ ಮತ್ತು ದೃಶ್ಯದಿಂದ ಕಣ್ಮರೆಯಾಗಿದ್ದಾರೆ. ಲೋಹ್ ಪುರುಷ 2.0? ಎಂದು ಶ್ರೀವತ್ಸ ಎಂಬುವವರು ಕಿಡಿಕಾರಿದ್ದಾರೆ.

ಕೆಲ ದಿನಗಳ ಹಿಂದೇ ತಾನೇ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ 22ಕ್ಕೂ ಹೆಚ್ಚು ಶಾಸಕರನ್ನು ರಾಜೀನಾಮೆ ಕೊಡಸಿ ಅಲ್ಲಿನ ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ಸ್ಥಾಪಿಸಲು ಅಮಿತ್‌ ಶಾಗೆ ಸಮಯವಿದೆ. ಆದರೆ ಭಾರತವನ್ನೇ ಕೊಲ್ಲುತ್ತಿರುವ ಕೊರೊನಾ ವಿರುದ್ಧ ಹೋರಾಡಲು ಸಮಯವಿಲ್ಲವೇ ಎಂದು ಬಹಳಷ್ಟು ಜನ ಹಿಂದೆ ಸಹ ಪ್ರಶ್ನಿಸಿದ್ದರು.

ಕಳೆದ ವರ್ಷ ನವೆಂಬರ್‌ 5 ರಂದು ಸಹ ನವದೆಹಲಿಯಲ್ಲಿ ಪೊಲೀಸರು ಮತ್ತು ವಕೀಲರ ಘರ್ಷಣೆ ತಾರಕಕ್ಕೇರಿದಾಗ ಅಮಿತ್‌ ಶಾ ಮಾತಾಡಿರಲಿಲ್ಲ. ಆಗಲೂ WhereIsAmitShah ಟ್ರೆಂಡಿಂಗ್‌ ಆಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...