Homeಆರೋಗ್ಯಕೊರೋನಾವೈರಸ್‌ ಕುರಿತ ಊಹಾಪೋಹಗಳಿಗೆ WHO ಸ್ಪಷ್ಟನೆ: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ಗೊತ್ತೆ?

ಕೊರೋನಾವೈರಸ್‌ ಕುರಿತ ಊಹಾಪೋಹಗಳಿಗೆ WHO ಸ್ಪಷ್ಟನೆ: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ಗೊತ್ತೆ?

- Advertisement -
- Advertisement -

ಕೊರೋನಾ ವೈರಸ್‌ ಹರಡುತ್ತಿರುವ ಸಮಯದಲ್ಲಿ ಅದಕ್ಕಿಂತಲೂ ವೇಗವಾಗಿ ಅದರ ಕುರಿತ ಸುಳ್ಳು ಸುದ್ದಿಯಗಳು, ತಪ್ಪು ಅಭಿಪ್ರಾಯಗಳು ಹರಡುತ್ತಿವೆ. ಈ ಕುರಿತು ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಒಂದಷ್ಟು ಸ್ಪಷ್ಟನೆಗಳನ್ನು ನೀಡಿದೆ. ಅವುಗಳೆಂದರೆ…

  • ಬೆಳ್ಳುಳ್ಳಿಯು ಆರೋಗ್ಯಕರ ಆಹಾರ; ಅದರಲ್ಲಿ ಹಲವು ಸೂಕ್ಷ್ಮಾಣುಗಳ ನಿರೋಧಕ ಶಕ್ತಿ ಇರಬಹುದು; ಆದರೆ ಅದನ್ನು ತಿನ್ನುವುದರಿಂದ ಹೊಸ ಕೊರೋನಾವೈರಸ್ ವಿರುದ್ಧ ರಕ್ಷಣೆ ಸಿಗುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ.
  • ಮೂಗನ್ನು ಪದೇ ಪದೇ ಸಲೈನ್‌ನಿಂದ (ಉಪ್ಪು ನೀರು, ಕ್ಷಾರ) ತೊಳೆಯುವುದರಿಂದ ಉಸಿರಾಟದ ಸೋಂಕು ತಡೆದ ಬಗ್ಗೆ ನಿದರ್ಶನಗಳಿಲ್ಲ.
  • ಚೀನಾದ ವಸ್ತುಗಳಿಂದ ಕೊರೋನಾವೈರಸ್ ಬರುತ್ತದೆ ಎಂದೇನಿಲ್ಲ; ಹಾಗಿದ್ದೂ ಚೀನಾದ ವಸ್ತುಗಳನ್ನು ಪಡೆಯುವಾಗ ಅದರ ಪೊಟ್ಟಣವನ್ನು ಶುಚಿಗೊಳಿಸಿ ಮತ್ತು ಅದನ್ನು ಮುಟ್ಟಿದ ಮೇಲೆ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳಿರಿ.
  • ಹೊಸ ಕೊರೋನಾವೈರಸ್ ಉಷ್ಣ ಮತ್ತು ಶೀತ ಪ್ರದೇಶಗಳೆಂದು ಪರಿಗಣಿಸದೆ ಎಲ್ಲಾ ಪ್ರದೇಶಗಳಲ್ಲೂ ವರ್ಗಾವಣೆ ಆಗುತ್ತದೆ. ಆಗಾಗ್ಗೆ ಕೈ ತೊಳೆದುಕೊಳ್ಳುವುದೇ ಇದಕ್ಕಿರುವ ಅತ್ಯುತ್ತಮ ತಡೆ.
  • ಶೀತಗಾಳಿ ಮತ್ತು ಮಂಜಿನಿಂದ ಕೊರೋನಾವೈರಸ್ ಸಾಯುವುದಿಲ್ಲ.
  • ಬಿಸಿನೀರಿನ ಸ್ನಾನ ಮಾಡುವುದರಿಂದ ಹೊಸ ಕೊರೋನಾವೈರಸ್ ಕಾಯಿಲೆಯನ್ನು ತಡೆಯಲು ಆಗುವುದಿಲ್ಲ.
  • ಸೊಳ್ಳೆ ಕಡಿತದಿಂದ ಹೊಸ ಕೊರೋನಾವೈರಸ್ ಸೋಂಕು ಬರುವುದಿಲ್ಲ. ಇದು ಮುಖ್ಯತಃ ಶ್ವಾಸನಾಳದ ವೈರಸ್; ಸೋಂಕಿನ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಬೀಳುವ ಎಂಜಲಿನ ಕಣಗಳಿಂದ ಹರಡುತ್ತದೆ.
  • ಸಾಕುಪ್ರಾಣಿಗಳಿಗೆ ಕೊರೋನಾವೈರಸ್ ಬರುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ; ಆದಾಗ್ಯೂ ಅಂತಹ ಸಾಕುಪ್ರಾಣಿಗಳನ್ನು ಮುಟ್ಟಿದಾಗ ಚೆನ್ನಾಗಿ ಕೈ ತೊಳೆದುಕೊಳ್ಳಿ.
  • ಹೊಸ ಕೊರೋನಾವೈರಸ್ ಯಾವುದೇ ವಯಸ್ಸಿನ ವ್ಯಕ್ತಿಗೂ ಬರಬಹುದು.
  • ಆಂಟಿ-ಬಯಾಟಿಕ್‌ಗಳು ಕೇವಲ ಬ್ಯಾಕ್ಟೀರಿಯಾ ತಡೆಗೆ ನೆರವಾಗುತ್ತವೆಯೇ ಹೊರತು ಕೊರೋನಾವೈರಸ್ ವಿರುದ್ಧ ಬಳಕೆಗೆ ಬರುವುದಿಲ್ಲ.
  • ನ್ಯೂಮೋನಿಯ ಲಸಿಕೆಯು ಕೊರೋನಾವೈರಸ್ ಗೆ ಚಿಕಿತ್ಸೆ ಅಲ್ಲ. ಆದಾಗ್ಯೂ ನಿಮ್ಮ ಆರೋಗ್ಯಕ್ಕಾಗಿ ಉಸಿರಾಟ ಸಂಬಂಧಿ ಲಸಿಕೆ ಹಾಕಿಸಿಕೊಳ್ಳಬಹುದು.
  • ಥರ್ಮಲ್ ಸ್ಕಾನರ್‌ನಿಂದ ಜ್ವರ ಬಂದವರನ್ನು ಗುರುತಿಸಬಹುದೇ ಹೊರತು 10 ದಿನಗಳ ಒಳಗಿರುವ ಸೋಂಕು ಪೀಡಿತರನ್ನಲ್ಲ; ಅವರಲ್ಲಿ ಇನ್ನೂ ಜ್ವರ ಬರದೇ ಇರಲೂಬಹುದು. (ಸೋಂಕಿನಿಂದ ಜ್ವರ ಬರಲು ಎರಡರಿಂದ ಹತ್ತು ದಿನಗಳು ಬೇಕು).
  • ಹ್ಯಾಂಡ್ ಡ್ರೈಯರ್‌ಗಳಿಂದ ಈ ವೈರಸನ್ನು ಸಾಯಿಸಲು ಸಾಧ್ಯವಿಲ್ಲ. ಆಗಾಗ್ಗೆ ಕೈ ತೊಳೆದುಕೊಳ್ಳುವುದೇ ಸೂಕ್ತ ವಿಧಾನ.
  • ಅಲ್ಟ್ರಾವಯಲೆಟ್ ದೀಪದಿಂದ ಹೊಸ ಕೊರೋನಾವೈರಸ್‌ ಅನ್ನು ಸಾಯಿಸಲು ಬರುವುದಿಲ್ಲ. ಅದನ್ನು ಕೈ ಶುದ್ಧೀಕರಣಕ್ಕೆ ಬಳಸಬಾರದು.
  • ಹೊಸ ಕೊರೋನಾವೈರಸ್ಗೆ ಸದ್ಯಕ್ಕಂತೂ ಯಾವುದೇ ನಿರ್ದಿಷ್ಟ ಔಷಧ ಇಲ್ಲ. ಆದರೆ ಸೋಂಕು ಪೀಡಿತರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಸೂಕ್ತ ಬೆಂಬಲ ನೀಡಬೇಕು.

ದೇಹದ ಮೇಲೆಲ್ಲ ಆಲ್ಕೋಹಾಲ್ ಅಥವಾ ಕ್ಲೋರಿನ್ ಸಿಂಪಡಣೆ ಮಾಡಿದರೆ ದೇಹದ ಒಳಗೆ ಅದಾಗಲೇ ಹೊಕ್ಕಿರಬಹುದಾದ ಹೊಸ ಕೊರೋನಾವೈರಸ್ ಸಾಯುವುದಿಲ್ಲ.

ಮೂಲ: ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...