Homeಮುಖಪುಟಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

ಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

- Advertisement -
- Advertisement -

ಪೀಪಲ್ಸ್ ಕಫ್ರ್ಯೂ ಕಾನ್ಸೆಪ್ಟನ್ನು ಮೊಟ್ಟಮೊದಲ ಬಾರಿಗೆ ಕೊಟ್ಟವರು ಅಸ್ಸಾಮಿನ ವಿದ್ಯಾರ್ಥಿ ಗಣಪರಿಷತ್ ನಾಯಕರು. ಅಸ್ಸಾಮಿಗಳಿಗೆ ವಂಚನೆ ಮಾಡಿ ಬೆಂಗಾಳಿ ಬಾಬುಗಳಿಗೆ ಅಸ್ಸಾಂ ಆಡಳಿತದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟುದುದರ ವಿರುದ್ಧ ಮೊದಲ ಬಾರಿಗೆ ಸೆಟೆದು ನಿಂತದ್ದು ಅಸ್ಸಾಂ ವಿದ್ಯಾರ್ಥಿ ಗಣಪರಿಷತ್. ಆ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಬಂತು. ಯಾವ ಅಸ್ಸಾಮಿ ಪ್ರಜೆಯೂ ಈ ಚುನಾವಣೆಯಲ್ಲಿ ಮತಹಾಕಲು ಮತಗಟ್ಟೆಗೆ ಹೋಗಬಾರದೆಂದು ಕರೆನೀಡಿ Peoples Curfew ಘೋಷಿಸಿತು.

Peoples Curfew ಒಂದು ಹೊಸ ಪ್ರಯೋಗ. ಸರ್ಕಾರ ಕಫ್ರ್ಯೂ ಹಾಕುವುದು ಬ್ರಿಟಿಷರ ಕಾಲದಿಂದ ಜಾರಿಯಲ್ಲಿರುವ ಕರಾಳ ಶಾಸನ. ಹೋರಾಟಗಾರರು ಐದು ಜನ ಒಟ್ಟಿಗೆ ಸೇರಿದರೆ ಅವರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಅನುಮತಿ ನೀಡುವ ಶಾಸನ ಅದು.

ಅಸ್ಸಾಂ ವಿದ್ಯಾರ್ಥಿ ಗಣಪರಿಷತ್ತಿನ Peoples curgfew ಸರ್ಕಾರ ಹಾಕುವ ಕಫ್ರ್ಯೂ ಅಲ್ಲ. ಜನತೆ ಹಾಕುವ ಕಫ್ರ್ಯೂ. ಆಶ್ಚರ್ಯವೆಂದರೆ ಜನತೆ, ತಮ್ಮ ಮೇಲೆ ತಾವೇ ಹಾಕಿಕೊಳ್ಳುವ ಪ್ರತಿಬಂಧಕ. ಆ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ಜನ ಮನೆಬಿಟ್ಟು ಹೊರಬೀಳಲೇ ಇಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಅಸ್ಸಾಮಿನ ಜನ ಭಾಗವಹಿಸಲಿಲ್ಲ. ಶೇ.10ರಷ್ಟು ಮಾತ್ರ ಮತದಾನ ನಡೆಯಿತು. ಆದರೂ ಆಡಳಿತ ಪಕ್ಷ ಆ ಚುನಾವಣೆಯ ಫಲಿತಾಂಶವನ್ನು ಘೋಷಿಸಿತು.

ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬಂದಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರವನ್ನು ರಚಿಸಿತು. ಆದರೆ ಆ ಸರ್ಕಾರ ಬಹಳ ದಿನ ಉಳಿಯಲಿಲ್ಲ. ರಾಷ್ಟ್ರಾಧ್ಯಕ್ಷರ ಆಳ್ವಿಕೆಯನ್ನು ಅಸ್ಸಾಮಿನ ಮೇಲೆ ಹೇರಲಾಯಿತು. ಆರು ತಿಂಗಳೊಳಗೆ ಮತ್ತೆ ಚುನಾವಣೆ ನಡೆದು ವಿದ್ಯಾರ್ಥಿ ಗಣಪರಿಷತ್ ಅಭೂತಪೂರ್ವ ಜಯಗಳಿಸಿ ಆಡಳಿತಕ್ಕೆ ಬಂತು. ಜನ ಮನಸ್ಸು ಮಾಡಿದರೆ ಜನರೇ ಕಫ್ರ್ಯೂ ಹಾಕುವುದು ಸಾಧ್ಯ. ಅದು ಯಶಸ್ವಿಯಾಗಿ ಜಾರಿಗೆ ಬರುವುದೂ ಸಾಧ್ಯ.

ಆದರೆ ಇಂದು ಜನತಾ ಕಫ್ರ್ಯೂ ಹೇರಿರುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರ! ಇದೊಂದು ವಿರೋಧಾಭಾಸವೇ ಸರಿ. ಮೋದಿಗೆ ಶಾಸನಾನುಸಾರ ಸರ್ಕಾರದಿಂದ ಜಾರಿಯಾಗುವ ಕಫ್ರ್ಯೂ ಹಾಕುವ ಅಧಿಕಾರವಿದೆ. ಜನತಾ ಕಫ್ರ್ಯೂ ಹಾಕುವ ಅಧಿಕಾರವಿಲ್ಲ. ಅದು ಇರುವುದು ಜನರಿಗೆ ಮತ್ತು ಜನರನ್ನು ಪ್ರತಿನಿಧಿಸುವ ಪ್ರಭುತ್ವೇತರ ವೇದಿಕೆಗೆ. ಸರ್ಕಾರಿ ಕಾಯಿದೆ ಪ್ರಕಾರ ಕಫ್ರ್ಯೂ ಹೇರಿದರೆ ಜನ ಎದುರುಬಿದ್ದಾರೆಂದು ಮೋದಿಯವರು ಜನತಾ ಕಫ್ರ್ಯೂ ಹೇರಿದ್ದಾರೆ.

ಅಸ್ಸಾಂನಲ್ಲಿ ವಿದ್ಯಾರ್ಥಿ ಗಣಪರಿಷತ್ ಕಫ್ರ್ಯೂವನ್ನು ಜನತೆ ಮಾತ್ರ ಪಾಲನೆ ಮಾಡಿತು. ಸರ್ಕಾರ ಜನತಾ ಕಫ್ರ್ಯೂವನ್ನು ಮನ್ನಣೆ ಮಾಡಲಿಲ್ಲ. ಈಗ ಮೋದಿ ಸರ್ಕಾರ ಜನತಾ ಕಫ್ರ್ಯೂ ಹೇರಿ ಈ ಜನತಾ ಕಫ್ರ್ಯೂವನ್ನು ಸರ್ಕಾರವೂ ಪಾಲಿಸಬೇಕು, ಪ್ರಜೆಗಳೂ ಪಾಲಿಸಬೇಕು ಎಂದು ಫರ್ಮಾನ್ ನೀಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ?

ಏಕೆಂದರೆ ಸರ್ಕಾರಕ್ಕೆ ಜನತಾ ಕಫ್ರ್ಯೂ ಹಾಕಲು ಬರುವುದಿಲ್ಲ. ಅದು ಜನತೆಯ ಹಕ್ಕು. ಜನತೆಯ ಹಕ್ಕನ್ನು ಸರ್ಕಾರ ಕಿತ್ತುಕೊಂಡು ಆ ಹಕ್ಕನ್ನು ಸರ್ಕಾರ ಚಲಾಯಿಸುವುದು ವಿಪರ್ಯಾಸ.

ಕೊರೊನಾ ಭೂತ ನಮ್ಮನ್ನು ಕಾಡುತ್ತಿರುವಾಗ, ಜನರು ಯಾರೂ ಒಂದು ಭಾನುವಾರ ದಯವಿಟ್ಟು ಮನೆಬಿಟ್ಟು ಬರಬೇಡಿ ಎಂದು ಹೇಳುವ ಮತ್ತು ಅದಕ್ಕಾಗಿ ಸರ್ಕಾರಿ ಕಫ್ರ್ಯೂ ಹೇರುವ ಅಧಿಕಾರ ಮೋದಿ ಸರ್ಕಾರಕ್ಕೆ ಇದೆ. ಇದರ ಅವಶ್ಯಕತೆಯನ್ನು ಅರಿತು ಸರ್ಕಾರದೊಡನೆ ಜನ ಸಹಕರಿಸುವುದೂ ಅಗತ್ಯ. ಆದರೆ ಜನತೆಯ ಕಫ್ರ್ಯೂವನ್ನು ಮೋದಿ ಸರ್ಕಾರ ಜಾರಿ ಮಾಡಲು ಹೊರಟಿರುವುದು ವಿರೋಧಾಭಾಸ ಎಂದು ಹೇಳಬೇಕಾಗುತ್ತದೆ. ಇದರ ಬಗೆಗೆ ಮೋದಿಯವರು ಒಂದು ವಿವರಣೆ ನೀಡಬೇಕೆಂದು ಕೇಳಬಯಸುತ್ತೇನೆ. ಸರ್ಕಾರ ತನಗಿಲ್ಲದ ಅಧಿಕಾರ ಬಳಸಿಕೊಂಡು ಜನತಾ ಕಫ್ರ್ಯೂ ಹಾಕಿತು. ಜನ ಇದಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಕಾರಣ ಜನಕ್ಕಿರುವ ಪ್ರಾಣಭಯ. ಜನತಾ ಕಫ್ರ್ಯೂವನ್ನು ಒಳ್ಳೇಕಾರಣಕ್ಕೆ ಈಗ ಮೋದಿ ಬಳಸಿದ್ದಾರೆ. ಜನ ಚೆನ್ನಾಗಿಯೂ ಸ್ಪಂದಿಸಿದ್ದಾರೆ. ಮೋದಿಯವರ ಸರ್ಕಾರ ಮುಂದೆ ಜನತಾ ಕಫ್ರ್ಯೂವನ್ನು ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಅದರ ಬಗೆಗೆ ಜನ ಎಚ್ಚರಿಕೆಯಿಂದಿರಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...