Homeಅಂಕಣಗಳುಥೂತ್ತೇರಿ | ಯಾಹೂಮೂರು ದಿನದ ರಾಜಕಾರಣಿ ಪರವಾಗಿ ನಿಂತು ಸಾಹಿತ್ಯ ಪರಿಷತ್ ಮಾನವನ್ನೇ ಹರಾಜು ಹಾಕಿದ ಮನು ಬಳಿಗಾರ್‌...

ಮೂರು ದಿನದ ರಾಜಕಾರಣಿ ಪರವಾಗಿ ನಿಂತು ಸಾಹಿತ್ಯ ಪರಿಷತ್ ಮಾನವನ್ನೇ ಹರಾಜು ಹಾಕಿದ ಮನು ಬಳಿಗಾರ್‌ – ಯಾಹೂ

- Advertisement -
- Advertisement -

ಈ ದೇಶದಲ್ಲಿರುವ ಜಾತ್ಯತೀತ ವೇದಿಕೆ ಎಂದರೆ ಅದು ಸಾಹಿತ್ಯ ಪರಿಷತ್. ವ್ಯಕ್ತಿ ಏನೇ ಆಗಿರಲಿ, ಆ ವೇದಿಕೆ ಹತ್ತಿದ ಮೇಲೆ ಜಾತಿ ಸೋಂಕಿನಿಂದ ದೂರವಿರಬೇಕು. ಏಕೆಂದರೆ, ಅದೊಂದು ಸರ್ವ ಜನಾಂಗದ ಶಾಂತಿಯ ತೋಟದ ತಾಣ. ಈಗ ಹಾಲಿ ಇರುವ ಮನುಬಳಿಗಾರ್ ಎಂಬ ವ್ಯಕ್ತಿ ಸರಕಾರದಲ್ಲಿ ನಡುಬಗ್ಗಿಸುವ ಕರ್ಮಚಾರಿಯಾಗಿದ್ದವನು. ಈಗಲೂ ಅದೇ ಕೆಲಸ ಮಾಡುತ್ತಿರುವುದಲ್ಲದೆ, ಸ್ವಜಾತಿ ಜನಗಳನ್ನ ಸಾಹಿತ್ಯ ಸಮ್ಮೇಳನಕ್ಕೆ ಕರೆದು “ವಸತಿವ್ಯವಸ್ಥೆ ಮಾಡುತ್ತೇನೆ ಬನ್ನಿ ಎನ್ನುತ್ತಿದ್ದಾನೆ”.

ಮನು ಬಳಿಗಾರ್‌

ಇದೆಲ್ಲಾ ಹಾಳುಬಿದ್ದು ಹೋಗಲಿ, ಶೃಂಗೇರಿಯಲ್ಲಿನ ಘಟನೆಗೆ ಪರೋಕ್ಷ ಕಾರಣನಾಗಿದ್ದಾನೆ. ಈತ ನಿಲ್ಲಬೇಕಾದದ್ದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷನ ಪರವಾಗಿ. ಆದರೆ ಮೂರು ದಿನದ ರಾಜಕಾರಣಿ ಪರವಾಗಿ ನಿಂತು ಸಾಹಿತ್ಯ ಪರಿಷತ್ ಮಾನವನ್ನೇ ಹರಾಜು ಹಾಕಿದ್ದಾನೆ. ಇನ್ನ ಈತನ ಟೀಮು ಆರಿಸಿರುವ ವೆಂಕಟೇಶಮೂರ್ತಿ ಎಂಬಾತ ಶೃಂಗೇರಿಯಲ್ಲಿನ ಘಟನೆ ಬಗ್ಗೆ ಏನು ಹೇಳುತ್ತೀರಿ ಎಂದರೆ, ಅದೆಲ್ಲೋ ದೂರದಲ್ಲಿ ನಡೆದ ವಿಷಯ. ಆ ಬಗ್ಗೆ ತಲೆಕೆಡಿಸಿಕೊಳ್ಳಲು ನನಗೆ ಪುರುಸೊತ್ತಿಲ್ಲ ಎಂದಿದ್ದಾರೆ. ಯಾಕೆಂದರೆ ಬೆಂಗಳೂರು ಬ್ರಾಹ್ಮಣರು ಮಾಡಿದ ಸನ್ಮಾನ ತೆಗೆದುಕೊಳ್ಳುವುದರಲ್ಲೇ ಮುಳುಗಿದ್ದ ಇವರು ಇನ್ನೇನು ತಾನೆ ಹೇಳಿಯಾರು ಥೂತ್ತೇರಿ..

* * *

ಕನ್ನಡನಾಡಿನಲ್ಲಿ ಹಿಂದೆಂದೂ ಸಂಭವಿಸದ ಪ್ರವಾಹ ಅನಾಹುತ ಸಂಭವಿಸಿದೆ. ಬದುಕನ್ನು ಕಳೆದುಕೊಂಡವರ ಗೋಳನ್ನ ತೋರದೆ ಸರಕಾರದ ಮರ‍್ಯಾದೆ ಕಾಪಾಡುವುದರಲ್ಲಿ ಮಗ್ನರಾಗಿರುವ ಮಾಧ್ಯಮದವರ ಹೊಟ್ಟೆಪಾಡು ಪ್ರವಾಹದವರಿಗಿಂತಲೂ ಭೀಕರವಾದದ್ದು. ಪ್ರವಾಹ ಸಂತ್ರಸ್ತರ ಕತೆಯೇನು ಎಂಬುದನ್ನು ಈ ನಾಡಿಗೆ ತೋರದೆ ಸಾಹಿತ್ಯ ಸಮ್ಮೇಳನ ಬಿತ್ತರಿಸಲು ತಯಾರಾಗಿರುವ ಮಾಧ್ಯಮದವರಿಗೂ, ಈ ಮನುಬಳಿಗಾರ್‌ಗೂ ಬಂಧುವಿದ್ದಂತೆ. ಅದಕ್ಕಾಗಿ ನಾಡು ಕೊಚ್ಚಿಹೋದರೇನು ಸಾಹಿತ್ಯ ಸಮ್ಮೇಳನ ಜರುಗದಿದ್ದರೆ ಅನಾವೃಷ್ಟಿ ಗ್ಯಾರಂಟಿ ಎಂಬಂತಾಡಿದ ಆತ ಸರಕಾರದಿಂದ ತನಗೆ ಬೇಕಿದ್ದಷ್ಟು ಹಣವನ್ನ ಬಿಡುಗಡೆ ಮಾಡಿಸಿಕೊಂಡಿದ್ದಾನೆ.

ಎಚ್‌. ಎಸ್‌ ವೆಂಕಟೇಶ ಮೂರ್ತಿ

ಕನ್ನಡನಾಡಿನಲ್ಲಿ ಸಾಹಿತ್ಯ ಪರಿಷತ್ ಉದ್ಭವವಾದಾಗಿನಿಂದಲೂ ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ಕನ್ನಡನಾಡಿನ ಸಾಹಿತಿಗಳ ಘನತೆಯನ್ನು ಎತ್ತಿ ಹಿಡಿಯುತ್ತ ಬಂದ ಈ ಸಂಸ್ಥೆಯ ಮಾನವನ್ನೇ ಹರಾಜುಹಾಕಿ ಮೌನವಾಗಿ ತಾನು ಮಾಡುವುದನ್ನೇ ಮಾಡುತ್ತಾ ಕನ್ನಡದ ಅಸಂಖ್ಯಾತ ಕವಿಗಳಲ್ಲಿ ಒಬ್ಬರಾದ ವೆಂಕಟೇಶ್‌ಮೂರ್ತಿಯನ್ನು ಮೆರೆಸಲು ಹೊರಟ ಮನುಬಳಿಗಾರ ಮುಂದೆ ಇನ್ನು ಸಮಸ್ಯೆಯಾಗುವುದರಲ್ಲಿ ಸಂಶಯವಿಲ್ಲವಂತಲ್ಲಾ ಥೂತ್ತೇರಿ.

* * *

ವೆಂಕಟೇಶ್‌ಮೂರ್ತಿಯಂತಹ ಸಾಧಾರಣ ಕವಿಯನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿಕೊಂಡು ಹತ್ತದಿನೈದು ಕೋಟಿಯನ್ನ ಉಡಾಯಿಸಲು ಹೊರಟಿರುವ ಕನ್ನಡಾಭಿವೃದ್ಧಿ ವಿಷಯವಾಗಿ ಸತ್ತಂತಿರುವ ಸಾಹಿತ್ಯ ಪರಿಷತ್ತಿನ ಹಟ ಹಾಳುಬಿದ್ದೋಗಲಿ ನಮ್ಮ ಸಂತೆ ಶಿವರದ ಭೈರಣ್ಣನ ಕಡೆಯಿಂದ ಸಂತೋಷಕರ ಸುದ್ದಿಯೊಂದು ಹೊರಬಿದ್ದಿದೆಯಲ್ಲಾ. ಅದೇನೆಂದರೆ ಅವರಿನ್ನು ಏನೂ ಬರೆಯುವುದಿಲ್ಲವಂತೆ. ಹಾಗೇ ಇದ್ದು ಸತ್ತು ಹೋಗುತ್ತಾರಂತೆ.

ಹಾಗೆ ನೋಡಿದರೆ ಭೈರಣ್ಣನ ಬರವಣಿಗೆ ಶ್ರಮ ಸಾರ್ಥಕವಾಗಿದೆ. ಅವರ ಆರಂಭದ ಕಾದಂಬರಿ ಧರ್ಮಶ್ರೀ ಈಗ ದೇಶದಲ್ಲೆಲ್ಲಾ ತನ್ನ ಅಜೆಂಡಾ ಮೆರೆಸಿಕೊಂಡು ಸಂಭ್ರಮಪಡುತ್ತಿದೆ. ಅದರ ಬಹುಮುಖ್ಯ ಕಾಳಜಿಯಾದ ರಾಮಮಂದಿರ ತಲೆ ಎತ್ತಲಿದೆ. ಹಿಂದೆ ಅವರ ನಿದ್ದೆ ಹಾಳು ಮಾಡಿದ್ದ ಬಾಬರಿ ಮಸೀದಿ ಇದ್ದ ಗುರುತು ನಾಶವಾಗಿದೆ. ಕಾಶ್ಮೀರಕ್ಕೆ ಕೊಳ್ಳಿ ಇಡಲಾಗಿದೆ. ಜೆಎನ್‌ಯು ವಿದ್ಯಾರ್ಥಿಗಳನ್ನ ಚಚ್ಚಿ ತಹಬಂದಿಗೆ ತರಲಾಗಿದೆ. ದೇಶದ ಪಠ್ಯಪುಸ್ತಕದೊಳಕ್ಕೆ ಪುರೋಹಿತಶಾಹಿ ಅಜೆಂಡಾಗಳನ್ನ ತುರುಕಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿಎಎ ತರಲಾಗಿದೆ. ಈ ಸಂಗತಿ ಹಳೇ ಭೈರಪ್ಪನ ಬರವಣಿಗೆ ಬದುಕನ್ನ ಸಾರ್ಥಕಗೊಳಿಸಿವೆಯಂತಲ್ಲಾ ಥೂತ್ತೇರಿ.

* * *

ಸಾಹಿತಿಯಾದವನು ಚಳವಳಿಗಳಿಂದ ದೂರ ಇರಬೇಕು. ಚಳವಳಿಗಳ ಕಾಲಘಟ್ಟ ಕೃತಿ ರಚನೆಗೆ ಪ್ರೇರಕವಾಗಬಾರದು ಸಾಹಿತಿ ಯಾವುದಕ್ಕೂ ಗಂಟುಬೀಳಬಾರದೆಂದು ಹೇಳುವ ಭೈರಪ್ಪ ಸರಿಯಾಗಿ ಗಂಟುಬಿದ್ದದ್ದು ಜನಿವಾರಕ್ಕೆ. ಇವರ ದಾಟು ಕೃತಿಯಲ್ಲಿ ದಲಿತರ ಹುಡುಗಿಗೆ ಜನಿವಾರ ಬಿಗಿಯುತ್ತಾರೆ. ದಲಿತರು ದೇವಸ್ಥಾನಕ್ಕೆ ನುಗ್ಗಿದ್ದಕ್ಕೆ ಮೂರ್ಛೆ ಬೀಳಿಸುತ್ತಾರೆ. ವಿಧವೆ ಮರುಮದುವೆಯಾದರೆ ಬರೀ ಅಬಾಷನ್ ಎದುರಿಸಬೇಕಾಗುತ್ತದೆ ಇತ್ಯಾದಿ ಪುರೋಹಿತಶಾಹಿ ಅಜೆಂಡಾಗಳನ್ನ ತನ್ನ ಕೃತಿಗಳಲ್ಲಿ ತುರುಕಿರುವ ಭೈರಪ್ಪ, ಬರವಣಿಗೆ ಸಮಯದಲ್ಲಿ ಭೀಕರವಾಗಿ ಎದುರಿಸಿದ್ದು ನವ್ಯ ಲೇಖಕರನ್ನ. ಮತ್ತವರ ಟೀಕೆಯನ್ನ. ನವ್ಯರಿಗೆ ವಿರುದ್ಧ ದಿಕ್ಕಿನಲ್ಲಿ ಕಗ್ಗಹೊಸೆಯುತ್ತಿದ್ದ ಭೈರಪ್ಪ, ಗಮನಿಸಿದರೂ ಮರೆಮಾಚುವ ಸಂಗತಿ ಯಾವುದೆಂದರೆ ನವ್ಯರ ಕೃತಿಗಳನ್ನು ಈಗಲೂ ಉತ್ಸಾಹದಿಂದ ಓದಬಹುದು. ಬರುಬರುತ್ತಾ ಭೈರಪ್ಪ ಆವರಣದಂತಹ ಕೃತಿ ರಚಿಸಿದಾಗ ಪೂರ್ಣಚಂದ್ರ ತೇಜಸ್ವಿಯವರು “ಹೊಟ್ಟೆಗೆ ಅನ್ನ ತಿನ್ನುವ ನರಮನುಷ್ಯರಾರು ಇಂತಹ ಕೃತಿ ಹೇಳಿದ ಮಾತುಗಳು ತಮ್ಮನ್ನೇ ಆವರಿಸಿ ಬರೆಸಿಕೊಂಡು ಉಗಿಸಿದ್ದು ಇತಿಹಾಸ; ಇರಲಿ, 87 ವರ್ಷದ ಭೈರಣ್ಣನ ಕಡೆಯ ಕೃತಿ ಉತ್ತರ ಕಾಂಡ ಓದಿ ಒಂದು ನಮಸ್ಕಾರ ಹೊಡೆಯಬಹುದಲ್ಲಾ ಥೂತ್ತೇರಿ.

* * *

ವ್ಯಕ್ತಿ ಸತ್ಯ ಹೇಳುವಾಗ ಸದೃಢನಾಗಿರುತ್ತಾನೆ. ಆ ಸಮಯವೂ ಕಡಿಮೆ ಇರುತ್ತದೆ. ಅದೇ ಸುಳ್ಳು ಹೇಳುವಾಗ ಕಂಪಿಸುತ್ತಾನೆ. ಏಕೆಂದರೆ ಸುಳ್ಳುಗಳ ಸರಮಾಲೆಗೆ ಸದೃಢತೆ ಬರುವುದಿಲ್ಲ. ನಮ್ಮ ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞೆಯಾದ ಸಚಿವೆ ನಿರ್ಮಲ ಮೋದಿ ಟೀಮು ತಯಾರಿಸಿದ ಸುಳ್ಳು ಬಜೆಟ್ ಓದಿ ಓದಿ ಬಳಲಿ ಬೆಂಡಾಗಿಹೋದಳಲ್ಲಾ. ಆಕೆಯ ಬಳಲಿಕೆಗೆ ತಿರುವಳ್ಳುವರ್ ಕವಿತೆ ತಿಲಮಾತ್ರವೂ ಸ್ಫೂರ್ತಿ ನೀಡದಿದ್ದುದು ವಿಶೇಷ. ಏಕೆಂದರೆ ಕವಿತೆ ಸಾಲುಗಳು ಸುಳ್ಳನ್ನು ವಿಜೃಂಭಿಸಲಾರವು.

ಬಿಜೆಪಿಯಲ್ಲಿ ಭಾರತದ ಹಣಕಾಸಿನ ಸುಧಾರಣಾ ಪ್ರತಿಭೆಗಳೇ ಇಲ್ಲ. ತಲೆಗೆ ಮತದ ಅಮಲೇರಿದಾಗ ಪ್ರತಿಭೆ ಅಲ್ಲಿಂದ ಕಾಲ್ಕೀಳುತ್ತದೆ. ಅಡ್ಡಕಸುಬಿಗಳ ಕೈಗೆ ದೇಶಸಿಕ್ಕಾಗ ಕಸುಬುದಾರ ಕುಬೇರರು ದೇಶ ಕಬಳಿಸಲು ಸಂಚು ಹೂಡುತ್ತಾರೆ. ಅದರಂತೆ ಭಾರತದ ಸರಕಾರದ ಸಂಪತ್ತಿನ ಮೇಲೆ ಕಣ್ಣಿಟ್ಟ ಕುಬೇರರ ಸಂಚನ್ನ ಅರಿತ ಮೋದಿ ಎಲೈಸಿಯನ್ನ ಮಾರುವ ತೀರ್ಮಾನ ಮಾಡಿದ್ದಾನಂತಲ್ಲಾ. ಅಂತೂ ಜೀವವಿಮೆಗೂ ಸಂಚಕಾರ ತಂದ ಮೋದಿ ಇನ್ನೇನನ್ನ ಉಳಿಸಲಾರ ಎಂಬುದನ್ನು ಸಾಬೀತು ಮಾಡಿದ್ದಾನಲ್ಲಾ ಥೂತ್ತೇರಿ.

* * *

ನಮ್ಮ ಸುಂದರವಾದ ಕಡಲತೀರದಲ್ಲಿ ವಿಕೃತವಾಗಿ ಉದ್ಭವಿಸಿಬಂದಂತಿರುವ ಪುರೋಹಿತಶಾಹಿ ಪಿಂಡವೊಂದು, ಮತ್ತೆ ತನ್ನ ವಟಾರದಿಂದ ಗಾಂಧೀಜಿ ವಿರುದ್ಧ ವಿಕಾರವಾಗಿ ಕೂಡಿಕೊಂಡಿದೆ. ಇದರ ಅರಚಾಟ ನೋಡಿ ಬೇಸತ್ತಿದ್ದ ಮೋದಿ ಮಹಾತ್ಮ ಸಮಯ ಕಾದಿದ್ದು, ಇದಕ್ಕೆ ತಕ್ಕ ಶಾಸ್ತಿ ಎಂದರೆ ಮಂತ್ರಿಮಾಡದೆ ಇರುವುದು ಎಂದುಕೊಂಡು. ಅದರಂತೆ ಮಂತ್ರಿಗಿರಿ ಇಲ್ಲದೆ ಮನಗೆ ಕಳಿಸಿದಾಗಿನಿಂದಲೂ ಹೆಚ್ಚು ವಿಕೃತವಾಗಿ ಕೂಗಿದರೆ ಅದು ನಾಗಪುರಕ್ಕೆ ತಲುಪಿ, ಅಲ್ಲಿಂದ ಏನಾದರೂ ಸಂದೇಶ ಚೆಡ್ಡಿಗಳ ಹೈಕಮಾಂಡು ತಲುಪಿ, ಯಾವುದಾದರೂ ಕಿತ್ತುಹೋದ ಖಾತೆ ಸಿಗಬಹುದೆಂದು ಕೂಗುತ್ತಿದೆಯಂತಲ್ಲಾ.

ಇದರ ಹುನ್ನಾರಕ್ಕೆ ಪ್ರತಿಯಾಗಿ, ಬಸನಗೌಡ ಯತ್ನಾಳ್ ಎಂಬ ಎಮ್ಮೆ ಮುಕಳಿ ಕೊಳೆದು ಸುಸ್ತಾಗಿರುವ ವ್ಯಕ್ತಿಯ ಜೊತೆಗೆ ತೀಟೆ ರವಿ, ರೇಣುಕಾದೇವಿ ಭಕ್ತನಾದ ರೇಣುಕಾಚಾರಿ ಇವರೆಲ್ಲಾ ಸೇರಿಕೊಂಡಿದ್ದಾರಂತಲ್ಲಾ ಮುಖ್ಯವಾಗಿ ಇವರ ಉದ್ದೇಶ ಇಷ್ಟೆ. ಎಲ್ಲರನ್ನ ಮೀರಿಸಿ ಮತಾಂಧತೆಯಿಂದ ಒರಲುವುದು. ಆ ನಂತರ ಮೆಂಟಲಾಸ್ಪಿಟಲ್ ಸೇರುವುದೇ ಗುರಿಯಾಗಿದೆಯಂತಲ್ಲಾ ಥೂತ್ತೇರಿ

– ಯಾಹೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳನ್ನು ಹೊಂದದೆ ಮೋದಿ, ಯೋಗಿ ನಿರುದ್ಯೋಗ ತಡೆದಿದ್ದಾರೆ ಎಂದ ಬಿಜೆಪಿ ಸಂಸದ!

0
ಯೂಟ್ಯೂಬರ್ ಒಬ್ಬರು ಉತ್ತರ ಪ್ರದೇಶದ ಬಿಜೆಪಿ ಸಂಸದನ ಬಳಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ವಿಚಿತ್ರವಾದ ಉತ್ತರ ನೀಡುವ ಮೂಲಕ ನಗೆ ಪಾಟಲಿಗೀಡಾಗಿದ್ದಾರೆ. ಯೂಟ್ಯೂಬರ್ ಜೊತೆ ಮಾತನಾಡಿರುವ ಆಝಂಘರ್ ಲೋಕಸಭಾ ಕ್ಷೇತ್ರದ ಬಿಜೆಪಿ...