Homeರಾಜಕೀಯಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

ಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

- Advertisement -
ಢೋಂಗಿ ಪರಿಸರ ಪರಾಕ್ರಮಿಗಳ ದಗಲುಬಾಜಿ ಆಟದಿಂದ ಉತ್ತರ ಕನ್ನಡಿಗರೀಗ ಬೇಸತ್ತು ಹೋಗಿದ್ದಾರೆ. ಮೂಲತಃ ತಮ್ಮ ಅಡಿಕೆ ತೋಟಗಳ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವ ಹವ್ಯಕ ಬ್ರಾಹ್ಮಣರ ಮುಖವಾಡವಾಗಿಯಷ್ಟೆÃ ಚಲಾವಣೆಗೆ ಬರುವ ಈ ಢೋಂಗಿ ಪರಿಸರವಾದ ಅಬ್ರಾಹ್ಮಣ ಸಮುದಾಯಗಳಿಗೆ ದಕ್ಕೆಯಾಗುವ ಯಾವ ಯೋಜನೆಗಳಿಗೂ ಚಕಾರವೆತ್ತುವುದಿಲ್ಲ. ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಯಿಂದ ಅನಂತ್ ಹೆಗಡೆ ಆಶೀಸರನಂಥ ಬ್ರಾಹ್ಮಣ ಜಾತ್ಯಸ್ಥರೆಲ್ಲ ಪರಿಸರವಾದವನ್ನು ತಮ್ಮಿಷ್ಟದಂತೆ ಕನವರಿಸೋದು ತಮ್ಮ ಜಾತಿಯ ಹಿತ ಕಾಪಾಡುವುದಕ್ಕಷ್ಟೆÃ!
ಜಿಲ್ಲೆಯ ಅಭಿವೃದ್ಧಿಗೆ ಅನಿವಾರ್ಯ ಅಗತ್ಯವಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಡ್ಡಗಾಲು ಹಾಕುವ ಈ ಪ್ರಚಂಡರು, ತಮ್ಮ ಶಿರಸಿ-ಯಲ್ಲಾಪುರ ಹೈಗರ ಸೀಮೆಗೆ ಅನುಕೂಲವಾಗುವ ತಾಳಗುಪ್ಪಾ-ಸಿದ್ಧಾಪುರ-ಶಿರಸಿ-ಹಾವೇರಿ ರೈಲು ಮಾರ್ಗಕ್ಕೆ ಒತ್ತಾಯಿಸುತ್ತಾರೆ. ಆಗ ಆಗುವ ಪರಿಸರ-ಅರಣ್ಯ ನಾಶ ಇವರಿಗೆ ಕಾಣಿಸುವುದಿಲ್ಲ. ಈ ದ್ವಿಮುಖ ನಾಟಕದ ಪರಿಸರವಾದಿ ತಂಡದಲ್ಲಿ ಆರಂಭದಲ್ಲಿ ಕೇಂದ್ರ ಮಂತ್ರಿ ಅನಂತ್ಮಾಣಿಯೂ ಇದ್ದ. ಯಾವಾಗ ಅನಂತ್ ಹೆಗಡೆ ಆಶೀಸರ ಎಂಬ ಮತ್ತೊÃರ್ವ ಬ್ರಾಹ್ಮಣ ಪಟು ಪರಿಸರ ಹೋರಾಟವನ್ನೆÃ ತನ್ನ ಚೆಡ್ಡಿ ರಾಜಕಾರಣಕ್ಕೆ ಚಿಮ್ಮುಹಲಗೆ ಮಾಡಿಕೊಳ್ಳಲು ಹವಣಿಸಿದನೋ ಆಗ ಅನಂತ್ಮಾಣಿ ತಿರುಗಿಬಿದ್ದ. ಒಂದು ಹಂತದಲ್ಲಿ ಈ ಪರಿಸರವ್ಯಾಧಿ ಅಶೀಸರ ಆರೆಸ್ಸೆಸ್ ಸಂಪರ್ಕ ಸಾಧಿಸಿ, ಮಾಣಿಗೆ ಕೊಕ್ ಕೊಟ್ಟು  ಬಿಜೆಪಿ ಸಂಸದಗಿರಿ ಟಿಕೆಟ್ ತರಲು ಹವಣಿಸಿದ್ದೂ ಇದೆ. ಅದೇ ಕಾರಣಕ್ಕೆ ಅನಂತ್ಮಾಣಿ ಈಗ ಈ ಪರಿಸರ ಗ್ಯಾಂಗನ್ನು ಅಭಿವೃದ್ಧಿ ವಿರೋಧಿ ಅಡ್ನಾಡಿಗಳು ಎಂಬಂತೆ ಮೂದಲಿಸುತ್ತಿದ್ದಾನೆ.
ಢೋಂಗಿ ಪರಿಸರವಾದಿ ತಂಡದ ಕೆಟ್ಟ ಕಣ್ಣಿÃಗ ಕುಮಟಾ-ಶಿರಸಿ ರಸ್ತೆ ಅಗಲೀಕರಣ ಯೋಜನೆ ಮೇಲೆ ಬಿದ್ದಿದೆ. ರಾಜ್ಯ ಹೆದ್ದಾರಿಯಾಗಿದ್ದ ಸದ್ರಿ ರಸ್ತೆಯನ್ನು ಹಾವೇರಿಯಿಂದ ಕುಮಟಾವರೆಗೆ ರಾಷ್ಟಿçಯ ಹೆದ್ದಾರಿ 766ಇ ಎಂದು ಘೋಷಿಸಲಾಗಿದೆ. ಸಾಗರಮಾಲಾ ಯೋಜನೆಯಲ್ಲಿ ಮಂಜೂರಾಗಿರುವ ಈ 60 ಕಿ.ಮೀ ಉದ್ದದ ರಸ್ತೆ ಯೋಜನಾ ವೆಚ್ಚ ಬರೋಬ್ಬರಿ 360.60 ಕೋಟಿ ರೂಪಾಯಿಗಳು. ಈ ಕಾಮಗಾರಿ ಗುತ್ತಿಗೆ ಆರ್‌ಎನ್‌ಎಸ್ ಇನ್‌ಫ್ರಾಸ್ಟçಕ್ಚರ್ ಲಿಮಿಟೆಡ್ ಮತ್ತು ಗಾಯತ್ರಿ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಸಹಭಾಗಿತ್ವದಲ್ಲಿ ಪಡೆದುಕೊಂಡಿವೆ. ಯೋಜನೆಯ ವಿಸ್ತೃತ ವರದಿ(ಡಿಪಿಆರ್)ನಂತೆ ಈಗಿರುವ ರಸ್ತೆಯನ್ನು 11 ಮೀಟರ್‌ನಿಂದ 18 ಮೀಟರ್ ಅಗಲ ಮಾಡಲಾಗುತ್ತದೆ. ಈಗಿರುವ 11 ಸೇತುವೆಗಳನ್ನು ಪುನರ್ ನಿರ್ಮಿಸಲಾಗುತ್ತದೆ.
ಹಾಗೆ ನೊಡಿದರೆ ಈ ಅಗಲೀಕರಣ ಬಹುದಿನದ ಅಗತ್ಯವಾಗಿತ್ತು. ಆದರೆ ಇಲ್ಲಿಯ ಹೊಣೆಗೇಡಿ ಎಂಪಿ, ಎಮ್ಮೆಲ್ಲೆ, ಮಿನಿಸ್ಟರ್‌ಗಳು ಎಷ್ಟೆÃ ಸಾವು-ನೋವಾದರೂ, ಸರಕು ಸಾಗಾಣಿಕೆಗೆ ತೊಂದರೆಯಾದರೂ, ಅಭಿವೃದ್ಧಿ ವೇಗಕ್ಕೆ ಬ್ರೆÃಕ್ ಬಿದ್ದಿದ್ದರೂ ತಲೆಯೇ ಕೆಡಿಸಿಕೊಂಡಿರಲಿಲ್ಲ. ಆದರೆ ಸದ್ರಿ ಯೋಜನೆಯ ಪ್ರಸ್ತಾಪ ಹೊರೆ ಬೀಳುತ್ತಿದ್ದಂತೆಯೇ ಘಟ್ಟದ ಮೇಲಿನ ಪರಿಸರ ವ್ಯಾಧಿ ತಂಡ ಹುಸಿ ಹಸಿರು ಕಳಕಳಿ ಪ್ರದರ್ಶಿಸತೊಡಗಿದೆ. ಅನಂತ ಹೆಗಡೆ ಆಶೀಸರನ ಗ್ಯಾಂಗ್ ಪಶ್ಚಿಮ ಘಟ್ಟ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ ಬರುತ್ತದೆ; ಗಿಡಮೂಲಿಕೆ ಸಂರಕ್ಷಿತ ದೇವಿಮನೆ ಘಟ್ಟ ಪ್ರದೇಶ ಧ್ವಂಸವಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿದೆ. ಕಂಡ-ಕಂಡ ಅಧಿಕಾರಿಗಳಿಗೆಲ್ಲಾ ಮನವಿ ಕೊಟ್ಟು ಉದ್ದುದ್ದ ಬೋಗಸ್ ಭಾಷಣ ಬಿಗಿಯುತ್ತಿದ್ದಾರೆ.
ಆದರೆ ವಾಸ್ತವ ಇವರೇಳುವಷ್ಟು ಭೀಭತ್ಸವಾಗೇನೂ ಇಲ್ಲ. ದೇವಿಮನೆಯ ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ರಸ್ತೆಯಿಂದ ತುಂಬ ದೂರದಲ್ಲಿದೆ. ಇಲ್ಲಿಯ ಔಷಧಿ ಮೂಲಿಕೆಗಳ ವಾಸ್ತವ ಸ್ಥಿತಿ ಅರಣ್ಯ ಇಲಾಖೆಗೂ ಗೊತ್ತಿಲ್ಲ. ಪರಿಸರ ವ್ಯಾಧಿಗಳು ಮಾತ್ರ ಅಮೂಲ್ಯ ಗಿಡಮೂಲಿಕೆಯಿದೆ ಎಂದು ಬೊಂಬಡಾ ಬಜಾಯಿಸುತ್ತಿದ್ದಾರೆ. ಸ್ವಾತಂತ್ರö್ಯ ನಂತರ ಶಿರಸಿ-ಕುಮಟಾ ರಸ್ತೆ ನಿರ್ಮಾಣವಾಗಿದೆ. ಆಗಾಗ ರಸ್ತೆ ಅಗಲೀಕರಣವೂ ಆಗಿದೆ. ಇದರಿಂದ ಗುಡ್ಡಗಳ ಕುಸಿತವಾಗಲಿ, ಹತ್ತಿರದ ಗ್ರಾಮಗಳಿಗೆ ಅನಾಹುತವಾಗಲಿ ಆಗಿದ್ದಿಲ್ಲ; ರಸ್ತೆ ಅಗಲೀಕರಣದಿಂದ ವನ್ಯಜೀವಿಗಳ ಓಡಾಟಕ್ಕೆ ಕಷ್ಟವಾಗಲಿದೆ ಎಂಬುದೇ ಹಾಸ್ಯಾಸ್ಪದ. ಈಗಾಗಲೇ ಇಲ್ಲಿ ರಸ್ತೆಯಿದೆ. ಹಗಲೂ-ಇರುಳು ವಾಹನ ಓಡಾಟವಿದೆ. ಪ್ರಾಣಿಗಳಿಗೆ ತೊಂದರೆಯೇನಾಗಿಲ್ಲ. ದೇವಿಮನೆ ಘಟ್ಟ-ಕಣಿವೆಯಲ್ಲಿ ವಿದ್ಯುತ್ ಮಾರ್ಗದ ಕಾರಿಡಾರ್ ಕೂಡ ಇದೆ. ಇದರಿಂದ ಪರಿಸರಕ್ಕೆ ಹಾನಿಯೇನಾಗಿಲ್ಲ. ಅಷ್ಟಕ್ಕೂ ಕಡಿಯುವುದು ರಸ್ತೆ ಅಂಚಿನ ಸ್ವಲ್ಪ ಕಾಡಷ್ಟೆÃ! ಹೆದ್ದಾರಿ ನಿರ್ಮಾಣದ ನಂತರ ಅಕ್ಕ-ಪಕ್ಕದಲ್ಲಿ ಮರ ಬೆಳೆಸಲು ಅವಕಾಶ ಇದ್ದೆÃಯಿದೆ.
ಮೂರು ದಶಕದಿಂದ ಹಾವೇರಿ-ಕುಮಟಾ-ತಡಸ-ಕುಮಟಾ ರಸ್ತೆ ಮೇಲ್ದರ್ಜೆಗೇರಿಸುವ ಬೇಡಿಕೆ ವಾಣಿಜ್ಯೊÃದ್ಯಮಿಗಳು, ಜನಸಾಮಾನ್ಯರು ಮಂಡಿಸುತ್ತಾ ಬಂದಿದ್ದರು. ಈ ರಸ್ತೆ ಅಗಲೀಕರಣ ಜಿಲ್ಲೆಯ ಅಭಿವೃದ್ಧಿಗೆ ಹೆಬ್ಬಾಗಿಲು. ಜಿಲ್ಲೆಯ ಬಂದರುಗಳ ಅಭಿವೃದ್ಧಿ ಇದರಿಂದಾಗುತ್ತದೆ. ಹುಬ್ಬಳ್ಳಿ-ಹಾವೇರಿ-ದಾವಣಗೆರೆ ಮುಂತಾದೆಡೆಯಿಂದ ಕರಾವಳಿಗೆ ಉತ್ಪಾದಿತ ವಸ್ತುಗಳ ರಫ್ತಿಗೆ ಉತ್ತೆÃಜನ ಸಿಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮ, ಸ್ಕೊಬಾ ಡ್ರೆöÊವಿಂಗ್‌ಗೆ ಈ ಹೆದ್ದಾರಿ ಪೂರಕÀವಾಗುತ್ತದೆ. ಕಡಿಮೆ ಅವಧಿಯಲ್ಲಿ ಸುರಕ್ಷಿತ ಪ್ರಯಾಣ ಮಾಡಬಹುದು. ಈಗಿನದು ಯಮಯಾತನೆಯ ಪ್ರವಾಸ!! ರಸ್ತೆ ಅಗಲಿಕರಣ ಉದ್ಯಮಿಗಳಗಷ್ಟೆÃ ಅಲ್ಲ. ಶಿಕ್ಷಣ, ಆರೋಗ್ಯ, ಮತ್ತಿತರ ಕಾರಣಕ್ಕೆ ಕರಾವಳಿಯತ್ತ ಹೋಗುವವರಿಗೆ ಮತ್ತು ಕರಾವಳಿಯಿಂದ ಬಯಲು ಸೀಮೆಗೆ ಹೋಗುವವರಿಗೂ ವರದಾನವೇ ಸರಿ.
ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ತುಲನಾತ್ಮಕವಾಗಿ ಕಡಿಮೆ ಬಂಡವಾಳ ಸಾಕು. ಯಲ್ಲಾಪುರ-ಶಿರಸಿ-ಸಿದ್ಧಾಪುರ-ಮುಂಡಗೋಡ ತಾಲ್ಲೂಕುಗಳು ರೈಲು ಮಾರ್ಗ ಕಾಣುವುದು ಅನುಮಾನ ಎಂದು ಹೊಣೆಗೇಡಿ ಸಂಸದ ಕಮ್ ಕೇಂದ್ರ ಮಂತ್ರಿ ಅನಂತ್ಮಾಣಿಯೇ ಬಡಬಡಿಸುತ್ತಿದ್ದಾನೆ. ಹೀಗಿರುವಾಗ ರಾಷ್ಟಿçÃಯ ಹೆದ್ದಾರಿಯಾಗಿ ರಸ್ತೆ ಅಗಲೀಕರಣವೂ ಬೇಡವೆಂದರೆ ಹೇಗೆ? ಸ್ವಾರ್ಥಕ್ಕಾಗಿ ಪರಿಸರ ಸಂರಕ್ಷಣೆ ಪ್ರಹಸನ ಮಾಡುತ್ತಿರುವ ಹುಸಿ ಪರಿಸರವಾದಿಗಳಿಗೆ ಜನರೀಗ ಉಗಿಯುತ್ತಿದ್ದಾರೆ. ಉತ್ತರ ಕನ್ನಡಿಗರು ಈ ಛಲವನ್ನು ದಶಕದ ಹಿಂದೆಯೇ ತೋರಿಸಬೇಕಿತ್ತು. ಸೋಗಲಾಡಿ ಪರಿಸರ ಪರಾಕ್ರಮಿಗಳ ಬಂಡಲ್ ಭಾಷಣ, ಅಂಕಣ, ಮಾನವ ಸರಪಳಿಗಳಿಗೆ ಜಿಲ್ಲೆಯ ಮುಗ್ಧ ಜನ ಸಿಲುಕಿದ್ದರಿಂದಲೇ ಅಭಿವೃದ್ಧಿ ಕಾಣದಂತಾಯ್ತು. ಪರಿಸರವಾದಿಗಳ ಕಿರಿಕಿರಿಯೊಂದಿಲ್ಲದಿದ್ದರೆ ಎಂದೋ ಜಿಲ್ಲೆಗೆ ರೈಲು-ಸುಸಜ್ಜಿತ ರಸ್ತೆ, ಬಂದರು, ಬೃಹತ್ ಉದ್ಯಮ ಬರುತ್ತಿತ್ತು. ವಿದ್ಯೆ, ಉದ್ಯೊಗ, ವ್ಯವಹಾರಕ್ಕೆ ಗುಳೇ ಹೋಗುವುದು ತಪ್ಪುತ್ತಿತ್ತು. ಉತ್ತರ ಕನ್ನಡ ಪಕ್ಕದ ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡದಂತೆ ಪ್ರಗತಿ ಕಾಣುತ್ತಿತ್ತು.
ಈಗ ಜನರಿಗೆ ಪರಿಸರ ವ್ಯಾಧಿಗಳ ಬಣ್ಣ ಗೊತ್ತಾಗಿದೆ. ತದಡಿ ಬಂದರು ಬೇಕೆಂದು ಪರಿಸರವಾದಿಗಳಿಗೆ ತಿರುಗಿ ಬಿದ್ದಿದ್ದ ಜನರೀಗ ಕುಮಟಾ-ಹಾವೇರಿ ರಸ್ತೆ ಅಗಲೀಕರಣದ ಪರವಿದ್ದಾರೆ. ಇನ್ನಾದರೂ ಪರಿಸರವಾದಿಗಳು ದ್ರೊÃಹದ ಆಟ ನಿಲ್ಲಿಸುವರಾ?
– ಶುದ್ಧೊಧನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...