Homeಮುಖಪುಟಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

ಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

- Advertisement -
- Advertisement -

ಜೀವನ ಕಲೆಗಳು: ಅಂಕಣ-16

ಪರಸ್ಪರ ವೈಯ್ಯುಕ್ತಿಕ ವ್ಯಾಜ್ಯಗಳ ಪರಿಹಾರ

ಜನರು ಒಟ್ಟಾಗಿ ಕೆಲಸ ಮಾಡುತ್ತಿರುವಾಗ ಪರಸ್ಪರ ವೈಯ್ಯುಕ್ತಿಕ ಮತಭೇದ ಮತ್ತು ವ್ಯಾಜ್ಯಗಳು ಸ್ವಾಭಾವಿಕ, ಹಾಗೂ ಸರ್ವೇ ಸಾಮಾನ್ಯ. ಎಲ್ಲಾ ಸಂಬಂಧಗಳು ಈ ದಾರಿಯಿಂದಲೇ ಸಾಗಿ ಪರಿಪಕ್ವವಾಗಬೇಕು. ವ್ಯಾಜ್ಯಗಳ ಸಮರ್ಪಕ ನಿರ್ವಹಣೆಯಿಂದ ಆತಂಕಗಳು ಕಡಿಮೆಯಾಗಿ, ಬೆಳವಣಿಗೆಗೂ ಸಹಕಾರಿಯಾಗುತ್ತದೆ.

ವ್ಯಾಜ್ಯ ಎಂದ ಕೂಡಲೇ ಇದನ್ನು ಭೀಕರ ಕಾಳಗ, ಹೊಡೆದಾಟ, ಬಡಿದಾಟ ಎಂದೇ ಭಾವಿಸಬೇಕಿಲ್ಲ. ಇದು ಸಣ್ಣ ಮತಬೇಧದಿಂದ ಪ್ರಾರಂಭವಾಗಿ ಕೊನೆಗೆ ಹೊಡೆದಾಟ-ಬಡಿದಾಟಕ್ಕೂ ತಲುಪಬಹುದು. ಆದ್ದರಿಂದ ಇದನ್ನು ಸಣ್ಣದಾಗಿರುವಾಗಲೇ ಪರಿಹಾರ ಮಾಡುವುದು ಜಾಣತನದ ಕಲೆ. ತಂಡದಲ್ಲಿ ಜನರು ಕೆಲಸ ಮಾಡುತ್ತಿರುವಾಗ ಒಂದು ವ್ಯಕ್ತಿ ಅಥವಾ ಗುಂಪು ಒಟ್ಟಾಗಿ ಸೇರಿ, ಓರ್ವ ವ್ಯಕ್ತಿ ಅಥವಾ ಇನ್ನೊಂದು ಗುಂಪನ್ನು ಅದರ ಗುರಿ ತಲುಪದಂತೆ ಮಾಡಿದಾಗ ಉಂಟಾಗುವ ಸನ್ನಿವೇಶವನ್ನು ಸಂಸ್ಥೆಗಳ ಒಳವ್ಯಾಜ್ಯ ಎನ್ನಬಹುದು. ಈ ರೀತಿಯ ವ್ಯಾಜ್ಯಗಳಲ್ಲಿ ಮುಖ್ಯವಾಗಿ ಕಾಣುವುದು

· ವೈಯುಕ್ತಿಕ ಅಥವಾ ಸಂಬಂಧದ ತಿಕ್ಕಾಟ: ಇದರಲ್ಲಿ ಸ್ವ-ಪ್ರತಿಷ್ಠೆ, ನಿಷ್ಠೆ, ಅವಿಶ್ವಾಸ, ಅಗೌರವ ಮುಂತಾದ ಸಮಸ್ಯೆ ಇರುತ್ತದೆ.

· ವ್ಯವಸ್ಥೆಯ ತಿಕ್ಕಾಟ: ಇದರಲ್ಲಿ ಅವ್ಯವಸ್ಥೆ ಅಂದರೆ ಏಕ-ಕಾಲಕ್ಕೆ ಇಬ್ಬರು ಒಂದೇ ವಸ್ತುವಿನ ಉಪಯೋಗಕ್ಕೆ ಮುಂದಾಗುವುದು ಅಂದರೆ ವ್ಯವಸ್ಥೆಯಲ್ಲಿನ ಲೋಪ-ದೋಷಗಳಿಂದಾದ ವ್ಯಾಜ್ಯ.

· ಆಸಕ್ತಿಗಳ ಗುದ್ದಾಟ: ಇಬ್ಬರ ಅಥವಾ ಎರಡು ಗುಂಪಿನ ಆಸಕ್ತಿ, ಆದ್ಯತೆ ಇವುಗಳಲ್ಲಿ ಒಂದು ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿಂದಾಗುವ ವ್ಯಾಜ್ಯ.

ಇಲ್ಲಿ “ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಇಷ್ಟ” ಎಂಬ ಗಾದೆಯಂತೆ ಬರುವ ಐದು ಸನ್ನಿವೇಶಗಳು:

ಗೆಲುವು-ಸೋಲು: (Win-Lose) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ನಮ್ಮ ಪ್ರತಿಪಾದನೆಯೂ ಜಾಸ್ತಿಯಾದಾಗ ಮತ್ತು ಸಂಬಂಧಗಳಿಗೆ ಮಹತ್ವ ಕಡಿಮೆಯಾಗಿ ಸಹಕಾರವೂ ಇಲ್ಲದಾದಾಗ ಉಂಟಾಗುವ ಸನ್ನಿವೇಶವೇ ಪ್ರತಿಸ್ಪರ್ಧೆ. ಇದರಲ್ಲಿ ಹೇಗಾದರೂ ಎದುರಾಳಿಯನ್ನು ಸೋಲಿಸಬೇಕು ಮತ್ತು ನಾವು ಜಯಶಾಲಿಯಾಗಬೇಕು ಎನ್ನುವ ಹಂಬಲ. ಇದರಲ್ಲಿ ಒಂದು ಪಕ್ಷಕ್ಕೆ ಮಾತ್ರ ಜಯಕ್ಕೆ ಆಸ್ಪದವಿರುತ್ತದೆ.

ಸೋಲು-ಸೋಲು ಅಥವಾ ಹಿಂದೇಟು: (Lose – Lose) ಪದಾರ್ಥದ ಮೇಲೆ ನಮಗೆ ಆಸಕ್ತಿ ಇಲ್ಲವಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಮತ್ತು ಸಂಬಂಧಗಳಿಗೆ ಹೆಚ್ಚಿನ ಮಹತ್ವ ಇಲ್ಲದೆ, ಸಹಕಾರದ ಕೊರತೆಯೂ ಇದ್ದಾಗ, ಸ್ಪರ್ಧೆಯಿಂದ ಹಿಂದೇಟು ಹಾಕಿ, ಉಮೇದುವಾರಿಕೆ ಹಿಂಪಡೆಯುವ ಸನ್ನಿವೇಶ. ಇದರಲ್ಲಿ ಇಬ್ಬರಿಗೂ ಸೋಲುವ ಸಾಧ್ಯತೆ/ಭೀತಿ, ಹಾಗಾಗಿ ಹಿಂದೇಟು. ಯಾರಿಗೂ ಜಯವಿಲ್ಲ. ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ನಡೆಯಲಿಲ್ಲ ಎಂಬ ವಿಷಾದ.

ರಾಜಿ: (Compromise) ಪದಾರ್ಥದ ಮೇಲೆ ನಮಗೆ ಆಸಕ್ತಿ ಮಧ್ಯಮವಾಗಿದ್ದು, ಪ್ರತಿಪಾದನೆಯೂ ಮಧ್ಯಮವಾದಾಗ ಹಾಗೂ ಸಂಬಂಧಗಳಿಗೆ ಮಹತ್ವ ಮಧ್ಯಮವಾಗಿದ್ದು, ಸಹಕಾರದ ಅಪೇಕ್ಷೆಯೂ ಮಧ್ಯಮವಾಗಿದ್ದಾಗ ಉಂಟಾಗುವ ಸನ್ನಿವೇಶವೇ ಪರಸ್ಪರ ರಾಜಿ/ಅಂಗೀಕಾರ. ಇಲ್ಲಿ ಮಾತು-ಕತೆಗೆ ಅವಕಾಶ. ಯಾರಿಗೂ ಸೋಲಿಲ್ಲ, ಯಾರಿಗೂ ಗೆಲುವು ಇಲ್ಲ. ಒಂದು ರೀತಿಯ ಶೂನ್ಯದ ಡ್ರಾ.

ಸೋತು ಗೆಲ್ಲುವುದು: (Accommodate) ಪದಾರ್ಥದ ಮೇಲೆ ನಮ್ಮ ಆಸಕ್ತಿ ಕಡಿಮೆಯಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಹಾಗೂ ಸಂಬಂಧಗಳಿಗೆ ಅಧಿಕ ಬೆಲೆ ಇದ್ದು, ಸಹಕಾರದ ಸಾಧ್ಯತೆ ಹೆಚ್ಚಾದಾಗ ನಾವು ಸ್ಪರ್ಧೆಗೆ ಇಳಿಯದೆ, ಎದುರಾಳಿಗೆ ಆಟ ಬಿಟ್ಟುಕೊಡುವ ಮನಃಸ್ಥಿತಿಗೆ ಬರುತ್ತೇವೆ. ಇಲ್ಲಿಯೂ ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ಬಿಟ್ಟುಕೊಟ್ಟವರು ತಮ್ಮ ಅವಕಾಶಕ್ಕೆ ಕಾಯುತ್ತಿರುತ್ತಾರೆ.

ಇಬ್ಬರಿಗೂ ಜಯ: (Win –Win) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರತಿಪಾದನೆಯೂ ಹೆಚ್ಚಾಗಿದ್ದರೂ ಸಹ, ಸಂಬಂಧಗಳಿಗೂ ಬೆಲೆ ಅಧಿಕವಾಗಿದ್ದು ಸಹಕಾರದ ಸಾಧ್ಯತೆಯೂ ಹೆಚ್ಚಾಗಿದ್ದಾಗ ಇಬ್ಬರೂ ಕೈ ಜೋಡಿಸಿ ಕೆಲಸ ಮಾಡುತ್ತೇವೆ. ಇದು ಅತ್ಯಂತ ಅಪೇಕ್ಷಣೀಯ ಪರಿಹಾರ. ಇದಕ್ಕೆ ಯಾವಾಗಲೂ ಪ್ರಯತ್ನಿಸಬೇಕು.

ವ್ಯಾಜ್ಯಗಳ ಪರಿಹಾರ ಹೇಗೆ
ವ್ಯಾಜ್ಯವನ್ನು ಪರಿಹಾರ ಮಾಡಲು ಬೇಕಾಗುವ ಕಲೆಗಳು:

·         ಸಂವಹನ ಕಲೆ

·         ಭಾವನೆಗಳ ಅಥವಾ ಆತಂಕ (ಸ್ಟ್ರೆಸ್ಸ್) ನಿರ್ವಹಣೆ ಮತ್ತು ಅನುಭೂತಿ

·         ಸಮಸ್ಯೆಗಳ ಪರಿಹಾರ / ನಿರ್ಧಾರ ತೆಗೆದುಕೊಳ್ಳುವ ಕಲೆ

·         ತಂಡದಲ್ಲಿ ಕೆಲಸ ಮಾಡುವ ಕಲೆ.

ಪರಿಹಾರದ ಹೆಜ್ಜೆಗಳು:

·         ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು.

·         ಎದುರಾಳಿಯ ಜೊತೆ ಮಾತು-ಕತೆ ನಡೆಸುವುದು.

·         ಮಧ್ಯಸ್ತಿಕೆಯೂ ಸೇರಿದಂತೆ, ಪರಿಹಾರಕ್ಕೆ ಮಾರ್ಗಗಳನ್ನು ಹುಡುಕುವುದು.

·         ಸರಿಯಾದ ಪರ್ಯಾಯದ ಆಯ್ಕೆ.

·         ಭಾವನೆಗಳನ್ನು ನಿರ್ವಹಿಸುವುದು.

ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ವ್ಯಾಜ್ಯಕ್ಕೆ ಮೂಲ ಕಾರಣ ಏನು ಎಂದು ತಿಳಿದು ಅದಕ್ಕೆ ಪರಿಹಾರ ಹುಡುಕಬೇಕು. ಇದಕ್ಕಾಗಿ ನಿಮ್ಮ ಮತ್ತು ಎದುರಾಳಿಯ ಇಬ್ಬರ ವಾದವೂ ಏನು ಎಂಬುದನ್ನು ಸ್ಪಷ್ಟವಾಗಿ ಇಡಬೇಕು. ಇಬ್ಬರ ಆಸಕ್ತಿ-ಆಸೆ-ಅಕಾಂಕ್ಷೆ-ಭೀತಿ ಏನು ಎಂಬುದನ್ನು ಅರಿಯಬೇಕು. ಇದನ್ನು ಅರಿಯಲು ಕೆಳಕಂಡ ಪ್ರಶ್ನೆಗಳು ಸಹಕಾರಿಯಾಗಬಹುದು:

ನಮ್ಮ ಆಸಕ್ತಿ ಏನು? ನಮ್ಮ ಮುಖ್ಯ ಅನುಮಾನ ಏನು? ಬೇಡಿಕೆ ಏನು? ಅವಶ್ಯಕತೆ ಏನು? ಆಕಾಂಕ್ಷೆ  ಮತ್ತು ಭೀತಿ ಏನು? ಇದೇ ರೀತಿ ಎದುರಾಳಿಯ ಮಾಹಿತಿಯನ್ನೂ ಪಡೆದು ಅದನ್ನೂ ಕೂಲಂಕಷವಾಗಿ ಅವಲೋಕಿಸಬೇಕು.

ಯಾವ ರೀತಿಯ ಸಂಧಾನಕ್ಕೆ ಬರಬಹುದು?

ಮೂರನೆಯ (ನಿಶ್ಪಕ್ಷ) ಪಕ್ಷವನ್ನು ಮಧ್ಯಸ್ಥಿಕೆ ವಹಿಸಲು ನೇಮಿಸಿದಲ್ಲಿ ನಮಗೆ ಸಂಧಾನಕ್ಕೆ ಬರಲು ಸಾಧ್ಯವೇ? ಇಬ್ಬರಿಗೂ ನ್ಯಾಯ ಸಿಕ್ಕಂತೆ ಆಗುತ್ತದೋ ಅಥವಾ ಇಬ್ಬರ ಜಗಳ ಮೂರನೆಯವರ ಲಾಭ ಆಗುತ್ತದೋ? ಯಾರು ಈ ಮೂರನೆಯ ಪಕ್ಷ? ಅವರು ಸಮಾಜದಲ್ಲಿ ಪ್ರತಿಷ್ಠಿತರೇ? ಸಂಧಾನ ಕಾನೂನಿನ ಚೌಕಟ್ಟಿನಲ್ಲಿರುತ್ತದೆಯೇ? ಅದನ್ನು ಯಾರು ಜಾರಿ ಮಾಡುವುದು ಮತ್ತು ನೋಡಿಕೊಳ್ಳುವುದು? ಖರ್ಚು ವೆಚ್ಚ ಯಾರು ಭರಿಸುವುದು? ಇಂತಹ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ಸಿಗಬೇಕು.

ಕೆಲವೊಮ್ಮೆ ಇಬ್ಬರೂ ತಮ್ಮ ಪ್ರತಿಷ್ಠೆಯನ್ನೇ ದೊಡ್ಡದು ಮಾಡಿಕೊಂಡು, ನಿಜವಾಗಿ ಆಗುತ್ತಿರುವ ತಮ್ಮ ಆಸಕ್ತಿಯ ಹಾನಿಯನ್ನು ನಿರ್ಲಕ್ಷಿಸಿ, ತಮ್ಮ ಮುಖವನ್ನು ಉಳಿಸಿಕೊಳ್ಳುವ (ಸೇವಿಂಗ್ ದಿ ಫೇಸ್) ನಿಟ್ಟಿನಲ್ಲಿ,ನನಗೆ ಕನಿಷ್ಠ ಇಷ್ಟಾದರೂ ಸಿಗಬೇಕು ಎಂದು ಚೌಕಾಸಿ ಮಾಡಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ನಿಜವಾದ ಆಸಕ್ತಿ ಹಾನಿಯನ್ನು ಸಹಿಸಿಕೊಳ್ಳುತ್ತಾರೆ. ಆದ್ದರಿಂದ ಇಬ್ಬರ ಆಸಕ್ತಿ ಏನು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ವ್ಯಾಜ್ಯ ಪರಿಹಾರ ಆಗುವ ತನಕ ಎರಡೂ ಪಕ್ಷಗಳು ತಮ್ಮ ಭಾವನಾತಿರೇಕಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುತ್ತದೆ. ನೆನಪಿಡಿ, ಮಾತು ಬಲ್ಲವನಿಗೆ ಜಗಳವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...