- Advertisement -
- Advertisement -
ದೆಹಲಿ ಚುನಾವಣೆಯ ಮತ ಎಣಿಕೆಯು ಅಂತಿಮ ಹಂತಕ್ಕೆ ಬಂದಿದ್ದು, ಆಮ್ ಆದ್ಮಿ ಪಕ್ಷವು 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಪಾರಮ್ಯ ಮೆರೆದಿದೆ.
ಇನ್ನೊಂದೆಡೆ ಒಂದು ಹಂತದಲ್ಲಿ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭರವಸೆ ಹುಟ್ಟಿಸಿದ್ದ ಬಿಜೆಪಿ ಈಗ 07 ಕ್ಷೇತ್ರಗಳಿಗೆ ಕುಸಿದಿದ್ದು ಭಾರೀ ಮುಖಭಂಗ ಅನುಭವಿಸಿದೆ.
ಮತ ಎಣಿಕೆಯ ಟ್ರೆಂಡ್‌ಗಳಲ್ಲಿ ಆಪ್ ಮುನ್ನಡೆ ಸಾಧಿಸುತ್ತಿದ್ದಂತೆಯೇ ಬಿಜೆಪಿಯ ಮನೋಜ್ ತಿವಾರಿ ಕೊನೆಯವರೆಗೂ ಕಾಯಿರಿ, ಅಚ್ಚರಿ ಕಾದಿರುತ್ತದೆ ಎಂದು ಹೇಳಿದ್ದರು. ಆದರೆ ಅಂತಹ ಯಾವುದೇ ಪವಾಡಗಳು ನಡೆಯದೇ ದೆಹಲಿ ಮತದಾರರು ಬಿಜೆಪಿಯನ್ನು ಅಂಚಿಗೆ ತಳ್ಳಿ ಆಮ್ ಆದ್ಮಿಯ ಕೈ ಹಿಡಿದಿದ್ದಾರೆ.
ಸದ್ಯದ ಮುನ್ನಡೆ ಹೀಗಿದೆ.
ಆಪ್ : 63
ಬಿಜೆಪಿ: 07
ಕಾಂಗ್ರೆಸ್: 00
ಇತರೆ: 00


