Homeಕರ್ನಾಟಕಮಳೆಗಾಗಿ ಪರ್ಜನ್ಯ ಜಪ, ಹೋಮ, ಪೂಜೆಗೆ ಆದೇಶ: ಈ ತಲೆಕೆಟ್ಟ ಸರ್ಕಾರಕ್ಕೆ ಬುದ್ದಿ ಬರುವುದಿಲ್ಲ

ಮಳೆಗಾಗಿ ಪರ್ಜನ್ಯ ಜಪ, ಹೋಮ, ಪೂಜೆಗೆ ಆದೇಶ: ಈ ತಲೆಕೆಟ್ಟ ಸರ್ಕಾರಕ್ಕೆ ಬುದ್ದಿ ಬರುವುದಿಲ್ಲ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಒಂದು ಕಡೆ ಗಣಿಗಾರಿಕೆ ನಡೆಸಲು ಸಮೃದ್ಧ ಜಮೀನನ್ನು ಅರ್ಪಿಸುವುದು. ಸುಂದರ ಕಾಡು ಕಡಿದು ಅಭಿವೃದ್ದಿ ಎನ್ನುವುದು. ಮರ ಉರುಳಿಸಿ ರಸ್ತೆ ಮಾಡುವುದು. ಕೊನೆಗೆ ಮಳೆ ಬರುತ್ತಿಲ್ಲ ಹಾಗಾಗಿ ಸಕಾಲದಲ್ಲಿ ಮಳೆ ಬರಲೆಂದು ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ನಡೆಸುವಂತೆ ಸುತ್ತೋಲೆ ಹೊರಡಿಸುವುದು. ಡೌಟೇ ಬೇಡ ಈ ಸರ್ಕಾರಕ್ಕೆ ಸಂಪೂರ್ಣ ತೆಲೆಕೆಟ್ಟು ಹೋಗಿದೆ.

ಮೇ 31ರಂದು ಕರ್ನಾಟಕ ರಾಜ್ಯ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ. ರಾಜ್ಯದಲ್ಲಿ ಸಕಾಲದಲ್ಲಿ ಮಳೆ ಬೆಳೆಯಾಗದೇ, ರಾಜ್ಯದ ಜನತೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಭಾವ ಉಂಟಾಗಿದೆ. ಹಾಗಾಗಿ ಆರ್ಥಿಕವಾಗಿ ಸದೃಢವಾಗಿರುವ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಅಭಿಷೇಕ, ಪರ್ಜನ್ಯ ಜಪ, ಹೋಮದೊಂದಿಗೆ ಮೇ 6 ರಂದು ಬ್ರಾಹ್ಮೀ ಮೂಹೂರ್ತದೊಂದಿಗೆ ವಿಶೇಷ ಪೂಜೆಗಳನ್ನು ನಡೆಸಲು ಆದೇಶಿಸಿದೆ. 10,001/- ರೂಗಳು ವೆಚ್ಚ ಮೀರದಂತೆ ಆಯಾಯಾ ದೇವಾಲಯಗಳ ನಿಧಿಯಿಂದ ಭರಿಸಲು ಅನುಮತಿ ಸಹ ನೀಡಿದೆ

ದೇವರು ಧರ್ಮಗಳನ್ನು ನಂಬುವು ಮತ್ತು ಪಾಲಿಸುವ, ಪೂಜಿಸುವ ಹಕ್ಕನ್ನು ನಮ್ಮ ಸಂವಿಧಾನ ಎಲ್ಲರಿಗೂ ನೀಡಿದೆ. ಆದರೆ ಅದು ಖಾಸಗಿ ಹಕ್ಕಾಗಿದ್ದು ಖಾಸಗಿ ಸ್ಥಳಗಳಲ್ಲಿ ಯಾರು ಎಷ್ಟು ಬೇಕಾದರೂ ಹೋಮ ಪೂಜೆ ಮಾಡಿದರೆ ನಮಗೇನು ತೊಂದರೆಯಿಲ್ಲ. ಆದರೆ ಚುನಾಯಿತ ಸರ್ಕಾರವೊಂದು, ಸರ್ಕಾರಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಈ ರೀತಿಯ ಆಚರಣೆ ಮಾಡಲು ಆದೇಶ ನೀಡಿರುವುದು ಎಲ್ಲಾ ವಿಧಗಳಿಂದಲೂ ಒಪ್ಪುವಂತಹದಲ್ಲ. ಇದು ಮೌಡ್ಯದ ಪರಮಾವಧಿ ಮಾತ್ರವಲ್ಲ ಇದರಿಂದ ಮಳೆ ಬರದಿರುವುದಕ್ಕೆ ವೈಜ್ಞಾನಿಕ ಕಾರಣಗಳನ್ನು ಮರೆಮಾಚಿ ಜನರನ್ನು ದಿಕ್ಕುತಪ್ಪಿಸುವ ಹುನ್ನಾರವೂ ಇದರಿಂದ ಅಡಗಿದೆ.

ಜನರು ಹಲವು ಊರಿನಲ್ಲಿ ಅವರ ನಂಬಿಕೆಗನುಗುಣವಾಗಿ ಈ ರೀತಿ ಮಳೆಗಾಗಿ ಪ್ರಾರ್ಥಿಸುವುದು ಸಾಮಾನ್ಯ. ಹೆಚ್ಚು ಖರ್ಚಿಲ್ಲದೇ ತಮಗೆ ಗೊತ್ತಿರುವ ವಿಧಾನಗಳಲ್ಲಿ ಅವರು ಪೂಜೆ ಮಾಡುತ್ತಾರೆ. ಹೀಗಿರುವಾಗ ಮತ್ತೆ ಸರ್ಕಾರ ದೊಡ್ಡ ಮಟ್ಟದಲ್ಲಿ ಈ ರೀತಿ ಪೂಜೆಗೆ ಆದೇಶ ನೀಡುವುದು ಸರಿಯಲ್ಲ. ಅದೇ ಹಣದಿಂದ ಕೆರೆ ಹೂಳೆತ್ತಲು ಬಳಸಿದರೆ ಒಂದಷ್ಟು ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬ ಸಾಮಾನ್ಯ ಜ್ಞಾನವೂ ನಮ್ಮ ಸರ್ಕಾರಕ್ಕಿಲ್ಲ.

ಇಷ್ಟೆಲ್ಲಾ ಅವಾಂತರುಗಳು ನಡೆಯುತ್ತಿದ್ದರೆ ಅದರ ಬಗ್ಗೆ ವಿರೋಧ ಪಕ್ಷ ಚಕಾರವನ್ನೇನು ಎತ್ತಿಲ್ಲ. ಅವರಿಗೆ ಸದಾ ಸರ್ಕಾರ ಬೀಳಿಸುವ ಚಿಂತೆ ಬಿಟ್ಟರೆ ಮತ್ತೇನಿಲ್ಲ. ಇದರಿಂದ ನಲುಗುವವರು ಮತ್ತೆ ಬಡವರು, ರೈತರೇ ಆಗಿರುವುದು ದೊಡ್ಡ ದುರಂತ.

ಹೌದು ಇಂದು ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆ ಆಗುತ್ತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳು ಮುಖಕ್ಕೆ ಹೊಡೆದಂತೆ ರಾಚುತ್ತಿವೆ. ಕಾಡುಗಳ ನಾಶ, ಮಿತಿ ಮೀರಿದ ಪರಿಸರ ಮಾಲಿನ್ಯದಿಂದ ಉಂಟಾಗುತ್ತಿರುವ ಹವಾಮಾನ ವೈಪರಿತ್ಯ ಕಾರಣದಿಂದ ಮಳೆಯಾಗುತ್ತಿಲ್ಲ. ಇದಕ್ಕೆ ಪರಿಹಾರಗಳು ಸಹ ಅಲ್ಲೆ ಇವೆ. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದು, ಕಾಡುಗಳನ್ನು ಸಂರಕ್ಷಿಸುವುದು, ಮಾಲಿನ್ಯ ಉಂಟು ಮಾಡುತ್ತಿರುವ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಕಡಿವಾಣ ಹಾಕುವುದು, ನೀರಿನ ಮಿತ ಬಳಕೆ ಮತ್ತು ಜಲಸಂರಕ್ಷಣೆಯ ಪಾಠಗಳನ್ನು ಜಾರಿಗೊಳಿಸುವುದು, ವೈಜ್ಞಾನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇತ್ಯಾದಿ

ಈ ಮೇಲಿನ ವಿಧಾನಗಳನ್ನು ಜಾರಿಗೊಳಿಸುವ ಹೊಣೆಯು ಪ್ರತಿಯೊಬ್ಬರ ಕರ್ತವ್ಯವಾಗಿದ್ದರೂ ಅದರ ಪ್ರಧಾನ ಜವಾಬ್ದಾರಿ ಸರ್ಕಾರದ್ದೆ. ಒಂದು ಕಡೆ ದೊಡ್ಡ ಬಂಡವಾಳಶಾಹಿಗಳು ಮಿತಿಮೀರಿದ ಪರಿಸರ ನಾಶ ಮಾಡುತ್ತಿದ್ದರೆ ಅವರಿಗೆ ಕಡಿವಾಣ ಹಾಕುವ ಬದಲು ಸರ್ಕಾರ ಅವರಿಗೆ ತೆರಿಗೆ ವಿನಾಯಿತಿ, ಹೆಚ್ಚಿನ ಸಾಲ ಸೌಲಭ್ಯ, ಕಡಿಮೆ ಬೆಲೆಗೆ ಭೂಮಿ, ನೀರು ಮತ್ತು ವಿದ್ಯುತ್ ನೀಡಿ ಮತ್ತಷ್ಟು ಕೊಬ್ಬಿಸುತ್ತಿದೆ. ನಮ್ಮ ನಾಡಿನ ಜೀವನಾಡಿಯಾದ ಪಶ್ಚಿಮ ಘಟ್ಟಗಳು ದಿನೇ ದಿನೇ ಬರಿದಾಗುತ್ತಿದೆ. ಇದನ್ನು ತಡೆಗಟ್ಟಬೇಕಾದ ಸರ್ಕಾರ ಪೂಜೆ ಮಾಡಿ ಮಳೆ ತರಲು ಮುಂದಾಗಿರುವುದು ನಮ್ಮೆಲ್ಲರ ದುರಂತವಾಗಿದೆ.

ಅಂದ ಮಾತ್ರಕ್ಕೆ ನಾವು ರಸ್ತೆ ಕಟ್ಟುವುದರ, ದೊಡ್ಡ ಬಿಲ್ಡಿಂಗ್ ಕಟ್ಟುವುದನ್ನು, ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದೇವೆ ಅಂತ ಅಲ್ಲ. ಬದಲಿಗೆ ಆ ಅಭಿವೃದ್ಧಿ ಜನಕ್ಕೆ, ಪರಿಸರಕ್ಕೆ ಧಕ್ಕೆ ತರುವಂತೆ ಇರಬಾರದು. ಪರಿಸರ ಸ್ನೇಹಿ ಅಭಿವೃದ್ದಿ ಮಾದರಿಯನ್ನು ಬೆಂಬಲಿಸಬೇಕು..

ಇನ್ನೊಂದು ಕಡೆ ಮಳೆಗಾಗಿ ಮೋಡ ಬಿತ್ತನೆ ಮಾಡಲು 91ಕೋಟಿ ರೂಗಳ ಅನುದಾನಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಮೋಡ ಬಿತ್ತನೆ ಎಂಬುದು ಬರಗಾಲದಲ್ಲಿಯೂ ಒಂದಷ್ಟು ದುಡ್ಡು ಮಾಡಿಕೊಳ್ಳಲು ಸಚಿವರಿಗೆ, ಅಧಿಕಾರಿಗಳಿಗೆ ಇನ್ನೊಂದು ಮಾರ್ಗವೇ ಹೊರತು ಈ ಮೋಡ ಬಿತ್ತನೆಯಿಂದ ಮಳೆ ಬಂದ ಉದಾಹರಣೆ ಮಾತ್ರ ಇಲ್ಲ.

ಹೆಸರಾಂತ ಪತ್ರಕರ್ತ ಪಿ ಸಾಯಿನಾಥ್‍ರವರು ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂಬ ಪುಸ್ತಕ ಬರೆದು ದುರಂತಗಳನ್ನು ಎಳೆ ಎಳೆಯಾಗಿ ವಿವರಿಸಿದ್ದರು. ಆದರೇನು ಮಾಡುವುದು ಬಹುಶಃ ಹೀಗಿನ ಸರ್ಕಾರದ ಯಾವೊಬ್ಬರು ಅದನ್ನು ಓದಿರುವುದಿಲ್ಲ. ಅಷ್ಟು ಮಾತ್ರವಲ್ಲ ಪ್ರತಿ ವಾರ ಪರಿಸರ ಉಳಿಸಿಕೊಳ್ಳುವ ಸರಳ ವಿಧಾನಗಳ ಬಗ್ಗೆ ನಮ್ಮ ನಾಗೇಶ್ ಹೆಗಡೆಯವರು ಲೇಖನ, ಪತ್ರ ಬರೆಯುತ್ತಿರುತ್ತಾರೆ. ನಮ್ಮ ದುರಾದೃಷ್ಟವೋ ಎನೋ ಇವರ್ಯಾರು ಅದನ್ನು ಸಹ ಓದಿದಂತೆ ಕಾಣುವುದಿಲ್ಲ. ಓದಿದರೆ ಇಂತಹ ಪ್ಲಾಪ್ ಶೋ ಮಾಡಲು ಮುಂದಾಗುತ್ತಿರಲಿಲ್ಲ.

ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮೌಡ್ಯ ನಿಷೇಧ ಕಾಯ್ದೆ ತರಲು ಹೊರಟಾಗ ವಿರೋಧಿಸಿದರು ಇವರೆ ಇರಬೇಕು. ಪಾಪಾ ಅಂತಹ ಸಿದ್ದರಾಮಯ್ಯನವರು ಸಹ ಈಗ ಮೌನವಾಗಿರುವುದು ದುರಂತದ ಮೇಲೆ ದುರಂತ ಎನ್ನಬಹುದು. ಈಗ ಜನರೆ ಎಚ್ಚೆತ್ತುಕೊಂಡು ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ, ಇಂತಹ ಗಿಮಿಕ್ ಮಾಡುವುದು ಬಿಟ್ಟು ಸರಿಯಾಗಿ ಕೆಲಸ ಮಾಡುವಂತೆ ಸರ್ಕಾರನ್ನು ಆಗ್ರಹಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...