Homeಅಂಕಣಗಳುಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ

ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?

ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ..
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....