- Advertisement -
- Advertisement -
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡವು ಬರೋಡಾ ತಂಡದ ವಿರುದ್ಧ ಎಂಟು ವಿಕೆಟುಗಳ ಜಯ ಸಾಧಿಸಿದೆ.
ಟಾಸ್ ಗೆದ್ದ ಕರ್ನಾಟಕ ಮೊದಲಿಗೆ ಬೌಲಿಂಗನ್ನು ಆಯ್ಕೆ ಮಾಡಿಕೊಂಡಿತ್ತು. ಮೊದಲ ದಿನದ ಆಟದಲ್ಲಿಯೇ ಬರೋಡಾ ತಂಡವನ್ನು ಕೇವಲ 85 ರನ್‌ಗಳಿಗೆ ಮುಗ್ಗರಿಸುವಂತೆ ಮಾಡಿತ್ತು. ನಂತರ ಬ್ಯಾಟ್ ಮಾಡಿದ ಕರ್ನಾಟಕ ತಂಡ 233 ರನ್ ಗಳಿಸಿ 148 ರನ್‌ಗಳ ಮುನ್ನಡೆ ಸಾಧಿಸಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ ಬರೋಡ ಮತ್ತೆ 296 ರನ್‌ಗಳಿಗೆ ಆಲೌಟ್ ಆಯಿತು. ಗೆಲುವಿಗೆ 149 ರನ್‌ಗಳ ಗುರಿ ಪಡೆದ ಕರ್ನಾಟಕ ಅನಾಯಸವಾಗಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು. ಆ ಮೂಲಕ ತನ್ನ ಲೀಗ್ ಕೊನೆಯ ಪಂದ್ಯವನ್ನು ಗೆದ್ದುಬೀಗಿತು.
ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕರ್ನಾಟಕ ತಂಡದ ಕರುಣ್ ನಾಯರ್ ಪಡೆದು ಕೊಂಡರು. ಇವರು ಅಜೇಯ 71 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.


