Homeಅಂಕಣಗಳುಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

ಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

- Advertisement -
- Advertisement -

ನಿಖಿಲ್ ಕೊಲ್ಫೆ |
ಪ್ರಪಂಚದ ಆಗಿಹೋದ ಮತ್ತು ಈಗಿರುವ ಬಹುತೇಕ ಎಲ್ಲಾ ಸರ್ವಾಧಿಕಾರಿಗಳ ವೈಯಕ್ತಿಕ ಸ್ವಭಾವ ಹಾಗೂ ಗುಣಲಕ್ಷಣಗಳಲ್ಲಿ ಅನೇಕ ಸಾಮ್ಯಗಳಿವೆ. ಅವುಗಳಲ್ಲಿ ಮುಖ್ಯವಾದದ್ದೆಂದರೆ ನಾರ್ಸಿಸಿಸಮ್ ಅಂದರೆ ತಮ್ಮನ್ನೇ ತಾವು ಮೋಹಿಸುವ ಪ್ರವೃತ್ತಿ. ಗ್ರೀಕ್ ಪುರಾಣದಲ್ಲಿ ಬರುವ ನಾರ್ಸಿಸಸ್ ಒಬ್ಬ ಬೇಟೆಗಾರ. ಸುಂದರನಾಗಿದ್ದ ಆತ ಒಂದು ತಿಳಿಯಾದ ಕೊಳದಲ್ಲಿ ತನ್ನ ಮುಖವನ್ನು ನೋಡಿ ಪ್ರತಿಬಿಂಬದಲ್ಲಿ ಮೋಹಗೊಳ್ಳುತ್ತಾನೆ. ಸರ್ವಾಧಿಕಾರಿಗಳು ಅದೇ ರೀತಿ ವರ್ತಿಸುತ್ತಾರೆ.
ತಮ್ಮನ್ನು ತಾವು ಧೀರರು, ಬಲಶಾಲಿಗಳು, ಬುದ್ಧಿವಂತರು ಎಂದು ಬಿಂಬಿಸಲು ಬಯಸುತ್ತಾರೆ. ಇಡೀ ಪ್ರಪಂಚದಲ್ಲಿ ತಾನೇ ಅತ್ಯಂತ ಮುಖ್ಯ ವ್ಯಕ್ತಿ; ಅದು ತಮ್ಮ ಸುತ್ತಲೇ ತಿರುಗುತ್ತದೆ ಎಂಬ ಭ್ರಮೆ ಅವರಲ್ಲಿರುತ್ತದೆ. ಅವರು ಮಿಲಿಟರಿ ಸಮವಸ್ತ್ರ, ಅತ್ಯುತ್ತಮ ಸೂಟುಬೂಟು ಧರಿಸುತ್ತಾರೆ. ಸರಳತೆ ಅವರಲ್ಲಿಲ್ಲ!
ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಅವರು ಯಾವತ್ತೂ ಎತ್ತರದ ವೇದಿಕೆಗಳಲ್ಲಿ ಇರುತ್ತಾರೆ. ಹಿಂದೆ ಅವರದ್ದೇ ಭಾರೀ ಚಿತ್ರಗಳಿರುತ್ತವೆ. ಮಾಧ್ಯಮಗಳಲ್ಲಿ ಅವರದ್ದೇ ವ್ಯಕ್ತಿಕೇಂದ್ರಿತ ಪ್ರಚಾರ ಇರುತ್ತದೆ. ಇರಾಕಿನಲ್ಲಿ ಸದ್ದಾಂ ಹುಸೇನ್ ಅಧಿಕಾರದಲ್ಲಿ ಇದ್ದಾಗ ಎಲ್ಲೆಲ್ಲೂ, ಸಾರ್ವಜನಿಕ ಸ್ಥಳಗಳಲ್ಲಿ ಅತನ ಪ್ರತಿಮೆಗಳು, ಭಾವಚಿತ್ರಗಳು, ಕಟೌಟುಗಳು ರಾರಾಜಿಸುತ್ತಿದ್ದವು. ದಿನಪತ್ರಿಕೆಗಳಲ್ಲಿ ಪ್ರತೀದಿನ ಮುಖಪುಟದಲ್ಲಿ ಆತನ ಫೋಟೋ ಕಡ್ಡಾಯ. ಟಿವಿ ರೇಡಿಯೋಗಳಲ್ಲಿ ಮೊದಲ ಸುದ್ದಿ ಅತನದ್ದೇ ಅಗಿರಬೇಕು. ಹಿಟ್ಲರ್ ಕೂಡಾ ಇದಕ್ಕೆ ಹೊರತಲ್ಲ!
ಕೆಲವು ಅಧ್ಯಯನಗಳ ಪ್ರಕಾರ ಸಾಮಾನ್ಯವಾಗಿ ಸರ್ವಾಧಿಕಾರಿಗಳು ವರ್ಚಸ್ವಿಗಳೂ, ಆತ್ಮವಿಶ್ವಾಸ ಹೊಂದಿರುವವರೂ ಆಗಿರುತ್ತಾರೆ. ಅವರು ಹಿಟ್ಲರ್‍ನಂತೆ ಉತ್ತಮ ಭಾಷಣಕಾರರಾಗಿರುತ್ತಾರೆ. ಅದರೆ, ಅವರ ಭಾಷಣಗಳಲ್ಲಿ ಹುರುಳಿರುವುದಿಲ್ಲ! ಅಡಿದ್ದನ್ನೇ ಭಾವನಾತ್ಮಕವಾಗಿ ಆಡಿ ಜನರನ್ನು ಉದ್ರೇಕಿಸುವಂತಿರುತ್ತವೆ. ಘೋಷಣೆಗಳೇ ಅವರ ಬಂಡವಾಳ. ಯಾವಾಗಲೂ ಭಾವನಾತ್ಮಕ ವಿಷಯಗಳನ್ನೇ ಕೆಣಕುತ್ತಾರೆ. ಸರ್ವಾಧಿಕಾರಿಗಳು ಸುಳ್ಳುಹೇಳುವುದರಲ್ಲಿ ನಿಷ್ಣಾತರಾಗಿರುತ್ತಾರೆ.
ಅವರು ಹೆಚ್ಚಾಗಿ ಉಗಾಂಡದ ಇದಿ ಅಮೀನನಂತೆ ಕ್ರೂರಿಗಳಾಗಿರುತ್ತಾರೆ. ಭಾವನಾತ್ಮಕ ಮಾತುಗಳನ್ನೇ ಆಡಿದರೂ ಅವರು ಮಾತ್ರ ಭಾವನಾತ್ಕಕವಾಗಿರುವುದಿಲ್ಲ. ಅವರು ಧೈರ್ಯಶಾಲಿಗಳ ಪೋಸು ಕೊಟ್ಟರೂ, ಕೆಲವರು ನಿಜವಾಗಿಯೂ ಧೈರ್ಯಶಾಲಿಗಳಾಗಿಯೇ ಇದ್ದರೂ, ಇನ್ನು ಕೆಲವರು ಸ್ವಭಾವತಃ ಪುಕ್ಕಲುಗಳಾಗಿರುತ್ತಾರೆ. ಯಾರಾದರೂ ತಮ್ಮನ್ನು ಕೊಲ್ಲಬಹುದು, ತಾನು ಅಧಿಕಾರ ಕಳೆದುಕೊಳ್ಳಬಹುದು ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಅದಕ್ಕಾಗಿ ಸ್ವಲ್ಪ ಸಂಶಯ ಬಂದರೂ ವಿರೋಧಿಗಳನ್ನು ದಮನಿಸುತ್ತಾರೆ. ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮುಹಮ್ಮದ್ ಗಡ್ಡಾಫಿ ಹೆಚ್ಚಾಗಿ ರಾಜಧಾನಿ ಟ್ರಿಪೋಲಿಯಲ್ಲಿ ವಾಸವಿರದೆ, ಮರುಭೂಮಿಗಳ ಗುಪ್ತಸ್ಥಳಗಳ ಟೆಂಟ್ ಕ್ಯಾಂಪ್‍ಗಳಲ್ಲಿ ವಾಸವಿದ್ದುದನ್ನು ಗಮನಿಸಬಹುದು.
ಸರ್ವಾಧಿಕಾರಿಗಳು ಆರಂಭದಲ್ಲಿ ಜನಪ್ರಿಯರೇ ಆಗಿರುತ್ತಾರೆ. ಹಿಂದಿನ ಆಡಳಿತಗಳ ವೈಫಲ್ಯಗಳಿಂದ ಅಸಮಾಧಾನ ಹೊಂದಿದ ಜನರು ಭವಿಷ್ಯದ ಆಶಾವಾದದಿಂದ ಇಂತವರನ್ನು ಬೆಂಬಲಿಸುತ್ತಾರೆ. ಅವರಾದರೋ ಹಿಂದಿನವರನ್ನು ನಿರಂತರ ದೂರುತ್ತಾ, ಎಲ್ಲದಕ್ಕೂ ಹಿಂದಿನವರೇ ಕಾರಣ ಎಂದು ನಂಬಿಸುತ್ತಾರೆ. ಇರಾಕಿನ ಸದ್ದಾಂ ಹುಸೇನ್ ಕೇವಲ ಸೇನೆಯ ಜನರಲ್ ಅಗಿದ್ದಾತ. 1979ರಲ್ಲಿ ಅಧ್ಯಕ್ಷ ಮಹಮ್ಮದ್ ಹಸನ್ ಅಲ್ ಬಖ್ರ್ ನಿಧನ ಹೊಂದಿದಾಗ ಜನರಲ್ಲಿ ಅಸಮಾಧಾನವಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ಸದ್ದಾಂ ಆದ್ಯಕ್ಷನಾದಾಗ, ಬಾತ್ ಪಕ್ಷ ಆತನನ್ನು ಬೆಂಬಲಿಸಿತ್ತು. ಜನರೂ ಖುಷಿಯನ್ನೇ ಪಟ್ಟಿದ್ದರು. ಅದಕ್ಕೆ ಅನುಗುಣವಾಗಿ ಸದ್ದಾಂ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡದ್ದೂ ಹೌದು.
ಹಿಟ್ಲರ್ ಕೂಡಾ ನೇರವಾಗಿ ಅಧಿಕಾರ ಕಸಿದುಕೊಂಡು ಸರ್ವಾಧಿಕಾರಿಯಾದವನಲ್ಲ. ಚುನಾವಣೆಯಲ್ಲಿ ಅವನ ಪಕ್ಷ ಎರಡನೇ ಸ್ಥಾನ ಗಳಿಸಿತ್ತು. ಆತನನ್ನು ಅಧ್ಯಕ್ಷ ಪೌಲ್ ವೊನ್ ಲಿಂಡೆನ್‍ಬರ್ಗ್ ಅವರು ಚಾನ್ಸಲರ್ ಆಗಿ ನೇಮಿಸಿದ್ದರು. ನಂತರ ಆತ ಅಧ್ಯಕ್ಷ ಮತ್ತು ಚಾನ್ಸಲರ್ ಎರಡೂ ಅಧಿಕಾರ ಇರುವ ಫ್ಯುರರ್ ಎಂದು ಘೋಷಿಸಿಕೊಂಡಾಗ ಬಹುತೇಕ ಜರ್ಮನರು ಅತ ವಿಶ್ವಗುರು ಆಗುವನೆಂದೇ ನಂಬಿ ಬೆಂಬಲಿಸಿದ್ದರು. ಯಾಕೆಂದರೆ, ಮೊದಲ ಮಹಾಯುದ್ಧದ ಸೋಲಿನಿಂದ ತತ್ತರಿಸಿತ್ತು. ಅರ್ಥಿಕತೆ ಹದಗೆಟ್ಟಿತ್ತು. ನಿರುದ್ಯೋಗ ತಾಂಡವವಾಡುತ್ತಿತ್ತು.
ಎಲ್ಲಾ ಸರ್ವಾಧಿಕಾರಿಗಳು ತಮಗೆ ಯಾವುದೇ ವಿರೋಧ ಇರಬಾರದೆಂದು ಬಯಸುತ್ತಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಅವರಿಗೆ ನಂಬಿಕೆಯೇ ಇರುವುದಿಲ್ಲ. ಸಂಸತ್ತಿನಂತಹ ಯಾವುದೇ ಚುನಾಯಿತ ನಿಯಂತ್ರಕ ಸಂಸ್ಥೆಯನ್ನು ಅವರು ಕಡೆಗಣಿಸುತ್ತಾರೆ. ಅಂತಹ ಸಂಸ್ಥೆಗಳಲ್ಲಿ ತಮ್ಮ ಭಟ್ಟಂಗಿಗಳೇ ಆಯಕಟ್ಟಿನ ಸ್ಥಾನಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಹಿಟ್ಲರ್ ಕೂಡಾ ಜರ್ಮನ್ ಸಂಸತ್ತನ್ನು ವಿಸರ್ಜಿಸಿದ್ದ. ತನ್ನ ಸುತ್ತ ಗೊಬೆಲ್ಸ್, ಹಿಮ್ಲರ್ ಮುಂತಾದ ಭಟ್ಟಂಗಿಗಳನ್ನು ಇಟ್ಟುಕೊಂಡಿದ್ದ.
ಒಂದು ಸರಕಾರ ನಡೆಯಲು ಹಲವಾರು ಸಂಸ್ಥೆಗಳು ಇರಲೇಬೇಕಾಗುತ್ತದೆ. ಬ್ಯಾಂಕಿಂಗ್, ಕೈಗಾರಿಕೆ, ಕೃಷಿ, ಅರೋಗ್ಯ, ಗೃಹ, ರಕ್ಷಣೆ ಹೀಗೆ ಆಡಳಿತ ಯಂತ್ರವನ್ನು ಮುನ್ನಡೆಸಲು ಅಧಿಕಾರಶಾಹಿ ಇದ್ದೇ ಇರುತ್ತದೆ. ಹೆಸರಿಗಾದರೂ ಚುನಾವಣೆಗಳು ನಡೆಯಬೇಕು. ಕೆಲವು ದೇಶಗಳಲ್ಲಿ ನಕಲಿ ಚುನಾವಣೆಗಳೇ ನಡೆಯುತ್ತವೆ. ಈ ಹೊತ್ತಿನಲ್ಲಿ ಯುಎಸ್‍ಎಯಲ್ಲಿ ಭಾರತದ ರಾಯಭಾರಿಯಾಗಿದ್ದ ಹಿರಿಯ ರಾಜತಾಂತ್ರಿಕ ಅಬಿದ್ ಹುಸೇನ್ ಅವರು ಕೆಲವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಆಫ್ರಿಕಾದ ದೇಶವೊಂದರಲ್ಲಿ ನಡೆಯುವ ಚುನಾವಣೆಗಳ ಕುರಿತು ಉದಾಹರಣೆಯಾಗಿ ಹೇಳಿದ ಜೋಕೊಂದು ನೆನಪಿಗೆ ಬರುತ್ತದೆ.
ಒಬ್ಬ ವ್ಯಕ್ತಿ ಅಧ್ಯಕ್ಷರ ವಿರುದ್ಧವಾಗಿ ಮತ ಚಲಾಯಿಸಿ ಮನೆಗೆ ಬರುತ್ತಾನೆ. ಹೆಂಡತಿ ಕೇಳಿದಾಗ ತಾನು ವಿರುದ್ಧ ಮತ ಚಲಾಯಿಸಿದ ವಿಷಯ ಹೇಳುತ್ತಾನೆ. ಆಕೆ ಕಂಗಾಲಾಗುತ್ತಾಳೆ. “ನಿಮಗೆ ಬುದ್ದಿ ಇಲ್ಲವೆ?! ನೀವು ವಿರುದ್ಧ ಮತ ಚಲಾಯಿಸಿದ್ದು, ಸರಕಾರಕ್ಕೆ ಗೊತ್ತಾಗುತ್ತದೆ. ನಾಳೆ ನೀವು ಕೆಲಸ ಕಳಕೊಳ್ಳಬಹುದು. ಜೈಲಿಗೂ ಹೋಗಬಹುದು. ನಮ್ಮ ಮಗನಿಗೆ ಆಡಳಿತ ಪಕ್ಷದ ಗೂಂಡಾಗಳು ಹೊಡೆಯಬಹುದು. ಮಗಳನ್ನು ಅತ್ಯಾಚಾರ ಮಾಡಲೂಬಹುದು. ಈಗಲೇ ಹೋಗಿ ಮತ ಬದಲಿಸಿ ಬನ್ನಿ!” ಎಂದು ಅಂಗಲಾಚುತ್ತಾಳೆ. ಅತನಿಗೆ ಸರಿಯೆನಿಸಿ ಮತಗಟ್ಟೆಗೆ ದೌಡಾಯಿಸಿ ಅಧಿಕಾರಿಗಳಲ್ಲಿ ಹೇಳುತ್ತಾನೆ- “ಸ್ವಾಮಿ ನಾನು ತಪ್ಪಾಗಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದೇನೆ. ಅದನ್ನು ಅವರ ಪರವಾಗಿ ಸರಿಪಡಿಸಬೇಕು”. ಅಗ ಅಧಿಕಾರಿಗಳು ಹೇಳುತ್ತಾರೆ- “ ನಿನಗೇನೂ ಭಯ ಬೇಡ. ನಾವು ಈಗಾಗಲೇ ನಿನ್ನ ಮತವನ್ನು ಅಧ್ಯಕ್ಷರ ಪರ ತಿದ್ದಿ ಆಗಿದೆ!” ನಮ್ಮಲ್ಲೂ ಇಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ಹಲವರಿಗೆ ಆತಂಕ ಇರುವುದು ಯಾಕೆ ಎಂದು ಅರ್ಥವಾಯಿತೆ!?
ಈ ಕಾರಣದಿಂದಾಗಿ ಸರ್ವಾಧಿಕಾರಿಗಳು ಯಾವತ್ತೂ ಅಯಕಟ್ಟಿನ ಸ್ಥಾನಗಳಲ್ಲಿ ತಮ್ಮವರನ್ನೇ ನೇಮಿಸಲು ಯತ್ನಿಸುತ್ತಾರೆ. ಅವರು ಭಟ್ಟಂಗಿಗಳು, ಎದುರಾಡದ ಕೈಗೊಂಬೆಗಳೇ ಅಗಿರುತ್ತಾರೆ. ಎದುರಾಡಿದರೆ ರಾಜೀನಾಮೆ ಕೊಡಬೇಕಾದೀತು! ಈ ಕಾರಣದಿಂದಲೇ ಸರ್ವಾಧಿಕಾರಿಯ ತಪ್ಪನ್ನು ಯಾರೂ ಬೆಟ್ಟುಮಾಡಲು ಹೋಗುವುದಿಲ್ಲ- ತನ್ನ ತಪ್ಪುಗಳನ್ನು ತಿಳಿದುಕೊಳ್ಳದ ಆತ ದೇಶವನ್ನೇ ವಿನಾಶಕ್ಕೆ ತಳ್ಳಿ ತಾನೂ ನಾಶವಾಗುವ ತನಕ!
ಸರ್ವಾಧಿಕಾರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಗಳನ್ನು ಮೊಟಕುಗೊಳಿಸಲಾಗುತ್ತದೆ. ನ್ಯಾಯಾಧೀಶ ಹುದ್ದೆಗಳಿಗೂ ಕೈಗೊಂಬೆಗಳನ್ನೇ ಹಿಂಬಾಗಿಲಿನಿಂದ ನುಸುಳಿಸುವ ಪ್ರಯತ್ನಗಳು ನಡೆಯುತ್ತವೆ. ತೀರ್ಪುಗಳು ವಿವಾದಾತ್ಮಕವಾಗಿ ಇದ್ದರೂ ಪ್ರಶ್ನಿಸುವಂತಿಲ್ಲ. ತೀರ್ಪುಗಳು ಪ್ರತಿಕೂಲವಾಗಿದ್ದಾಗ ನ್ಯಾಯಾಲಯಗಳನ್ನೇ ಧಿಕ್ಕರಿಸುವ, ಅಷ್ಟೇ ಏಕೆ ಸಂವಿಧಾನಗಳನ್ನೇ, ಧಿಕ್ಕರಿಸುವ ಪ್ರವೃತ್ತಿ ಅಧಿಕಾರಸ್ಥರ ಕೃಪಾಕಟಾಕ್ಷದಿಂದಲೇ ಬೆಳೆಯುತ್ತದೆ.
ಇನ್ನೊಂದು ಪ್ರವೃತ್ತಿ ಎಂದರೆ, ಸೇನೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ. ಯಾವುದೇ ಸರ್ವಾಧಿಕಾರ ಅವುಗಳನ್ನು ನಿಯಂತ್ರಿಸದೇ ಉಳಿಯುವುದು ಕಷ್ಟ. ಒಂದು ದೇಶಕ್ಕಾಗಿ ಹೋರಾಡಬೇಕಾದ ಸೇನೆಯು ಒಬ್ಬ ವ್ಯಕ್ತಿ ಅಥವಾ ಸರಕಾರಕ್ಕಾಗಿ ಹೋರಾಡುತ್ತಿದೆ ಎಂಬಂತೆ ಬಿಂಬಿಸುವುದು! ಸೈನ್ಯದ ಸಾಧನೆಗಳನ್ನು ತನ್ನ ಸಾಧನೆ ಎಂದು ಕೊಚ್ಚಿಕೊಳ್ಳುವುದು!
ಕಳೆದ ಸಂಚಿಕೆಗಳಲ್ಲಿ ಮತ್ತು ಇಲ್ಲಿ ಕೇವಲ ಪರಿಚಯಾತ್ಮಕವಾಗಿ ವಿವರಿಸಲಾದ ಗುಣಲಕ್ಷಣಗಳನ್ನು ಮುಂದೆ ಒಂದೊಂದಾಗಿ ಸೂಕ್ಷ್ಮವಾಗಿ ಮತ್ತು ಉದಾಹರಣೆ ಸಹಿತ ಪರಿಶೀಲಿಸುವ ಮೊದಲು ಮತ್ತಷ್ಟು ಗುಣ ಲಕ್ಷಣಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಅದೇ ಹೊತ್ತಿಗೆ ಈ ಗುಣಲಕ್ಷಣಗಳು ನಮ್ಮಲ್ಲಿಯೂ ಕಾಣುತ್ತಿವೆಯೇ ಎಂಬುದನ್ನು ಓದುಗರು ಪರಿಶೀಲಿಸಬೇಕು. ಒಂದುವೇಳೆ ಅದು ಹೌದಾದಲ್ಲಿ ನಾವು ತಕ್ಷಣ ಎಚ್ಚರಗೊಳ್ಳಬೇಕಾದ ಅಗತ್ಯವಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...