ಸುಮಾರು 100 ಕೋಟಿಗಿಂತಲೂ ಹೆಚ್ಚು ಮಕ್ಕಳು ಕಿರುಕುಳ, ಬೆದರಿಸುವಿಕೆ, ದೈಹಿಕ ಅಥವಾ ಭಾವನಾತ್ಮಕ ನಿಂದನೆ, ಲೈಂಗಿಕ ಹಿಂಸೆಯಂತಹ ವಿವಿಧ ರೀತಿಯ ಹಿಂಸೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ. ಪ್ರತಿ 13 ನಿಮಿಷಗಳಿಗೊಮ್ಮೆ ಒಂದು ಮಗು ಅಥವಾ ಹದಿಹರೆಯದ ಮಗು ಹತ್ಯೆಗೊಳಗಾಗುತ್ತಾರೆ ಮತ್ತು ಪ್ರತಿ ವರ್ಷ ಸುಮಾರು 40,000 ಮಕ್ಕಳು ತಡೆಗಟ್ಟಬಹುದಾದ ಸಾವುಗಳಿಗೆ ಬಲಿಯಾಗುತ್ತಾರೆ ಎಂದು ಅದು ಹೇಳಿದೆ. ಜಗತ್ತಿನ 100 ಕೋಟಿ ಮಕ್ಕಳು
ಹಿಂಸೆಗೆ ಒಳಗಾಗುವ ಮಕ್ಕಳಲ್ಲಿ ಅರ್ಧದಷ್ಟು ಜನರು ಮಾತ್ರ ತಮ್ಮ ಹಿಂಸೆಯನ್ನು ಹೇಳುತ್ತಾರೆ. ಅದರಲ್ಲಿ ಕೇವಲ 10% ಮಾತ್ರ ಯಾವುದಾದರೂ ಸಹಾಯ ಪಡೆಯುತ್ತಾರೆ ಎಂದು ವರದಿ ಉಲ್ಲೇಖಿಸಿದೆ. ಪ್ರತಿ 10 ಮಕ್ಕಳಲ್ಲಿ 9 ಮಕ್ಕಳು ಇನ್ನೂ ದೈಹಿಕ ಶಿಕ್ಷೆ ಮತ್ತು ಲೈಂಗಿಕ ದೌರ್ಜನ್ಯದಂತಹ ಬಾಲ್ಯದ ಹಿಂಸೆಯನ್ನು ನಿಷೇಧಿಸದ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
2ರಿಂದ 17ರ ವರೆಗಿನ ವರ್ಷದ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ಅಂದರೆ 100 ಕೋಟಿಗಿಂತಲೂ ಹೆಚ್ಚು ಮಕ್ಕಳು ಪ್ರತಿ ವರ್ಷ ಕೆಲವು ರೀತಿಯ ಹಿಂಸೆಯನ್ನು ಅನುಭವಿಸುತ್ತಾರೆ. ಈ ಹಿಂಸೆ ಆತಂಕ, ಖಿನ್ನತೆ, ಅಸುರಕ್ಷಿತ ಲೈಂಗಿಕತೆ, ಧೂಮಪಾನ ಮತ್ತು ಮಾದಕ ದ್ರವ್ಯ ಸೇವನೆಯಂತಹ ಅಪಾಯಕಾರಿ ನಡವಳಿಕೆಗಳಿಗೆ ಕೊಡುಗೆ ನೀಡುತ್ತದೆ ಜೊತೆಗೆ ಮಕ್ಕಳಲ್ಲಿ ಶೈಕ್ಷಣಿಕ ಸಾಧನೆಯನ್ನು ಕಡಿಮೆ ಮಾಡುತ್ತದೆ ಎಂದು ವರದಿ ಹೇಳಿದೆ.
ದೈಹಿಕ ಶಿಕ್ಷೆ ಸೇರಿದಂತೆ ಮಕ್ಕಳ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ 100 ಕ್ಕೂ ಹೆಚ್ಚು ಸರ್ಕಾರಗಳು ಮಕ್ಕಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ಕೊಲಂಬಿಯಾದ ಬೊಗೋಟಾದಲ್ಲಿ ಗುರುವಾರ ನಡೆದ ಮಹತ್ವದ ಕಾರ್ಯಕ್ರಮದಲ್ಲಿ ಐತಿಹಾಸಿಕ ಒಪ್ಪಂದಗಳನ್ನು ಮಾಡಿವೆ.
“ತಡೆಗಟ್ಟಲು ಸಾಧ್ಯವಿರುವ ಹೊರತಾಗಿಯೂ, ಪ್ರಪಂಚದಾದ್ಯಂತದ ಲಕ್ಷಾಂತರ ಮಕ್ಕಳಿಗೆ ಭಯಾನಕ ಹಿಂಸೆ ಎಂಬುವುದು ದೈನಂದಿನ ವಾಸ್ತವವಾಗಿ ಪರಿಣಮಿಸಿದೆ. ತಲೆಮಾರುಗಳಿಂದ ದಾಟಿ ಬರುತ್ತಿರುವ ಇದನ್ನು, ಸರ್ಕಾರಗಳು ನಿರ್ಣಾಯಕವಾಗಿ ಪ್ರತಿಜ್ಞೆಗಳನ್ನು ಮಾಡಿ ಅದನ್ನು ಜಾರಿಗೊಳಿಸಿದರೆ ಹಿಂಸಾಚಾರವನ್ನು ನಿಲ್ಲಸಬಹುದು. ಹೀಗಾದರೆ ಶಾಲೆಗಳನ್ನು ಸುರಕ್ಷಿತಗೊಳಿಸಲು ಮತ್ತು ಆನ್‌ಲೈನ್ ದುರುಪಯೋಗವನ್ನು ನಿಭಾಯಿಸಲು ಕುಟುಂಬಗಳಿಗೆ ನೆರವಾಗಲು ಸಾಧ್ಯವಾಗುತ್ತದೆ. ಜೊತೆಗೆ ಶಾಶ್ವತ ಹಾನಿ ಮತ್ತು ಕಳಪೆ ಆರೋಗ್ಯದಿಂದ ಮಕ್ಕಳನ್ನು ರಕ್ಷಿಸಲು ಈ ಕ್ರಮಗಳು ಮೂಲಭೂತವಾಗಿ ಅವಶ್ಯಕವಾಗಿದೆ ಎಂದು” ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರಾದ ಡಾ. ಟೆಡ್ರೊಸ್ ಹೇಳಿದ್ದಾರೆ.
ಐದರಲ್ಲಿ ಮೂರು ಮಕ್ಕಳು ತಮ್ಮ ಮನೆಗಳಲ್ಲಿ ದೈಹಿಕ ವಿಧಾನದಿಂದ ನಿಯಮಿತವಾಗಿ ಶಿಕ್ಷೆಗೆ ಒಳಗಾಗುತ್ತಾರೆ. ಜೊತೆಗೆ ಐದು ಹುಡುಗಿಯರಲ್ಲಿ ಒಬ್ಬರು ಮತ್ತು ಏಳು ಹುಡುಗರಲ್ಲಿ ಒಬ್ಬರು ಲೈಂಗಿಕ ದೌರ್ಜನ್ಯವನ್ನು ಅನುಭವಿಸುತ್ತಾರೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಜಗತ್ತಿನ 100 ಕೋಟಿ ಮಕ್ಕಳು
ಇದನ್ನೂ ಓದಿ: ‘ವಿಶ್ವದ ಯಾವುದೇ ಶಕ್ತಿಗೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಪುನಃಸ್ಥಾಪಿಸಲು ಅಸಾಧ್ಯ’ – ಮೋದಿ
‘ವಿಶ್ವದ ಯಾವುದೇ ಶಕ್ತಿಗೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಪುನಃಸ್ಥಾಪಿಸಲು ಅಸಾಧ್ಯ’ – ಮೋದಿ


