ಮುಂಗಾರು ಅಧಿವೇಶನದ ಕೊನೆಯ ದಿನವಾದ ಆಗಸ್ಟ್ 11 ರಂದು, ಅನುಚಿತ ವರ್ತನೆ ಆರೋಪದಲ್ಲಿ ಅಮಾನತು ಮಾಡಲಾಗಿದ್ದ 12 ಸಂಸದರ ಅಮಾನತು ಈ ಅಧಿವೇಶದಲ್ಲಿಯು ರದ್ದುಗೊಳಿಸಲಾಗುವುದಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಮಂಗಳವಾರ ಹೇಳಿದ್ದಾರೆ.
ಸಂಸದರ ಅಮಾನತ್ತಿಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು ಇದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರದ ಕ್ರಮವನ್ನು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಸಮರ್ಥಿಸಿಕೊಂಡಿದ್ದಾರೆ.
ಸಂಸದರು ಪಶ್ಚಾತ್ತಾಪ ವ್ಯಕ್ತಪಡಿಸದ ಕಾರಣ ಅಮಾನತು ಹಾಗೆಯೇ ಉಳಿಯುತ್ತದೆ ಎಂದು ಹೇಳಿರುವ ಅವರು, ಅಮಾನತುಗೊಂಡ ಸಂಸದರು ಪಶ್ಚಾತ್ತಾಪ ವ್ಯಕ್ತಪಡಿಸದ ಕಾರಣ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ನಾನು ಪರಿಗಣಿಸುತ್ತಿಲ್ಲ. ಅಮಾನತು ಹಿಂಪಡೆಯುವುದಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಪ್ರತಿ ಹರಿದು ಪ್ರತಿಭಟನೆ: ರಾಜ್ಯಸಭೆಯಿಂದ ಟಿಎಂಸಿ ಸಂಸದ ಶಾಂತನು ಸೇನ್ ಅಮಾನತು
ಕೆಲವೇ ನಿಮಿಷಗಳ ಹಿಂದೆ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರನ್ನು ಅಮಾನತುಗೊಳಿಸುವ ಸರ್ಕಾರದ ಕ್ರಮದ ವಿರುದ್ಧ ಇದು ಆಯ್ಕೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು. ನಂತರ 12 ಪ್ರತಿಪಕ್ಷಗಳ ಸಂಸದರ ಅಮಾನತು ಹಿಂಪಡೆಯಲು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದಿದ್ದರು. ಆದರೆ ಅವರ ಮನವಿಯನ್ನು ರಾಜ್ಯಸಭಾಧ್ಯಕ್ಷರು ನಿರಾಕರಿಸಿದ್ದಾರೆ.
ಪ್ರತಿಪಕ್ಷಗಳು ವೆಂಕಯ್ಯ ನಾಯ್ಡು ಅವರ ಹೇಳಿಕೆಯಿಂದ ಅಸಮಾಧಾನಗೊಂಡು ಸಂಸತ್‌ನಿಂದ ಹೊರನಡೆದಿದ್ದಾರೆ. “ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳಿಗೆ ಹೊರನಡೆಯಲು ಎಲ್ಲ ಹಕ್ಕುಗಳಿವೆ. ಆದರೆ ಸದನ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಸಭಾಧ್ಯಕ್ಷರು ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಪೆಗಾಸಸ್ ಹಗರಣದ ಕುರಿತು ವಿರೋಧ ಪಕ್ಷದ ಸಂಸದರು ಮತ್ತು ಸರ್ಕಾರ ನಡುವಿನ ಗದ್ದಲಕ್ಕಾಗಿ ಈ ಬಾರಿಯ ಅಧಿವೇಶನದಿಂದಲೂ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ 12 ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಲಾಗಿದೆ.
ನಿಯಮ 256 ರ ಅಡಿಯಲ್ಲಿ ಅಮಾನತುಗೊಂಡ ಸಂಸದರು: ಕಾಂಗ್ರೆಸ್‌ನ ಫುಲೋ ದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್. ಟಿಎಂಸಿಯ ಡೋಲಾ ಸೇನ್ ಮತ್ತು ಶಾಂತಾ ಛೆಟ್ರಿ. ಶಿವಸೇನೆಯ ಅನಿಲ್ ದೇಸಾಯಿ ಮತ್ತು ಪ್ರಿಯಾಂಕಾ ಚತುರ್ವೇದಿ, ಸಿಪಿಎಂನ ಎಳಮರಮ್ ಕರೀಂ ಮತ್ತು ಸಿಪಿಐನ ಬಿನೋಯ್ ವಿಶ್ವಂ.


