ಉತ್ತರ ಪ್ರದೇಶ: ರಾಜ್ಯದ ಗುಜೈನಿ ಪ್ರದೇಶದ ಹೆದ್ದಾರಿಯಲ್ಲಿ ಬುಧವಾರ ಮಹಿಳೆಯ ಶಿರಚ್ಛೇದಿತ, ಬೆತ್ತಲೆ ಶವ ಪತ್ತೆಯಾಗಿರುವ ಅಘಾತಕಾರಿ ಘಟನೆ ನಡೆದಿದೆ. ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದ್ದು, ಮಹಿಳೆಯ ಶವ ನಗ್ನವಾಗಿ ಬಿದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಸ್ತೆಯ ಮಧ್ಯದಲ್ಲಿ ಬಟ್ಟೆ ಇಲ್ಲದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಗುರುತು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದು, ಸಾವಿಗೆ ಕಾರಣವನ್ನು ಖಚಿತಪಡಿಸಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದೆ. ಮಹಿಳೆಯನ್ನು ಗುರುತಿಸಲು ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಇದನ್ನೂಓದಿ:ಪ್ರಜ್ವಲ್ ರೇವಣ್ಣ | 60 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಚಾರ್ಜ್ ಶೀಟ್…
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಸಭೆ ಸಂಸದ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, “ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಕಾನ್ಪುರದ ಹೆದ್ದಾರಿಯಲ್ಲಿ ಮಹಿಳೆಯ ಶಿರಚ್ಛೇದಿತ, ಬೆತ್ತಲೆ ಶವ ಪತ್ತೆಯಾಗಿದೆ. ಮೃತ ಮಹಿಳೆಯ ಮೇಲೆ ಕ್ರೂರ ಹಿಂಸಾಚಾರ ಮತ್ತು ಅಪಾರವಾದ ದೈಹಿಕ ಹಿಂಸೆ ನೀಡಿರುವ ಕುರುಹುಗಳು ಇವೆ” ಎಂದು ಅವರು ಹೇಳಿದ್ದಾರೆ.
“ಘಟನೆಯ ನ್ಯಾಯಯುತ ತನಿಖೆ ನಡೆಯಬೇಕು ಮತ್ತು ಅಪರಾಧಿಗಳನ್ನು ಪತ್ತೆಹಚ್ಚಿ, ಮೃತ ಮಹಿಳೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಅಪರಾಧ ಎಸಗುವವರ ಮನಸ್ಸಿನಲ್ಲಿ ಭಯ ಮೂಡಿಸುವಂತಹ ಮತ್ತು ಮಹಿಳೆಯರ ವಿರುದ್ಧ ಇಂತಹ ಅಪರಾಧಗಳು ಮರುಕಳಿಸದಂತಹ ಶಿಕ್ಷೆ ಪೊಲೀಸರು ನೀಡಬೇಕು” ಎಂದು ಹೇಳಿದ್ದಾರೆ.
योगी जी ईए आप का उत्तर प्रदेश है एक महिला का सिर कटी लास मिली है।
झूठे दावे करने से कुछ नहीं होता https://t.co/jzEc7IlhGQ pic.twitter.com/LiONfKxvOz
— Aaditya Thackeray (@Aaditya_Tha1) September 12, 2024
ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, “ಯೋಗಿ ಅವರೇ ಇದು ನಿಮ್ಮ ಉತ್ತರ ಪ್ರದೇಶ, ಇಲ್ಲಿ ಮಹಿಳೆಯ ಶಿರಚ್ಛೇದಿತ ಶವ ಪತ್ತೆಯಾಗಿದೆ. ಸುಳ್ಳು ಹೇಳಿಕೆಗಳಿಂದ ಏನನ್ನೂ ಸಾಧಿಸಲಾಗುವುದಿಲ್ಲ” ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದ್ದಾರೆ.
ವಿಡಿಯೊನೋಡಿ: ‘ಅಭಿವೃದ್ಧಿ ಎಂಬ ವಿನಾಶ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿ.ಎಲ್.ನರಸಿಂಹಮೂರ್ತಿ ಅವರ ಮಾತು


