Homeಕರೋನಾ ತಲ್ಲಣಲಸಿಕೆ, ಮೂಲಸೌಕರ್ಯ ಇಲ್ಲದಿದ್ದರೆ 2021 ವೇಳೆಗೆ ದಿನಕ್ಕೆ 2.87 ಲಕ್ಷ ಕೊರೊನಾ ಪ್ರಕರಣ ಸಾಧ್ಯತೆ: ಅಧ್ಯಯನ

ಲಸಿಕೆ, ಮೂಲಸೌಕರ್ಯ ಇಲ್ಲದಿದ್ದರೆ 2021 ವೇಳೆಗೆ ದಿನಕ್ಕೆ 2.87 ಲಕ್ಷ ಕೊರೊನಾ ಪ್ರಕರಣ ಸಾಧ್ಯತೆ: ಅಧ್ಯಯನ

ಜೂನ್ 18 ರ ವೇಳೆಗೆ ಕೊರೊನಾ ಪ್ರಕರಣ ಹಾಗೂ ಸಾವುಗಳು ಕ್ರಮವಾಗಿ 11.8 ಮತ್ತು 1.48 ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವೂ ಅಂದಾಜಿಸಿದೆ.

- Advertisement -
- Advertisement -

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯ ವಿಜ್ಞಾನಿಗಳು ಮತ್ತು ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಪರಿಣಾಮಕಾರಿ ಲಸಿಕೆ ಮತ್ತು ಸುಧಾರಿತ ಆರೋಗ್ಯ ಮೂಲಸೌಕರ್ಯಗಳು ಇರದೆ ಇದ್ದಲ್ಲಿ, ಭಾರತವು 2021 ರ ಚಳಿಗಾಲದ ಅಂತ್ಯದ ವೇಳೆಗೆ ದಿನಕ್ಕೆ ಸುಮಾರು 2.87 ಲಕ್ಷ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಬಹುದು ಎಂದು ಹೇಳಿದೆ.

ಎಂಐಟಿ ಪ್ರಾಧ್ಯಾಪಕರಾದ ಹಜಿರ್ ರಹಮಾಂದಾದ್, ಜಾನ್ ಸ್ಟರ್ಮನ್ ಮತ್ತು ಪಿಎಚ್‌ಡಿ ಅಭ್ಯರ್ಥಿ ತ್ಸೆ ಯಾಂಗ್ ಲಿಮ್, 2021 ರ ಚಳಿಗಾಲದ ಕೊನೆಯಲ್ಲಿ ದೈನಂದಿನ ಸೋಂಕಿನ ನಿರೀಕ್ಷಿತ ಪ್ರಮಾಣವನ್ನು ಯೋಜಿಸುವ ಅಧ್ಯಯನ ಮೂಲಕ ಮೊದಲ ಹತ್ತು ರಾಷ್ಟ್ರಗಳಲ್ಲಿ ಭಾರತದಲ್ಲಿ ದಿನಕ್ಕೆ 2.87 ಲಕ್ಷ ಸೋಂಕುಗಳು ವರದಿಯಾಗುತ್ತದೆ ಎಂದು ಸಂಶೋಧನೆಯೂ ಹೇಳಿದೆ. ನಂತರದಲ್ಲಿ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಆಫ್ರಿಕಾ, ಇರಾನ್, ಇಂಡೋನೇಷ್ಯಾ, ಯುಕೆ, ನೈಜೀರಿಯಾ, ಟರ್ಕಿ, ಫ್ರಾನ್ಸ್ ಮತ್ತು ಜರ್ಮನಿ ಸೇರಿದೆ.

ಅಂದಾಜು 4.75 ಶತಕೋಟಿ ಜನರಿರುವ ಸುಮಾರು 84 ದೇಶಗಳ ಮಾಹಿತಿಯನ್ನು ಅಧ್ಯಯನವು ಬಳಸಿದೆ. ಜಾಗತಿಕ ದತ್ತಾಂಶದ ಸಹಾಯದಿಂದ, ಸಂಶೋಧಕರು ಯೋಜಿತ ಕೊರೊನಾ ವೈರಸ್ ಸೋಂಕುಗಳಿಗೆ ಕ್ರಿಯಾತ್ಮಕ ಸಾಂಕ್ರಾಮಿಕ ರೋಗಶಾಸ್ತ್ರೀಯ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.

ಸಂಶೋಧಕರು ನೀಡಿದ ಎಚ್ಚರಿಕೆ ಟಿಪ್ಪಣಿಗಳಲ್ಲಿ ರೋಗದ ಹರಡುವಿಕೆಯ ಪ್ರಕ್ಷೇಪ ಮಾದರಿಗಳು, ನಡವಳಿಕೆ ಮತ್ತು ನೀತಿ ಪ್ರತಿಕ್ರಿಯೆಗಳ ಪರೀಕ್ಷೆ ಬಹಳ ಸೂಕ್ಷ್ಮವಾಗಿವೆ ಎಂದಿದ್ದಾರೆ. ತಮ್ಮ ಸಂಶೋಧನೆಯನ್ನು ಸಂಭಾವ್ಯ ಅಪಾಯದ ಸೂಚಕಗಳಾಗಿ ವ್ಯಾಖ್ಯಾನಿಸಬೇಕೇ ಹೊರತು ಇವು ಭವಿಷ್ಯದ ನಿಖರವಾದ ಮುನ್ಸೂಚನೆಯಲ್ಲ ಎಂದು ಹೇಳಿದ್ದಾರೆ.

ಜೂನ್ 18 ರ ವೇಳೆಗೆ ಕೊರೊನಾ ಪ್ರಕರಣ ಹಾಗೂ ಸಾವುಗಳು ಕ್ರಮವಾಗಿ 11.8 ಮತ್ತು 1.48 ಪಟ್ಟು ಹೆಚ್ಚಾಗಿದೆ ಎಂದು ಅವರು ಅಂದಾಜಿಸಿದ್ದಾರೆ.

“ಅಧಿಕೃತ ಕೊರೊನಾ ವೈರಸ್ ಪ್ರಕರಣಗಳು ಅಧಿಕೃತ ವರದಿಗಳು ಸೂಚಿಸುವುದಕ್ಕಿಂತ ಹೆಚ್ಚಾಗಿವೆ, ಹೆಚ್ಚಿನ ಜನರು ಸೋಂಕಿಗೆ ಒಳಗಾಗುತ್ತಾರೆ. ಸಾಮೂಹಿಕ ರೋಗನಿರೋಧಕ ಶಕ್ತಿಗಾಗಿ ಕಾಯುವುದು ಪ್ರಸ್ತುತ ಸಾಂಕ್ರಾಮಿಕ ರೋಗದಿಂದ ಹೊರಬರುವ ಕಾರ್ಯಸಾಧ್ಯವಾದ ಮಾರ್ಗವಲ್ಲ” ಎಂದು ರಹಮಂದಾದ್ ಎಚ್ಚರಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತವು 22,752 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳು 7.42 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.


ಓದಿ: ಕೊರೊನಾ ರೋಗಿಗಳ ಸಮಸ್ಯೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊ೦ಡ ಕರ್ನಾಟಕ ಹೈಕೋರ್ಟ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...