Homeಮುಖಪುಟ20 ಲಕ್ಷ ಕೋಟಿ ಪ್ಯಾಕೇಜ್ : ಟ್ವಿಟ್ಟರ್‌ನಲ್ಲಿ ಪರ-ವಿರೋಧ ಸಮರ

20 ಲಕ್ಷ ಕೋಟಿ ಪ್ಯಾಕೇಜ್ : ಟ್ವಿಟ್ಟರ್‌ನಲ್ಲಿ ಪರ-ವಿರೋಧ ಸಮರ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ಘೋಷಿಸಿದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಬಗ್ಗೆ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಪರ-ವಿರೋಧ ಸಮರದಲ್ಲಿ ತೊಡಗಿದ್ದಾರೆ.

ನಿನ್ನೆ ರಾತ್ರಿ ಪ್ರಧಾನಿ ಪ್ಯಾಕೇಜ್‌ ಅನ್ನು ಘೋಷಿಸುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ಪರವಿರೋಧದ ಸಮರಗಳು ಪ್ರಾರಂಭವಾಗಿದೆ. ವಿರೋಧಿಸುವವರು ಪ್ರಧಾನಿ ಇದುವರೆಗೂ ಘೋಷಿಸಿದ ಘೋಷಣೆಗಳೇ ಈಡೇರಿಲ್ಲ, ಇದು ಕೂಡಾ ಹಿಂದಿನಂತೆಯೆ ಘೋಷಣೆಯಾಗಿಯೇ ಉಳಿಯಲಿದೆ ಎಂದು ಹೇಳಿದರೆ, ಪರವಿರುವವರು ಪ್ರಧಾನಿ ಮೋದಿಯವರಿಗೆ ಅಭಿನಂಧನೆ ಸಲ್ಲಿಸಿ, ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅಭಿಯಾನ ನಡೆಸುತ್ತಿದ್ದಾರೆ.

ಗೌರವ್ ಕಪೂರ್ ಎಂಬವರು ಕಾರ್ಟೂನೊಂದನ್ನು ಹಾಕಿ ಮೋದಿ ಘೋಷಿಸಿದ ಪ್ಯಾಕೇಜ್ ಕೇವಲ ಒಂದು ಹಾಸ್ಯ ಎಂಬಂತೆ ತೋರಿಸಿದ್ದಾರೆ.

ಅನಸ್ ಖುರೇಸಿ ಎಂಬವರು 20 ಲಕ್ಷಕ್ಕೆ ಎಷ್ಟು ಸೊನ್ನೆ ಇದೆಯೆಂದು ಹಣಕಾಸು ಸಚಿವರಿಗೆ ಕೂಡಾ ತಿಳಿದಿರಲಿಕ್ಕಿಲ್ಲ, ಸಂಬಿತ್ ಪಾತ್ರಾ ಅವರೇ ಇದರ ಬಗ್ಗೆ ಅದಾದುದ್ದೀನ್ ಅವರಿಗೆ ತರಗತಿ ತಗೆದುಕೊಳ್ಳಿ ಎಂದು ಹೇಳಿದ್ದಾರೆ.

ಗೌತಮ್ ತ್ರಿವೇದಿ ಅವರು ಟ್ವೀಟ್ ಮಾಡಿ “ಬಿಹಾರದಲ್ಲಿ ಚುನಾವಣೆಯಯ ಕಾಲದಲ್ಲಿ 1.25 ಲಕ್ಷದ ಬಗ್ಗೆ ಹೇಳಲಾಗಿತ್ತು, ಈಗ 20 ಲಕ್ಷ ಕೋಟಿ” ಎಂದು ಹೇಳಿದ್ದಾರೆ.

ಹಾಗೆಯೆ ಮೋದಿಯ ಪರ ಕೂಡಾ ಹಲವರು ಟ್ವೀಟ್ ಮಾಡಿದ್ದು, ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅಭಿಯಾನ ನಡೆಸುತ್ತಿದ್ದಾರೆ.

ಬಿಪುಲ್ ಎನ್ನುವವರು ಕಾಂಗ್ರೇಸಿನ ಉದಿತ್ ರಾಜ್ ಅವರ ದ್ವಂದ್ವತೆಯ ಬಗ್ಗೆ ಗಮನ ಸೆಳೆದಿದ್ದು, ಈ ಹಿಂದೆ ಉದಿತ್ ಅವರು ಈ ಹಿಂದೆ ಹಾಗೂ ಈಗಿನ ಹೇಳಿಕೆಯನ್ನು ಹಾಕಿ, ವಿರೋಧಿಗಳು ಹೀಗಿರುತ್ತಾರೆ ಎಂದು ಹೇಳಿದ್ದಾರೆ.

ಪುಷ್ಪೇಂದ್ರ ಎಂಬವರು, ಇತಿಹಾಸದಲ್ಲೇ ಅತೀ ದೊಡ್ಡ ಪ್ಯಾಕೇಜನ್ನು ನರೇಂದ್ರ ಮೋದಿ ಘೋಷಿಸಿದ್ದಾರೆ, ಇದು ಭಾರತದ ಜಿಡಿಪಿಯ 10% ಆಗಿದೆ. ಮೋದಿ ಉತ್ತಮ ಪ್ರಧಾನ ಮಂತ್ರಿ ಎಂದು ನಾವು ಒಪ್ಪಿಕೊಳ್ಳುತ್ತೇವೆ ಬರೆದುಕೊಂಡಿದ್ದಾರೆ.


ಓದಿ:  ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ರಿಂದ 20 ಲಕ್ಷ ಕೋಟಿ ಪ್ಯಾಕೇಜಿನ ವಿವರಣೆ


ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...