Homeಮುಖಪುಟಟ್ರಂಪ್‌ ಘೋಷಿಸಿದಂತೆ ಅಮೇರಿಕಾದಿಂದ ಭಾರತಕ್ಕೆ ಬಂದ ವೆಂಟಿಲೇಟರ್‌ಗಳೆಷ್ಟು ಗೊತ್ತೆ?

ಟ್ರಂಪ್‌ ಘೋಷಿಸಿದಂತೆ ಅಮೇರಿಕಾದಿಂದ ಭಾರತಕ್ಕೆ ಬಂದ ವೆಂಟಿಲೇಟರ್‌ಗಳೆಷ್ಟು ಗೊತ್ತೆ?

ಹಾಸ್ಯಾಸ್ಪದವೆಂದರೆ ಮೇ 12 ರಂದು ’ಆತ್ಮನಿರ್ಭರ ಭಾರತ’ ಎಂದು ಘೋಷಿಸಿ, ಸ್ವಾವಲಂಬಿಗಳಾಗುವ ಬಗ್ಗೆ ಪಾಠ ಹೇಳಿದ ಪ್ರಧಾನಿ ಮೇ 16 ರಂದು ಅಮೆರಿಕ ದಾನ ನೀಡಿದ್ದಕ್ಕಾಗಿ ಧನ್ಯವಾದ ಹೇಳುತ್ತಾರೆ. ಆದರೆ ದೇಶದ ಹೆದ್ದಾರಿಗಳಲ್ಲಿ ನಡೆಯುತ್ತಿರುವ ದೇಶವನ್ನು ಕಟ್ಟಿ ಬೆಳೆಸಿದ ಲಕ್ಷಾಂತರ ಜನರ ಬದುಕು ಬರ್ಭರವಾಗಿರುವುದರ ಬಗ್ಗೆ ನಮ್ಮ ಪ್ರಧಾನಿ ಇನ್ನೂ ಒಂದು ಮಾತೂ ಆಡಿಲ್ಲ.

- Advertisement -
- Advertisement -

ಮೇ 16 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದಲ್ಲಿ ನಮ್ಮ ಸ್ನೇಹಿತರಿಗೆ ಅಮೇರಿಕಾದಿಂದ ವೆಂಟಿಲೇಟರುಗಳನ್ನು ದಾನ ಮಾಡುತ್ತೇವೆ ಎಂದು ತಮ್ಮ ಟ್ವಿಟ್ಟರ್‌ ಅಕೌಂಟಿನಿಂದ ಸಂದೇಶವನ್ನು ಹಾಕಿದ್ದರು. ಅಷ್ಟಕ್ಕೆ ದೇಶದಲ್ಲಿ ಭಾರಿ ಸುದ್ದಿಯಾಯಿತು.

ವಾಸ್ತವದಲ್ಲಿ ಅಮೆರಿಕಾ ಹೇಳಿದ್ದು ಕೇವಲ 200 ವೆಂಟಿಲೇಟರುಗಳನ್ನು ಕೊಡುವುದಷ್ಟೇ ಆಗಿತ್ತು. 135 ಕೋಟಿಗಿಂತಲೂ ಜಾಸ್ತಿ ಜನಸಂಖ್ಯೆಯಿರುವ, 60,000 ಕ್ಕೂ ಹೆಚ್ಚು ಕೊರೊನಾ ರೋಗಿಗಳಿರುವ ಭಾರತಕ್ಕೆ 200 ವೆಂಟಿಲೇಟರುಗಳು ದೊಡ್ಡ ವಿಷಯವೇನೂ ಅಲ್ಲ, ಆದರೆ ಪ್ರಸ್ತುತ ಬಿಕ್ಕಟ್ಟಿನಲ್ಲಿ ಒಂದು ಹುಲ್ಲು ಕಡ್ಡಿ ಕೂಡಾ ದೊಡ್ಡ ವಿಷಯವೇ ಆಗಿರುತ್ತದೆ ಅಂದುಕೊಳ್ಳೋಣ.

ಆದರೆ ಇಲ್ಲಿ ವೆಂಟಿಲೇಟರ್‌ಗಿಂತ ಹೆಚ್ಚಾಗಿ ಅಮೇರಿಕಾದಂತಹ ದೊಡ್ಡಣ್ಣ ಭಾರತವನ್ನು ’ಫ್ರೆಂಡ್’ ಎಂದು ಕರೆದದ್ದನ್ನು ಮಹಾವಿಷಯವಾಗಿ ನೋಡಲಾಯಿತು, ಅಂದರೆ ಆರೋಗ್ಯಕ್ಕಿಂತ ಹೆಚ್ಚು ಇದನ್ನು ರಾಜಕೀಯವಾಗಿಯೆ ಹೆಚ್ಚು ಪ್ರಚಾರ ಪಡೆಯಲು ಬಳಸಲಾಯಿತು. ನಿಜಕ್ಕೂ ಹೇಳಬೇಕೆದಂರೆ ಅಮೇರಿಕಾದಂತಹ ಬಂಡವಾಳಶಾಹಿ ದೇಶ ಯಾವ ಕೊಡುಗೆಯನ್ನೂ ಕೂಡಾ ಪುಕ್ಕಟೆಯಾಗಿ ನೀಡಲ್ಲ, ಅದರ ಪ್ರತಿಯೊಂದೂ ನಡೆಯಲ್ಲೂ ವ್ಯಾಪಾರ ಹಾಗೂ ಲಾಭದ ಉದ್ದೇಶ ಇದ್ದೇ ಇರುತ್ತದೆ.

ನವೆಂಬರ್‌ನಲ್ಲಿ ಅಮೇರಿಕಾದ ಅಧ್ಯಕ್ಷೀಯ ಚುಣಾವಣೆಯಿದೆ ಹಾಗೂ ಟ್ರಂಪ್ ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಈ ಹಿಂದಿನಿಂಲೂ ಬಹಳ ಕಸರತ್ತು ನಡೆಸುತ್ತಿರುವುದು ಎಲ್ಲರಿಗೂ ತಿಳಿಯದ್ದೇನಲ್ಲ. ಟ್ರಂಪ್ ಘೋಷಿಸಿದ ಈ ದಾನದಲ್ಲೂ ಏನು ಉದ್ಧೇಶವಿದೆಯೆಂದು ನಾವು ಹುಡುಕಲೇ ಬೇಕಾಗುತ್ತದೆ.

ಟ್ರಂಪ್ ದಾನ ಘೋಷಿಸಿದ ಗಂಟೆಗಳ ಅಂತರದಲ್ಲಿ ನಮ್ಮ ದೇಶದ ಪ್ರಧಾನಿಯೂ ಅವರಿಗೆ ಧನ್ಯವಾದ ಅರ್ಪಿಸಿ ಪುನೀತರಾದರು. ಅಮೇರಿಕಾ ಭಾರತ ಸ್ನೇಹ ಇನ್ನೂ ಗಟ್ಟಿಯಾಗಲಿ ಎಂದು ಹಾರೈಸಿದರು. ಇವೆಲ್ಲವೂ ಒಳ್ಳೆಯದೇ, ಆದರೆ ದೇಶದ ವಲಸಿಗರ ನೋವು, ಪಾದಗಳ ರಕ್ತ, ಕಣ್ಣೀರು, ಹತಾಶೆ ನಮ್ಮ ಪ್ರಧಾನಿಯ ಟ್ವಿಟ್ಟರ್ ಖಾತೆಗೆ, ಅವರ ಕಣ್ಣು-ಕಿವಿಗೆ, ಅವರ ಹೃದಯವನ್ನು ಕಲಕಿಲ್ಲ ಹಾಗೂ ತಲುಪಿಲ್ಲ ಎಂದರೆ… ಏನು ಹೇಳುವುದು?

ಪ್ರಧಾನಿಯಾದಿಯಾಗಿ ಮಾಧ್ಯಮಗಳ ಸಹಿತ ಇಷ್ಟೆಲ್ಲ ಪ್ರಚಾರ ಪಡೆದ ಈ ವೆಂಟಿಲೇಟರ್ ಭಾರತವನ್ನು ಮುಂದಿನವಾರ ತಲುಪಬಹುದು. ಆದರೆ ಅಮೇರಿಕಾ ಘೋಷಿಸಿದ 200 ವೆಂಟಿಲೇಟರುಗಳಲ್ಲಿ ಸದ್ಯಕ್ಕೆ ಭಾರತವನ್ನು ತಲುಪಿರುವುದು ಕೇವಲ 50 ಮಾತ್ರ!. ಬಾಕಿ ವೆಂಟಿಲೇಟರುಗಳು ಯಾವತ್ತು ಬರಲಿವೆ ಎಂದು ಅಮೇರಿಕವೆ ಹೇಳಲಿದೆ.

ಸಧ್ಯಕ್ಕೆ ಭಾರತದಲ್ಲಿ ಇರುವ ವೆಂಟಿಲೇಟರುಗಳ ಸಂಖ್ಯೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಸೇರಿ 48 ಸಾವಿರ. ಈ ಬರಹ ಬರೆಯುತ್ತಿರುವ ಹೊತ್ತಿಗೆ ಭಾರತದಲ್ಲಿ 1 ಲಕ್ಷದ ಆರು ಸಾವಿಕ್ಕಿಂತಲೂ ಹೆಚ್ಚು ಕೊರೊನಾ ಪ್ರಕರಣಗಳು ಹಾಗೂ 3300 ಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿವೆ. ಕೊರೊನಾ ತಡೆಯಲು ಯಾವುದೇ ಮಾಹಿತಿಯಿಲ್ಲದೆ ಏಕಾಏಕಿ ಲಾಕ್‌ಡೌನ್ ಮಾಡಿದ ಪರಿಣಾಮ ದೇಶದಾದ್ಯಂತ ಹೆದ್ದಾರಿಗಳಲ್ಲೇ ನೂರಾರು ಜೀವಗಳು ಅಸುನೀಗಿವೆ.

ಹಾಸ್ಯಾಸ್ಪದವೆಂದರೆ ಮೇ 12 ರಂದು ’ಆತ್ಮನಿರ್ಭರ ಭಾರತ’ ಎಂದು ಘೋಷಿಸಿ, ಸ್ವಾವಲಂಬಿಗಳಾಗುವ ಬಗ್ಗೆ ಪಾಠ ಹೇಳಿದ ಪ್ರಧಾನಿ ಮೇ 16 ರಂದು ಅಮೆರಿಕ ದಾನ ನೀಡಿದ್ದಕ್ಕಾಗಿ ಧನ್ಯವಾದ ಹೇಳುತ್ತಾರೆ. ಆದರೆ ದೇಶದ ಹೆದ್ದಾರಿಗಳಲ್ಲಿ ನಡೆಯುತ್ತಿರುವ ದೇಶವನ್ನು ಕಟ್ಟಿ ಬೆಳೆಸಿದ ಲಕ್ಷಾಂತರ ಜನರ ಬದುಕು ಬರ್ಭರವಾಗಿರುವುದರ ಬಗ್ಗೆ ನಮ್ಮ ಪ್ರಧಾನಿ ಇನ್ನೂ ಒಂದು ಮಾತೂ ಆಡಿಲ್ಲ.

ಇವೆಲ್ಲವನ್ನೂ ಬಿಡಿ, ದೊಡ್ಡಣ್ಣ ಎಣಿಸಿ ಕೊಂಡಿರುವ ಅಮೆರಿಕಾ ನಮಗೆ 200 ವೆಂಟಿಲೇಟರ್‌ ದಾನ ನೀಡುತ್ತೇವೆ ಎಂದಿದೆ. ಆದರೆ ಅಮೆರಿಕಾದಲ್ಲಿ ಇದುವರೆಗೂ 15 ಲಕ್ಷದ ಹದಿನೈದು ಸಾವಿರ ಕೊರೊನಾ ಸೋಂಕಿತರು ಇದ್ದು, 92 ಸಾವಿರಕ್ಕಿಂತಲೂ ಹೆಚ್ಚು ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾಸೋಂಕಿತರಿರುವ ದೇಶವದು. ಅಲ್ಲಿನ ವೈದ್ಯರು ಅಮೆರಿಕಾದಲ್ಲಿ ಸಾಕಷ್ಟು ವೆಂಟಿಲೇಟರ್ ಇಲ್ಲವೆಂದು ಹೇಳುತ್ತಿದ್ದಾರೆ. ವರದಿಯೊಂದರ ಪ್ರಕಾರ ಅಮೇರಿಕಾದಲ್ಲಿ ಸಧ್ಯಕ್ಕೆ 9 ಲಕ್ಷ ಜನರಿಗೆ ವೆಂಟಿಲೇಟರುಗಳ ಅಗತ್ಯವಿದೆ. ಆದರೆ ಅಲ್ಲಿರುವ ವೆಂಟಿಲೇಟರುಗಳು 2 ಲಕ್ಷ ಮಾತ್ರ.

ಒಟ್ಟಿನಲ್ಲಿ ತನ್ನ ದೇಶದ ಬಗ್ಗೆ ಯಾವುದೆ ಕಾಳಜಿಯಿಲ್ಲದ ನಾಯಕರಿಬ್ಬರು ಕೊರೊನಾದಂತಹ ಜಾಗತಿಕ ಬಿಕ್ಕಟ್ಟಿನಲ್ಲೂ ಪ್ರಚಾರದಲ್ಲಿರಲು ಹಾಗೂ ಪ್ರಚಾರ ಪಡೆಯಲು ಹವಣಿಸುತ್ತಲೇ ಇದ್ದಾರೆ. ಅದಕ್ಕಾಗಿ ಕೆಲವು ತುತ್ತೂರಿ ಊದುವ ಮಾಧ್ಯಮಗಳು ಕಾಯುತ್ತಲೇ ಇದೆ.


ಓದಿ: ಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...