Homeಮುಖಪುಟನ್ಯಾಯಾಧೀಶರ ಆಸ್ತಿ ವಿವರ ಬಹಿರಂಗಪಡಿಸಿದ ಸುಪ್ರೀಂ ಕೋರ್ಟ್‌; ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯಾಯಾಧೀಶರ ಆಸ್ತಿ ವಿವರ ಬಹಿರಂಗಪಡಿಸಿದ ಸುಪ್ರೀಂ ಕೋರ್ಟ್‌; ಇಲ್ಲಿದೆ ಸಂಪೂರ್ಣ ಮಾಹಿತಿ

- Advertisement -
- Advertisement -

ಸುಪ್ರೀಂ ಕೋರ್ಟ್‌ನ 33 ಹಾಲಿ ನ್ಯಾಯಾಧೀಶರಲ್ಲಿ 21 ನ್ಯಾಯಾಧೀಶರು ಸೋಮವಾರ (ಮೇ.5) ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನ್ಯಾಯಾಧೀಶರ ಆಸ್ತಿ ವಿವರಗಳನ್ನು ಪ್ರಕಟಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ನ್ಯಾಯಾಂಗದೊಳಗಿನ ಇತ್ತೀಚಿನ ಭ್ರಷ್ಟಾಚಾರದ ಆರೋಪಗಳು, ವಿಶೇಷವಾಗಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿವಾದದ ನಂತರ, ಏಪ್ರಿಲ್ 1ರಂದು ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಲಯವು ನ್ಯಾಯಾಧೀಶರ ಆಸ್ತಿ ವಿವರಗಳನ್ನು ಉನ್ನತ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕಗೊಳಿಸಲು ನಿರ್ಧರಿಸಿತ್ತು.

ಅದರಂತೆ ನಿನ್ನೆ ವಿವರಗಳನ್ನು ಪ್ರಕಟಿಸಲಾಗಿದೆ. ಆದಾಗ್ಯೂ, 12 ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ.

ಈಗಾಗಲೇ ಸ್ವೀಕರಿಸಲಾದ ನ್ಯಾಯಾಧೀಶರ ಆಸ್ತಿ ವಿವರಗಳನ್ನು ಅಪ್ಲೋಡ್ ಮಾಡಲಾಗಿದೆ. ಇತರ ನ್ಯಾಯಾಧೀಶರ ಆಸ್ತಿ ವಿವರಗಳನ್ನು ಮುಂದೆ ಅಪ್ಲೋಡ್ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ ಹೇಳಿದೆ.

ನ್ಯಾಯಾಧೀಶ ಆಸ್ತಿ ವಿವರಗಳನ್ನು ನೋಡಲು ಅವರ ಹೆಸರಿನ ಮುಂದಿನ ಲಿಂಕ್ ಕ್ಲಿಕ್ ಮಾಡಿ

  1. ನ್ಯಾಯಮೂರ್ತಿ ಸಂಜೀವ್ ಖನ್ನಾ, ಭಾರತದ ಮುಖ್ಯ ನ್ಯಾಯಮೂರ್ತಿ ಲಿಂಕ್
  2. ನ್ಯಾಯಮೂರ್ತಿ ಭೂಷಣ ರಾಮಕೃಷ್ಣ ಗವಾಯಿ ಲಿಂಕ್ 
  3. ನ್ಯಾಯಮೂರ್ತಿ ಸೂರ್ಯ ಕಾಂತ್ ಲಿಂಕ್
  4. ನ್ಯಾಯಮೂರ್ತಿ ಅಭಯ್ ಎಸ್. ಓಕಾ ಲಿಂಕ್ 
  5. ನ್ಯಾಯಮೂರ್ತಿ ವಿಕ್ರಮ್ ನಾಥ್ ಲಿಂಕ್  
  6. ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಲಿಂಕ್
  7. ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಲಿಂಕ್
  8. ನ್ಯಾಯಮೂರ್ತಿ ಪಮಿದಿಘಂಟಂ ಶ್ರೀ ನರಸಿಂಹ ಲಿಂಕ್
  9. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಲಿಂಕ್
  10. ನ್ಯಾಯಮೂರ್ತಿ ಜಮ್ಶೆಡ್ ಬುರ್ಜೋರ್ ಪರ್ದಿವಾಲಾ ಲಿಂಕ್
  11. ನ್ಯಾಯಮೂರ್ತಿ ಪಂಕಜ್ ಮಿಥಲ್ ಲಿಂಕ್
  12. ನ್ಯಾಯಮೂರ್ತಿ ಸಂಜಯ್ ಕರೋಲ್ ಲಿಂಕ್
  13. ನ್ಯಾಯಮೂರ್ತಿ ಸಂಜಯ್ ಕುಮಾರ್ ಲಿಂಕ್
  14. ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಲಿಂಕ್
  15. ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಲಿಂಕ್
  16. ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಲಿಂಕ್ 
  17. ನ್ಯಾಯಮೂರ್ತಿ ಎಸ್.ವೆಂಕಟನಾರಾಯಣ ಭಟ್ಟಿ ಲಿಂಕ್ 
  18. ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಾಸಿಹ್ ಲಿಂಕ್
  19. ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಲಿಂಕ್
  20. ನ್ಯಾಯಮೂರ್ತಿ ಮನಮೋಹನ್ ಲಿಂಕ್
  21. ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಲಿಂಕ್ 

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ, ಬಿ.ವಿ. ನಾಗರತ್ನ, ದೀಪಂಕರ್ ದತ್ತ, ಅಹ್ಸಾನುದ್ದೀನ್ ಅಮಾನುಲ್ಲಾ, ಮನೋಜ್ ಮಿಶ್ರಾ, ಅರವಿಂದ್ ಕುಮಾರ್, ಪ್ರಶಾಂತ್ ಕುಮಾರ್ ಮಿಶ್ರಾ, ಸತೀಶ್ ಚಂದ್ರ ಶರ್ಮಾ, ಪ್ರಸನ್ನ ಭಾಲಚಂದ್ರ ವರಾಳೆ, ಎನ್. ಕೋಟಿಶ್ವರ್ ಸಿಂಗ್, ಆರ್. ಮಹಾದೇವನ್, ಜೋಯ್ಮಲ್ಯ ಬಾಗ್ಚಿ ತಮ್ಮ ಆಸ್ತಿ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಈ ಹಿಂದೆ ಸುಪ್ರೀಂ ಕೋರ್ಟ್ ವೆಬ್‌ಸೈಟ್ ಸಿಜೆಐಗೆ ಆಸ್ತಿ ಘೋಷಣೆ ಮಾಡಿದ ನ್ಯಾಯಾಧೀಶರ ಹೆಸರುಗಳನ್ನು ಮಾತ್ರ ತೋರಿಸುತ್ತಿತ್ತು. 2009ರಲ್ಲಿ, ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಲಯವು ನ್ಯಾಯಾಧೀಶರು ಸಲ್ಲಿಸಿದ ಆಸ್ತಿ ವಿವರಗಳನ್ನು ಬಹಿರಂಗಪಡಿಸಲು ನಿರ್ಧರಿಸಿತ್ತು. ಆದಾಗ್ಯೂ, ಈ ಪ್ರಕ್ರಿಯೆಯು ಸ್ವಯಂಪ್ರೇರಿತ ಘೋಷಣೆಯನ್ನು ಒಳಗೊಂಡಿತ್ತು.

ಮಧ್ಯಪ್ರದೇಶ | ಬಿಜೆಪಿ ಪ್ರೇರಿತ ಕಟ್ಟುಕತೆ ‘ಲವ್ ಜಿಹಾದ್’ ತನಿಖೆಗೆ ಎಸ್‌ಐಟಿ ರಚನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -