Homeಮುಖಪುಟ5 ವರ್ಷಗಳಲ್ಲಿ ಒಳಚರಂಡಿ ಸ್ವಚ್ಛತೆ ವೇಳೆ 377 ಮಂದಿ ಸಾವು : ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ನ ಯಾವುದೇ...

5 ವರ್ಷಗಳಲ್ಲಿ ಒಳಚರಂಡಿ ಸ್ವಚ್ಛತೆ ವೇಳೆ 377 ಮಂದಿ ಸಾವು : ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ನ ಯಾವುದೇ ಘಟನೆ ವರದಿಯಾಗಿಲ್ಲ ಎಂದ ಕೇಂದ್ರ

- Advertisement -
- Advertisement -

ದೇಶದಲ್ಲಿ 2019 ರಿಂದ 2023ರ ನಡುವೆ ಒಟ್ಟು 377 ಜನರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಅಪಾಯಕಾರಿಯಾಗಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ರಾಮದಾಸ್ ಅಠಾವಳೆ, ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಿಷೇಧ ಮತ್ತು ಸ್ಕ್ಯಾವೆಂಜರ್‌ಗಳ ಪುನರ್ವಸತಿ ಕಾಯ್ದೆ-2013ರನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.

ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ನಲ್ಲಿ ತೊಡಗಿರುವ ಜನರ ಸಂಖ್ಯೆಯ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತಸಿದ ಅವರು, “ಪ್ರಸ್ತುತ ದೇಶದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಡೆಯುತ್ತಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ” ಎಂದಿದ್ದಾರೆ.

ಆದರೆ, ಸಚಿವರು ಕೊಟ್ಟಿರುವ ಲಿಖಿತ ಉತ್ತರದಲ್ಲಿ “ಕಳೆದ ಐದು ವರ್ಷಗಳಲ್ಲಿ, ಅಂದರೆ 2019 ರಿಂದ 2023 ರ ಅವಧಿಯಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಅಪಾಯಕಾರಿ ಶುಚಿಗೊಳಿಸುವಾಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 377 ಜನರು ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದ್ದಾರೆ.

ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಚಾಲ್ತಿಯಲ್ಲಿ ಇಲ್ಲದೆ ಇಷ್ಟು ಜನರು ಸಾಯಲು ಹೇಗೆ ಸಾಧ್ಯ? ಎಂದು ಸಚಿವ ಉತ್ತರ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ : ಕೃಷ್ಣ ಜನ್ಮಭೂಮಿ ಪ್ರಕರಣ: ಮಸೀದಿ ಸಮಿತಿ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷ ಕಾನೂನು : ಸಿಎಂ ಸಿದ್ದರಾಮಯ್ಯ

ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ...

ವೆನೆಜುವೆಲಾ ಮೇಲೆ ಅಮೆರಿಕ ದಾಳಿಗೆ ಖಂಡನೆ : ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಭಾರತದ ಎಡಪಕ್ಷಗಳು

ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ಆಕ್ರಮಣವನ್ನು ಭಾರತದ ಎಡಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಬಂಧನವನ್ನು ‘ಅಪಹರಣ’ ಎಂದು ಹೇಳಿದೆ. ಹಾಗೆಯೇ, ಅಮೆರಿಕದ...

ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 40 ಮಂದಿ ಸಾವು: ವರದಿ

ಶನಿವಾರ ನಡೆದ ದಾಳಿಯಲ್ಲಿ ವೆನೆಜುವೆಲಾದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ವೆನೆಜುವೆಲಾದ ಹಿರಿಯ ಅಧಿಕಾರಿಯೊಬ್ಬರು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ, ಅವರಲ್ಲಿ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ...

ಅತ್ಯಾಚಾರ-ಕೊಲೆ ಅಪರಾಧಿ ಗುರ್ಮೀತ್ ರಾಮ್ ರಹೀಮ್‌ಗೆ ಮತ್ತೆ 40 ದಿನಗಳ ಪೆರೋಲ್

ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರ ಮತ್ತು ಪತ್ರಕರ್ತನ ಹತ್ಯೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮತ್ತೊಮ್ಮೆ 40 ದಿನಗಳ ಪೆರೋಲ್ ಮಂಜೂರಾಗಿದೆ....

ವೆನೆಜುವೆಲಾ ಮೇಲೆ ಅಮೆರಿಕಾ ದಾಳಿ: ಕಳವಳ ವ್ಯಕ್ತಪಡಿಸಿದ ಭಾರತ: ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕರೆ

ನವದೆಹಲಿ: ಅಮೆರಿಕವು ತೈಲ ಸಮೃದ್ಧ ದೇಶದ ಮೇಲೆ ದಾಳಿ ಮಾಡಿ, ಅದರ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ಅಪಹರಿಸಿದ ನಂತರ, ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳು "ತೀವ್ರ ಕಳವಳಕಾರಿ...

ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್‌ರನ್ನು ನೇಮಿಸಿದ ಸುಪ್ರೀಂ ಕೋರ್ಟ್

ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಅಮೆರಿಕ ಸೇನೆ ಬಂಧಿಸಿರುವ ಹಿನ್ನೆಲೆ, ಹಂಗಾಮಿ ಅಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ವೆನಿಜುವೆಲಾದ ಸುಪ್ರೀಂ ಕೋರ್ಟ್...

ರ‍್ಯಾಗಿಂಗ್‌ಗೆ ದಲಿತ ವಿದ್ಯಾರ್ಥಿನಿ ಬಲಿ: ‘ಜಾತಿ ಮತ್ತು ಲಿಂಗ ಆಧಾರಿತ ಸಾಂಸ್ಥಿಕ ಹಿಂಸಾಚಾರದ ಗಂಭೀರ ನಿದರ್ಶನ’ ಎಂದ ಮಾನವ ಹಕ್ಕುಗಳ ಸಂಘಟನೆ

ಹಿಮಾಚಲ ಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ 19 ವರ್ಷದ ದಲಿತ ವಿದ್ಯಾರ್ಥಿನಿಯ ಸಾವಿನ ನಂತರ, ದಲಿತ ಹಕ್ಕುಗಳ ಸಂಘಟನೆಗಳು ಶುಕ್ರವಾರ ಮೂವರು ಹಿರಿಯ ವಿದ್ಯಾರ್ಥಿಗಳು ಮತ್ತು ಕಾಲೇಜು ಪ್ರಾಧ್ಯಾಪಕರನ್ನು ಬಂಧಿಸಬೇಕು ಮತ್ತು ಅಧಿಕಾರಿಗಳು ಅದಕ್ಕೆ...

ಫ್ರೀಡಂ ಫ್ಲೋಟಿಲ್ಲಾ ಸದಸ್ಯರ ಮೇಲೆ ಇಸ್ರೇಲಿ ಪಡೆಗಳಿಂದ ಲೈಂಗಿಕ ದೌರ್ಜನ್ಯ ಆರೋಪ : ಸ್ವತಂತ್ರ ತನಿಖೆ ಆಗ್ರಹ

ಗಾಝಾ ಮೇಲೆ ವಿಧಿಸಲಾಗಿದ್ದ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸಿದ ಫ್ಲೋಟಿಲ್ಲಾ ಹಡಗುಗಳನ್ನು ತಡೆದ ನಂತರ, ಅವುಗಳಲ್ಲಿದ್ದ ಜಗತ್ತಿನ ವಿವಿಧ ಭಾಗಗಳ ಹಲವು ಹೋರಾಟಗಾರರನ್ನು ಇಸ್ರೇಲ್ ಸೇನೆ ಬಂಧಿಸಿದೆ. ಈ ಬಂಧಿತರ ಮೇಲೆ ಇಸ್ರೇಲಿ...

‘ನನಗೆ, ನನ್ನ ಕುಟುಂಬಕ್ಕೆ ‘ಝಡ್‌’ ಶ್ರೇಣಿ ಭದ್ರತೆ ಒದಗಿಸಿ’: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನಾರ್ದನ ರೆಡ್ಡಿ ಪತ್ರ 

ಕೊಪ್ಪಳ: ಬಳ್ಳಾರಿಯಲ್ಲಿ ತಮ್ಮ ಮೇಲೆ "ಪೂರ್ವ ಯೋಜಿತ ಹತ್ಯೆ ಯತ್ನ" ನಡೆದಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ...

ಪೋಕ್ಸೋ ಪ್ರಕರಣದ ದೂರು ತಿರುಚಿದ ಪೊಲೀಸರು : ಸಂತ್ರಸ್ತೆಯ ತಾಯಿ ಆರೋಪ

​ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವೊಂದನ್ನು ದಾಖಲಿಸುವ ವೇಳೆ ಸಂತ್ರಸ್ತೆಯ ತಾಯಿ ನೀಡಿದ ಮೂಲ ದೂರನ್ನು ತಿರುಚಿ, ಪೊಲೀಸರು ತಮಗೆ ಇಷ್ಟ ಬಂದಂತೆ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ...