Homeಮುಖಪುಟಹಸಿವಿನಿಂದ ಬಳಲುತ್ತಿರುವ 4500 ಭೂಪಾಲ್ ಅನಿಲ ಸೋರಿಕೆ ಸಂತ್ರಸ್ಥ ವಿಧವೆಯರು

ಹಸಿವಿನಿಂದ ಬಳಲುತ್ತಿರುವ 4500 ಭೂಪಾಲ್ ಅನಿಲ ಸೋರಿಕೆ ಸಂತ್ರಸ್ಥ ವಿಧವೆಯರು

ಕಳೆದ ಎಂಟು ತಿಂಗಳಿನಿಂದ ಅನಿಲ ಸೋರಿಕೆ ಸಂತ್ರಸ್ಥರಾದ 4500 ವಿಧವೆಯರಿಗೆ ರಾಜ್ಯ ಸರ್ಕಾರ ಪಿಂಚಣಿಯನ್ನು ಸ್ಥಗಿತಗೊಳಿಸಿದೆ.

- Advertisement -
- Advertisement -

ಕಳೆದ ಎಂಟು ತಿಂಗಳಿಂದ ರಾಜ್ಯ ಸರ್ಕಾರ ಪಿಂಚಣಿಯನ್ನು ಸ್ಥಗಿತಗೊಳಿಸಿದ್ದರಿಂದ ಸುಮಾರು 4,500 ಭೋಪಾಲ್ ಅನಿಲ ಸೋರಿಕೆಯ ಸಂತ್ರಸ್ಥ ವಿಧವೆಯರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಅಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಪ್ರಸ್ತುತ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಬಿಜೆಪಿ ಸರ್ಕಾರ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದಿದೆಯಾರೂ ಪರಿಸ್ಥಿತಿ ಬದಲಾಗಿಲ್ಲ ಎನ್ನಲಾಗಿದೆ.

ಸಂತ್ರಸ್ತ ಅನಿಲ ಪೀಡಿತರಿಗೆ ಸಾಮಾಜಿಕ ಪುನರ್ವಸತಿ ಅಡಿಯಲ್ಲಿ ಪರಿಹಾರ ಮತ್ತು ಪುನರ್ವಸತಿ ಇಲಾಖೆಯಿಂದ ಪ್ರತಿ ತಿಂಗಳು 1,000 ರೂ. ನೀಡಲು, ಈ ಯೋಜನೆಗಾಗಿ ಕೇಂದ್ರ ಸರ್ಕಾರ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. 2011 ರ ಮೇ ತಿಂಗಳಲ್ಲಿ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಾಯಿತು.

ತಮ್ಮ ಪಿಂಚಣಿಯನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿ, ವಿಧವೆಯರ ಒಂದು ಸಣ್ಣ ಗುಂಪು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಮನೆಯ ಬಳಿ ಜುಲೈ 17 ರಂದು ಗ್ಯಾಸ್ ಪೀಡಿತ್ ನಿರಾಶ್ರಿತ್ ಪೆನ್ಷನ್ ಭೋಗಿ ಸಂಘರ್ಷ ಮೋರ್ಚಾ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಸಿತ್ತು.

ಫೋಟೋ ಕೃಪೆ: ನ್ಯೂಸ್ ಕ್ಲಿಕ್

ವಯಸ್ಸು ಮತ್ತು ಕಾಯಿಲೆಗಳಿಂದಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ ಪಿಂಚಣಿ ಮಾತ್ರವೇ ಬದುಕುಳಿಯುವ ಏಕೈಕ ಜೀವಸೆಲೆ ಎಂದು 60 ವರ್ಷದ ಈ ವಿಧವೆಯರು ಹೇಳಿದ್ದಾರೆ.

1984 ರ ಡಿಸೆಂಬರ್ 2-3 ರಂದು ವಿಷಕಾರಿ ಮೀಥೈಲ್ ಐಸೊಸೈನೈಡ್‌ಗೆ ಸೋರಿಕೆಯಾಗಿ ಹೆಚ್ಚಿನ ವಿಧವೆಯರು ರೋಗಗಳಿಂದ ಬಳಲುತ್ತಿದ್ದಾರೆ.

“ನಾನು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದೇನೆ ಮತ್ತು ದಶಕಗಳಿಂದ ನಿರಂತರ ಚಿಕಿತ್ಸೆಯಲ್ಲಿದ್ದೇನೆ. ನಾನು ಬಟ್ಟೆಗಳನ್ನು ಹೊಲಿಯುತ್ತಿದ್ದೆ, ಆದರೆ ಈಗ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ. ಪಿಂಚಣಿ ಮತ್ತು ಮಾಸಿಕ ಪಡಿತರವು ಬದುಕುಳಿಯುವ ಏಕೈಕ ಆಶಯವಾಗಿದೆ, ಆದರೆ 2019 ರ ಡಿಸೆಂಬರ್‌ನಿಂದ ನನಗೆ ಯಾವುದೇ ಹಣ ಬಂದಿಲ್ಲ” ಎಂದು 65 ವರ್ಷದ ಸಂತ್ರಸ್ತೆ ಸಾವಿತ್ರಿ ಬಾಯಿ ಹೇಳಿದ್ದಾರೆ.

2010 ರಲ್ಲಿ ಸಿಎಂ ಚೌಹಾನ್ ಮತ್ತು 2018 ರಲ್ಲಿ ಅನಿಲ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಶ್ವಸ್ ಸಾರಂಗ್ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಪಿಂಚಣಿ ಜೀವಿತಾವಧಿಯವರೆಗೂ ಮುಂದುವರಿಯುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಸ್ಥಗಿತಗೊಳಿಸಲಾಗಿದೆ ಎಂದು 67 ವರ್ಷದ ಇಂದಿರಾ ಹೇಳಿದ್ದಾರೆ.

ಗ್ಯಾಸ್ ಪೀಡಿತ್ ನಿರಾಶ್ರಿತ್ ಪೆನ್ಷನ್ ಭೋಗಿ ಸಂಘರ್ಷ ಮೋರ್ಚಾ ಇದರ ಅಧ್ಯಕ್ಷ, ಬಾಲಕ್ರಿಶನ್ ನಾಮ್ಡಿಯೊ, ಬೀಜೆಪಿ ನೇತೃತ್ವದ ಸರ್ಕಾರ ಕೊರೊನಾ ಸಾಂಕ್ರಮಿಕ್ಕ ಹಣಕಾಸಿನ ನೆರವು ಉಚಿತ ಆಹಾರ ಪೂರೈಸುತ್ತಿರುವಾಗ ಅನಿಲ ಪೀಡಿತ ವಿಧವೆಯರತ್ತ ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ.

“ಅನೇಕ ವಿಧವೆಯರು ಹಸಿವಿನಿಂದ ಬಳಲುತ್ತಿದ್ದಾರೆ, ಏಕೆಂದರೆ ಅವರಿಗೆ ಆರ್ಥಿಕವಾಗಿ ಬೆಂಬಲ ನೀಡಲು ಯಾರೂ ಇಲ್ಲ. ಅವರು ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹ ಕಷ್ಟದ ಸಮಯದಲ್ಲಿ ಅವರನ್ನು ಬೆಂಬಲಿಸುವ ಬದಲು ಸರ್ಕಾರ ಪಿಂಚಣಿಯನ್ನು ಸ್ಥಗಿತಗೊಳಿಸಿದೆ” ಎಂದು ನಾಮ್ಡಿಯೊ ಹೇಳಿದ್ದಾರೆ.

“ನಾವು ಸಿಎಂ ಚೌಹಾನ್ ಅವರ ಖಾಸಗಿ ಕಾರ್ಯದರ್ಶಿ ಸಂತೋಷ್ ಕುಮಾರ್ ಶರ್ಮಾ ಅವರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿದ್ದೇವೆ. ನಮ್ಮ ಬೇಡಿಕೆಗಳನ್ನು ಸಿಎಂಗೆ ರವಾನಿಸುವುದಾಗಿ ಅವರು ಭರವಸೆ ನೀಡಿದರು” ಎಂದು ಅವರು ಹೇಳಿದ್ದಾರೆ.

2016 ರಿಂದ 2017 ರ ನಡುವೆ, ಇಲಾಖೆಯು ಸುಮಾರು ಒಂದು ವರ್ಷದಿಂದ ಪಿಂಚಣಿಯನ್ನು ಸ್ಥಗಿತಗೊಳಿಸಿತ್ತು, ಆದರೆ ಪ್ರತಿಭಟನೆಯ ನಂತರ ಅದನ್ನು ಪುನರಾರಂಭಿಸಲಾಯಿತು.

ಅನಿಲ ಪರಿಹಾರ ಮತ್ತು ಪುನರ್ವಸತಿ ವಿಭಾಗದ ನಿರ್ದೇಶಕ ಬಸಂತ್ ಕುರ್ರೆ ಅವರನ್ನು ಸಂಪರ್ಕಿಸಿದಾಗ, “ಪಿಂಚಣಿ ಯೋಜನೆಯ ಅವಧಿ ಐದು ವರ್ಷಗಳಾಗಿದೆ. ಆದರೆ ಇದನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲಾಯಿತು. ಪ್ರಸ್ತುತ ಅದರ ಅನುದಾನದ ಹಣ ಮುಗಿದು ಹೋಗಿದೆ” ಎಂದು ಅವರು ಹೇಳಿದರು.

“ನಾವು ಪ್ರಸ್ತಾವನೆಯನ್ನು ಮುಖ್ಯಂತ್ರಿಯ ಅನುಮೋದನೆಗಾಗಿ ಸಿದ್ಧಪಡಿಸಿ ಕಳುಹಿಸುತ್ತೇವೆ. ಮುಖ್ಯಮಂತ್ರಿ ಅದಕ್ಕೆ ಅನುಮೋದನೆ ನೀಡಿ ನಿಧಿಯನ್ನು ಹಂಚಿದರೆ, ನಾವು ಪಿಂಚಣಿಯನ್ನು ಪುನರಾರಂಭಿಸುತ್ತೇವೆ” ಎಂದು ಅವರು ಹೇಳಿದ್ದಾರೆ.


ಓದಿ: ಮಧ್ಯಪ್ರದೇಶ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ-ಆತನ ಮೇಲೆಯೇ ದೂರು ದಾಖಲಿಸಿದ ಪೊಲೀಸರು


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...