Homeಎಕಾನಮಿಬಡವರ ನೆರವಿಗೆ 65,000 ಕೋಟಿ ಅಗತ್ಯವಿದೆ : ರಘುರಾಂ ರಾಜನ್‌ ಸಂದರ್ಶಿಸಿದ ರಾಹುಲ್‌

ಬಡವರ ನೆರವಿಗೆ 65,000 ಕೋಟಿ ಅಗತ್ಯವಿದೆ : ರಘುರಾಂ ರಾಜನ್‌ ಸಂದರ್ಶಿಸಿದ ರಾಹುಲ್‌

- Advertisement -
- Advertisement -

ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ರಾಹುಲ್ ಗಾಂಧಿ ಅವರು ಇಂದು ಆರ್‌ಬಿಐನ ಮಾಜಿ ಗರ್ವನರ್‌ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್ ಅವರನ್ನು ಸಂದರ್ಶಿಸಿದ್ದಾರೆ.

“ಬಡವರಿಗೆ ಸಹಾಯ ಮಾಡಲು ಎಷ್ಟು ಹಣ ಬೇಕಾಗುತ್ತದೆ ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ “ನಮಗೆ 65,000 ಕೋಟಿ ರೂ. ಬೇಕು. ಇದು ಬಡವರ ಪ್ರಾಣ ಉಳಿಸಲು” ಎಂದು ವಿಡಿಯೋ ಸಂದರ್ಶನದಲ್ಲಿ ರಘುರಾಮ್ ರಾಜನ್ ಉತ್ತರಿಸಿದ್ದಾರೆ.

ಅಲ್ಲದೇ “ಶಾಶ್ವತವಾಗಿ ಲಾಕ್‌ಡೌನ್ ಮುಂದುವರಿಸುವುದು ತುಂಬಾ ಸುಲಭ, ಆದರೆ ಅದು ಆರ್ಥಿಕತೆಗೆ ಸುಸ್ಥಿರವಾಗುವುದಿಲ್ಲ” ಎಂದು ರಘುರಾಂ ರಾಜನ್ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಲಾಕ್‌ಡೌನ್‌ ನಂತರ ಆರ್ಥಿಕತೆ ಚೇತರಿಕೆಯ ಕುರಿತು ಕಾಂಗ್ರೆಸ್‌ ಪಕ್ಷವು ಹಲವು ಆರ್ಥಿಕ ತಜ್ಞರು ಮತ್ತು ಬುದ್ಧಿಜೀವಿಗಳೊಂದಿಗೆ ವಿಡಿಯೋ ಸಂವಾದ ನಡೆಸಲು ತೀರ್ಮಾನಿಸಿದೆ. ಅದರ ಮೊದಲ ಹಂತವಾಗಿ ಇಂದು ಸಹ ರಾಹುಲ್‌ ಗಾಂಧಿ ರಘುರಾಂ ರಾಜನ್‌ರವರನ್ನು ಸಂದರ್ಶಿಸಿದ್ದಾರೆ.

ನೇರ ಸಂದರ್ಶನ ವೀಕ್ಷಿಸಲು ಕೆಳಗಿನ ರಾಹುಲ್‌ ಗಾಂಧಿ ಟ್ವಿಟ್ಟರ್‌ ಖಾತೆ ನೋಡಿ.

ಕಳೆದ ಎರಡು ದಿನಗಳಿಂದ 50 ಉದ್ದಿಮೆಪತಿಗಳ 68,000 ಕೋಟಿ ಸಾಲ Write Off ಮಾಡಿದ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ಟೀಕೆ ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಡವರ ನೆರವಿಗೆ 65,000 ಕೋಟಿ ಅಗತ್ಯವಿದೆ ಎಂಬ ರಘುರಾಂ ರಾಜನ್‌ರವರ ಹೇಳಿಕೆ ಮತ್ತಷ್ಟು ಚರ್ಚೆಗೆ ದಾರಿಮಾಡಿಕೊಡಲಿದೆ. ಅದು ಒಂದು ರೀತಿಯಲ್ಲಿ ಬಡವರಿಗೆ ಕೊಡಬೇಕಾದ ಅಷ್ಟು ಪ್ರಮಾಣದ ಹಣವನ್ನು ಬ್ಯಾಂಕುಗಳಿಗೆ ವಂಚಿಸಿ ದೇಶಬಿಟ್ಟು ಹೋಗಿರುವ ಬಂಡವಾಳಿಗರಿಗೆ ಮೋದಿ ಸರ್ಕಾರ ದಾನ ಮಾಡುತ್ತಿದೆ ಎಂಬ ಅಂಶವನ್ನು ಮುನ್ನಲೆಗೆ ತರಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ರಘುರಾಂ ರಾಜನ್ ಅವರನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ 2013 ರಲ್ಲಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿತ್ತು.


ಇದನ್ನು ಓದಿ: ಉದ್ದಿಮೆದಾರರ 68,607 ಕೋಟಿ ರೂ ಸಾಲ ಮನ್ನಾ: ಮೋದಿ ಸರ್ಕಾರ ಸಂಸತ್ತಿನಿಂದ ಸತ್ಯ ಮರೆಮಾಚಿದೆ – ರಾಹುಲ್

ಇದನ್ನೂ ಓದಿ: 50 ಬಂಡವಾಳಿಗರ ಸಾಲ Write Off: ರಾಹುಲ್‌ ದಾಳಿಗೆ ಉತ್ತರವಾಗಿ ನಿರ್ಮಲ ಸೀತಾರಾಮನ್‌ರವರ 13 ಟ್ವೀಟ್‌ಗಳು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...