Homeಮುಖಪುಟದೆಹಲಿ ಚುನಾವಣೆ: ಈವರೆಗೆ ಕಳೆದ ಬಾರಿಗಿಂತ ಕಡಿಮೆ ಮತದಾನ..

ದೆಹಲಿ ಚುನಾವಣೆ: ಈವರೆಗೆ ಕಳೆದ ಬಾರಿಗಿಂತ ಕಡಿಮೆ ಮತದಾನ..

ಶಹೀನ್ ಬಾಗ್‌ನ ಎಲ್ಲಾ ಐದು ಮತಗಟ್ಟೆಗಳು"ಅತೀಸೂಕ್ಷ್ಮ"...!!

- Advertisement -

ದೆಹಲಿ ಚುನಾವಣೆ ಪ್ರಾರಂಭವಾಗಿದ್ದು ಈವರೆಗೆ 16.04%ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 1.47 ಕೋಟಿ ಮತದಾರರು ಮತ ಚಲಾಯಿಸಲಿದ್ದು, ಕಣದಲ್ಲಿರುವ 672 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

70 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯು ಮೊದಲ ಮೂರು ಗಂಟೆಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದರು.

2015 ರಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 67.12% ರಷ್ಟು ಮತದಾನವನ್ನು ದಾಖಲಿಸಿತ್ತು.

81,05,236 ಪುರುಷ ಮತದಾರರು ಮತ್ತು 66,80,277 ಮಹಿಳಾ ಮತದಾರರು ಜೊತೆಗೆ 869 ತೃತೀಯ ಲಿಂಗ ಮತದಾರರನ್ನು ದೆಹಲಿ ಹೊಂದಿದೆ. ದೆಹಲಿಯ 2689 ಪ್ರದೇಶಗಳಲ್ಲಿ 13,571 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.

ಕಳೆದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವೂ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ದಾಖಲಿಸಿದರೆ.ಬಿಜೆಪಿ ಮೂರು ಸ್ಥಾನಗಳು ಮತ್ತು ಕಾಂಗ್ರೆಸ್ ಶೂನ್ಯ ಸಾಧನೆಯನ್ನು ಮಾಡಿತ್ತು.

ಪ್ರಸುತ ಎಎಪಿ ಎಲ್ಲಾ 70 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿ 67 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಮತ್ತು ಉಳಿದ ಮೂರು ಸ್ಥಾನಗಳನ್ನು ತನ್ನ ಮಿತ್ರ ಪಕ್ಷಗಳಾದ ಜನತಾದಳ (ಯುನೈಟೆಡ್)ಗೆ ಎರಡು ಮತ್ತು ಲೋಕ ಜನಶಕ್ತಿ ಪಕ್ಷಕ್ಕೆ (ಎಲ್ಜೆಪಿ) ಒಂದು ಸ್ಥಾನವನ್ನು ಬಿಟ್ಟು ಕೊಟ್ಟಿದೆ. ಕಾಂಗ್ರೆಸ್ 66 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ ತನ್ನ ಮಿತ್ರ ಪಕ್ಷ ರಾಷ್ಟ್ರ ಜನತಾದಳಕ್ಕೆ (ಆರ್‌ಜೆಡಿ) ನಾಲ್ಕು ಸ್ಥಾನಗಳನ್ನು ನೀಡಿದೆ.

ಕೇಜ್ರಿವಾಲ್ ಅವರ ಎಎಪಿ ಸತತ ಎರಡನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಗೆಲ್ಲಲು ಪ್ರಯತ್ನಿಸುತ್ತಿದೆ.

ಎಎಪಿ ಕಳೆದ ಐದು ವರ್ಷಗಳಲ್ಲಿ ಸ್ಥಳೀಯ ಆಡಳಿತ ಸಮಸ್ಯೆಗಳು ಮತ್ತು ಅದರ ಕುರಿತಾಗಿ ಕೇಂದ್ರೀಕರಿಸಿ ಪ್ರಚಾರ ಮಾಡಿದರೆ, ಬಿಜೆಪಿ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯವನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ಚುನಾವಣಾ ಪ್ರಚಾರ ಮಾಡಿತ್ತು.

ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪ್ರತಿಷ್ಠಿತ ನವದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ, ಬಿಜೆಪಿ ಅವರ ವಿರುದ್ಧ ಸುನಿಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ, ಕಾಂಗ್ರೆಸ್ ನಿಂದ ರೋಮೇಶ್ ಸಬ್ಬರ್ವಾಲ್ ಅವರು ಸ್ಪರ್ದಿಸುತ್ತಿದ್ದಾರೆ.

ಎಎಪಿಯ ದಿಲೀಪ್ ಪಾಂಡೆ ತಿಮಾರ್‌ಪುರದಿಂದ, ಕಲ್ಕಾಜಿಯಿಂದ ಅತಿಶಿ, ರಾಜೇಂದರ್ ನಗರದಿಂದ ರಾಘವ್ ಚಾಧಾ ಸ್ಪರ್ಧಿಸುತ್ತಿದ್ದಾರೆ.

ರೋಹಿಣಿಯಿಂದ ವಿಜೇಂದರ್ ಗುಪ್ತಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮಾಜಿ ಎಎಪಿ ಮುಖಂಡ ಕಪಿಲ್ ಮಿಶ್ರಾ ಈ ಚುನಾವಣೆಯಲ್ಲಿ ಮಾಡೆಲ್ ಟೌನ್‌ನ ಬಿಜೆಪಿ ಅಭ್ಯರ್ಥಿ. ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಹರಿ ನಗರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಗಾಂಧಿ ನಗರದಿಂದ ಅರವಿಂದರ್ ಸಿಂಗ್ ಲವ್ಲಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಮಾಜಿ ಎಎಪಿ ಮುಖಂಡ ಅಲ್ಕಾ ಲಾಂಬಾ ಚಾಂದನಿ ಚೌಕ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹರೂನ್ ಯೂಸುಫ್ ಬಲ್ಲಿಮಾರನ್ ನಿಂದ ಸ್ಪರ್ಧಿಸುತ್ತಿದ್ದಾರೆ.

ಎಲ್ಲಾ 70 ಅಸೆಂಬ್ಲಿಗಳಲ್ಲಿ ಶಾಂತಿಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 190 ಗುಂಪುಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, 19,000 ಹೋಮ್ ಗಾರ್ಡ್ ಮತ್ತು 42,000 ದೆಹಲಿ ಪೊಲೀಸ್ ಸಿಬ್ಬಂದಿ ಸಹ ಕರ್ತವ್ಯದಲ್ಲಿದ್ದಾರೆ.

ಒಟ್ಟು 3,141 ಮತಗಟ್ಟೆಗಳಿದ್ದು, 144 ಸೂಕ್ಷ್ಮ ಮತಗಟ್ಟೆಗಳು ಹಾಗು 102ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ಶಹೀನ್ ಬಾಗ್‌ನ ಎಲ್ಲಾ ಐದು ಮತಗಟ್ಟೆಗಳನ್ನು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) “ಅತಿ ಸೂಕ್ಷ್ಮ” ಎಂದು ಘೋಷಿಸಿದ್ದಾರೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares