ಹಿಂದಿ ಭಾಷೆಯ ಹಾರ್ಟ್ ಲ್ಯಾಂಡ್ ಎಂದು ಕರೆಯಲ್ಪಡುವ ಉತ್ತರಪ್ರದೇಶದಲ್ಲಿ ನಡೆಸಲಾದ 10 ಮತ್ತು 12 ನೇ ತರಗತಿಗಳ ಯುಪಿ ಸೆಕೆಂಡರಿ ಬೋರ್ಡ್ ಪರೀಕ್ಷೆಯಲ್ಲಿ ಸುಮಾರು 7.97 ಲಕ್ಷ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಪರೀಕ್ಷಾ ಫಲಿತಾಂಶಗಳನ್ನು ಶನಿವಾರ ಪ್ರಕಟಿಸಲಾಗಿದೆ.
ಮಂಡಳಿಯ ಅಧಿಕಾರಿಗಳ ಪ್ರಕಾರ, 10 ನೇ ತರಗತಿಯ ಹಿಂದಿಯಲ್ಲಿ 2.70 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ ಅಂಕಗಳನ್ನು ಗಳಿಸುವಲ್ಲಿ ವಿಫಲರಾಗಿದ್ದರೆ, 12 ನೇ ತರಗತಿಯಲ್ಲಿ 5.28 ಲಕ್ಷ ವಿದ್ಯಾರ್ಥಿಗಳು ತಮ್ಮ ಹಿಂದಿ ಪತ್ರಿಕೆಯಲ್ಲಿ ವಿಫಲರಾಗಿದ್ದಾರೆ.
12 ನೇ ತರಗತಿಗೆ ಹಿಂದಿ ಪ್ರತಿಗಳನ್ನು ಮೌಲ್ಯಮಾಪನ ಮಾಡಿದ ಶಿಕ್ಷಕರೊಬ್ಬರು ಹೇಳಿದ ಪ್ರಕಾರ “ಅನೇಕ ಮಕ್ಕಳಿಗೆ ‘ಆತ್ಮವಿಶ್ವಾಸ್’ ನಂತಹ ಸರಳ ಪದಗಳು ತಿಳಿದಿರಲಿಲ್ಲ ಮತ್ತು ತಪ್ಪಾದ ಅಕ್ಷರಗಳಲ್ಲಿ ‘confidence’ ಎಂದು ಬರೆದಿದ್ದಾರೆ. ಅವರಲ್ಲಿ ಕೆಲವರು ‘ಯಾತ್ರ’ ಎಂಬುದರ ಬದಲಾಗಿ ’suffer’ ಎಂದು ಬರೆದಿದ್ದಾರೆ. ಇದು ಅವರ ಭಾಷೆಯ ಜ್ಞಾನದ ಮಟ್ಟವನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದರು.
ಮುಂದಿನ ಜೀವನದಲ್ಲಿ ಭವಿಷ್ಯವನ್ನು ನೀಡದ ಭಾಷೆಯನ್ನು ಅಧ್ಯಯನ ಮಾಡುವ ಅಗತ್ಯವಿಲ್ಲ ಎಂದು ವಿಧ್ಯಾರ್ಥಿಗಳು ಭಾವಿಸುವುದರಿಂದ ಹೆಚ್ಚಿನನವರು ಹಿಂದಿಯನ್ನು ನಿರ್ಲಕ್ಷಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಹಿಂದಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷ ಸುಮಾರು 10 ಲಕ್ಷ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಯುಪಿ ಮಂಡಳಿಯ ಮಂಡಳಿ ಪರೀಕ್ಷೆಯಲ್ಲಿ ಸುಮಾರು 56 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಓದಿ: ಉತ್ತರ ಪ್ರದೇಶ: ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದಕ್ಕೆ ದಲಿತ ಬಾಲಕನನ್ನು ಗುಂಡಿಕ್ಕೆ ಹತ್ಯೆ


