ಮುಂಬೈನ ವಲಸೆ ಕಾರ್ಮಿಕರಿಗಾಗಿ 99 ವರ್ಷದ ಅಜ್ಜಿಯೊಬ್ಬರು ಆಹಾರ ಪ್ಯಾಕೆಟ್‌ಗಳನ್ನು ಸಿದ್ಧಪಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಅಜ್ಜಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
“ಕೆಲವರು ಹುಟ್ಟುತ್ತಲೇ ಮುದುಕರು, ಕೆಲವು ಸಾಯುವವರೆಗೂ ಯುವಜನರು” ಎಂಬ ಮಾತನ್ನು ಈ ಅಜ್ಜಿ ನಿಜ ಮಾಡಿದ್ದಾರೆ. ಶಕ್ತಿವಂತರು, ಸಿರಿವಂತರು ತಾವಾಯಿತು, ತಮ್ಮ ಪಾಡಾಯಿತು ಎಂದಿರುವಾಗ ಹಸಿದವರಿಗಾಗಿ ಈ 99 ವರ್ಷದ ಅಜ್ಜಿಯ ಶ್ರಮವು ಮಹತ್ವವಾದುದು ಎಂಬುದನ್ನು ನೆಟ್ಟಿಗರು ಒತ್ತಿ ಹೇಳಿದ್ದಾರೆ.
ಈ ವಿಡಿಯೋವನ್ನು ಜಹೀದ್ ಎಫ್. ಇಬ್ರಾಹಿಂ ಅವರು ಟ್ವಿಟ್ಟರ್ “ನನ್ನ 99 ವರ್ಷದ ಫುಪ್ಪಿ (ಚಿಕ್ಕಮ್ಮ) ಮುಂಬೈನ ವಲಸೆ ಕಾರ್ಮಿಕರಿಗಾಗಿ ಆಹಾರ ಪ್ಯಾಕೆಟ್‌ಗಳನ್ನು ತಯಾರಿಸುತ್ತಿದ್ದಾಳೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವೃದ್ಧ ಮಹಿಳೆ ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ತನ್ನ ಪಾತ್ರವನ್ನು ಹೇಗೆ ಶ್ರದ್ಧೆಯಿಂದ ಮಾಡುತ್ತಿದ್ದಾಳೆ ಎಂದು ವೀಡಿಯೊ ವಿವರಿಸುತ್ತದೆ.
ವೀಡಿಯೊದಲ್ಲಿ ಅಜ್ಜಿಯು ಸಾವಧಾನದಿಂದ ರೊಟ್ಟಿ ಮತ್ತು ಪಲ್ಯವನ್ನು ಅಲ್ಯೂಮಿನಿಯಂ ಪೇಪರ್‌ನಲ್ಲಿ ಕಟ್ಟಿ, ನಂತರ ಅದನ್ನು ಇತರ ಪ್ಯಾಕೆಟ್‌ಗಳೊಂದಿಗೆ ಇಡುವುದನ್ನು ಕಾಣಬಹುದಾಗಿದೆ.
My 99 year old phuppi prepares food packets for migrant workers in Bombay. pic.twitter.com/jYQtmJZx8k
— Zahid F. Ebrahim (@zfebrahim) May 29, 2020
ಮೇ 29ರಂದು ಹಂಚಿಕೊಂಡಿರುವ ಇದುವರೆಗೂ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. 22,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ ಮತ್ತು 3,000 ರಿಟ್ವೀಟ್‌ಗಳನ್ನು ಹೊಂದಿದೆ.
“ಅವರಿಗೆ ಹ್ಯಾಟ್ಸ್ ಆಫ್. ಅವರ ಉತ್ತಮ ಆರೋಗ್ಯ ಮತ್ತು ದೀರ್ಘ ಜೀವನವನ್ನು ಬಯಸುತ್ತೇನೆ” ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ. “ನಿಮ್ಮ ಫಪ್ಪಿ ಪ್ರೀತಿ,” ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಎಂತಹ ಅದ್ಭುತ ವ್ಯಕ್ತಿ!” ಎಂದು ಮೂರನೇ ವ್ಯಕ್ತಿ ತಿಳಿಸಿದರೆ “ಅತ್ಯಂತ ಸುಂದರ. ಅವಳ ಬಗ್ಗೆ ಪ್ರೀತಿ ಮತ್ತು ಗೌರವ” ಎಂದು ನಾಲ್ಕನೆಯವರು ಟ್ವೀಟ್ ಮಾಡಿದ್ದಾರೆ. “ಕ್ರಿಯೆಯಲ್ಲಿ ಪ್ರೀತಿ. ವಿಶ್ವದ ಪ್ರತಿಯೊಬ್ಬರೂ ಪ್ರೀತಿಯನ್ನು ತೋರಿಸಬೇಕೆಂದು ಹಾರೈಸುತ್ತೇನೆ” ಎಂದು ಐದನೆಯವರು ಟ್ವೀಟ್ ಮಾಡಿದ್ದಾರೆ.
ಇವುಗಳನ್ನು ಜಹೀದ್ ಎಫ್. ಇಬ್ರಾಹಿಂರವರು ತಮ್ಮ ಚಿಕ್ಕಮ್ಮನಿಗೆ ತೋರಿಸಿದ್ದು, ಟ್ವಿಟ್ಟರ್‌ನಲ್ಲಿ ವ್ಯಕ್ತಪಡಿಸಿದ ಅತಿಯಾದ ಪ್ರೀತಿಯಿಂದ ಅವಳು ವಿನಮ್ರಳಾಗಿದ್ದಾಳೆ ಮತ್ತು ಎಲ್ಲರಿಗೂ ಧನ್ಯವಾದಗಳು ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ.
Update from Phuppi in Bombay. She is humbled by the overwhelming love expressed on Twitter and says thank you to all. But she is a little cross with me. She says "Aray thori age young karnay ka tha na." https://t.co/cGUSeJ3Owu
— Zahid F. Ebrahim (@zfebrahim) May 30, 2020
“ನಿಮ್ಮ ಫುಪ್ಪಿಗೆ ತುಂಬಾ ಪ್ರೀತಿ. ಅವರು ಸ್ಫೂರ್ತಿ ಎಂದು ದಯವಿಟ್ಟು ಅವರಿಗೆ ಹೇಳಿ ”ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ ಮತ್ತು ಇತರರು ಅದೇ ಕಲ್ಪನೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಯಸ್ಸಾದ ಮಹಿಳೆ ನಿಜಕ್ಕೂ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಬರೆದಿದ್ದಾರೆ.
ಅವರ ಬಗ್ಗೆ ನಿಮಗೇನು ಅನಿಸುತ್ತದೆ?
ಇದನ್ನೂ ಓದಿ: ಸೋನು ಸೂದ್ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್


