Homeಮುಖಪುಟಎಷ್ಟು ಬೆಂಕಿ ಹಚ್ಚಬಲ್ಲಿರಿ ನೀವು?

ಎಷ್ಟು ಬೆಂಕಿ ಹಚ್ಚಬಲ್ಲಿರಿ ನೀವು?

- Advertisement -
- Advertisement -

ನಿಮ್ಮ ಬೆಂಕಿ
ಪ್ರಾರ್ಥನಾ ಮಂದಿರಗಳಿಗೆ ನುಗ್ಗಿದೆಯಷ್ಟೆ,
ಪ್ರಾರ್ಥನೆಗಳು ನಿಂತಿಲ್ಲ.

ನಿಮ್ಮ ಬೆಂಕಿ
ಪ್ರೇಮಿಗಳನ್ನು ಅಟ್ಟಾಡಿಸಿದೆಯಷ್ಟೆ,
ಅವರ ಪ್ರೀತಿ ಕಮ್ಮಿಯಾಗಿಲ್ಲ.

ನಿಮ್ಮ ಬೆಂಕಿ
ಆಹಾರವನ್ನು ಕಸಿದಿದೆಯಷ್ಟೆ,
ಅವರ ರಟ್ಟೆಯ ಬಲ ಮುರಿದಿಲ್ಲ.

ಎಷ್ಟು ಬೆಂಕಿ ಹಚ್ಚಬಲ್ಲಿರಿ ನೀವು? | ವಿಲ್ಮಾ ಬಂಟ್ವಾಳ | Naanu gauri

ನಿಮ್ಮ ಬೆಂಕಿ
ಪಠ್ಯ ಪುಸ್ತಕಗಳಿಗೆ ಹಬ್ಬಿ
ಸಂವಿಧಾನದ ಪುಟವನ್ನು ಭಸ್ಮಗೊಳಿಸಿದೆಯಷ್ಟೆ,
ಒಂದಕ್ಷರವೂ ಮಾಸಿಲ್ಲ.

ನಿಮ್ಮ ಬೆಂಕಿ
ಹಿಜಾಬುಗಳಿಗೆ ಹಬ್ಬಿದೆಯಷ್ಟೆ,
ಶತಮಾನಗಳಿಂದ ಮೌನವಾಗಿದ್ದ
ಸಹಸ್ರಾರು ನಂಗೇಲಿಯರು
ಇಂದು ಎದೆಯುಬ್ಬಿಸಿ ನಿಂತಿದ್ದಾರೆ!

ಇದನ್ನೂ ಓದಿ: ಅಜಾತಶತ್ರು? ಆಹಾ ಗೆಳೆಯನೇ ಇದು ಅತ್ಯಂತ ಕೆಟ್ಟ ಬಿರುದು!- ‘ಭಗತ್‌ ಸಿಂಗ್ ಜೈಲ್ ಡೈರಿ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಒಂದು ಬಳಿಷ್ಠ ಕವನ! ಬೇಜವಾಬ್ದಾರಿ ಗೂಂಡಾಗಳಿಗೆ ಒಂದು ಉನ್ನತ ಉತ್ತರ!!

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...