Homeಮುಖಪುಟಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಗೆಲುವು ನ್ಯಾಯಯುತವಲ್ಲ: ಮಾಜಿ ಬಿಜೆಪಿ ನಾಯಕ

ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಗೆಲುವು ನ್ಯಾಯಯುತವಲ್ಲ: ಮಾಜಿ ಬಿಜೆಪಿ ನಾಯಕ

- Advertisement -
- Advertisement -

ಪಶ್ಚಿಮ ಬಂಗಾಳದ 2021 ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದು ನ್ಯಾಯಯುತವಲ್ಲ ಎಂದು ಹೇಳುವ ಮೂಲಕ ಹಿರಿಯ ನಾಯಕ ಜಾಯ್ ಪ್ರಕಾಶ್ ಮಜುಂದಾರ್ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಬಿಜೆಪಿ ನಾಯಜಕ ಸುವೇಂದು ಅಧಿಕಾರಿ ಈಗ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹಿರಿಯ ನಾಯಕ ಜಾಯ್ ಪ್ರಕಾಶ್ ಮಜುಂದಾರ್ ಬಿಜೆಪಿಯನ್ನು ತೊರೆದು ಟಿಎಂಸಿಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಈ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಯನ್ನು ಮಾಜಿ ರಾಜ್ಯ ಸಚಿವ ರಾಜೀವ್ ಬಂಡೋಪಾಧ್ಯಾಯ ಕೂಡ ಪುಷ್ಟಿಕರಿಸಿದ್ದಾರೆ.

ಜಾಯ್ ಪ್ರಕಾಶ್ ಮಜುಂದಾರ್ ಅವರನ್ನು “ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ” ಜನವರಿಯ ಕೊನೆಯ ವಾರದಲ್ಲಿ ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು.

“ನಂದಿಗ್ರಾಮ ಗೆಲ್ಲಲು ಹಲವು ತಂತ್ರಗಳನ್ನು ಬಳಸಬೇಕಾಯಿತು ಎಂದು ಮೇ 2 ರ ರಾತ್ರಿ ಸುವೇಂದು ಅಧಿಕಾರಿ ಹೇಳಿದ್ದು ನನಗೆ ನೆನಪಿದೆ” ಎಂದು ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ತೀವ್ರ ಟೀಕಾಕಾರರಾಗಿದ್ದ ಟಿಎಂಸಿಯ ನೂತನ ಉಪಾಧ್ಯಕ್ಷ, ಜಾಯ್ ಪ್ರಕಾಶ್ ಮಜುಂದಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸದಂತೆ ಸುವೇಂದುಗೆ ಬಿಜೆಪಿ ನಾಯಕರ ಮನವಿ

“ನಂದಿಗ್ರಾಮ್‌ನಲ್ಲಿ ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿರಲಿಲ್ಲ. ಮಮತಾ ಬ್ಯಾನರ್ಜಿಯವರನ್ನು ಆರಂಭದಲ್ಲಿ ವಿಜೇತ ಎಂದು ಘೋಷಿಸಲಾಗಿತ್ತು, ಆದರೆ, ಕೈ ಚಳಕದಿಂದಾಗಿ ಸುವೇಂದು ಅಧಿಕಾರಿ ಇದ್ದಕ್ಕಿದ್ದಂತೆ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು” ಎಂದು ಮಜುಂದಾರ್ ಹೇಳಿದ್ದಾರೆ.

ಇನ್ನು, ದೊಮ್‌ಜೂರ್‌ನಿಂದ (Domjur) ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋಲುಕಂಡಿದ್ದ ಮಾಜಿ ರಾಜ್ಯ ಸಚಿವ ರಾಜೀವ್ ಬಂಡೋಪಾಧ್ಯಾಯ ಕೂಡ ಜಾಯ್ ಪ್ರಕಾಶ್ ಮಜುಂದಾರ್ ಅವರ ಹೇಳಿಕೆಗಳು 100 ಪ್ರತಿಶತ ನಿಜವೆಂದು ಪ್ರತಿಪಾದಿಸಿದ್ದಾರೆ. “ಸುವೇಂದು ಅಧಿಕಾರಿಯನ್ನು ನ್ಯಾಯಯುತವಾಗಿ ವಿಜೇತ ಎಂದು ಘೋಷಿಸಲಾಗಿಲ್ಲ ಎಂದು ನನಗೆ ತಿಳಿದಿದೆ. ಅದಕ್ಕೆ ನಾನು ಭರವಸೆ ನೀಡಬಲ್ಲೆ” ಎಂದಿದ್ದಾರೆ.

ನಾಯಕರ ವಿವಾದಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಬಂಗಾಳಿ ಭಾಷೆಯಲ್ಲಿ ಟ್ವಿಟರ್ ಪೋಸ್ಟ್‌ ಮಾಡಿ, ತೃಣಮೂಲ ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿಯನ್ನು “ಸುಲಿಗೆಕೋರ” ಪಕ್ಷ ನಡೆಸಿದ “ಪ್ರಹಸನ” ಎಂದು ಬಣ್ಣಿಸಿದ್ದಾರೆ. ಸತ್ಯೇಂದ್ರ ನಾಥ್ ದತ್ತಾ ಅವರ ಪ್ರಸಿದ್ಧ ಬಂಗಾಳಿ ಕವಿತೆಯನ್ನು ಹಂಚಿಕೊಂಡಿರುವ ಅವರು, ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.


ಇದನ್ನೂ ಓದಿ: ಬಿಜೆಪಿಯ ಗೆಲುವು ಜನಾದೇಶವಲ್ಲ; ಯಂತ್ರೋಪಕರಣಗಳ ಆದೇಶ: ಮಮತಾ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಂದ್ರೆ ಬಿಜೆಪಿ ಇರುತ್ತಿದ್ದಿದ್ದರೆ ನ್ಯಾಯಸಮ್ಮತವಾಗಿ ಇದೆಯೇ………..,,?

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು...

0
ಮಣಿಪುರ ಹಿಂಸಾಚಾರದ ಸಮಯದಲ್ಲಿ ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳ ಉಲ್ಲೇಖವಾಗಿದ್ದು, ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಪೊಲೀಸರೇ ಒಪ್ಪಿಸಿದ್ದಾರೆ ಎಂದು ತಿಳಿಸಿದೆ. ಪೊಲೀಸರ...