ಗ್ಯಾಂಗ್‌ಸ್ಟರ್‌ಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲು ಆಂಬುಲೆನ್ಸ್ ಬಳಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ರಾಜ್ಯದ ಬಿಜೆಪಿ ನಾಯಕಿ ಡಾ. ಅಲ್ಕಾ ರೈ ಮತ್ತು ಅವರ ಸಹೋದರ ಶೇಷನಾಥ್ ರೈ ಅವರನ್ನು ಬಂಧಿಸಿದ್ದಾರೆ.
ಮುಖ್ತಾರ್ ಅನ್ಸಾರಿ ಆಂಬ್ಯುಲೆನ್ಸ್ ಪ್ರಕರಣ ಎಂದು ಕರೆಯಲ್ಪಡುವ ಘಟನೆಯಲ್ಲಿ ಜೈಲಿನಿಂದ ಪಂಜಾಬ್ ನ್ಯಾಯಾಲಯಕ್ಕೆ ಪ್ರಯಾಣಿಸಲು ಆಂಬ್ಯುಲೆನ್ಸ್ ಬಳಸಿದ ಆರೋಪದ ಮೇಲೆ ಪೊಲೀಸರು ಮುಖ್ತಾರ್ ಅನ್ಸಾರಿ ಮತ್ತು ಇತರ 12 ಜನರ ವಿರುದ್ಧ ದರೋಡೆ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಗ್ಯಾಂಗ್‌ಸ್ಟರ್ ಆಗಿದ್ದ ಮತ್ತು ಸದ್ಯ ರಾಜಕಾರಣಿಯಾಗಿ ಬದಲಾಗಿರುವ ಮುಖ್ತಾರ್ ಅನ್ಸಾರಿಗೆ ಈ ಇಬ್ಬರೂ ಬಿಜೆಪಿ ನಾಯಕರು ಪಂಜಾಬ್‌ನ ರೋಪರ್ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರಾಗಲು ತಮ್ಮ ಪ್ರಭಾವ ಬಳಸಿ ಆಂಬುಲೆನ್ಸ್ ಒದಗಿಸಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು.
ಡಾ. ಅಲ್ಕಾ ರೈ ಮತ್ತು ಅವರ ಸಹೋದರ ಶೇಷನಾಥ್ ರೈ ಈ ಇಬ್ಬರು ಆರೋಪಿಗಳನ್ನು ಮೌಯುವಿನಿಂದ ಬಾರಂಬಂಕಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ತಾರ್ ಅನ್ಸಾರಿಯನ್ನು ಪ್ರಸ್ತುತ ಬಂಡ ಜೈಲಿನಲ್ಲಿರಸಲಾಗಿದೆ.
ಇದನ್ನೂ ಓದಿ; ಆಸ್ಕರ್ ವೇದಿಕೆಯಲ್ಲಿ ನಿರೂಪಕನಿಗೆ ಕಪಾಳಮೋಕ್ಷ ಪ್ರಕರಣ: ಕ್ಷಮೆಯಾಚಿಸಿದ ನಟ ವಿಲ್ ಸ್ಮಿತ್


