ಅಸ್ಸಾಂ ಜೈಲಿನಿಂದ ಬಿಡುಗಡೆಯಾಗಿರುವ ದಲಿತ ಹೋರಾಟಗಾರ, ಶಾಸಕ ಜಿಗ್ನೇಶ್ ಮೇವಾನಿ, ನನ್ನ ಬಂಧನದ ಹಿಂದೆ ಗುಜರಾತ್-ಅಸ್ಸಾಂ ಸರ್ಕಾರಗಳ ಪಿತೂರಿಯಿದೆ ಎಂದು ಕಿಡಿಕಾರಿದ್ದಾರೆ.
ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ನನ್ನ ವ್ಯಕ್ತಿತ್ವ ನಾಶಪಡಿಸಲು ಮತ್ತು ಮಾನಹಾನಿ ಮಾಡುವ ಉದ್ದೇಶದಿಂದ ಪೂರ್ವ ಯೋಜಿತ ಪಿತೂರಿ ನಡೆಸಲಾಗಿದೆ. ಅದಕ್ಕಾಗಿ ಪೊಲೀಸರು ನನ್ನನ್ನು ಬಂಧಿಸಲು ಒಂದೇ ದಿನ 2500 ಕಿ,ಮೀ ಕ್ರಮಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ನಾನು 56 ಇಂಚಿನ ವ್ಯಕ್ತಿಯನ್ನು ಹೇಡಿ ಎಂದು ಕರೆಯುತ್ತೇನೆ. ಮಹಿಳೆಯೊಬ್ಬರನ್ನು ಬಳಸಿಕೊಂಡು ನನ್ನ ವಿರುದ್ಧ ಸುಳ್ಳು ಪ್ರಕರಣ ಹಾಕಲಾಗಿದೆ. ಕೆಲ ಗೋಡ್ಸೆ ಭಕ್ತರು ಪ್ರಧಾನಿ ಕಾರ್ಯಾಲಯದಲ್ಲಿದ್ದಾರೆ, ಅವರೆ ನನ್ನ ಬಂಧನಕ್ಕೆ ನೇರ ಕಾರಣ ಎಂದು ಮೇವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮತ್ತು ನನ್ನ ತಂಡದ ಸದಸ್ಯರಿಂದ ವಶಪಡಿಸಿಕೊಂಡಿರುವ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಸರ್ಕಾರವು “ಏನನ್ನಾದರೂ ತೂರಿಸಿರುವ” ಎಲ್ಲ ಅವಕಾಶಗಳಿವೆ. ಆದರೆ ನಾನು ಫ್ಲವರ್, ಫಯರ್ ಆಗಿದ್ದು ಸರ್ಕಾರದ ಎದುರು ತಗ್ಗುವ ಮಾತೆ ಇಲ್ಲ ಎಂದು ಪುಷ್ಪ ಸಿನಿಮಾದ ಸಂಭಾಷಣೆಯನ್ನು ಅನುಕರಿಸಿದ್ದಾರೆ.
ಗುಜರಾತ್‌ನಲ್ಲಿ 22 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಆದರೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ, ಯಾವುದೇ ಬಂಧನವಾಗಿಲ್ಲ ಅಥವಾ ಯಾವುದೇ ತನಿಖೆ ನಡೆಸಲಾಗಿಲ್ಲ. ಅದೇ ರೀತಿ ಮುಂದ್ರಾ ಬಂದರಿನಲ್ಲಿ ಸಿಕ್ಕಿದ ಬೃಹತ್ ಮಾದಕ ದ್ರವ್ಯ ಸಾಗಣೆಯ ಪ್ರಕರಣದ ಬಗ್ಗೆ ಯಾವುದೇ ತನಿಖೆಯಾಗಲಿಲ್ಲ. ದಲಿತ ಮಹಿಳೆಯೊಬ್ಬರು ಗುಜರಾತ್ ಸಚಿವರ ವಿರುದ್ಧ ಅತ್ಯಾಚಾರದ ಆರೋಪ ಮಾಡಿದರೂ ಅದರ ಬಗ್ಗೆ ತನಿಖೆಗಳು ಅಥವಾ ಬಂಧನಗಳು ನಡೆದಿಲ್ಲ. ಧರಮ್ ಸಂಸದ್‌ನಲ್ಲಿ ನಿರ್ದಿಷ್ಟ ಸಮುದಾಯದ ನರಮೇಧಕ್ಕೆ ಕರೆ ನೀಡಲಾಯಿತು ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ನನ್ನನ್ನು ಮಾತ್ರ ಏಕೆ ಬಂಧಿಸಲಾಯಿತು ಎಂದು ಜಿಗ್ನೇಶ್ ಕಿಡಿಕಾರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನನ್ನ ಟ್ವೀಟ್ ಸರಳವಾಗಿತ್ತು. ಶಾಂತಿ ಮತ್ತು ಸೌಹಾರ್ದತೆಗಾಗಿ ಮನವಿ ಮಾಡುವಂತೆ ನಾನು ಪ್ರಧಾನಿಯನ್ನು ಕೇಳಿದ್ದೆ. ಅದಕ್ಕಾಗಿ ಅವರು ನನ್ನನ್ನು ಬಂಧಿಸಿದರು. ಇದು ಏನನ್ನು ತೋರಿಸುತ್ತದೆ? ಇದು ನನ್ನನ್ನು ನಾಶಮಾಡಲು ಪೂರ್ವ ಯೋಜಿತ ಸಂಚು ಅಲ್ಲವೇ? ನನಗೆ ಎಫ್‌ಐಆರ್‌ನ ಪ್ರತಿಯನ್ನು ನೀಡಲಾಗಿಲ್ಲ. ನನ್ನ ವಿರುದ್ಧದ ಸೆಕ್ಷನ್‌ಗಳನ್ನು ನನಗೆ ತಿಳಿಸಿಲ್ಲ. ನನ್ನ ವಕೀಲರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಶಾಸಕನಾಗಿ ನನ್ನ ವಿಶೇಷತೆಯನ್ನು ಕಡೆಗಣಿಸಲಾಗಿದೆ. ನನ್ನ ಬಂಧನದ ಬಗ್ಗೆ ಗುಜರಾತ್ ಅಸೆಂಬ್ಲಿಯ ಸ್ಪೀಕರ್‌ಗೆ ಮಾಹಿತಿ ಇರಲಿಲ್ಲ. ಬಹುಶಃ ನನ್ನನ್ನು ಅಸ್ಸಾಂಗೆ ಕರೆದೊಯ್ದ ನಂತರ ಅವರಿಗೆ ತಿಳಿಸಲಾಗಿದೆ. ಇದು ಗುಜರಾತ್‌ನ ಹೆಮ್ಮೆಗೆ ಧಕ್ಕೆ ತಂದಿದೆ. ಗುಜರಾತ್ ಸರ್ಕಾರಕ್ಕೂ ನಾಚಿಕೆಯಾಗಬೇಕು ಎದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ರಾಜ್ಯ’ ಮಾಡುತ್ತಿರುವುದನ್ನು ಸರಳವಾಗಿ ಯೋಚಿಸಲು ಸಾಧ್ಯವಿಲ್ಲ: ಜಿಗ್ನೇಶ್‌ಗೆ ಜಾಮೀನು ನೀಡಿದ ಅಸ್ಸಾಂ ಜಿಲ್ಲಾ ನ್ಯಾಯಾಲಯ
ಜಿಗ್ನೇಶ್ ಮೇವಾನಿಯವರಿಗೆ ಜಾಮೀನು ನೀಡುವಾಗ ನ್ಯಾಯಾಲಯ, “ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ‘ಸುಳ್ಳು ಎಫ್‌ಐಆರ್’ ದಾಖಲಿಸಿದ್ದು, ‘ನ್ಯಾಯಾಲಯ ಮತ್ತು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ’. “ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸುವುದರ” ವಿರುದ್ಧ ಪೊಲೀಸರಿಗೆ ಅದು ಎಚ್ಚರಿಕೆ ನೀಡಿದೆ.



ಪ್ರಧಾನಿಯೇ ಗೋಡ್ಸೆ ಭಕ್ತ. ದ್ವೇಷ ಹರಡುವುದರಲ್ಲಿ ಗೋಡ್ಸೆಯನ್ನೂ ಮೀರಿಸಿದಾತ.