ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಗಳನ್ನು ಸತತವಾಗಿ ಹೆಚ್ಚಿಸುವ ಮೂಲಕ ಭಾರತದ ಜನತೆಯನ್ನು ಹಿಂಸಿಸುತ್ತಿದೆ. ಆದರೆ ಇದನ್ನು ಕಂಡು ಕಾಣದಂತೆ ಮಾಧ್ಯಮಗಳು ಕಣ್ಮುಚ್ಚಿ, ನಿಶಬ್ದವಾಗಿ ಕುಳಿತಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ ಏರಿಕೆಯಾದ ಹಿನ್ನೆಲೆಯಲ್ಲಿ ಟ್ವೀಟ್ ಮೂಲಕ ಕಿಡಿಕಾರಿರುವ ಅವರು, “ಕೇಂದ್ರ ಸರಕಾರ ಕೂಡಲೇ ಭಾರತದ ಜನತೆಯನ್ನು ಹಿಂಸಿಸುವುದನ್ನು ನಿಲ್ಲಿಸಬೇಕು. ತೈಲಬೆಲೆ, ಗ್ಯಾಸ್ ಬೆಲೆ ಮತ್ತು ದಿನಬಳಕೆಯ ವಸ್ತುಗಳ ಬೆಲೆಯನ್ನು ಪದೇ ಪದೇ ಹೆಚ್ಚಿಸುವ ಮೂಲಕ ಬಿಜೆಪಿ ಸರ್ಕಾರ ಭಾರತದ ಮಹಾನ್ ಲೂಟಿ ನಡೆಸುತ್ತಿದೆ” ಎಂದು ಹೇಳಿದ್ದಾರೆ.
The Union government must immediately STOP TORMENTING the people of India!
By repeatedly increasing #fuel prices, #LPG prices & prices of #essentialcommodities, @BJP4India is actually conducting a #GreatIndianLoot. PEOPLE ARE BEING FOOLED.
Sad to see the Media SILENT & BLIND.
— Mamata Banerjee (@MamataOfficial) May 7, 2022
ಸರ್ಕಾರ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಆದರೆ ಮಾಧ್ಯಮಗಳು ಈ ಕುರಿತು ವರದಿ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಗೃಹಬಳಕೆಯ ಅಡುಗೆ ಅನಿಲ (LPG) ದರದಲ್ಲಿ ಮತ್ತೆ 50 ರೂ. ಏರಿಕೆ ಮಾಡಲಾಗಿದೆ. ಹಾಗಾಗಿ 14.2 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ 1000 ರೂ ಮುಟ್ಟಿದೆ.
ಈ ವರ್ಷದ ಮಾರ್ಚ್ 22ರಂದು ಅನಿಲ ದರದಲ್ಲಿ 50 ರೂ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ 50 ರೂ ಹೆಚ್ಚಳ ಮಾಡಿದ್ದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ.
ಇದೇ ತಿಂಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಮೇಲೆಯೂ ಸಹ 102.50 ರೂ ಏರಿಕೆ ಮಾಡಲಾಗಿತ್ತು. 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ 2,355ರೂ ತಲುಪಿದೆ.
ಇದನ್ನೂ ಓದಿ : ಬಣ್ಣದ ರಿಸ್ಟ್ ಬ್ಯಾಂಡುಗಳ ಮೂಲಕ ತಮಿಳುನಾಡು ಶಾಲೆಗಳಲ್ಲಿ ಮಾರಕವಾದ ಜಾತಿ ತಾರತಮ್ಯ!
ಪೆಟ್ರೋಲ್-ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್ ಮಾಲೀಕರು ಊಟ-ತಿಂಡಿಯ ಬೆಲೆ ಸಹ 10% ಏರಿಕೆ ಮಾಡಿದ್ದಾರೆ.


