Homeಕರ್ನಾಟಕಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸಿದ ಚಕ್ರತೀರ್ಥ ಸಮಿತಿ; ಸಚಿವ ಬಿ.ಸಿ.ನಾಗೇಶ್‌ ರಾಜೀನಾಮೆಗೆ ಆಗ್ರಹ

ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸಿದ ಚಕ್ರತೀರ್ಥ ಸಮಿತಿ; ಸಚಿವ ಬಿ.ಸಿ.ನಾಗೇಶ್‌ ರಾಜೀನಾಮೆಗೆ ಆಗ್ರಹ

- Advertisement -
- Advertisement -

ಪಠ್ಯಕ್ರಮ ಚೌಕಟ್ಟು, ಸಂವಿಧಾನಿಕ ಆಶಯ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯನ್ನು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಉಲ್ಲಂಘಿಸಿದೆ ಎಂದು ಶಿಕ್ಷಣ ತಜ್ಞರಾದ ವಿ.ಪಿ.ನಿರಂಜನಾರಾಧ್ಯ ಹೇಳಿದರು.

“ಪಠ್ಯ ಪುಸ್ತಕಗಳ ಬ್ರಾಹ್ಮಣೀಕರಣ- ಮುಂದಿನ ನಡೆ ಏನಾಗಬೇಕು” ವಿಷಯ ಕುರಿತು ಬೆಂಗಳೂರಿನ ಗಾಂಧಿ ಭವನ ಆವರಣದಲ್ಲಿ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಮತ್ತು ಸಮಾನ ಮನಸ್ಕರು ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

“ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ಪರಿಷ್ಕರಣೆ ಮಾಡಲಾಗಿದೆ. 180 ಪಾಠಗಳಲ್ಲಿ ಸುಮಾರು 30 ಪಾಠಗಳನ್ನು ಪರಿಶೀಲನೆ ಮಾಡಲಾಗಿದೆ. ಭಾಷಾ ಪಠ್ಯದಲ್ಲಿ ಲಿಂಗ ಸಮಾನತೆ, ಸಾಮಾಜಿಕ ನ್ಯಾಯ ತುರುಕಬಾರದು ಎಂದು ಪರಿಶೀಲನಾ ಸಮಿತಿಯ ಅಧ್ಯಕ್ಷರು ಬರೆದಿದ್ದಾರೆ. ಇಲ್ಲಿ ಬಳಸುವ ಪದಗಳನ್ನು ನೋಡಿ. ಇವರ ಹಿನ್ನೆಲೆ ಯಾವುದು?” ಎಂದು ಪ್ರಶ್ನಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಲಿಂಗ ಸಮಾನತೆ, ಸಾಮಾಜಿಕ ನ್ಯಾಯ ಅನ್ನೋದು ತುರುಕುವ ವಿಚಾರವಲ್ಲ; ಅವುಗಳು ಭಾರತದ ಸಂವಿಧಾನ ಮೂಲ ಆಶಯಗಳಾಗಿವೆ. ಚಕ್ರತೀರ್ಥ ಅವರು ಸಂವಿಧಾನದ 15ನೇ ವಿಧಿಯನ್ನು ಓದಿಕೊಂಡಿಲ್ಲ ಅನಿಸುತ್ತದೆ. ಲಿಂಗ, ಜಾತಿ, ಬಣ್ಣದ ಇನ್ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನ ನಿಂತಿರುವುದೇ ಸಾಮಾಜಿಕ ನ್ಯಾಯದ ಮೇಲೆ” ಎಂದು ತಿಳಿಸಿದರು.

ಕೇಸರಿಕರಣವನ್ನು ಸಾಂಸ್ಥಿಕವಾಗಿ ನಡೆಸಲಾಗುತ್ತಿದೆ. ಯಾವ ಸಂಸ್ಥೆಗಳು ಸಾಂವಿಧಾನಿಕ ನೆಲೆ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯನ್ನು ಪಾಲಿಸಬೇಕಿತ್ತೋ ಆ ಸಂಸ್ಥೆಗಳೇ ಇದರಲ್ಲಿ ಭಾಗಿಯಾಗುತ್ತಿರುವುದು ವಿಷಾದನೀಯ. ನಮ್ಮ ರಾಜ್ಯದ ಡಿಎಸ್‌ಇಆರ್‌ಟಿ, ಪಠ್ಯಪುಸ್ತಕ ನಿರ್ದೇಶನಾಲಯ ಯಾವುದೇ ಒಂದು ಪಕ್ಷಕ್ಕೆ ಸೇರಿದವುಗಳಲ್ಲ. ಇವು ಶೈಕ್ಷಣಿಕವಾಗಿ ಸ್ಥಾಪಿತವಾಗಿರುವ, ಶಿಕ್ಷಣ ಚೌಕಟ್ಟಿನ ಪ್ರಕಾರ ಕೆಲಸ ಮಾಡುವ ಸಂಸ್ಥೆಗಳಾಗಿವೆ. ಆದರೆ ಈ ಶಿಕ್ಷಣ ಸಂಸ್ಥೆಗಳು ಮೌನವಹಿಸಿವೆ. ಇವರ ದೃಷ್ಟಿಯ ರಾಷ್ಟ್ರೀಯತೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಭಾರತ ಸಂವಿಧಾನ ಕಟ್ಟಿಕೊಟ್ಟಿರುವ ರಾಷ್ಟ್ರೀಯತೆಯನ್ನು ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿರಿ: ಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ

ಮೊದಲೆಲ್ಲ ಪಠ್ಯವನ್ನು ರೂಪಿಸುವಾಗ ತಜ್ಞರನ್ನು ಒಳಗೊಳ್ಳಲಾಗುತ್ತಿತ್ತು. ಶೈಕ್ಷಣಿಕ ವಲಯದಲ್ಲಿ ಸುಮಾರು ನಲವತ್ತರಿಂದ ನಲವತ್ತೈದು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ರೋಹಿತ್‌ ಚಕ್ರತೀರ್ಥ ಅವರ ಹೆಸರನ್ನು ಈವರೆಗೆ ಕೇಳಿರಲಿಲ್ಲ. ಇವರು ಯಾವ ಸಂಶೋಧನೆ ಮಾಡಿದ್ದಾರೆ? ಯಾರ್‍ಯಾರೋ ಬಂದು ಪಠ್ಯಪುಸ್ತಕವನ್ನು ಬಂದು ಮಾಡಲು ಸಾಧ್ಯವಿಲ್ಲ ಎಂದ ಅವರು ಪಠ್ಯಪುಸ್ತಕ ಪರಿಶೀಲನೆ ಗೌಪ್ಯವಾಗಿ ನಡೆದಿದ್ದರೆ ಉದ್ದೇಶವೇನು? ಎಂದು ಪ್ರಶ್ನಿಸಿದರು.

ಹೊಸ ಶಿಕ್ಷಣ ನೀತಿ ತಂದಿದ್ದೇವೆ ಎಂದು ಹೇಳುತ್ತಾರೆ. ಈ ಶಿಕ್ಷಣ ನೀತಿಯನ್ನು ತಂದಿದ್ದೇ ಮೋಸದಿಂದ. ಈವರೆಗೆ ಬಂದಿರುವ ಶಿಕ್ಷಣ ನೀತಿಗಳು ಸಂಸತ್‌ನಲ್ಲಿ ಸುದೀರ್ಘ ಚರ್ಚೆಯಾಗಿವೆ. ರಾತ್ರೋರಾತ್ರಿ ಜಾರಿಗೆ ಬಂದಿದ್ದು ಮಾತ್ರ ಎನ್‌ಇಪಿ. ಕರಿಕುಲಮ್ ಫ್ರೇಮ್‌ ವರ್ಕ್‌ ಇನ್ನೂ ಮುಗಿದಿಲ್ಲ. ಯಾಕಿಷ್ಟು ಆತುರ? ಎಂದು ಕೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2022-23ರ ಪಠ್ಯ ಸಂಪೂರ್ಣ ಪ್ರಿಂಟ್ ಆಗಿತ್ತು. ಎರಡೂವರೆ ಕೋಟಿ ರೂ. ಖರ್ಚಾಗಿತ್ತು. ಈಗ ಪುಸ್ತಕಗಳನ್ನು ಗೋಡನ್‌ಗೆ ಹಾಕಲಾಗಿದೆ. ಇದೇ ಎರಡೂವರೆ ಕೋಟಿ ರೂ.ಗಳನ್ನು ಶಾಲೆಗಳ ಅಭಿವೃದ್ಧಿಗೆ ಬಳಸಬಹುದಿತ್ತು. ಇದನ್ನು ಬಿಟ್ಟು ಹೆಡಗೇವಾರ್‌ ಸೇರಿಸಲು ಹೊರಟಿದ್ದಾರೆ. ಇವರ ಅಗ್ರೆಸಿವ್‌ಗೆ ಬ್ರೇಕ್‌ ಹಾಕಲೇಬೇಕಿದೆ. ಇಲ್ಲವಾದರೆ ಸಂವಿಧಾನವನ್ನು ಉಳಿಸಿಕೊಳ್ಳುವ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

2023ರ ಚುನಾವಣೆಗೆ ಸಿದ್ಧತೆಗಾಗಿ ಜನರ ಮನಸ್ಸನ್ನು ಸೆಳೆಯಬೇಕಾಗಿದೆ. ಆರೋಗ್ಯ, ಶಿಕ್ಷಣದ ಖಾಸಗೀಕರಣ ತಡೆಯಲಿಲ್ಲ. ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ಹೆಚ್ಚಾಗಿದೆ. ಜನರು ಗಂಭೀರ ವಿಚಾರಗಳ ಕುರಿತು ಯೋಚನೆ ಮಾಡಬಾರದೆಂದು ಪಠ್ಯಗಳ ವಿಚಾರ ಮುಂದೆ ತಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ರೋಹಿತ್‌ ಚಕ್ರತೀರ್ಥ ಆಯ್ಕೆಯ ಮಾನದಂಡಗಳೇನು?: ಬಹಿರಂಗ ಪತ್ರ ಬರೆದ ಶಿಕ್ಷಣ ತಜ್ಞರು

ಮುಖಂಡರಾದ ಆದರ್ಶ ಅಯ್ಯರ್‌ ಮಾತನಾಡಿ, “ನಾನು ಬ್ರಾಹ್ಮಣ ಸಮುದಾಯದವನು. ಆದರೆ ಈ ಪಠ್ಯದಲ್ಲಿ ಶೂದ್ರರಿಗೆ ಆಗಿರುವ ಅನ್ಯಾಯವನ್ನು ನೋಡಿದರೆ ಹೊಟ್ಟೆ ಕಿವುಚಿದಂತಾಗುತ್ತಿದೆ. ಸಂಘ ಪರಿವಾರದ ಉದ್ದೇಶಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಈ ರೀತಿಯ ವಿವಾದಗಳನ್ನು ತಂದು ನಮ್ಮ ಶಕ್ತಿಯನ್ನೆಲ್ಲ ಇವುಗಳಿಗೆ ವ್ಯಹಿಸಿ ಖುಷಿಪಡುತ್ತಿದ್ದಾರೆ. ನಾವು ಇಂಥವುಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬೇಕಿದೆ” ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಕೆವಿಎಸ್‌ನ ರಾಜ್ಯ ಸಂಚಾಲಕರಾದ ಸರೋವರ್‌  ಬೆಂಕಿಕೆರೆ, “ಹೊಸ ಧರ್ಮಗಳ ಉದಯ ಪಠ್ಯದಲ್ಲಿ ಯಜ್ಞದ ಉದ್ದೇಶದ ಕುರಿತು ವಿವರಿಸಲಾಗಿತ್ತು. ಆದರೆ ಅದನ್ನು ತೆಗೆಯಬೇಕೆಂದು ಹುಟ್ಟಿಕೊಂಡ ಸಮಿತಿ, ಈಗ ಯಜ್ಞವನ್ನು ಸಮರ್ಥಿಸುವ ಪಠ್ಯವನ್ನು ಹತ್ತನೇ ತರಗತಿಯ ಪಠ್ಯದಲ್ಲಿ ಇಟ್ಟಿದೆ” ಎಂದು ತಿಳಿಸಿದರು.

ಕರ್ನಾಟಕ ಜನಶಕ್ತಿ ಸಂಘಟನೆಯ ಗೌರವಾಧ್ಯಕ್ಷರಾದ ಗೌರಿ, ಮುಖಂಡರಾದ ಕುಮಾರ ಸಮತಳ, ಸಮರ ಸೊಸೈಟಿಯ ಶಿವಪ್ಪ, ಶಿಕ್ಷಕ ಕೃಷ್ಣಪ್ರಸಾದ್, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಚ್‌.ಎಂ.ವೆಂಕಟೇಶ್‌, ಟೀಚರ್‌ ಮ್ಯಾಗಸಿನ್‌ನ ಸಂಪಾದಕ ಆರ್‌.ರಾಮಕೃಷ್ಣ, ಜಾಗೃತ ಕರ್ನಾಟಕ ಸಂಚಾಲಕರಾದ ರಾಜಶೇಖರ್‌ ಅಕ್ಕಿ, ಪ್ರಕಾಶ್‌ ಬಾಬು ಮೊದಲಾದವರು ಹಾಜರಿದ್ದರು.

ರಾಜೀನಾಮೆಗೆ ಆಗ್ರಹ

ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಸಾಂವಿಧಾನಿಕ ಆಶಯಗಳನ್ನು ಗೌರವಿಸದ ಶಿಕ್ಷಣ ಸಚಿವರು ಮತ್ತು ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರ ರಾಜೀನಾಮೆಗೆ ಸಭೆಯು ಆಗ್ರಹಿಸಿತು.

ಪರಿಷ್ಕೃತ ಶಾಲಾ ಪಠ್ಯಗಳಲ್ಲಿ ಭಗತ್ ಸಿಂಗ್, ನಾರಾಯಣಗುರು, ಪೆರಿಯಾರ್ ಅವರ ಕುರಿತಾದ ಪಠ್ಯಗಳನ್ನು ಸಾರಾ ಅಬೂಬಕರ್, ಲಂಕೇಶ್ ಮತ್ತಿತರರ ಬರಹಗಳನ್ನು ತೆಗೆದು ಹಾಕಿರುವ ಬಗ್ಗೆ ಮತ್ತು ವಿವಾದಾಸ್ಪದವಾದ ಹೆಡ್ಗೇವಾರ್ ಕುರಿತ ಪಠ್ಯವನ್ನು ಸೇರ್ಪಡೆ ಮಾಡಿರುವ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಯಿತು.

ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಮತ್ತು ಸಹಬಾಳ್ವೆಯ ಚಿಂತನೆಯನ್ನು ಬಿತ್ತುವ ಭಗತ್ ಸಿಂಗ್ ನಾರಾಯಣಗುರು ಮುಂತಾದವರ ಪಠ್ಯಗಳನ್ನು ಕೈಬಿಡುವುದಕ್ಕೆ ನಿಜವಾದ ಕಾರಣವೇನೆಂಬುದು ಬಹಿರಂಗಗೊಳ್ಳಬೇಕೆಂದು ಸಭೆಯಲ್ಲಿ ಪಾಲ್ಗೊಂಡ ಸಂಘಟನೆಗಳ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿ-ಯುವಜನರ ಭವಿಷ್ಯವನ್ನು ಲೆಕ್ಕಿಸದೇ ಪಠ್ಯಪುಸ್ತಕವನ್ನು ಪಕ್ಷದ ಪ್ರಣಾಳಿಕೆ, ಪಕ್ಷದ ಪುಸ್ತಕವಾಗಿಸಿ ಯುವಜನರನ್ನು ರಾಜಕೀಯಲಾಭಕ್ಕಾಗಿ ಬಳಸಿಕೊಳ್ಳುವ ಹುನ್ನಾರ ಇದರ ಹಿಂದಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಇದನ್ನೂ ಓದಿರಿ: ತ್ರಿವರ್ಣ ಧ್ವಜ v/s ಭಗವಾಧ್ವಜ: ಹೆಡಗೇವಾರ್‌ ಮೂಲಪಠ್ಯವನ್ನೇ ತಿರುಚಿದ ಚಕ್ರತೀರ್ಥ ಸಮಿತಿ; ಇಲ್ಲಿದೆ ನೋಡಿ ಸಾಕ್ಷಿ!

ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು

*ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಾಂವಿಧಾನಿಕ ಆಶಯಗಳನ್ನು ಉಲ್ಲಂಘಿಸಿ ರಚನೆಯಾಗಿರುವ ಪಠ್ಯ ಪರಿಷ್ಕರಣ ಸಮಿತಿಯ ರಚನೆಯೇ ಅಸಾಂವಿಧಾನಿಕವಾಗಿದೆ. ಇದನ್ನು ಅನೂರ್ಜಿತಗೊಳಿಸಿ, ಸೂಕ್ತ ಶೈಕ್ಷಣಿಕ ಮತ್ತು ವೈಚಾರಿಕ ಮಾನದಂಡಗಳ‌ ಮೇಲೆ ಹೊಸ ಸಮಿತಿಯನ್ನು‌ ನೇಮಿಸಬೇಕು.

* ಕರ್ನಾಟಕವನ್ನು ಮತ್ತು ಭಾರತವನ್ನು ಗಾಢವಾಗಿ ಪ್ರಭಾವಿಸಿರುವ ಆಧ್ಯಾತ್ಮಿಕರು, ಚಿಂತಕರು ಮತ್ತು ಸಮಾಜ ಸುಧಾರಕರ ಕುರಿತ ಪಠ್ಯಗಳನ್ನು ಕೈಬಿಟ್ಟು ರಾಷ್ಟ್ರಧ್ವಜ ಮತ್ತು ದೇಶದ ಸ್ವಾತಂತ್ರ್ಯ ಚಳವಳಿಯನ್ನು ಅಗೌರವಿಸಿರುವ ವ್ಯಕ್ತಿಗಳ ಬರಹಗಳನ್ನು ಸೇರಿಸಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮತ್ತು ರೋಹಿತ್ ಚಕ್ರತೀರ್ಥ ಕೂಡಲೇ ರಾಜೀನಾಮೆ ನೀಡಬೇಕು.

* ಶಾಲೆ ಆರಂಭವಾದರೂ ಇನ್ನೂ ನಡೆಯುತ್ತಿರುವ ಹೊಸ ಪಠ್ಯಪುಸ್ತಕ ಮುದ್ರಣದ ಪ್ರಹಸನವನ್ನು ನಿಲ್ಲಿಸಿ ಈಗಾಗಲೇ ಮುದ್ರಿತವಾಗಿರುವ ಈ ಹಿಂದಿನ ಸಾಲಿನ ಪಠ್ಯಪುಸ್ತಕಗಳನ್ನೇ ಶಾಲೆಗಳಿಗೆ ಕೂಡಲೇ ಕಳಿಸಬೇಕು.

*ಈ ಎಲ್ಲ ಆಗ್ರಹಗಳೊಂದಿಗೆ ಸೋಮವಾರ, ಮೇ 22ರಂದು ವಿದ್ಯಾರ್ಥಿ ಸಂಘಟನೆಗಳು ಮತ್ತು ಪೋಷಕರ ಸಂಘಟನೆಗಳು ಪತ್ರಿಕಾ ಗೋಷ್ಟಿ ನಡೆಸಿ ಸರ್ಕಾರವನ್ನು ಆಗ್ರಹಿಸಬೇಕು.

*ಪಠ್ಯಪುಸ್ತಕ ಪರಿಷ್ಕರಣೆ ಕುರಿತ ವಾಸ್ತವಾಂಶಗಳನ್ನು ಜನರಿಗೆ ಮುಟ್ಟಿಸಲು ಈ ಹಿಂದೆ ಪರಿಷ್ಕರಣ ಸಮಿತಿಗಳ ಭಾಗವಾಗಿದ್ದ ಚಿಂತಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಶ್ರಮವಿರುವ ಸಂಶೋಧಕರು ಮೊದಲಾದವರೊಂದಿಗೆ ‘ಮುಕ್ತ ಮಾತುಕತೆ’ ವಿಚಾರ ಗೋಷ್ಟಿಗಳನ್ನು ಸಂಘಟಿಸುವುದು.

* ಈ ಹಿಂದಿನ ಪಠ್ಯಪುಸ್ತಕದಲ್ಲಿದ್ದು ತೆಗೆದಯ ಹಾಕಲ್ಪಟ್ಟ ಪಠ್ಯಗಳ ಸಾಮಾಜಿಕ ಮಹತ್ವವೇನು ಮತ್ತು ಈಗ ಸೇರ್ಪಡೆಯಾದ ಬರಹಗಳ ಅಪಾಯವೇನು ಎಂಬ ಬಗ್ಗೆ, ಹಾಗೆಯೇ ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆಗೆ ಅಳವಡಿಸಬೇಕಾದ ನೀತಿನಿಯಮಾವಳಿಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ವಿಚಾರಗೋಷ್ಟಿಯನ್ನು ನಡೆಸುವುದು.

*ಸರ್ಕಾರ ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಅಪಾಯಕಾರಿಯಾದ ಪಠ್ಯಗಳನ್ನು ಸಮರ್ಥಿಸುವ ತನ್ನ ಧೋರಣೆಯನ್ನು ಮುಂದುವರೆಸಿದ್ದೇ ಆದರೆ, ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಕಪ್ಪು ಬಾವುಟ ಪ್ರದರ್ಶನದ ಹೋರಾಟ ನಡೆಸಲಾಗುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...