ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನೆ ಶಾಸಕರು ಶನಿವಾರ ಗುವಾಹಟಿಯಲ್ಲಿ ಸಭೆ ನಡೆಸಿ, ಏಕನಾಥ್ ಶಿಂಧೆ ನೇತೃತ್ವದ ತಮ್ಮ ಬಣವನ್ನು ‘ಶಿವಸೇನೆ ಬಾಳಾಸಾಹೇಬ್ ಗ್ರೂಪ್’ ಎಂದು ಹೆಸರಿಸುವುದಾಗಿ ಘೋಷಿಸಿದೆ. ಈ ನಡುವೆ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನೆ ಶಾಸಕ ತಾನಾಜಿ ಸಾವಂತ್ ಅವರ ಪುಣೆಯ ಕಚೇರಿಗೆ ಶಿವಸೇನೆ ಕಾರ್ಯಕರ್ತರು ಶನಿವಾರ ದಾಳಿ ನಡೆಸಿದ್ದಾರೆ.
ತಾನಾಜಿ ಸಾವಂತ್ ಕಚೇರಿಗೆ ದಾಳಿ ಮಾಡಿರುವುದನ್ನು ಸಮರ್ಥಿಸಿರುವ ಪುಣೆ ಶಿವಸೇನೆ ಮುಖ್ಯಸ್ಥ ಸಂಜಯ್ ಮೋರೆ, “ನಮ್ಮ ಪಕ್ಷದ ಕಾರ್ಯಕರ್ತರು ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದರು. ನಮ್ಮ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ತೊಂದರೆ ನೀಡಿದ ಎಲ್ಲಾ ದೇಶದ್ರೋಹಿಗಳು ಮತ್ತು ಬಂಡಾಯ ಶಾಸಕರು ಈ ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ. ಅವರ ಕಚೇರಿಯ ಮೇಲೂ ದಾಳಿ ನಡೆಸಲಾಗುವುದು… ಯಾರನ್ನೂ ಬಿಡಲಾಗುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಧ್ಯಕ್ಕೆ ಗುವಾಹಟಿಯಲ್ಲಿರುವ ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಅವರು, ಬಂಡಾಯವೆದ್ದಿರುವ ಪಕ್ಷದ ಶಾಸಕರ ರಕ್ಷಣೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ರಾಜ್ಯದ ಗೃಹ ಸಚಿವರು ಹಿಂಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
#WATCH | Shiv Sena workers vandalise office of the party's MLA Tanaji Sawant in Balaji area of Katraj, Pune. Sawant is one of the rebel MLAs from the state and is currently camping in Guwahati, Assam. #MaharashtraPoliticalCrisis pic.twitter.com/LXRSLPxYJC
— ANI (@ANI) June 25, 2022
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರಿಗೆ 16 ಶಾಸಕರ ಸಹಿ ಇರುವ ಪತ್ರವನ್ನು ಟ್ವೀಟ್ ಮಾಡಿರುವ ಶಿಂಧೆ, ತಮ್ಮ ಕುಟುಂಬ ಸದಸ್ಯರಿಗೆ ಯಾವುದೇ ಹಾನಿ ಉಂಟಾದರೆ ಸಿಎಂ ಠಾಕ್ರೆ ಮತ್ತು ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಾಯಕರು ಹೊಣೆಯಾಗುತ್ತಾರೆ ಎಂದು ತಿಳಿಸಿದ್ದಾರೆ. ಠಾಕ್ರೆ ಮತ್ತು ವಾಲ್ಸೆ ಪಾಟೀಲ್ ಅವರ ಆದೇಶದ ಮೇರೆಗೆ 16 ಬಂಡಾಯ ಸೇನಾ ಶಾಸಕರ ಭದ್ರತೆಯನ್ನು ‘ರಾಜಕೀಯ ಸೇಡಿನಿಂದಾಗಿ’ ಹಿಂಪಡೆಯಲಾಗಿದೆ ಎಂದು ಶಿಂಧೆ ತಮ್ಮ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
Shivsena workers in Pune have vandalised the office of Shivsena leader Tanaji Sawant who joined Eknath Shinde Camp. They say Shivsainik can't see tears in Uddhav Thackeray's eyes and hence they will not stop unless the 'gaddars' are taught lessons. #Pune #Maharashtra pic.twitter.com/ECVYHFv3EP
— Ali shaikh (@alishaikh3310) June 25, 2022
ಆದರೆ ಈ ಹೇಳಿಕೆಯನ್ನು ನಿರಾಕರಿಸಿರುವ ರಾಜ್ಯದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, “ರಾಜ್ಯದ ಯಾವುದೇ ಶಾಸಕರ ರಕ್ಷಣೆಗೆ ಮುಖ್ಯಮಂತ್ರಿಯಾಗಲಿ, ಗೃಹ ಇಲಾಖೆಯಾಗಲಿ ಆದೇಶ ನೀಡಿಲ್ಲ. ಈ ನಿಟ್ಟಿನಲ್ಲಿ ಟ್ವಿಟರ್‌ನಲ್ಲಿ ಮಾಡಿರುವ ಆರೋಪಗಳು ಸಂಪೂರ್ಣ ತಪ್ಪು ಮತ್ತು ದಾರಿತಪ್ಪಿಸುವಂತಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ಧವ್ ಸರ್ಕಾರದ ಬಿಕ್ಕಟ್ಟಿನಲ್ಲಿ ನಮ್ಮ ಪಾತ್ರವಿಲ್ಲ ಎಂದ ಮಹಾರಾಷ್ಟ್ರ ಬಿಜೆಪಿ
ಏಕನಾಥ್ ಶಿಂಧೆ ಅವರಿಗೆ ತೊಂದರೆಯಾದರೆ, ನಾವು ಬೆಂಬಲಿಸುತ್ತೇವೆ: ಕೇಂದ್ರ ಸಚಿವ ಅಠವಳೆ
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಸರ್ಕಾರ ರಚಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಒಕ್ಕೂಟ ಸರ್ಕಾರದ ಸಚಿವ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ರಾಮದಾಸ್ ಅಠವಳೆ ಶುಕ್ರವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, “ಏಕನಾಥ್ ಶಿಂಧೆ ಅವರಿಗೆ ತೊಂದರೆಯಾದರೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅವರನ್ನು ಬೆಂಬಲಿಸುತ್ತದೆ” ಎಂದು ಹೇಳಿದ್ದಾರೆ.
#Shivsena workers from #Pune vandalise the office of #Shivsena leader Tanaji Sawant situated in the Balaji Nagar area near Katraj. Tanaji Sawant has also joined the #EknathShinde camp in Guwahati. @ShivSena @mieknathshinde pic.twitter.com/eSHMO63rCv
— Pune Mirror (@ThePuneMirror) June 25, 2022
“ನಾವು ಸರ್ಕಾರ ರಚಿಸುವ ಬಗ್ಗೆ ಯೋಚಿಸಿಲ್ಲ, ಮುಂಬರುವ ಸಮಯದಲ್ಲಿ ಏನಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಶರದ್ ಪವಾರ್, ಅಜಿತ್ ಪವಾರ್, ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವತ್ ಅವರು ಬಹುಮತವನ್ನು ತೋರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹಲವಾರು ಶಾಸಕರು ನಿಮ್ಮನ್ನು ತೊರೆದಿದ್ದಾರೆ, ನೀವು ಅದನ್ನು ಹೇಗೆ ಹೇಳುತ್ತೀರಿ?” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ‘ಶಿಂಧೆ ನಮ್ಮ ನಾಯಕ’ ಎಂದು ಉಪ ಸಭಾಪತಿಗೆ ಪತ್ರ ಕಳುಹಿಸಿದ ಬಂಡಾಯ ಶಾಸಕರು
ಪಕ್ಷ ದೊಡ್ಡದು, ಅಷ್ಟು ಸುಲಭವಾಗಿ ಹೈಜಾಕ್ ಮಾಡಲು ಸಾಧ್ಯವಿಲ್ಲ: ಶಿವಸೇನೆ ನಾಯಕ ಸಂಜಯ್ ರಾವತ್
ಪಕ್ಷದ ಭವಿಷ್ಯ ಮತ್ತು ವಿಸ್ತರಣೆಯ ಯೋಜನೆಗಳ ಕುರಿತು ಚರ್ಚಿಸಲು ಶಿವಸೇನೆ ಸಭೆ ನಡೆಸಲಿದೆ ಎಂದು ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. “ಪಕ್ಷವು ತುಂಬಾ ದೊಡ್ಡದಾಗಿದ್ದು, ಅದನ್ನು ಅಷ್ಟು ಸುಲಭವಾಗಿ ಹೈಜಾಕ್ ಮಾಡಲು ಸಾಧ್ಯವಿಲ್ಲ. ಇದು ನಮ್ಮ ರಕ್ತದಿಂದ ಕಟ್ಟಲ್ಪಟ್ಟಿದೆ. ಅದನ್ನು ಮಾಡಲು ಹಲವಾರು ತ್ಯಾಗ ಮಾಡಲಾಗಿದೆ. ಹಣದಿಂದ ಯಾರೂ ಅದನ್ನು ಮುರಿಯಲು ಸಾಧ್ಯವಿಲ್ಲ” ಎಂದು ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
WATCH – Shiv Sainiks attack the office of Sena MLA Tanaji Sawant
WATCH #LIVE on YouTube: https://t.co/7EPRSS87Wo pic.twitter.com/I5Ug1eysmv
— TIMES NOW (@TimesNow) June 23, 2022
ಗುವಾಹಟಿ, ಸೂರತ್‌ನಲ್ಲಿ ಹೋಟೆಲ್ ಬಿಲ್‌ಗಳನ್ನು ಯಾರು ಪಾವತಿಸುತ್ತಿದ್ದಾರೆ, ಎನ್‌ಸಿಪಿ
ಪ್ರಸ್ತುತ ಅಸ್ಸಾಂನಲ್ಲಿ ಮೊಕ್ಕಾಂ ಹೂಡಿರುವ ಶಿವಸೇನೆಯ ಬಂಡಾಯ ಶಾಸಕರು ಉಳಿದಿದ್ದ ಗುವಾಹಟಿ ಮತ್ತು ಸೂರತ್‌ನಲ್ಲಿನ ಹೋಟೆಲ್‌ಗಳ ಬಿಲ್‌ಗಳನ್ನು ಯಾರು ಪಾವತಿಸುತ್ತಿದ್ದಾರೆ ಎಂದು ಎನ್‌ಸಿಪಿ ಪ್ರಶ್ನಸಿದೆ. ಪಕ್ಷವು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವನ್ನು (ಇಡಿ) ಒಳಗೊಂಡಂತೆ ಇಲಾಖೆಗಳಿಗೆ ‘ಕಪ್ಪುಹಣದ’ ಮೂಲವನ್ನು ಕಂಡುಹಿಡಿಯಲು ಕೇಳಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಅತಂತ್ರ: ಇಲ್ಲಿವರೆಗೆ ಏನಾಯಿತು? ಸಂಕ್ಷಿಪ್ತ ವರದಿ ಇಲ್ಲಿದೆ
ಎನ್‌ಸಿಪಿಯ ಮುಖ್ಯ ವಕ್ತಾರ ಮಹೇಶ್ ತಾಪಸೆ, “ಸೂರತ್ ಮತ್ತು ಗುವಾಹಟಿಯ ಹೋಟೆಲ್‌ಗಳು ಮತ್ತು ಚಾರ್ಟರ್ಡ್ ಫ್ಲೈಟ್‌ನ ಬಿಲ್‌ಗಳನ್ನು ಯಾರು ಪಾವತಿಸುತ್ತಿದ್ದಾರೆ? ಕುದುರೆ ವ್ಯಾಪಾರದ ದರ 50 ಕೋಟಿ ರೂಪಾಯಿಗಳು ನಿಜವೇ? ಇಡಿ ಮತ್ತು ಐಟಿ ಸಕ್ರಿಯಗೊಂಡರೆ ಕಪ್ಪು ಹಣದ ಮೂಲ ಬಯಲಾಗುತ್ತದೆ” ಎಂದು ಅವರು ಹೇಳಿದ್ದಾರೆ.


