Homeಮುಖಪುಟಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

ಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

- Advertisement -
- Advertisement -

ಜೀವನ ಕಲೆಗಳು ಅಂಕಣ – 6

ವ್ಯಕ್ತಿತ್ವ ವಿಕಸನ –5 ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ) ಬಗ್ಗೆ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಇದೇ ರೀತಿಯ, ಆದರೆ ಅಧಿಕ ವೈಜ್ಞಾನಿಕ ಪದ್ಧತಿ ಎನಿಸಿಕೊಂಡಿರುವುದು ಬಿಗ್-5 (ಒ.ಸಿ.ಇ.ಎ.ಎನ್.) ಫೈವ್ ಫ್ಯಾಕ್ಟರ್ ಮಾಡೆಲ್. ಇದೂ ಸಹ ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಹಲವಾರು ಕಂಪನಿಗಳು ತಮ್ಮ ನೌಕರಿ ಆಕಾಂಕ್ಷಿ ಅಭ್ಯರ್ಥಿಗಳನ್ನು ಈ ಒರೆಗಲ್ಲಿಗೆ ಹಚ್ಚಿ ತಮ್ಮ ಆಯ್ಕೆ ಮಾಡಿಕೊಳ್ಳುತ್ತಾರೆ.

ಗ್ರೀಕ್ ತತ್ವಜ್ಞಾನಿ ಮತ್ತು ವೈದ್ಯಕೀಯ ಶಾಸ್ತ್ರದ ಪಿತಾಮಹ ಎಂದೇ ಖ್ಯಾತಿ ಪಡೆದ ಹಿಪ್ಪೊಕ್ರೇಟಿಸ್ II ಅವರ ತತ್ವವಾದ ಆಧರಿಸಿ, 1884ರಲ್ಲಿ ಸರ್ ಫ್ರಾನ್ಸಿಸ್ ಗಾಲ್ಟನ್ ಅವರ ವಾದವನ್ನು ಒರೆಹಚ್ಚಿದ ನಂತರ, 1936ರಲ್ಲಿ ಗೊರ್ಡನ್ ಆಲ್ಪೊರ್ಟ್ ಮತ್ತು ಎಸ್. ಒಡ್ಬರ್ಟ್ ಸೇರಿ ವ್ಯಕ್ತಿತ್ವದ ಬಗ್ಗೆ ಸುಮಾರು 4,500 ಗುಣಸೂಚಕಗಳ ಪಟ್ಟಿ ತಯಾರಿಸಿದರು. ಮುಂದೆ ಇನ್ನೂ ಹಲವಾರು ಸಂಶೋಧಕರು/ಶಾಸ್ತ್ರಜ್ಞರು ಇದಕ್ಕೆ ತಮ್ಮ ಮೌಲ್ಯವನ್ನು ಸೇರಿಸಿ, ಈಗಿರುವ ರೂಪಕ್ಕೆ ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ 2016ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಂಬ್ರಿಜ್ ಎನಲಿಟಿಕಾ ಎಂಬ ಸಂಸ್ಥೆ ಇದನ್ನು ಬಳಸಿ ವಿವಾದ ಎಬ್ಬಿಸಿತ್ತು.

ನಿಮಗೂ ನಿಮ್ಮ OCEAN ಸೂಚ್ಯಾಂಕ ತಿಳಿಯಲು ಇಷ್ಟವಿದ್ದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ಕಿಸಿ:

ಈ ಮಾದರಿಯಲ್ಲಿ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಐದು ವಿಧವಾಗಿ ವಿಂಗಡಿಸಿ ಅದರ ಆಧಾರದ ಮೇಲೆ ಅವರು ಒಂಟಿಯಾಗಿ ಮತ್ತು ಒಂದು ತಂಡದ ಸದಸ್ಯರಾಗಿ ಹೇಗೆ ಬೇರೆ ಬೇರೆ ಪಾತ್ರವನ್ನು ನಿರ್ವಹಿಸಬಲ್ಲರು ಎಂಬುದನ್ನು ಅರಿತುಕೊಳ್ಳಬಹುದು. ಈ ಐದು ಗುಣಲಕ್ಷಣಗಳು ಹೀಗಿವೆ.

ಓಪನ್ನೆಸ್ ಟು ಎಕ್ಸ್ಪಿರಿಯೆನ್ಸ್ (Openness to Experience): ಅಂದರೆ ಹೊಸ ಅನುಭವಕ್ಕೆ ಸಿದ್ಧರೇ ಎಂಬ ಪ್ರಶ್ನೆ. ಇದರಲ್ಲಿ ವ್ಯಕ್ತಿಯಲ್ಲಿ ಎಷ್ಟು ಹೊಸತನ ಹುಡುಕುವ, ತಿಳಿಯುವ ಕುತೂಹಲ ಇದೆಯೇ ಅಥವಾ ಹೇಳಿದಷ್ಟು ಮಾಡುವ/ಜಾಗರೂಕತೆ ಮಾತ್ರ ಇದೆಯೇ ಎಂಬುದನ್ನು ಅರಿಯುವ ಪ್ರಯತ್ನ.

ಕಾನ್ಸೆನ್ಷಿಯಸ್ನೆಸ್(Conscientiousness): ಅಂದರೆ ಇವರ ಆತ್ಮಸಾಕ್ಷಿ/ಕರ್ತವ್ಯಜ್ಞಾನ ಹೇಗಿದೆ, ವ್ಯಕ್ತಿ ಸಮರ್ಥನೋ, ವ್ಯವಸ್ಥಿತನೋ ಅಥವಾ ಉದಾಸೀನ ಮನೋಭಾವನೋ ಎಂದು ಅರಿಯುವ ಪ್ರಯತ್ನ.

ಎಕ್ಸ್ಟ್ರಾವರ್ಷನ್ (Extraversion): ಅಂದರೆ ಇವರ ವ್ಯಕ್ತಿತ್ವ ಸ್ಪೂರ್ತಿಯುತ ಮತ್ತು ಬಾಹ್ಯ ಪ್ರವೃತ್ತಿಯೋ ಅಥವಾ ಏಕಾಂಗಿ ಮತ್ತು ಸಂಕೋಚದ ಸ್ವಭಾವವೋ ಎಂದು ಅರಿಯುವ ಪ್ರಯತ್ನ.

ಅಗ್ರೀಯಬಲ್ನೆಸ್(Agreeableness): ಅಂದರೆ ಒಪ್ಪಬಹುದಾದ ವ್ಯಕ್ತಿತ್ವವೇ? ಸ್ನೇಹಪರವೋ, ಬೇರೆಯವರ ಬಗ್ಗೆ ಅನುಕಂಪ ಇರುವಂತಹುದೋ ಅಥವಾ ಸ್ಪರ್ಧಾತ್ಮಕ ಮತ್ತು ನಿರ್ಲಿಪ್ತವಾದಿಯೋ ಎಂಬುದನ್ನು ಅರಿಯುವ ಪ್ರಯತ್ನ.

ನ್ಯೂರೋಟಿಸಿಸ್ಮ್(Neuroticism): ಅಂದರೆ ಇವರ ವ್ಯಕ್ತಿತ್ವ ವಿಪರೀತ ಸೂಕ್ಷ್ಮವೇದಿಯೋ ಅಥವಾ ಸುಭದ್ರ ಮತ್ತು ಆತ್ಮಸ್ಥೈರ್ಯವುಳ್ಳದ್ದೋ ಅದನ್ನು ಅರಿಯುವ ಪ್ರಯತ್ನ.

ಹೊಸ ಅನುಭವಕ್ಕೆ ಸಿದ್ದವಾದ ವ್ಯಕ್ತಿ ಸಾಮಾನ್ಯವಾಗಿ ಕಲಾಪ್ರೇಮಿ, ಸಾಹಸಪ್ರಿಯ, ಊಹಾಶಕ್ತಿಯುಳ್ಳ ಮತ್ತು ಕುತೂಹಲಶಾಲಿಯಾಗಿರುತ್ತಾರೆ. ಹೊಸದನ್ನು ಪ್ರಯತ್ನಿಸಲು ಮುಂದಾಗಿರುತ್ತಾರೆ, ಸೃಜನಾತ್ಮಕವಾಗಿರುತ್ತಾರೆ. ಮಿಕ್ಕವರಿಗಿಂತ ಅವರ ನಂಬಿಕೆ ವಿಭಿನ್ನವಾಗಿರುತ್ತದೆ. ಆದರೆ ಅತಿ ಕುತೂಹಲಕಾರಿ ನಡತೆ ನಕಾರಾತ್ಮಕ ಸೂಚಕವೂ ಆಗಿರಬಹುದು. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ಹೊಸ ಯೋಚನೆಯನ್ನು ನಾನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲೆ.

·         ನಾನು ಕಷ್ಟಕರ ಪದಗಳನ್ನು ಬಳಸುತ್ತೇನೆ.

·         ನನಗೆ ಅಮೂರ್ತದಲ್ಲಿ ಆಸಕ್ತಿ ಇಲ್ಲ (ತದ್ವಿರುದ್ಧ).

·         ನನಗೆ ಇದನ್ನು ಊಹಿಸಿಕೊಳ್ಳುವುದು ಕಷ್ಟ (ತದ್ವಿರುದ್ಧ).

ಕರ್ತವ್ಯಜ್ಞಾನಿಗಳು ತಮ್ಮ ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಇನ್ನೊಬ್ಬರ ಅಪೇಕ್ಷೆಗೆ ಅಥವಾ ಅದನ್ನು ಮೀರಿ ಕೆಲಸ ಮಾಡುತ್ತಾರೆ. ಇವರನ್ನು ಕೆಲವರು ಕಟ್ಟುನಿಟ್ಟು ಅಥವಾ ಮೊಂಡರು ಎಂದೂ ಭಾವಿಸಬಹುದು. ಹಾಗೆಯೇ ನಿಯಮ ಪಾಲನೆ ಮಾಡದವರನ್ನು ಕಾಲಕ್ಕೆ ತಕ್ಕಂತೆ ಬಗ್ಗುವವರೆಂದು ಪರಿಗಣಿಸಬಹುದು. ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ನಿಯಮಪಾಲಕರಲ್ಲದವರು ವಯಸ್ಸಾಗುತ್ತ ಬಂದಂತೆ ಕಟ್ಟುನಿಟ್ಟಾಗುತ್ತಾರೆ. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನಾನು ಸದಾ ಸಿದ್ಧ, ಸಣ್ಣ ಸಣ್ಣ ವಸ್ತುಗಳಿಗೆ ನಾನು ಗಮನ ನೀಡುತ್ತೇನೆ.

·         ನಾನು ಎಲ್ಲಾ ಕೆಲ್ಸಗಳನ್ನು ಸಮಯಸಾರಣಿ ಪ್ರಕಾರ ಮಾಡುತ್ತೇನೆ.

·         ನಾನು ನನ್ನ ವಸ್ತುಗಳನ್ನು ಚೆಲ್ಲಪಿಲ್ಲಿಯಾಗಿ ಹರಡಿರುತ್ತೇನೆ (ತದ್ವಿರುದ್ಧ).

·         ನಾನು ತೆಗೆದುಕೊಂಡ ವಸ್ತುಗಳನ್ನು ಸ್ವಸ್ಥಾನದಲ್ಲಿ ಇಡುವುದಿಲ್ಲ. (ತದ್ವಿರುದ್ಧ).

ಬಾಹ್ಯಪ್ರವೃತ್ತಿಯ ವ್ಯಕ್ತಿಗಳು ಬಹಳಷ್ಟು ಕೆಲಸದಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ. ಇವರಿಗೆ ಸ್ಪೂರ್ತಿ ಹೊರಗಿನಿಂದ ಬರುತ್ತದೆ. ಹೊರಜಗತ್ತಿನ ಒಡನಾಟದಲ್ಲಿ, ಗುಂಪಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನಾನು ಜನರ ಮಧ್ಯೆ ಇರಲು ಬಯಸುತ್ತೇನೆ.

·         ಯಾವುದೇ ಚರ್ಚೆಯ ಕೇಂದ್ರಬಿಂದುವಾಗಲು ನಾನು ಸಿದ್ಧ.

·         ನಾನು ಹೆಚ್ಚಾಗಿ ಮಾತನಾಡುವುದಿಲ್ಲ (ತದ್ವಿರುದ್ಧ).

·         ಭಾಷಣ ಮಾಡಬೇಕೆಂದರೆ ನನಗೆ ಹೆದರಿಕೆ (ತದ್ವಿರುದ್ಧ).

ಒಪ್ಪಬಹುದಾದ ವ್ಯಕ್ತಿಗಳು ಸಾಮಾಜಿಕ ಸಾಮರಸ್ಯಕ್ಕೆ ಬಹಳಷ್ಟು ಮಟ್ಟಿಗೆ ಹೊಂದಿಕೊಳ್ಳುತ್ತಾರೆ. ಸ್ವಾರ್ಥಿಗಳಲ್ಲ. ಸಹಾಯ ಮಾಡುವವರು, ಆಶಾವಾದಿಗಳು. ವ್ಯತಿರಿಕ್ತರು ಸದಾ ಜಗಳವಾಡುವವರು ಅಥವಾ ನಂಬಿಕರ್ಹರಲ್ಲ.ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ಬೇರೆಯವರ ಬಗ್ಗೆ ನನಗೆ ಅನುಕಂಪವಿದೆ.

·         ಬೇರೆಯವರಿಗಾಗಿ ನಾನು ಸಮಯ ನೀಡುತ್ತೇನೆ.

·         ಬೇರೆಯವರ ಸಮಸ್ಯೆ ಕಟ್ಟಿಕೊಂಡು ನನಗೇನಾಗಬೇಕು (ತದ್ವಿರುದ್ಧ).

·         ನಾನು ಬೇರೆಯವರನ್ನು ಅವಮಾನಿಸುತ್ತೇನೆ (ತದ್ವಿರುದ್ಧ).

ಅತಿಸೂಕ್ಷ್ಮವೇದಿಗಳು ಋಣಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಕೋಪ, ಆತಂಕ ಅಥವಾ ಖಿನ್ನತೆ, ನಿರಾಶಾವಾದಿ ಇತ್ಯಾದಿ. ಸಾಧಾರಣವಾಗಿ ಭಾವನೆಗಳ ಅಸ್ಥಿರತೆ ಅಥವಾ ತದ್ವಿರುದ್ಧದಲ್ಲಿ ಭಾವನೆಗಳ ಸ್ಥಿರತೆ ಎಂದೂ ಕರೆಯಬಹುದು. ಜೀವನದಲ್ಲಿ ಅಸಂತೃಪ್ತರು.ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನನಗೆ ಬೇಗ ಸಿಟ್ಟು ಬರುತ್ತದೆ.

·         ನನಗೆ ಎಲ್ಲದರ ಬಗ್ಗೆಯೂ ಆತಂಕವಿರುತ್ತದೆ.

·         ನಾನು ಸದಾ ಜಾಲಿಯಾಗಿರುತ್ತೇನೆ (ತದ್ವಿರುದ್ಧ).

·         ನಾನು ಯಾವಾಗಲೂ ದುಃಖಿಯಾಗಿರುವುದಿಲ್ಲ (ತದ್ವಿರುದ್ಧ).

ನೀವು ಈ ಪರೀಕ್ಷೆ ತೆಗೆದುಕೊಂಡಲ್ಲಿ ನಿಮ್ಮ ಫಲಿತಾಂಶ ಈ ರೀತಿ ಇರಬಹುದು O93-C74-E31-A96-N5. ಅದರ ವಿಶ್ಲೇಷಣೆಯನ್ನೂ ಜಾಲತಾಣದಲ್ಲಿ ತಿಳಿಯಬಹುದು. ನಿಮಗೆ ಯಾವ ರೀತಿಯ ಕೆಲಸ ಸರಿಹೊಂದುತ್ತದೆ ಎಂದು ನೀವೇ ನಿರ್ಧರಿಸಿಕೊಳ್ಳಬಹುದು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...