Homeಕರ್ನಾಟಕಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

- Advertisement -
- Advertisement -

ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

“ನಾವು ಸರ್ಕಾರವನ್ನು ನಡೆಸುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದು ತಳ್ಳಿಕೊಂಡು ಹೋಗುತ್ತಿದ್ದೇವೆ” ಎಂದು ಮಾಧುಸ್ವಾಮಿ ಹೇಳಿರುವುದು ದಾಖಲಾಗಿದ್ದು, ಆಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿವಾದದ ಬಳಿಕ ಮಾಧುಸ್ವಾಮಿಯವರೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ರಾಜೀನಾಮೆ ಕೇಳಿದರೆ, ಮುಖ್ಯಮಂತ್ರಿಯವರಿಗೆ ಒಳ್ಳೆಯದಾಗುವುದಾದರೆ, ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಎರಡು ಕ್ಷಣ ಯೋಚನೆ ಮಾಡದೆ ರಾಜೀನಾಮೆ ನೀಡುತ್ತೇನೆ” ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

“ಒಂದು ವೇಳೆ ಮುಖ್ಯಮಂತ್ರಿಯವರು ರಾಜೀನಾಮೆ ಕೊಡಿ ಎಂದರೆ?” ಎಂದು ಪತ್ರಕರ್ತರು ಕೇಳಿದಾಗ ಮಾಧುಸ್ವಾಮಿಯವರು ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ‘ಆಡಿಯೊ ನನ್ನದೇ’ ಎಂದು ಅವರು ಒಪ್ಪಿಕೊಂಡಿದ್ದಾರೆ.

ಬಿಜೆಪಿ ನಾಯಕ ರೇಣುಕಾಚಾರ್ಯ ಅವರು ಮಾಡಿರುವ ಟೀಕೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, “ರೇಣುಕಾಚಾರ್ಯರು ನೀಡಿರುವ ಹೇಳಿಕೆ ನನಗೆ ಸಂಬಂಧಪಟ್ಟಿಲ್ಲ. ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ. ರೇಣುಕಾಚಾರ್ಯರಿಗೆ ವಿವರಿಸುವ ಪರಿಸ್ಥಿತಿ ಇಲ್ಲ” ಎಂದಿದ್ದಾರೆ.

ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಕೇಳಿದಾಗ, “ನಾನು ಇಷ್ಟು ಹೇಳಿದ್ದಕ್ಕೆ ಇಷ್ಟಾಗಿದೆ. ನನ್ನಿಂದ ಕಾನೂನು ಸುವ್ಯವಸ್ಥೆ ಬಗ್ಗೆಯೂ ಹೇಳಿಸಿ ಏನು ಮಾಡಬೇಕು ಅಂತ ಇದ್ದೀರಪ್ಪ” ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯಲ್ಲಿನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೆ ಇರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ಜವಾಬ್ದಾರಿ ಕೊಟ್ಟಾಗ ಪೂರ್ಣ ಜವಾಬ್ದಾರಿ ತೆಗೆದುಕೊಂಡು ಮಾಡುತ್ತೇನೆ. ಜವಾಬ್ದಾರಿ ಇಲ್ಲದಿದ್ದಾಗ ಅದರ ತಂಟೆಗೆ ಹೋಗುವುದಿಲ್ಲ. ನನಗೇನು ಆಗಬೇಕಿದೆ. ನನಗೆ ಜವಾಬ್ದಾರಿ ಇಲ್ಲವಾದರೆ ನಾನು ಬರಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಬಿಜೆಪಿಯೊಳಗೆಯೇ ಭಿನ್ನಾಭಿಪ್ರಾಯ ಸೃಷ್ಟಿಸಿದ ಮಾಧುಸ್ವಾಮಿ ಆಡಿಯೊ!

ವೈರಲ್ ಆಡಿಯೊ ಕುರಿತು ಮಾತನಾಡಿರುವ ಅವರು, “ಸನ್ಮಾನ್ಯ ಸೋಮಶೇಖರ್‌ ಅವರಿಗೂ ಹೇಳಿದ್ದೇನೆಂದು ಕರೆ ಮಾಡಿದ ವ್ಯಕ್ತಿಗೆ ತಿಳಿಸಿದೆ. ಅಷ್ಟು ಬಿಟ್ಟರೆ ನಾನು ಇನ್ಯಾವ ಮಾತು ಆಡಿಲ್ಲ. ಅಷ್ಟಕ್ಕೆ ಸೋಮಶೇಖರ್‌ ಅವರು ಇಷ್ಟು ಮಾತನಾಡಿದ್ದಾರೆ. ಇದು ಬಹಳ ದಿನಗಳ ಹಿಂದಿನ ಆಡಿಯೊ” ಎಂದಿದ್ದಾರೆ.

“ಸರ್ಕಾರ ಖಂಡಿತ ನಡೆಯುತ್ತಿದೆ. ಕರೆ ಮಾಡಿದ ವ್ಯಕ್ತಿ ಪ್ರಚೋದನೆ ಮಾಡಿದ್ದಕ್ಕೆ ಹೇಳಿದ್ದೇನೆ. ಆತ ಯಾವುದನ್ನು ಎಡಿಟ್ ಮಾಡಿದನೋ, ಯಾವುದನ್ನು ಉಳಿಸಿಕೊಂಡನೋ ನನಗೇನು ಗೊತ್ತು? ಮುಖ್ಯಮಂತ್ರಿಯವರಿಗೆ ವಿವರಿಸಿದ್ದೇನೆ. ಅವರು ಕನ್‌ವಿನ್ಸ್ ಆಗಿದ್ದಾರೆ. ರಾಜೀನಾಮೆ ವಿಷಯ ಬಂದರೆ ಧಾರಾಳವಾಗಿ ಕೊಡುತ್ತೇನೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

“ಆಡಿಯೊ ರೆಕಾರ್ಡ್ ಮಾಡಿ, ಇಷ್ಟು ಲಂಬಿಸಿದ ಮೇಲೆ ಒಂದು ಪ್ರಕರಣ ದಾಖಲಿಸುವುದು ಸೂಕ್ತ ಎಂದು ಲಾಯರ್‌‌ ಬಳಿ ಕೇಳಿದ್ದೇನೆ. ಇದನ್ನು ಬಿಟ್ಟುಬಿಡಿ ಎಳೆದುಕೊಂಡು ಹೋಗಬೇಡಿ ಎಂದಿದ್ದಾರೆ. ಯಾರೋ ಭಾಸ್ಕರ ಅನ್ನೋರು ಮಾತನಾಡಿದ್ದಾನೆ. ಆತ ಯಾರೆಂದು ನನಗೂ ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...