ಉತ್ತರ ಪ್ರದೇಶದ ಔರೈಯಾದಲ್ಲಿನ ಆದರ್ಶ ಇಂಟರ್‌ಕಾಲೇಜ್‌ನಲ್ಲಿ ಕಲಿಯುತ್ತಿದ್ದ ದಲಿತ ವಿದ್ಯಾರ್ಥಿಯನ್ನು ಸವರ್ಣೀಯ ಸಮುದಾಯದ ಅಶ್ವಿನಿ ಸಿಂಗ್ ಎಂಬ ಶಿಕ್ಷಕ ಅಮಾನವೀಯವಾಗಿ ಥಳಿಸಿದ್ದು, ಬಾಲಕನೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಪ್ರಕರಣದ ಬಗ್ಗೆ ಅಚ್ಚಲ್ಡಾ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಶಿಕ್ಷಕನಿಂದ ಥಳಿತಕ್ಕೊಳಗಾದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಶಿಕ್ಷಕನ ವಿರುದ್ಧ ತಂದೆ ದೂರು ದಾಖಲಿಸಿದ್ದು, ವಿದ್ಯಾರ್ಥಿಗೆ ಚಿಕಿತ್ಸೆ ನೀಡದೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಾರು ನಿಗಮ್ ಅವರ ಆದೇಶದ ಮೇರೆಗೆ ಎಫ್‌ಐಆರ್ ದಾಖಲಾಗಿದೆ.
#Horrific Very painful and terrible incident happened in UP's Auraiya. Class 10 Dalit student from Adarsh Intercollege, brutally beaten to death by caste Hindu teacher Ashwini Singh. FIR lodged at Acchalda police station. pic.twitter.com/DI8BlCcpvS
— The Dalit Voice (@ambedkariteIND) September 26, 2022
ಸಂತ್ರಸ್ತ ಬಾಲಕನನ್ನು ಅಚ್ಚಲ್ದಾ ಬೈಸೌಲಿಯ ನಿವಾಸಿ ರಾಜು ದೋಹ್ರಾ ಅವರ ಮಗ ನಿಖಿಲ್ ಕುಮಾರ್ (15) ಎಂದು ಗುರುತಿಸಲಾಗಿದೆ. ಬಾಲಕನೂ ಆದರ್ಶ ಇಂಟರ್ ಕಾಲೇಜಿನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದರು. ಸೆಪ್ಟೆಂಬರ್ 13 ರಂದು ಶಾಲೆಗೆ ಹೋದಾಗ ಸಮಾಜ ವಿಜ್ಞಾನ ಶಿಕ್ಷಕ ಅಶ್ವನಿ ಸಿಂಗ್ ತನ್ನ ಮಗನಿಗೆ ಪರೀಕ್ಷೆಯ ಹೆಸರಿನಲ್ಲಿ ಥಳಿಸಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಾಲೂರು: ದಲಿತ ಬಾಲಕ ದೇವರು ಮುಟ್ಟಿದನೆಂದು ಶೋಷಿತ ಕುಟುಂಬಕ್ಕೆ ಬಹಿಷ್ಕಾರ
ಮಗನ ಸ್ಥಿತಿ ಹದಗೆಟ್ಟಾಗ, ಅವರನ್ನು ಪಿಜಿಐ ಲಕ್ನೋಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶಿಕ್ಷಕನೂ ತಾನು ಚಿಕಿತ್ಸೆಗೆ ಹಣ ನೀಡುವುದಾಗಿ ಹೇಳಿದ್ದು, ಅದರಂತೆ 10 ಸಾವಿರ ಮತ್ತು ನಂತರ 30 ಸಾವಿರ ನೀಡಿದ್ದನು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರವೂ ಮಗನ ಸ್ಥಿತಿ ಸುಧಾರಿಸಿರಲಿಲ್ಲ. ಚಿಕಿತ್ಸೆಗಾಗಿ ಮತ್ತೆ ಹಣ ಕೇಳಿದಾಗ ಶಿಕ್ಷಕ ಅವರಿಗೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
— Auraiya Police (@auraiyapolice) September 26, 2022
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಲಲಿತ್ ಕುಮಾರ್ ತಿಳಿಸಿದ್ದಾರೆ ಎಂದು ಅಮರ್ ಉಜಾಲ ವರದಿ ಮಾಡಿದೆ.



ಶಿಕ್ಷಕ ರೂಪದ ನರಹಂತಕನಿಗೆ ಶಿಕ್ಷೆ ಆಗಬೇಕು.
Yes sure