Homeಕರ್ನಾಟಕ‘ರಾಹುಲ್‌, ಭಾರತ್‌ ಜೋಡೋ’ ಕುರಿತು ನಿಂದನಾತ್ಮಕ ಜಾಹೀರಾತು ನೀಡಿದ ರಾಜ್ಯ ಬಿಜೆಪಿ; ಜನಾಕ್ರೋಶ

‘ರಾಹುಲ್‌, ಭಾರತ್‌ ಜೋಡೋ’ ಕುರಿತು ನಿಂದನಾತ್ಮಕ ಜಾಹೀರಾತು ನೀಡಿದ ರಾಜ್ಯ ಬಿಜೆಪಿ; ಜನಾಕ್ರೋಶ

- Advertisement -
- Advertisement -

ದೇಶದ ಬಹುತ್ವವನ್ನು ಒಡೆದು ರಾಜಕೀಯ ಮಾಡುತ್ತಿರುವ ಕೋಮುಶಕ್ತಿಗಳ ವಿರುದ್ಧ ಜನರನ್ನು ಒಟ್ಟುಗೂಡಿಸಿ, ದೇಶದ ಏಕತೆಯನ್ನು ಸ್ಥಾಪಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೈಗೊಂಡಿರುವ ಭಾರತ್‌ ಜೋಡೋ ಯಾತ್ರೆ ಹಾಗೂ ರಾಹುಲ್‌ ಗಾಂಧಿ ಕುರಿತು ಕರ್ನಾಟಕ ಬಿಜೆಪಿ ಕೀಳು ಅಭಿರುಚಿಯ ಜಾಹೀರಾತು ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿದೆ.

‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಒಂದು ಪುಟದ ಜಾಹೀರಾತು ಅತ್ಯಂತ ಅಸಹನೀಯವಾಗಿದೆ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ. ಇಂತಹ ಜಾಹೀರಾತನ್ನು ಪ್ರಕಟಿಸಿದ ಪತ್ರಿಕೆಯ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.

‘ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೆ?’ ಎಂಬ ದೊಡ್ಡ ಶೀರ್ಷಿಕೆಯಲ್ಲಿ ಜಾಹೀತಾತು ಪ್ರಕಟಿಸಲಾಗಿದೆ. ಮಹಮ್ಮದ್‌ಅಲಿ ಜಿನ್ನಾ ಹಾಗೂ ಜವಹರಲಾಲ್‌ ನೆಹರೂ ಅವರ ಫೋಟೋಗಳನ್ನು ಇಲ್ಲಿ ಬಳಸಲಾಗಿದೆ. ಕಾಂಗ್ರೆಸ್‌ ಪಕ್ಷದ ಹಸ್ತದ ಗುರುತನ್ನು ಮುದ್ರಿಸಲಾಗಿದೆ.

‘ಭಾರತ ವಿಭಜನೆತೆಯ ಪಿತಾಮಹನ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ? ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ? ದೇಶ ವಿಭಜನೆಯ ಪರಂಪರೆಯಲ್ಲಿ ಬಂದವರಿಂದ ದೇಶ ಒಡೆಯುವವರನ್ನು ಬೆಂಬಲಿಸಿದವರಿಂದ ಭಾರತದ ಐಕ್ಯತೆ ಸಾಧ್ಯವೆ? ಭಾರತ ಐಕ್ಯತಾ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಆಗಿದೆ’ ಎಂದು ಬಿಜೆಪಿ ಜಾಹೀರಾತು ನೀಡಿದೆ.

ರಾಜಕೀಯ ಸೌಜನ್ಯವನ್ನು ಮೀರಿ ಅತಿರೇಕದ ಜಾಹೀರಾತನ್ನು ನೀಡಿರುವುದಕ್ಕೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್‌, “#BharatJodoYatra ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ಕನ್ನಡ ಪತ್ರಿಕೆಯೊಂದರಲ್ಲಿ ಎಂದಿನಂತೆ ಇತಿಹಾಸ ತಿರುಚುವ ಮುಖಪುಟದ ಜಾಹೀರಾತು ನೀಡಿದೆ. ಸಾವರ್ಕರ್ ಎರಡು ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು, ಜಿನ್ನಾ ಅದನ್ನು ಪೂರೈಸಿಕೊಂಡರು. ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಬಂಗಾಳದ ವಿಭಜನೆಯಲ್ಲಿ ಮುಂದಾಳತ್ವ ವಹಿಸಿದ್ದರು” ಎಂದು ಸ್ಪಷ್ಟಪಡಿಸಿದ್ದಾರೆ.

“ರಾಜಕೀಯ ಪಕ್ಷಗಳು ಸಹಜವಾಗಿ ತಮ್ಮ ಸಾಧನೆ ಹೇಳಲು, ಸಕಾರಾತ್ಮಕ ಸಂದೇಶ ನೀಡಲು ಪತ್ರಿಕೆಗಳ‘ ಮುಖಪುಟದ ಜಾಹೀರಾತು ನೀಡುವುದು ವಾಡಿಕೆ. ಆದರೆ ಕರ್ನಾಟಕ ಬಿಜೆಪಿ ಕೋಟಿ ಕೋಟಿ ಖರ್ಚು ಮಾಡಿ ನಕಾರಾತ್ಮಕ ಜಾಹೀರಾತು ನೀಡಿದೆ ಎಂದರೆ ಅವರಲ್ಲಿ ಅದೆಷ್ಟು ಭಯ, ಆತಂಕ, ಅಭದ್ರತೆಯನ್ನು ಭಾರತ್‌ ಜೋಡೋ ಯಾತ್ರೆ ಮೂಡಿಸಿರಬಹುದೆಂದು ಊಹಿಸಬಹುದು” ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಹಿರಿಯ ಪತ್ರಕರ್ತರಾದ ಸತನ್‌ ಕುಮಾರ್‌ ಬೆಳಗಲಿಯವರು, “ರಾಹುಲ್‌ ಗಾಂಧಿಯವರ ಭಾರತ ಜೋಡಿಸುವ ಯಾತ್ರೆಯಿಂದ ಬಿಜೆಪಿ ಎಷ್ಟು ಹತಾಶೆಯಾಗಿದೆ ಎಂಬುದಕ್ಕೆ ಈ ಜಾಹೀರಾತು ಉದಾಹರಣೆ. ಸ್ವಾತಂತ್ರ್ಯ ಹೋರಾಟದ ನೇತಾರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತೇಜೋವಧೆಗೆ ಈ ನಿರ್ಲಜ್ಜ ಕೋಮುವಾದಿ ಪಕ್ಷ ಮುಂದಾಗಿದೆ” ಎಂದು ಟೀಕಿಸಿದ್ದಾರೆ.

“ಈ ಜಾಹೀರಾತಿನಲ್ಲಿ ಬರೆದದ್ದು ನಿಜವೇ ಆಗಿದ್ದರೆ, ನೆಹರೂ ಜಯಂತಿ ದಿನ ಪ್ರಧಾನಿ ಮೋದಿ ನೆಹರೂ ಭಾವಚಿತ್ರಕ್ಕೆ ಹಾರ ಹಾಕಿ ಗೌರವಿಸಿದ್ದೇಕೆ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೆಹರೂ ಅವರ ಕೊಡುಗೆಯನ್ನು ಹಾಡಿ ಹೊಗಳಿದ್ದೇಕೆ? ಹೊಟ್ಟೆಗೆ ಅನ್ನ ತಿನ್ನುವವರು ಮಾಡುವ ಕೆಲಸ ಇದಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಈ ಜಾಹೀರಾತಿನ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ಕಾಯ್ದೆ ಪರಿಣಿತರನ್ನು ವಿಚಾರಿಸಬೇಕು. ಇದು ಕನ್ನಡಪ್ರಭ ಪತ್ರಿಕೆಯ ದುರಂತಕ್ಕೆ ಒಂದು ಉದಾಹರಣೆ ಕೂಡ. ದುಡ್ಡು ಹಾಕಿಕೊಂಡ ಮಾಲೀಕ ಪತ್ರಿಕೆಯನ್ನು ಕಾಲೊರೆಸುವ ಮ್ಯಾಟನ್ನಾಗಿ ಇದನ್ನು ಮಾಡಿಕೊಂಡಿದ್ದಾನೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿವೃತ್ತ ಪ್ರಾಧ್ಯಾಪಕರಾದ ಪುರುಷೋತ್ತಮ ಬಿಳಿಮಲೆಯವರು ಪ್ರತಿಕ್ರಿಯಿಸಿ, “ʼಸಂಸ್ಕೃತಿ ರಕ್ಷಕʼರೆಂದು ತಾವೇ ಘೋಷಿಸಿಕೊಂಡವರ ಅಸಂಸ್ಕೃತ ಭಾಷೆ ಗಮನಿಸಿ. ಇದನ್ನು ಬರೆದವನು ಮೊದಲು ವಿದ್ಯಾಧಿದೇವತೆಯಾದ ಸರಸ್ವತಿಯನ್ನು ಪೂಜಿಸಿ (ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ, ವಿದ್ಯಾರಂಭಂ ಕರಿಷ್ಯಾಮೀ ಸಿದ್ದಿರ್ಭವತು ಮೇ ಸದಾ) ಶಾಲೆಗೆ ಸೇರಬೇಕು. ವಯಸ್ಕರ ಶಿಕ್ಷಣಕ್ಕೂ ಆದೀತು. ಅಂದ ಹಾಗೆ ಕರ್ನಾಟಕದಲ್ಲಿ ಬಿಜೆಪಿಯ ಸ್ಥಿತಿ ಇಷ್ಟೊಂದು ಕರುಣಾಜನಕವಾಗಿದೆಯೇ? ಜಾಹೀರಾತು ನೋಡಿದರೆ 40-50 ಸೀಟು ಕೂಡಾ ಗ್ಯಾರಂಟಿ ಇದ್ದಂಗಿಲ್ಲ” ಎಂದಿದ್ದಾರೆ.

ಕೊಪ್ಪಳದ ನಿವಾಸಿ ಚಾಮರಾಜ ಸವಡಿ ಪ್ರತಿಕ್ರಿಯಿಸಿ, “ಇಂದಿನ (1-10-2022) ಕನ್ನಡಪ್ರಭ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ಈ ಜಾಹೀರಾತು ದ್ವೇಷ ರಾಜಕಾರಣದ ಪ್ರತೀಕ. ಪ್ರಜಾಸತ್ತಾತ್ಮಕ ವಿಧಾನದಲ್ಲಿ ತಮ್ಮ ಚಟುವಟಿಕೆ ನಡೆಸುವ ಹಕ್ಕು ದೇಶದ ಪ್ರತಿಯೊಬ್ಬರಿಗೂ ಇದೆ. ರಾಜಕೀಯ ಪಕ್ಷಗಳೂ ಅದಕ್ಕೆ ಹೊರತಾಗಿಲ್ಲ. ಕಾಂಗ್ರೆಸ್‌ ಪಕ್ಷದ ಈ ಕಾರ್ಯಕ್ರಮಕ್ಕೆ ಬಿಜೆಪಿ ಸೈದ್ಧಾಂತಿಕವಾಗಿ ಪ್ರತಿಕ್ರಿಯಿಸಬಹುದಿತ್ತು. ಅದು ಬಿಟ್ಟು ಈ ರೀತಿಯ ದ್ವೇಷ ಪ್ರಚಾರ ನಡೆಸುವುದು ಬಿಜೆಪಿಗಷ್ಟೇ ಅಲ್ಲ, ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವ ಸಂಗತಿಯಲ್ಲ. ಭಾರತ್‌ ಜೋಡೋ ಯಾತ್ರೆಯಿಂದ ತಾನು ತಳಮಳಗೊಂಡಿರುವುದನ್ನು ಬಿಜೆಪಿಯ ಈ ಜಾಹೀರಾತು ಬಿಂಬಿಸಿದೆ’’ ಎಂದು ತಿಳಿಸಿದ್ದಾರೆ.

ಚಿಂತಕ ಸುದರ್ಶನ್ ಜಯರಾಮು ಟ್ವೀಟ್ ಮಾಡಿ, “ಬಿಜೆಪಿ ಪಕ್ಷವೂ ಕೂಡ ಇದೀಗ #BharatJodoYatra ಗೆ ತನ್ನ ಬೆಂಬಲವನ್ನು ಕೊಡುತ್ತಿದೆ. ಈ ಮುಖಪುಟದ ಜಾಹೀರಾತು ಹಾಕಲು ಕನಿಷ್ಠ ಪಕ್ಷ 10 ಲಕ್ಷವಾದರೂ ಖರ್ಚಾಗುತ್ತದೆ” ಎಂದಿದ್ದಾರೆ. ಜೊತೆಗೆ ಗಾಂಧಿಯವರ ಮಾತನ್ನು ಉಲ್ಲೇಖಿಸಿದ್ದಾರೆ.

“ಮೊದಲು ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ಅವರು ನಿಮ್ಮನ್ನು ನೋಡಿ ನಗುತ್ತಾರೆ, ನಂತರ ಅವರು ನಿಮ್ಮೊಂದಿಗೆ ಹೋರಾಡುತ್ತಾರೆ, ನಂತರ ನೀವು ಗೆಲ್ಲುತ್ತೀರಿ” ಎಂದು ಗಾಂಧೀಜಿ ಹೇಳಿದ್ದನ್ನು ಸ್ಮರಿಸಿದ್ದಾರೆ.

“ಕೇಂದ್ರ , ರಾಜ್ಯ ಎರಡರಲ್ಲೂ ಅಧಿಕಾರದಲ್ಲಿರುವ ಪಕ್ಷವೊಂದು ವಿರೋಧ ಪಕ್ಷದ ಜಾಥಾವೊಂದರ ವಿರುದ್ಧ‘ ಇಷ್ಟು ಕೊಳಕಾಗಿ ಪೂರ್ತಿ ಪುಟದ ಜಾಹೀರಾತು ನೀಡಬೇಕಾದರೆ ಅದು ಯಾವ ಮಟ್ಟಿನ ಹತಾಶ ಸ್ಥಿತಿ ತಲುಪಿರಬೇಕು? ಕರ್ನಾಟಕದ ಮಟ್ಟಿಗೆ ಬಿಜೆಪಿ ಸೋಲನ್ನು ಈಗಾಗಲೇ ಅರ್ಧ ಮಟ್ಟಿಗೆ ಒಪ್ಪಿಕೊಂಡಂತೆಯೇ ಕಾಣುತ್ತಿದೆ” ಎಂದು ರಾಧಾ ಅವಿನಾಶ್ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುನ್ನಡೆ ಸಾದಿಸುತ್ತಿರುವುದರಿಂದ, ಮನುವಾದಿಗಳು ಕಂಗೆಟ್ಟಿದ್ದಾರೆ. ಅದಕ್ಕೆ ಇಂತಹ ನೀಚತನದ ಜಾಹೀರಾತು ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಕಾದ್ರಿ ಶಾಮಣ್ಣನಂತವರು ಸಂಪಾದಕರಾಗಿದ್ದ ಕನ್ನಡ ಪ್ರಬ, ಇಂದು ಇಂತಹ ಹೀನಾಯ ಸ್ತಿತಿಗೆ ಬಂದಿದೆ.

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...