Homeದಲಿತ್ ಫೈಲ್ಸ್ಉತ್ತರ ಪ್ರದೇಶ: ವಿಗ್ರಹ ಮುಟ್ಟಿದ್ದಾನೆಂದು ದಲಿತ ವ್ಯಕ್ತಿಯ ಕೊಲೆ; ಆರೋಪ

ಉತ್ತರ ಪ್ರದೇಶ: ವಿಗ್ರಹ ಮುಟ್ಟಿದ್ದಾನೆಂದು ದಲಿತ ವ್ಯಕ್ತಿಯ ಕೊಲೆ; ಆರೋಪ

- Advertisement -
- Advertisement -

ಉತ್ತರ ಪ್ರದೇಶದ ಪ್ರತಾಪ್‌ಗಢ್ ಜಿಲ್ಲೆಯ ಉಧಾ ಗ್ರಾಮದಲ್ಲಿ ಶುಕ್ರವಾರ ದಲಿತ ವ್ಯಕ್ತಿಯೊಬ್ಬರು ದುರ್ಗಾ ಪೂಜೆಯ ಮಂಟಪದಲ್ಲಿ ವಿಗ್ರಹವನ್ನು ಮುಟ್ಟಿದ್ದಾನೆಂದು ಕೊಲೆಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯ ಕುಟುಂಬ ಸದಸ್ಯರ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ಜಾತಿ ಕಾರಣಕ್ಕಾಗಿ ಕೊಲೆಯಾಗಿದೆ ಎಂಬುದನ್ನು ಪೊಲೀಸರು ತಳ್ಳಿಹಾಕಿದ್ದು, “ಇದು ಕೇವಲ ಸಾಮಾಜಿಕ ಮಾಧ್ಯಮದ ವದಂತಿ” ಎಂದು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪ್ರತಾಪ್‌ಗಢ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) ಅನ್ನೂ ಸೇರಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸೆಪ್ಟೆಂಬರ್ 30 ರಂದು ಸಂಭವಿಸಿದ ಈ ಘಟನೆಯನ್ನು ಹಿಂದಿ ನ್ಯೂಸ್ ಪೋರ್ಟಲ್ ‘ಬೋಲ್ಟಾ ಹಿಂದೂಸ್ತಾನ್’ ಅಕ್ಟೋಬರ್ 4ರಂದು ಮೊದಲು ಟ್ವೀಟ್ ಮಾಡಿದೆ. ನಂತರ ಅದನ್ನು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಸೇರಿದಂತೆ ಹಲವರು ರೀಟ್ವೀಟ್ ಮಾಡಿದ್ದಾರೆ.

ಬೋಲ್ಟಾ ಹಿಂದೂಸ್ತಾನ್ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಮಹಿಳೆಯೊಬ್ಬರು ಮಾತನಾಡಿದ್ದು, “ಜಗ್ರೂಪ್ ಹರಿಜನ್‌ ಅವರು ದುರ್ಗಾ ಪೂಜೆಯನ್ನು ನೋಡಲು ಹತ್ತಿರದ ಮನೆಗೆ ಹೋಗಿ ಕೊಲೆಯಾಗಿದ್ದಾರೆ. ಮುನ್ನಾ ಮತ್ತು ಸಂದೀಪ್ ಎಂಬವರು ಇದರಲ್ಲಿ ಭಾಗಿಯಾಗಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.

ಮತ್ತೊಂದು ವಿಡಿಯೊ ಕುರಿತು ‘ದಿ ವೈರ್‌’ ವರದಿ ಮಾಡಿದ್ದು ಜಗ್ರೂಪ್ ಅವರ ಅಳಿಯ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯೊಬ್ಬರು ಮಾತನಾಡಿದ್ದಾರೆ. “ಜಗ್ರೂಪ್ ವಿಗ್ರಹದ ಪಾದಗಳನ್ನು ಮುಟ್ಟಿದ ತಕ್ಷಣ ಅರ್ಧಜೀವ ಹೋಗುವಂತೆ ದಾಳಿ ನಡೆಯಿತು” ಎಂದಿದ್ದಾರೆ.

ಜಗ್ರೂಪ್ ಅವರನ್ನು ದಾಳಿಕೋರರು ಮನೆಗೆ ಕರೆತಂದರು. ನಂತರ ಜಗ್ರೂಪ್ ಅವರನ್ನು ಚಿಕಿತ್ಸೆಗಾಗಿ ಪ್ರತಾಪಗಢಕ್ಕೆ ಕರೆದೊಯ್ಯಲಾಯಿತು. ಆದರೆ ಅವರು ನಿಧನರಾಗಿದ್ದರು ಎಂದು ತಿಳಿಸಿದ್ದಾರೆ.

ಕುಟುಂಬಕ್ಕೆ ಯಾವುದೇ ನೆರವು ಸಿಕ್ಕಿಲ್ಲ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧ ಎಂದು ಹೇಳಿದ್ದಾರೆ.

ಈ ವೀಡಿಯೊವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಎಫ್‌ಐಆರ್‌ನ ಪ್ರತಿಯನ್ನು ಅಕ್ಟೋಬರ್ 2 ರಂದು ದಾಖಲಿಸಲಾಗಿದೆ.

ಪೊಲೀಸರು ಹೇಳುವುದೇನು?

ಅಕ್ಟೋಬರ್ 4 ರಂದು, ಪ್ರತಾಪ್‌ಗಢ ಪೊಲೀಸರು ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಪೂರ್ವ ಪ್ರತಾಪ್‌ಗಢದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ ಅವರು ಘಟನೆಯನ್ನು ವಿವರಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ‘ರಾಮ್ ಜೀವನ್’ ಎಂದು ಅವರು ಗುರುತಿಸಿದ್ದಾರೆ.

ಪಂಕಜ್ ದುಬೆ ಮತ್ತು ರಾಮ್ ಸರೋಬರ್ ಮಿಶ್ರಾ ಅವರ ಮನೆಗೆ ಇವರು ವಿಗ್ರಹವನ್ನು ನೋಡಲು ಹೋಗಿದ್ದರು. “ಅಲ್ಲಿ ಕುಲದೀಪ್ ಮತ್ತು ಸಂದೀಪ್ ಎಂಬುವರು ಸೈಕಲ್‌ನಲ್ಲಿ ಬಿಟ್ಟು ಬರುವಂತೆ ದಲಿತ ವ್ಯಕ್ತಿಗೆ ಸೂಚಿಸಿದರು. ಆದರೆ ಅವರು ನಿರಾಕರಿಸಿದಾಗ ಕುಲದೀಪ್ ಮತ್ತು ಸಂದೀಪ್ ದಾಳಿ ಮಾಡಿದ್ದಾರೆ. ನಂತರ ಮನೆಗೆ ಕರೆತಂದಿದ್ದು, ವ್ಯಕ್ತಿಯು ಕೊನೆಯುಸಿರೆಳೆದರು” ಎಂದು ಎಎಸ್ಪಿ ಹೇಳಿದ್ದಾರೆ.

ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ ಮತ್ತು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. ವಿಗ್ರಹವನ್ನು ಸ್ಪರ್ಶಿಸುವುದರಿಂದ ಸಾವು ಸಂಭವಿಸಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿರಿ: ಚಿಕ್ಕಬಳ್ಳಾಪುರ: ತಮ್ಮ ಜಮೀನಿನಲ್ಲಿ ಆಟವಾಡಿದ ದಲಿತ ಬಾಲಕನನ್ನು ಕರೆಂಟ್ ಕಂಬಕ್ಕೆ ಕಟ್ಟಿ ಥಳಿಸಿದ ಸವರ್ಣೀಯರು

“ದುರ್ಗಾ ಮೂರ್ತಿಯನ್ನು ಮುಟ್ಟಿದ ಕಾರಣಕ್ಕೆ ವ್ಯಕ್ತಿಯನ್ನು ಥಳಿಸಲಾಯಿತು ಮತ್ತು ನಂತರ ಸಾವನ್ನಪ್ಪಿದರು ಎಂಬ ವದಂತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಇದು ಸಂಪೂರ್ಣ ಸುಳ್ಳು” ಎಂದು ಮಿಶ್ರಾ ವಿಡಿಯೋ ಮೂಲಕ ತಿಳಿಸಿದ್ದಾರೆ.

ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಎಎಸ್‌ಪಿ ಹೇಳಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಆರೋಪಿಗಳಾದ ಸಂದೀಪ್ ಮಿಶ್ರಾ, ಕುಲದೀಪ್ ಮಿಶ್ರಾ ಮತ್ತು ಮುನ್ನಾ ಲಾಲ್ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...