ಬೆಂಗಳೂರಿನಲ್ಲಿ ಮತದಾರರ ಮಾಹಿತಿ ಕಳ್ಳತನ ಹಗರಣ ಬೆಳಕಿಗೆ ಬಂದ ನಂತರ ರಾಜ್ಯದಾದ್ಯಂತ ಹಲವಾರು ಕಡೆಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳು ಡಿಲೀಟ್ ಆಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನಗರದಲ್ಲೆ ಸುಮಾರು 6 ಲಕ್ಷ ಮತದಾರರ ಹೆಸರು ಕಣ್ಮರೆಯಾಗಿದ್ದು ವರದಿಯಾಗಿದ್ದು, ತುಮಕೂರಿನಲ್ಲಿ 21 ಸಾವಿರ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಮುಸ್ಲಿಂ ಮತ್ತು ದಲಿತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು ಬಿಬಿಎಂಪಿ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ವಿಧಾನಸಭಾ ಚುನಾವಣೆ ಮುಂದಿನ ಎಪ್ರಿಲ್-ಮೆ ಒಳಗಡೆ ನಡೆಯುತ್ತಿದೆ. ಈ ನಡುವೆ ಲಕ್ಷಾಂತರ ಮತದಾರರ ಹೆಸರುಗಳು ಕಣ್ಮರೆಯಾಗಿದ್ದು ಭಾರಿ ಆತಂಕ ಮೂಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಬದಲಾವಣೆಗೆ ಡಿಸೆಂಬರ್ 8ರವರೆಗೆ ಸಮಯವಾಕಾಶವಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದರು. ಹೀಗಾಗಿ ಅಲ್ಲಿವರೆಗೆ ನಿಮ್ಮ ಹೆಸರುಗಳನ್ನು ಮತ್ತೆ ಸೇರಿಸಬಹುದಾಗಿದೆ.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೆ ಎಂದು ತಿಳಿದುಕೊಳ್ಳುವುದು ಹೇಗೆ?
ನೀವು ಭಾರತೀಯ ನಾಗರೀಕರಾಗಿದ್ದು, ನಿಮಗೆ 18 ವರ್ಷ ತುಂಬಿದ್ದರೆ ನೀವು ಮತದಾನ ಮಾಡುವ ಹಕ್ಕು ಹೊಂದಿದವರಾಗಿದ್ದೀರಿ. ಈ ಹಿಂದೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೂ ಯಾವುದೆ ಮಾಹಿತಿ ಇಲ್ಲದೆ ಡಿಲಿಟ್ ಆಗಿರುವ ಸಾಧ್ಯತೆ ಕೂಡಾ ಇರುತ್ತದೆ. ಪ್ರಸ್ತುತ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೆ ಎಂಬುವುದನ್ನು ಈ ಕೆಳಗಿನಂತೆ ಮಾಡಬಹುದಾಗಿದೆ.
ಆಪ್ ಮೂಲಕ ಅಥವಾ ಆನ್‌ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೆ ಎಂದು ತಿಳಿಯಬಹುದಾಗಿದೆ. ಮೊದಲಿಗೆ ಆಪ್ ಮೂಲಕ ಹೇಗೆ ಪರಿಶೀಲಿಸುವುದು ಹೇಗೆ ಎಂದು ತಿಳಿಯೋಣ.
ಆಪ್ ಮೂಲಕ ಪರಿಶೀಲನೆ
ಭಾರತೀಯ ಚುನಾವಣಾ ಆಯೋಗವೆ ಅಧೀಕೃತವಾಗಿ ನಡೆಸುತ್ತಿರುವ Voter Helpline ಎಂಬ ಆಪ್ ಅನ್ನು ಇನ್ಸ್‌ಟಾಲ್ ಮಾಡಬೇಕಾಗುತ್ತದೆ. ಇದನ್ನು ಎಲ್ಲರೂ ಉಚಿತವಾಗಿ ಇನ್ಸ್‌ಟಾಲ್ ಮಾಡಬಹುದಾಗಿದೆ. Voter Helpline ಆಪ್ ಇನ್ಸ್‌ಟಾಲ್ ಮಾಡಿದ ನಂತರ ಅದನ್ನು ಫೋನ್‌ನಲ್ಲಿ ಓಪನ್ ಮಾಡಬೇಕು.
ಇದರ ನಂತರ ನೀವು Search Your Name In Electoral Roll ಎಂದು ಬರೆದಿರುವ ಬಾಕ್ಸ್ ಅನ್ನ ಕ್ಲಿಕ್ ಮಾಡಬೇಕು.

ಇದರ ನಂತರ ನೀವು ಮತದಾರರ ಚೀಟಿಯಲ್ಲಿ ಇರುವ ಬಾರ್‌ಕೋಡ್ ಅಥವಾ ಅದರಲ್ಲಿನ ಮಾಹಿತಿ ಅಥವಾ EPIC ನಂಬರ್ ಮೂಲಕ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೆ ಅಥವಾ ಇಲ್ಲವೆ ಎಂದು ಹುಡುಕಬಹುದಾಗಿದೆ.
EPIC ನಂಬರ್ ಬಳಸಿ ಹುಡುಕುವುದು ಸುಲಭ ಆಗಿರುವುದರಿಂದ Search By EPIC No ಮೇಲೆ ಕ್ಲಿಕ್ ಮಾಡಿ.

ಇದರ ನಂತರ ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಇರುವ EPIC ನಂಬರ್ ಅನ್ನು ENTER YOUR EPIC NUMBER ಎಂದು ಬರೆದಿರುವಲ್ಲಿಗೆ ತುಂಬಿಸಬೇಕು. ಎಪಿಕ್ ನಂಬರ್ ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಕೆಳಗಿನ ಚಿತ್ರದಲ್ಲಿ ಇರುವಂತೆ ಇರುತ್ತದೆ.
ನಿಮ್ಮ ಮತದಾರರರ ಚೀಟಿಯ EPIC ನಂಬರ್ ತುಂಬಿದ ನಂತರ Searchಗೆ ಕ್ಲಿಕ್ ಮಾಡಬೇಕು. ಈ ವೇಳೆ ನಿಮ್ಮ ಹೆಸರು ಬಂದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆ ಎಂದು ಅರ್ಥ. ಇಲ್ಲವೆಂದರೆ ನಿಮ್ಮ ಹೆಸರನ್ನು ಡಿಲಿಟ್ ಮಾಡಿದ್ದಾರೆ ಎಂದರ್ಥ.
ಆನ್‌ಲೈನ್ ಮೂಲಕ ಪರಿಶೀಲನೆ
ಆನ್‌ಲೈನ್ ಮೂಲಕ ತಿಳಿಯಲು ರಾಷ್ಟ್ರೀಯ ಚುನಾವಣಾ ಸೇವಾ ಪೋರ್ಟಾಲ್‌ಗೆ ಹೋಗಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. ಈ ವೇಳೆ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ. ಅದರ ನಂತರ ಕೆಂಪು ಬಾಕ್ಸ್ ಇರುವಲ್ಲಿ ಕ್ಲಿಕ್ ಮಾಡಬೇಕು.

ಅದರ ನಂತರ ನಿಮ್ಮ ಮತದಾರರರ ಗುರುತಿನ ಚೀಟಿಯಲ್ಲಿ ಇರುವ EPIC ನಂಬರ್ ಅನ್ನು ತುಂಬಿಸಬೇಕು. ನಂತರ ರಾಜ್ಯವನ್ನು ಆಯ್ದುಕೊಳ್ಳಬೇಕು. ಅದರ ನಂತರ Captcha Text ಗೆ ಅಲ್ಲಿರುವ ಅಕ್ಷರವನ್ನು ಅಲ್ಲಿರುವಂತೆಯೆ ತುಂಬಿಸಬೇಕು. ಒಂದು ವೇಳೆ ನಿಮಗೆ ಅಕ್ಷರ ಏನೆಂದು ಸರಿಯಾಗಿ ತಿಳಿಯದೆ ಇದ್ದರೆ ಮೈಕ್ ಅಲ್ಲೇ ಇರುವ ಮೈಕ್ ಬಟನ್ ಕ್ಲಿಕ್ ಮಾಡಿದರೆ ಅಲ್ಲಿರುವ ಅಕ್ಷರವನ್ನು ಅದು ಓದಿ ಹೇಳುತ್ತದೆ. Captcha Text ಗೆ ಅಕ್ಷರ ತುಂಬಿಸಿದ ನಂತರ ಸರ್ಚ್ ಬಟನ್ ಒತ್ತಬೇಕು.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಈ ವೇಳೆ ಹೆಸರು ತೋರಿಸುತ್ತದೆ. ಒಂದು ವೇಳೆ ಇಲ್ಲವೆಂದರೆ ನಿಮ್ಮ ಹೆಸರು ಡಿಲೀಟ್ ಆಗಿದೆ ಎಂದರ್ಥ

ಮತದಾರರ ಪಟ್ಟಿಯಲ್ಲಿ ಡಿಲೀಟ್ ಆಗಿದ್ದರೆ ಏನು ಮಾಡಬೇಕು?
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಡಿಲೀಟ್ ಆಗಿದ್ದರೆ, ಮತ್ತೆ ಹೊಸದಾಗಿ ಚುನಾವಣಾ ಗುರುತಿನ ಚೀಟಿಯನ್ನು ಮಾಡಿಸಬೇಕಾಗುತ್ತದೆ. ಮತದಾನದ ಪಟ್ಟಿಗೆ ಸೇರಿಸುವುದು, ಬದಲಾವಣೆಗಾಗಿ ಸರ್ಕಾರವು ಪ್ರತಿ ಬೂತ್‌ನಲ್ಲಿ ‘ಬೂತ್ ಮಟ್ಟದ ಅಧಿಕಾರಿ’(BLO)ಯನ್ನು ನೇಮಿಸಿರುತ್ತದೆ. ಇವರು ನಿಮ್ಮ ಮನೆಯ ಹತ್ತಿರದ ಅಂಗನವಾಡಿ ಕಾರ್ಯಕರ್ತೆ ಅಥವಾ ನಿಮ್ಮ ಹತ್ತಿರದ ಶಾಲೆಯ ಶಿಕ್ಷಕರೇ ಹೆಚ್ಚಿನ ಕಡೆ BLO ಆಗಿರುತ್ತಾರೆ.
ನಿಮ್ಮ BLO ಬಳಿಗೆ ಡಿಲೀಟ್ ಆಗಿರುವ ಬಗ್ಗೆ ಹೇಳಿ, ಹೊಸದಾಗಿ ಮತದಾರರ ಚೀಟಿಗೆ ಅರ್ಜಿ ಸಲ್ಲಿಸಬೇಕು. ಈ ವೇಳೆ ನಿಮ್ಮ ಜನ್ಮ ದಿನಾಂಕ ಇರುವ ದಾಖಲೆ ಪತ್ರ (ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಸರ್ಟಿಫಿಕೇಟ್), ವಿಳಾಸ ಇರುವ ದಾಖಲೆ (ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್ ಇತ್ಯಾದಿ) ಮತ್ತು ಒಂದು ಪಾಸ್‌ಪೋರ್ಟ್ ಸೈಜಿನ ಫೋಟೊವನ್ನು ಅವರಿಗೆ ನೀಡಬೇಕು. ಇದಾಗಿ 15 ದಿನಗಳು ಅಥವಾ ಒಂದು ತಿಂಗಳ ಒಳಗಾಗಿ ನಿಮ್ಮ ಹೊಸ ಮತದಾರರ ಗುರುತಿನ ಚೀಟಿ ಬರುತ್ತದೆ.



Ccccc
Mad
gfgy
Ravi
My voter ID card not allowed
Praveen kp [email protected]
Drugamma ak w/o Praveen kp [email protected]
Praveen kp [email protected]
Praveen kp. [email protected]
Nanu Muttanna
Muttanna