Homeಅಂಕಣಗಳುಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ

ಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದಲಿತರ ಮೇಲೆ ನಡೆದ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರವಾಗಿದ್ದು, ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಆ ದಲಿತರ ಮೇಲಿನ ದೌರ್ಜನ್ಯಗಳ 10 ಘಟನೆಯಲ್ಲಿ ಇದು ಮೂರನೆಯದ್ದಾಗಿದೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತನೆಯಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ರಾಜಸ್ತಾನದ ಬಟೋಡ ಎಂಬ ಹಳ್ಳಿಯ ದಲಿತೆ ಪಾರ್ವತಿಗೆ (ಹೆಸರು ಬದಲಿಸಿದೆ) ಒಬ್ಬನೇ ಮಗ. ಅವನನ್ನು ಓದಿಸಿ ಉತ್ತಮ ಹಂತಕ್ಕೆ ಕಳಿಸಬೇಕೆಂಬುದೇ ಆಕೆಯ ಏಕೈಕ ಆಸೆ. ಆ ಕಾರಣಕ್ಕಾಗಿಯೇ ಸುಮಾರು 100 ಕಿಮೀ ದೂರದಲ್ಲಿರುವ ಪಟ್ಟಣ ’ದೌಸಾ’ಗೆ ಕೆಲಸಕ್ಕೆಂದು ದಿನವೂ ಪ್ರಯಾಣಿಸಬೇಕಿತ್ತು. 17 ವರ್ಷದ ಮಗ ರಘು ಇದ್ದಕ್ಕಿದ್ದಂತೆ ಕುಡಿತದ ಚಟವನ್ನು ಮೈಗೂಡಿಸಿಕೊಂಡಾಗ ಇನ್ನಿಲ್ಲದಂತೆ ನೊಂದುಕೊಂಡಿದ್ದ ಪಾರ್ವತಿ ತನ್ನ ಕನಸನ್ನು ಅರ್ಧಕ್ಕೆ ಕೈಬಿಡದೇ ಅವನ ಮನವೊಲಿಸಲು ಪ್ರಾರಂಭಿಸಿದ್ದಳು. ಆದರೇನು ಮಾಡುವುದು; ರಘು ಗಲಭೆಯೊಂದರಲ್ಲಿ ಜೈಲಿಗೂ ಹೋಗಿಬಿಟ್ಟನು. ಆಗಲೂ ಆತನ ಮನಸ್ಸನ್ನು ಹೇಗಾದರೂ ಮಾಡಿ ಬದಲಾಯಿಸಬೇಕೆಂಬ ಹಠಕ್ಕೆ ಬಿದ್ದು ದಿನವೂ ಜೈಲಿಗೆ ಹೋಗುವುದನ್ನೂ ರೂಢಿಸಿಕೊಂಡಿದ್ದಳು. ಇದೇ ಸಮಯದಲ್ಲಿ ಕೋವಿಡ್-19ನಿಂದಾಗಿ ದೇಶವೇ ಲಾಕ್‌ಡೌನ್ ಆಯಿತು. ಆದರೆ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಏಪ್ರಿಲ್ 21, 2020ರಂದು ಮಗನನ್ನು ನೋಡಲು ಬರಿಗಾಲಲ್ಲಿ ನಡೆದು ದೌಸಾಗೆ ಹೋಗಲು ಅಣಿಯಾದಳು. ಮಧ್ಯ ಅವರಿವರ ಸಹಾಯ ಪಡೆದು ಸಂಜೆಯಷ್ಟೊತ್ತಿಗೆ ಜೈಲಿನ ಬಳಿ ತಲುಪಿದಳಾದರೂ ಅವಳಿಗೆ ಮಗನನ್ನು ಭೇಟಿಯಾಗಲು ಬೆಳಗ್ಗೆಯವರೆಗೆ ಕಾಯಬೇಕಾಯಿತು. ಅಲ್ಲೇ ಜೈಲಿನ ಆವರಣದಲ್ಲಿಯೇ ಮಲಗಿಕೊಂಡು ಬೆಳಗ್ಗೆ ಎದ್ದು ಮಗನನ್ನು ಭೇಟಿಯಾಗಿ ಮತ್ತೆ ಅದೇ ರೀತಿಯಲ್ಲಿ ತನ್ನ ಹಳ್ಳಿ ಬಟೋಡಾಗೆ ಮರಳಿದಾಗ ಹಳ್ಳಿಯವರೆಲ್ಲರೂ ಆಕೆಯನ್ನು ಕ್ವಾರಂಟೈನ್‌ನಲ್ಲಿರಲು ಸೂಚಿಸಿದರು. ಅದೇ ಹಳ್ಳಿಯ ಸರ್ಕಾರಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿಸಲಾಗಿತ್ತು. ಈ ತೀರ್ಮಾನ ನ್ಯಾಯಯುತವಾದುದೇ ಎಂದರಿತ ಪಾರ್ವತಿ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದಳು.

ಇದನ್ನೂ ಓದಿ: ಮಾತು ಮರೆತ ಭಾರತ-28; ಲಾಕ್‌ಡೌನ್ ಫೈಲ್ಸ್ : ದಲಿತರ ಪಾಲಿನ ಕಗ್ಗತ್ತಲ ದೀಪಾವಳಿ

200 ಕಿಮೀ ದೂರದ ಪ್ರಯಾಣ ಮಾಡಿದ್ದ ಪಾರ್ವತಿ ಬಳಲಿದ್ದಳು. ಸರಿಯಾದ ಆಹಾರ ನೀರಿಲ್ಲದೆ ನಿತ್ರಾಣಳಾಗಿದ್ದಳು. ಆ ಕ್ವಾರಂಟೈನ್ ಕೇಂದ್ರದಲ್ಲಿ ಆಕೆಯೊಬ್ಬಳೇ ತಂಗಬೇಕಾಯಿತು. ಪೊಲೀಸರು ಮತ್ತು ಶುಶ್ರೂಷಕ ಸಿಬ್ಬಂದಿ ಮುಂಜಾಗ್ರತೆಯ ಕಾರಣಕ್ಕಾಗಿ ಆಕೆಯೊಂದಿಗೆ ಯಾರನ್ನೂ ತಂಗಲು ಬಿಡಲಿಲ್ಲ. ಆದರೂ ಸುದೀರ್ಘ ಪ್ರಯಾಣದ ಕಾರಣ ಒಂದಷ್ಟು ಆಹಾರ ಹೊಟ್ಟೆಗೆ ಬಿದ್ದೊಡನೆ ಕಣ್ಣು ಎಳೆಯಲು ಆರಂಭಿಸಿದ್ದವು. ಗಾಢ ನಿದ್ರೆಗೆ ಜಾರಿದಳು.

ಇದೇ ಸಮಯದಲ್ಲಿ ಪಾರ್ವತಿ ಕೊಠಡಿಗೆ ಬಂದ ರಿಷಿಕೇಶ್ ಮೀನ, ಲಖನ್ ರಾಮ್ ಮತ್ತು ಕಮಲ್ ಖರ್ವಾಲ್ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಿದ್ದೆಯ ಮಂಪರಿನಲ್ಲಿದ್ದ ಪಾರ್ವತಿಗೆ ಅದೇನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ಆಕೆಯ ಕಾಲುಗಳು ಹಗ್ಗದಿಂದ ಬಿಗಿಯಾಗಿ ಬಂಧಿಯಾಗಿದ್ದವು. ಹಿಂದೂ ಮೇಲ್ಜಾತಿಯ ಆ ಮೂರು ಪ್ರಾಣಿಗಳು ಆಕೆಯ ಮೇಲೆ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಮಾಡಿದರು. ಪಾರ್ವತಿಯನ್ನು ಕಾಪಾಡಲು ಅಲ್ಲಿ ಒಂದು ನರಪಿಳ್ಳೆಯೂ ಸಹ ಇರಲಿಲ್ಲ. ಪೊಲೀಸ್ ಮತ್ತು ದಾದಿಯರು ಗೌಗತ್ತಲಾಗುತ್ತಿದ್ದಂತೆ ಮನೆಗೆ ತೆರಳಿದ್ದರು. ಹಳ್ಳಿಯ ವ್ಯಕ್ತಿಯೊಬ್ಬನಿಗೆ ಸೆಕ್ಯುರಿಟಿ ಕೆಲಸ ಒಪ್ಪಿಸಿ ಮನೆಯಲ್ಲಿ ಹಾಯಾಗಿ ಮಲಗಲು ತೆರಳಿದ್ದರು.

ಬೆಳಗ್ಗೆ ಈ ವಿಷಯವನ್ನು ಪಾರ್ವತಿ ಪೊಲೀಸರಿಗೆ ತಿಳಿಸಿದಾಗ ಆಕೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಿಂದಾಗಿ ಪಾರ್ವತಿಗೆ ಕೋವಿಡ್ ಪಾಸಿಟಿವ್ ಬಂದಿತಲ್ಲದೆ ಅತ್ಯಾಚಾರವಾಗಿರುವುದೂ ಖಾತ್ರಿಯಾಯಿತು. ಕೋವಿಡ್ ಫೋಬಿಯಾವನ್ನು ಮಾಧ್ಯಮಗಳು ಕ್ಷಣಕ್ಷಣಕ್ಕೂ ಬಿತ್ತರಿಸುತ್ತಿದ್ದ ಸಮಯವದು; ಪಾರ್ವತಿ ಕೋವಿಡ್‌ನಿಂದ ಬದುಕುಳಿಯುವುದು ಹೇಗೆ ಎಂದು ಚಿಂತಿಸುತ್ತಿದ್ದಳೋ ಅಥವಾ ತನ್ನ ಮೇಲೆ ನಡೆದಿರುವ ಅತ್ಯಾಚಾರದ ಗಾಯಕ್ಕೆ ಮಾನಸಿಕವಾಗಿ ಮುಲಾಮು ಹಚ್ಚಿಕೊಳ್ಳುತ್ತಿದ್ದಳೋ ಕಾಣೆ.

ಇದನ್ನೂ ಓದಿ: ಮಾತು ಮರೆತ ಭಾರತ-27; ಲಾಕ್‌ಡೌನ್ ಫೈಲ್ಸ್: ನೀರು ಕೇಳಿದ ದಲಿತ ಯುವಕನ ಉಸಿರು ನಿಲ್ಲಿಸಿದರು

ಈ ಪ್ರಕರಣದಿಂದ ಅರಿಯಬೇಕಾದ ಮತ್ತೊಂದು ವಿಚಾರವೇನೆಂದರೆ ಪಾರ್ವತಿ ಎಂಬ ದಲಿತ ಮಹಿಳೆಯ ಜಾಗದಲ್ಲಿ ಹಿಂದೂ ಮೇಲ್ಜಾತಿ ಮಹಿಳೆ ಇದ್ದಿದ್ದರೆ ಅಲ್ಲಿ ಹಳ್ಳಿಗರು ಆಕೆಯನ್ನು ಒಬ್ಬಂಟಿಯಾಗಿ ಇರಲು ಬಿಡುತ್ತಿದ್ದರೆ? ಪೊಲೀಸರು ಕಿಂಚಿತ್ ಮುಂಜಾಗ್ರತೆಯನ್ನೂ ವಹಿಸದೆ ನಿದ್ದೆ ಮಾಡಲು ಮನೆಗೆ ತೆರಳುತ್ತಿದ್ದರೆ? ದಾದಿಯರು ತಮ್ಮ ಕರ್ತವ್ಯವನ್ನು ಮರೆತು ಸ್ವಲ್ಪವೂ ಆಲೋಚಿಸದೇ ಮಹಿಳೆಯೊಬ್ಬಳನ್ನು ಬಿಟ್ಟು ಹೊರಡುತ್ತಿದ್ದರೇ? ಆ ಮೂವರು ಪಾಪಿಗಳು ಅಷ್ಟು ಧೈರ್ಯದಿಂದ ಕೊಠಡಿಗೆ ನುಗ್ಗಿ ಅತ್ಯಾಚಾರಗೈಯ್ಯುತ್ತಿದ್ದರೆ?

ಈ ಮೇಲಿನ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಕಷ್ಟವಲ್ಲ. ಆದರೆ ಅದಕ್ಕೆ ಪರಿಹಾರ ಹುಡುಕುವುದು ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ದಲಿತರೆಂದರೆ ಈ ಸಮಾಜಕ್ಕೆ ಏನು ಬೇಕಾದರೂ ಮಾಡಿ ಬಿಸಾಕಬಹುದಾದ ವಸ್ತುಗಳಿದ್ದಂತೆ.

ಈಗ ಆ ಮೂವರು ಪಾಪಿಗಳು ಜೈಲಿನಲ್ಲಿದ್ದಾರೆ. ಪೊಲೀಸ್ ಒಬ್ಬ ಅಮಾನತುಗೊಂಡಿದ್ದಾನೆ. ಪಾರ್ವತಿಯೂ ಸಹ ಗುಣಮುಖಳಾಗಿ ತನ್ನ ಮಗನ ಭವಿಷ್ಯದ ಕನಸನ್ನು ಕಾಣುತ್ತಿದ್ದಾಳೆ. ಇದರ ನಡುವೆ ಆ ಮೂವರಿಗೆ ಶಿಕ್ಷೆ ಆಗುವುದೇ? ದಲಿತರ ಮೇಲಿನ ದೌರ್ಜನ್ಯಕ್ಕೆ ನ್ಯಾಯಾಲಯದ ನ್ಯಾಯದ ಇತಿಹಾಸ ಇಲ್ಲವೆಂದೇ ಉತ್ತರವನ್ನು ಪದೇಪದೇ ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...