Homeಮುಖಪುಟಡಿಮಾನೆಟೈಸೇಷನ್ ಮಹಾಪ್ರಮಾದಕ್ಕೆ ಆರು ವರ್ಷ; ನಿಲ್ಲದ ರಾಷ್ಟ್ರವ್ಯಾಪಿ ಚರ್ಚೆ: ಭಾಗ-1

ಡಿಮಾನೆಟೈಸೇಷನ್ ಮಹಾಪ್ರಮಾದಕ್ಕೆ ಆರು ವರ್ಷ; ನಿಲ್ಲದ ರಾಷ್ಟ್ರವ್ಯಾಪಿ ಚರ್ಚೆ: ಭಾಗ-1

- Advertisement -
- Advertisement -

ಅತಿರೇಕದ ಸರಕಾರಿ ನಿರ್ಧಾರವೊಂದರ ಪರಿಣಾಮಗಳ- ಅಂದರೆ, ದೇಶದ 86 ಶೇಕಡಾ ಬ್ಯಾಂಕ್ ನೋಟುಗಳನ್ನು ಆನಾಣ್ಯೀಕರಣಗೊಳಿಸಲಾಗಿದೆ ಎಂದು ಹೇಳಿ, ನೋಟುಗಳನ್ನು ದಿಢೀರನೇ ಹಿಂತೆಗೆದುಕೊಳ್ಳುವ ಸರಕಾರದ ನಿರ್ಧಾರದ ಪರಿಣಾಮಗಳ ಅಕೆಡೆಮಿಕ್ ಅಧ್ಯಯನವೊಂದನ್ನು ನಡೆಸುವ ಸಲುವಾಗಿ ಸುಪ್ರೀಂಕೋರ್ಟ್- 12 ಅಕ್ಟೋಬರ್ 2022ರಂದು ಐವರು ನ್ಯಾಯಾಧೀಶರನ್ನು ಒಳಗೊಂಡ ಒಂದು ಸಾಂವಿಧಾನಿಕ ಪೀಠವೊಂದನ್ನು ನೇಮಿಸಿದೆ.

ಸರಕಾರವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಧಿಕಾರ ಚಲಾಯಿಸಿದೆಯೆ? ಹೆಚ್ಚಿನ ವಿವೇಚನೆ ಮತ್ತು ಮುನ್ನೆಚ್ಚರಿಕೆ ವಹಿಸುವುದರ ಮೂಲಕ ಸರಕಾರವು ತನ್ನ ಅಧಿಕಾರ ಚಲಾವಣೆಯಿಂದ ಉಂಟಾದ ದುರಂತವನ್ನು ತಪ್ಪಿಸಲು ಸಾಧ್ಯವಿತ್ತೆ? 8, ನವೆಂಬರ್ 2016ರಲ್ಲಿ ಘೋಷಿಸಿದ ಅನಾಣ್ಯೀಕರಣದಿಂದ ಭಾರತ ಸರಕಾರವು ತನ್ನ ಮೂಲೋದ್ದೇಶವನ್ನು ಸಾಧಿಸಿದೆಯೆ? ಐವತ್ತೆಂಟು ಮಂದಿ ಫಿರ್ಯಾದಿದಾರರು ನ್ಯಾಯಾಲಯದಲ್ಲಿ ನೇರವಾಗಿ ಸಲ್ಲಿಸಿರುವ ಅಪಿಡವಿಟ್‌ಗಳಲ್ಲಿ ಇಂಥ ಪ್ರಶ್ನೆಗಳು ಅಡಕವಾಗಿವೆ.

ಆಕಾಶವೂ ಮಿತಿಯಲ್ಲದ ಕಾರ್ಯಾಂಗದ ಅಧಿಕಾರಗಳ ಕುರಿತು ಭಾರತದ ಅತ್ಯಂತ ಪ್ರಸಿದ್ಧ ಸುಪ್ರೀಂಕೋರ್ಟ್ ವಕೀಲ ನಾನಿ ಎ. ಪಾಲ್ಖಿವಾಲ ಅವರಾಡಿದ್ದ ಮಾತುಗಳನ್ನು ಈಗ ನೆನಪಿಸಿಕೊಳ್ಳಬಹುದು.

“ಸಂವಿಧಾನವು ಸ್ವಾತಂತ್ರ್ಯ ಕೊಡಮಾಡಿದ ಅಧಿಕಾರದ ಸನ್ನದುಗಳನ್ನು ಪ್ರತಿನಿಧಿಸುತ್ತದೆಯೇ ಹೊರತು, ಅಧಿಕಾರದ ಸನ್ನದುಗಳು ಕೊಡಮಾಡಿದ ಸ್ವಾತಂತ್ರ್ಯವನ್ನಲ್ಲ. ಸ್ವಾತಂತ್ರ್ಯವು ಸರಕಾರ ಜನರಿಗೆ ನೀಡಿದ ಉಡುಗೊರೆ ಅಲ್ಲ. ಮುಕ್ತ ದೇಶವೊಂದರಲ್ಲಿ ಸ್ವಾತಂತ್ರ್ಯ ಅನುಭವಿಸುವ ಜನರೇ ಶಾಸಕಾಂಗಕ್ಕೂ, ಕಾರ್ಯಾಂಗಕ್ಕೂ ಅಧಿಕಾರ ನೀಡಿದವರಾಗಿರುತ್ತಾರೆ” ಎಂದು ಅವರು ಹೇಳಿದ್ದರು. ಸರಕಾರವು ಇದನ್ನು ಮರೆತದ್ದೇ ಈ ದುರಂತಕ್ಕೆ ಕಾರಣವಾಯಿತು.

ಪ್ರತ್ಯಾಘಾತದ ಕತೆಗಳು

ನವೆಂಬರ್ 8, 2016ರಂದು ಸಂಜೆಯ ಬೆಳಕು ಮಾಸುತ್ತದೆ. ಪ್ರಧಾನಿ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಹೇಳುತ್ತಾರೆ: ಕೆಲವೇ ಗಂಟೆಗಳಲ್ಲಿ ಮಧ್ಯರಾತ್ರಿಗೆ ಸರಿಯಾಗಿ ನಿಮ್ಮಲ್ಲಿರುವ 500 ಮತ್ತು 1000 ರೂ. ನೋಟುಗಳು ಕಾನೂನುಬದ್ಧ ನೋಟುಗಳಾಗಿರುವುದಿಲ್ಲ; ಅವುಗಳಿಗೆ ಮೌಲ್ಯವಿಲ್ಲ, ಅವುಗಳಿಂದ ಮಾರುಕಟ್ಟೆಯಲ್ಲಿ ಏನನ್ನೂ ಕೊಳ್ಳಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಅವರು ಹೇಳಿದ್ದು ಏನು? ನಿಮಗೆ ರೂ.500 ಮತ್ತು ರೂ.1000 ಮೌಲ್ಯವನ್ನು ನೀಡುವುದಾಗಿ ಆ ದಿನದವರೆಗೆ ಬಿಡುಗಡೆಯಾದ ನೋಟುಗಳಲ್ಲಿ ಇರುವ ರಿಸರ್ವ್ ಬ್ಯಾಂಕಿನ ಗವರ್ನರ್ ನೀಡಿರುವ ಭರವಸೆಗೆ ಖಾತರಿಯನ್ನು ನಾವು ಹಿಂತೆಗೆದುಕೊಂಡಿದ್ದೇವೆ ಎಂದು. ಅವುಗಳನ್ನು ನಿಮ್ಮ ಹತ್ತಿರದ ಬ್ಯಾಂಕುಗಳಲ್ಲಿ ಬದಲಿಸಿ ಹೊಸ ಬದಲಿ ನೋಟುಗಳನ್ನು ಪಡೆಯಿರಿ, ಬ್ಯಾಂಕುಗಳಲ್ಲಿ ವ್ಯವಹರಿಸಿ, ಸರಕಾರಿ ಸಂಸ್ಥೆಗಳಿಗೆ ನೀವು ಕೊಡಬೇಕಾದುದನ್ನು ಕೊಡಿ, ಅಥವಾ ವ್ಯವಹಾರಕ್ಕೆ ನಿಮ್ಮ ಪ್ಲಾಸ್ಟಿಕ್ ಕಾರ್ಡುಗಳನ್ನು ಬಳಸಿ ಎಂದು.

ಜನರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತರು. ಈ ಸರತಿ ಸಾಲುಗಳಲ್ಲಿ ಅರವತ್ತೈದು ಮಂದಿ ಹೃದಯಾಘಾತ, ಆಯಾಸ, ಖಿನ್ನತೆ ಮತ್ತು ಕಾಲ್ತುಳಿತದಿಂದ ಪ್ರಾಣ ಕಳೆದುಕೊಂಡರು. ಬೀದಿಗಳ ಚಿತ್ರವು ನಮ್ಮ ಆತ್ಮಸಾಕ್ಷಿಗೆ ದುರಂತಮಯ ನೋವನ್ನು ಉಂಟುಮಾಡುತ್ತಿರುವಾಗ, ಲಜ್ಜೆಗೇಡಿ ಚರ್ಚೆಯೊಂದು ಆರಂಭವಾಯಿತು. ಆಗ ವಾಟ್ಸಪಿನ ಸುಳ್ಳು ಸುದ್ದಿಗಳ ನಿರ್ಮಾತೃಗಳು, ಟಿವಿ ಮಾಧ್ಯಮಗಳ ಗೋಬೆಲ್ಸ್‌ಗಳು ವಹಿಸಿದ ಪಾತ್ರ ನಮಗೆ ನೆನಪಿದೆ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಜನರು ತಮ್ಮ ಸಮಯವನ್ನು, ದಿನಗಳನ್ನು ಕಳೆಯುವುದರಲ್ಲಿ ತಪ್ಪು ಏನಿದೆ ಎಂದು ಅವರು ಕೇಳಿದರು. ’ಜೀವನ’ ಎಂದು ಅವರು ಸೇರಿಸಲಿಲ್ಲ. ಸುಡಾನಿನ ಯುದ್ಧಗ್ರಸ್ತ ಪ್ರದೇಶಗಳ ಆಹಾರ ವಿತರಣಾ ಕೇಂದ್ರಗಳಲ್ಲಿ ಜನರು ಸಾಲುಗಟ್ಟಿ ನಿಂತಿರುವುದು, ನೈಜೀರಿಯಾದ ಪಡಿತರ ಅಂಗಡಿಗಳ ಎದುರು ಜನರು ನಿಂತಿರುವುದು ಇತ್ಯಾದಿಗಳ ಜೊತೆ ಮತಿಭ್ರಾಂತ ಹೋಲಿಕೆ ಮಾಡಿ, ಕೊನೆಗೊಂದು ಪ್ರಶ್ನೆ ಕೇಳಿದರು: ಹೊಸ ನೋಟು ಪಡೆಯಲು ಸಾಲು ನಿಲ್ಲಲು ನಿಮಗೇನು ದಾಡಿ ಎಂಬಂತೆ. ನಮ್ಮ ಕತೆಯನ್ನು ಚುಟುಕುಗೊಳಿಸಬೇಕು ಎಂದರೆ, ಹೊಸ ನೋಟುಗಳು ಟ್ರಕ್ಕುಗಳಲ್ಲಿ, ಅಧಿಕೃತ ವ್ಯಾನುಗಳಲ್ಲಿ ಕಾರ್ಪೋರೇಟ್ ಕಚೇರಿಗಳು ಮತ್ತು ಮಠಗಳನ್ನು ಹೇಗೆ ತಲಪಿದವು ಎಂದು.

ಇದನ್ನೂ ಓದಿ: ನೋಟು ರದ್ದತಿಯ ಮಹಾ ವೈಫಲ್ಯವನ್ನು ಪ್ರಧಾನಿ ಮೋದಿ ಇನ್ನೂ ಒಪ್ಪಿಕೊಂಡಿಲ್ಲ: ಖರ್ಗೆ

ಬಡವರ್ಗಗಳು ಅವಮಾನವನ್ನು ಅನುಭವಿಸಿದವು. ಬಹಳಷ್ಟು ಜನರು ತಮ್ಮ ದೈನಂದಿನ ಬದುಕಿನ ದಾರಿಯನ್ನು ಕಳಕೊಂಡದ್ದು ಮಾತ್ರವಲ್ಲ, ಸರಕಾರವೇ ನೀಡಿದ ಅಂಕಿಅಂಶಗಳ ಪ್ರಕಾರವೇ 15 ಲಕ್ಷ ಜನರು ಉದ್ಯೋಗ ಕಳೆದುಕೊಂಡರು. ಒಟ್ಟು ಜಿಡಿಪಿಯಲ್ಲಿ 2.5 ಲಕ್ಷ ಕೋಟಿ ರೂ.ಗಳ ಹಣಕಾಸು ನಷ್ಟ ಉಂಟಾಯಿತು. ಹತ್ತು ವರ್ಷಗಳ ಕಾಲದ ಶಿಕ್ಷಣದ ಬಜೆಟ್ ಅನುದಾನ ಅಥವಾ ಆರೋಗ್ಯ ಸೇವಾ ಅನುದಾನ ನಷ್ಟವಾಯಿತು.

ಎರಡು ಲಕ್ಷಕ್ಕಿಂತಲೂ ಹೆಚ್ಚು ಸಣ್ಣ ಮತ್ತು ಕಿರು ಉದ್ದಿಮೆಗಳು, ರಸ್ತೆ ಬದಿ ವ್ಯಾಪಾರಿಗಳು, ಕೃಷಿಕರಿಗೆ ನಗದಿನ ಕೊರತೆ ಉಂಟಾಗಿ, ಅವರ ವ್ಯಾಪಾರ ಕುಸಿದುಬಿತ್ತು. ಚಲಾವಣೆಯಲ್ಲಿ ಇದ್ದ ವಿವಿಧ ಮೌಲ್ಯಗಳ 17.97 ಲಕ್ಷ ಕೋಟಿ ಮೌಲ್ಯದ ಕರೆನ್ಸಿಯಲ್ಲಿ ರೂ.500 ಮತ್ತು 1000 ಮುಖಬೆಲೆಯ 15.45 ಲಕ್ಷ ಕೋಟಿ ಮೌಲ್ಯದ ಕರೆನ್ಸಿಯನ್ನು ಹಿಂತೆಗೆದುಕೊಳ್ಳಲಾಯಿತು. ಮಾರ್ಚ್ 2018ರಲ್ಲಿ ರೂ. 500 ಮತ್ತು 2000 ಮೌಲ್ಯದ ಹೊಸ ನೋಟುಗಳನ್ನು ಮುದ್ರಿಸಿ ಹಣದ ಚಲಾವಣೆಯನ್ನು ಮರುಸ್ಥಾಪಿಸಲಾಯಿತು.

ಶಾಸನ ಮತ್ತು ನಿಯಮಗಳು ಏನು ಹೇಳುತ್ತವೆ?

ಕುತೂಹಲದಿಂದ ಆರ್‌ಬಿಐ ಕಾಯಿದೆ, 1934ರ ವಿಧಿ 26 ಮತ್ತು 26(2)ನ್ನು ತೆರೆದಾಗ, ವಿಧಿ 26: ನೋಟುಗಳ ಕಾನೂನುಬದ್ಧ ಟೆಂಡರ್ ಸ್ವರೂಪವು, (1) ಉಪವಿಧಿಯ ಆಂಶಗಳಿಗೆ ಒಳಪಟ್ಟಿದೆ ಮತ್ತು (2) ಪ್ರತಿಯೊಂದು ಬ್ಯಾಂಕ್ ನೋಟು ಅದರಲ್ಲಿ ನಮೂದಿಸಲಾದ ಮೊತ್ತವನ್ನು ಭಾರತದ ಯಾವುದೇ ಭಾಗದಲ್ಲಿ ಪಾವತಿಸಬಹುದಾದ ಕಾನೂನುಬದ್ಧ ಟೆಂಡರ್ ಆಗಿರುತ್ತದೆ ಮತ್ತು ಕೇಂದ್ರ ಸರಕಾರದಿಂದ ಖಾತರಿಪಡಿಸಿದ್ದಾಗಿರುತ್ತದೆ.

(2) ಕೇಂದ್ರ ಮಂಡಳಿ (ಆರ್‌ಬಿಐ) ಶಿಫಾರಸಿನ ಮೇಲೆ (ಕೇಂದ್ರ ಸರಕಾರವು) ಭಾರತೀಯ ಗೆಜೆಟ್ ಅಧಿಸೂಚನೆಯ ಮೂಲಕ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿರುವ ದಿನಾಂಕದಿಂದ ಯಾವುದೇ ಸಂಖ್ಯಾಸರಣಿಯ ಯಾವುದೇ ಮೌಲ್ಯದ ಬ್ಯಾಂಕ್ ನೋಟುಗಳನ್ನು ಕಾನೂನುಬದ್ಧ ಟೆಂಡರ್ ಆಗಿರದಂತೆ ಘೋಷಣೆ ಮಾಡಬಹುದು (ಅಧಿಸೂಚನೆಯಲ್ಲಿ ಹೇಳಿದ ಅಂತಾ ಕಚೇರಿ ಅಥವಾ ಬ್ಯಾಂಕಿನ ಏಜೆನ್ಸಿಗಳ ಮತ್ತು ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದಷ್ಟು ಮಟ್ಟಿಗೆ ಹೊರತಾಗಿ.)

ಭಾರತ ಸರಕಾರದ ಜಂಟಿ ಕಾರ್ಯದರ್ಶಿ ಸಹಿ ಹಾಕಿರುವ ಅಧಿಸೂಚನೆಯು ಸಹಕಾರಿ ಬ್ಯಾಂಕುಗಳು, ಟ್ರೆಜರಿ, ಅಂಚೆ ಕಚೇರಿಗಳು, ವಿದೇಶಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಬ್ಯಾಂಕುಗಳನ್ನು ಡಿಸೆಂಬರ್ 2016ರ ತನಕ ಸೇರಿಸಿಕೊಂಡಿತ್ತು. ಆದರೆ ನಂತರ ಭಾರತದ ಹಣಕಾಸು ಕ್ಷೇತ್ರದ ಅತ್ಯಂತ ದೊಡ್ಡ ಸಹಕಾರಿ ಬ್ಯಾಂಕುಗಳನ್ನು ಹೊಸ ನೋಟುಗಳ ಬಿಡುಗಡೆ ಮತ್ತು ವಿತರಣೆಯಿಂದ ಹೊರತುಪಡಿಸಲಾಯಿತು. ಹೀಗೆ ಗ್ರಾಮೀಣ ಮತ್ತು ಸಣ್ಣ ವ್ಯಾಪಾರಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು. ಅನುಮತಿಯನ್ನು ಏನೋ ಮರಳಿ ನೀಡಲಾಯಿತು. ಆದರೆ, ಅದಾಗಲೇ ಹಾನಿ ಆಗಿಹೋಗಿತ್ತು.

ನಿಮಗೆ ಎಟಿಎಂನಲ್ಲಿ ಹಣ ಸಿಗುವುದು ಎಂದು ಆರ್‌ಬಿಐ ಹೇಳಿತು. ಎರಡು ದಿನಗಳ ಬಳಿಕ ಸರಕಾರವು ಅವಸರದಲ್ಲಿ ಬೇರೆಯೇ ಅಳತೆಯ 2000ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು ಎಂದು ತಿಳಿಯಿತು. ಎಟಿಎಂಗಳ ಹಣದ ಟ್ರೇಯ ಗಾತ್ರ ಚಿಕ್ಕದಾಗಿತ್ತು. ಆ ಟ್ರೇಗಳನ್ನು ಬದಲಿಸಬೇಕಾಯಿತು. ಅಷ್ಟರಲ್ಲಿ ಮಧ್ಯಮ ವರ್ಗದವರ ಜೇಬು ಬರಿದಾಗಿತ್ತು. ಹೊಸದಾಗಿ ಮುದ್ರಿಸಲಾದ ನೋಟುಗಳನ್ನು ಹೊತ್ತ ಆರ್‌ಬಿಐ ಟ್ರಕ್ಕುಗಳು ಎಲ್ಲಾ ದಿಕ್ಕುಗಳಲ್ಲಿ ಓಡಾಡಿದವು. ಬ್ಯಾಂಕುಗಳಲ್ಲಿ ಕೋಟಿಗಳ ಲೆಕ್ಕದಲ್ಲಿ ಹಳೆಯ ನೋಟುಗಳ ಕಟ್ಟುಗಳು ಸಂಗ್ರಹವಾಗುತ್ತಿದ್ದವು. ಕಟ್ಟುಗಳನ್ನು ಲೆಕ್ಕ ಹಾಕಲಾಯಿತಾದರೂ ನೋಟುಗಳನ್ನು ಸ್ಕ್ಯಾನ್ ಮಾಡಲಿಲ್ಲ. ಆರ್‌ಬಿಐಯ ನೋಟು ನಾಶಪಡಿಸುವ ಸ್ಥಳಕ್ಕೆ ಈ ಹಳೆಯ ನೋಟುಗಳನ್ನು ಸಾಗಿಸಲು ಬ್ಯಾಂಕುಗಳಿಗೆ ವರ್ಷಗಳೇ ಹಿಡಿದವು. ಈ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬುದು ನಮಗಿನ್ನೂ ಗೊತ್ತಿಲ್ಲ.

ಎಲ್ಲಾ ಬ್ಯಾಂಕ್ ತಿಜೋರಿಗಳು ಕಾನೂನು ಪ್ರಕಾರ ಆರ್‌ಬಿಐ ಖಜಾನೆಗಳಾಗಿರುವುದರಿಂದ, ಯಾವುದೇ ದಿನ ಅಲ್ಲಿ ದಾಸ್ತಾನು ಮಾಡಲಾದ ಹಣವನ್ನು ರಿಸರ್ವ್ ಬ್ಯಾಂಕಿನಲ್ಲಿರುವ ಹಣವೆಂದು ಪರಿಗಣಿಸಲಾಗುತ್ತದೆ. ಅವರು ಅದನ್ನು ಸ್ಕ್ಯಾನ್ ಮಾಡಿದ್ದಾರೆಯೆ? ನಕಲಿ ನೋಟುಗಳನ್ನು ಪ್ರತ್ಯೇಕಿಸಿದ್ದಾರೆಯೆ? ಈ ಬಗ್ಗೆ ಯಾರಿಗೂ ಎಳ್ಳಷ್ಟೂ ಸುಳಿವಿಲ್ಲ. ಪಾಕಿಸ್ತಾನದಲ್ಲಿ ಮುದ್ರಿತವಾದ ನೋಟುಗಳನ್ನು ಅವರು ಕಂಡುಹಿಡಿದಿದ್ದಾರೆಯೆ? ಭಯೋತ್ಪಾದಕರು ಶಸ್ತ್ರಾಸ್ತ್ರ ಕೊಂಡುಕೊಳ್ಳುವ ತಮ್ಮ ನಿಧಿಯನ್ನು ಕಳೆದುಕೊಂಡಿದ್ದಾರೆಯೆ? ಉತ್ತರವಿಲ್ಲ. ಈ 6.5 ಲಕ್ಷ ಕೋಟಿ ರೂ. ಎಂದರೆ, ಸಮಾಜದ ಮೇಲುಪದರವು ವಿವಿಧ ರೂಪಗಳಲ್ಲಿ ಹೊಂದಿದ್ದ ಕಪ್ಪುಹಣದ ಆರು ಶೇಕಡಾ ಆಗುತ್ತದೆ. ಉಳಿದ 94 ಶೇಕಡಾ ಕಪ್ಪು ಹಣದ ಸಮಾನಾಂತರ ಆರ್ಥಿಕತೆಯು ದೇಶದ ಕೀವು ತುಂಬಿದ ರಕ್ತ ಆಗಿದ್ದರೂ, ಈಗ ಯಾರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಅದಲ್ಲದೇ ಪ್ರತಿಪಕ್ಷಗಳ ಮತ್ತು ಕೆಲವು ಕಾರ್ಪೋರೆಟ್‌ಗಳ ಮೇಲೆ ನಡೆಸುತ್ತಿರುವ ಅವ್ಯಾಹತ ದಾಳಿಗಳಲ್ಲಿ ಕೆಲವು ಸಾವಿರ ಕೋಟಿ ರೂ.ಗಳು ನಗದಾಗಿ ಸಿಗುತ್ತಿವೆ. ಅದರ ಅಥವೆಂದರೆ, ಈಗಲೂ ಕಪ್ಪುಹಣದ ಉತ್ಪಾದನೆಯು ಅಬಾಧಿತವಾಗಿದೆ ಮತ್ತು ಬಿಜೆಪಿಯ ಅಡಿಯಲ್ಲಿ ಅದೇನೂ ನಿಂತುಹೋಗಿಲ್ಲ.

ಅನಾಣ್ಯೀಕರಣದ ಘೋಷಣೆಯಾದ ಬಳಿಕ ರಿಸರ್ವ್ ಬ್ಯಾಂಕ್ ಅದೇ ದಿನ ಸುತ್ತೋಲೆಯೊಂದನ್ನು ಹೊರಡಿಸಿತು. ಪ್ರತೀ ಎರಡನೇ ದಿನ ತನ್ನ ಸುತ್ತೋಲೆಯ ನಿರ್ದೇಶನಗಳನ್ನು ಅದು ಬದಲಿಸುತ್ತಿತ್ತು. ನಂತರ ಬ್ಯಾಂಕ್ ನಗದು ಸಾಗಾಟ ವಿಧಾನವನ್ನು ಖಾಸಗಿ ವ್ಯಕ್ತಿಗಳಿಗೆ ನಗದು ಪೂರೈಸಲು ಬಳಸಲಾಯಿತು. ಎಟಿಎಂ ಪಾವತಿಗಳು ಖಾಸಗಿ ಮೂಲಗಳನ್ನು ಸೇರಿದವು. ಸಾವಿರಾರು ಅಧಿಕಾರಿಗಳ ಮೇಲೆ ಆರೋಪಪಟ್ಟಿ ಸಲ್ಲಿಸಲಾದರೂ ಯಾರೂ ತಮ್ಮ ಕೆಲಸ ಕಳೆದುಕೊಳ್ಳಲಿಲ್ಲ. ಸಿಬಿಐ ತನಿಖೆಗಳೂ ಅಕೆಡಮಿಕ್ ಚರ್ಚೆಗಳಲ್ಲಿ ಕೊನೆಗೊಂಡವು. ಪ್ರಕರಣಗಳನ್ನು ಮೌನವಾಗಿ ಮುಚ್ಚಿಹಾಕಲಾಯಿತು, ಇಲ್ಲವೇ ಸ್ಥಗಿತಗೊಳಿಸಲಾಯಿತು. ಸಿಬಿಐ ತನಿಖೆ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಂದೆರಡು ಪ್ರಕರಣಗಳು ಮಾತ್ರ ದಿನದ ಬೆಳಕನ್ನು ಕಂಡಿವೆ.

ಇದನ್ನೂ ಓದಿ: ನೋಟು ರದ್ಧತಿಗೆ ಐದು ವರ್ಷ: ನಗದು ಬಳಕೆ ಕಡಿಮೆಯಾಯಿತೆ?

ಹಳೆ ನೋಟುಗಳ ಬದಲು ಹೊಸ ನೋಟುಗಳನ್ನು ಕೊಡಲು 2016ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ದ ಅಧ್ಯಕ್ಷರಾಗಿದ್ದ ದಿಲ್ಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ, ಖಾದಿ ಮಂಡಳಿಗಳ ಮಾರಾಟ ಕಚೇರಿಗಳ ಕ್ಯಾಷಿಯರುಗಳ ಮೇಲೆ ಒತ್ತಡ ಹೇರಿದ್ದರು ಎಂದು ಆಮ್ ಆದ್ಮಿ ಪಾರ್ಟಿ ಏಕಾಏಕಿ ಆರೋಪವನ್ನು ಮಾಡಿತು. ಇದು ಸುಮಾರು 1400 ಕೋಟಿ ರೂ.ಗಳಷ್ಟೆಂದು ಅವರು ಅಂದಾಜು ಮಾಡಿದರು. ಇದು ಸತ್ಯವೇ, ಸುಳ್ಳೇ ಎಂಬುದು ನಮ್ಮ ತೀರ್ಮಾನವಲ್ಲ. ಅದರೆ ಇದು ಸಾಧ್ಯವಿದೆ. ಆಗ, ನೋಟು ವಿನಿಮಯವನ್ನು ವಿಸ್ತರಿಸಿದ್ದು ಮೇ, 2017ರಲ್ಲಿ. ಅನಿವಾಸಿ ಭಾರತೀಯರಿಗಾಗಿ (ಎನ್‌ಆರ್‌ಐ) ಆರ್‌ಬಿಐ, ವಿಶೇಷ ಕೌಂಟರುಗಳನ್ನು ತೆರೆಯಿತು. ಆದರೆ, ಹೇಗೆ ಕೆಲವು ಎನ್‌ಆರ್‌ಐಗಳು ತಮ್ಮ ಖಾತೆಗೆ ಐವತ್ತು ಲಕ್ಷ, ಒಂದು ಕೋಟಿ ರೂ. ಎಲ್ಲಾ ಒಮ್ಮೆಗೇ ಜಮಾ ಮಾಡಿದರು ಎಂಬುದು ಬಹಳ ದೊಡ್ಡ ಗುಟ್ಟಾಗಿದೆ. ಹೀಗೆ ’ಅನಾಣ್ಯೀಕರಣದ ಅದ್ಭುತ’ಗಳ ಕತೆ ವರ್ಷಗಳ ಕಾಲ ಮುಂದುವರಿಯಿತು. ಕೊನೆಗೆ ಕೇಳಿಬಂದ ಸರಕಾರಿ ಸುದ್ದಿ ಎಂದರೆ, ಸಿಕ್ಕಿಂ ಮತ್ತು ಭೂತಾನದಲ್ಲಿ ಹಳೆಯ ನೋಟು ಸಂಗ್ರಹಿಸಿದ್ದ ಗೋದಾಮು ಮಾಲಕರಿಗೆ ಎರಡು, ಮೂರು ವರ್ಷಗಳ ನಂತರ ತಮ್ಮ ದಾಸ್ತಾನು ಸಲ್ಲಿಸಿ ಹೊಸ ನೋಟು ಪಡೆದುಕೊಳ್ಳಲು ವಿಶೇಷ ಅಧಿಸೂಚನೆಯ ಮೂಲಕ ಅವಕಾಶ ನೀಡಲಾಯಿತು. ಅದೂ ಕೂಡಾ ಮಾರುಕಟ್ಟೆಯಲ್ಲಿ ಇದ್ದ ಎಲ್ಲಾ ಹಳೆಯ ನೋಟುಗಳು ಬ್ಯಾಂಕುಗಳಿಗೆ ಬಂದಿವೆ ಎಂದು ಅಧಿಕೃತವಾಗಿ ಘೋಷಿಸಲಾದ ನಂತರ. ಈ ಸುದ್ದಿಯು ಪ್ರಾಮಾಣಿಕ ಜನರ ತಲೆಯನ್ನು ತಿರುಗಿಸುತ್ತಿದೆ.

ಬಡ ಜನರ ಮೂರು ಕೋಟಿ ಝೀರೋ ಬ್ಯಾಲೆನ್ಸ್ ಖಾತೆಗಳು ಕಪ್ಪು ಹಣವಿದ್ದ ಗುಂಪುಗಳಿಗೆ ವರದಾನವಾದವು. ಇಂತಾ ಹಲವಾರು ಖಾತೆಗಳಿಗೆ ಎರಡು ಲಕ್ಷ ರೂ.ಗಳಷ್ಟು ಹಣ ಹಾಕಲಾಯಿತು. ನಂತರ ಅವುಗಳನ್ನು ಹಿಂತೆಗೆಯಲಾಯಿತು. ಖಾತೆದಾರರಿಗೆ ಈ ವ್ಯವಹಾರದ ಸುಳಿವೇ ಇರಲಿಲ್ಲ. ಸರಕಾರ ಅಥವಾ ಐಟಿ ಈ ಕುರಿತು ವರದಿ ಮಾಡುವಂತೆ ಬ್ಯಾಂಕುಗಳಿಗೆ ನೋಟಿಸು ಜಾರಿ ಮಾಡಿತು. ಸಾಕಷ್ಟು ಸಂಖ್ಯೆಯ ನಿಷ್ಕ್ರಿಯ ಖಾತೆಗಳು ಜೀವಪಡೆದು ನಂತರ ಕಣ್ಣುಮುಚ್ಚಿದವು. ಕಪ್ಪುಹಣ ಹೊಂದಿರುವವರ ಜೊತೆ ಸೇರಿ ಖಾತೆದಾರರು ಚಾಣಾಕ್ಷತನದಿಂದ ಹಳೆಯ ನೋಟುಗಳನ್ನು ಉಪಯೋಗಿಸಿದರು. ಬ್ಯಾಂಕುಗಳಿಗೆ ಹಣವೇನೋ ಬಂತು. ಸಾಲಗಾರರು ಕೂಡಾ ನಂತರ ಪಾವತಿ ಮಾಡುವ ಒಪ್ಪಂದದೊಂದಿಗೆ ರಿಯಾಯಿತಿ ಪಡೆದು ಕಪ್ಪುಹಣ ಹೊಂದಿರುವವರ ಜೊತೆಗೆ ಸೇರಿಕೊಂಡರು

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...