Homeಮುಖಪುಟಎನ್.ಹೆಚ್ 10 ಸಿನಿಮಾದ ಕಥೆ: ಭಾರತ ಪ್ರಕಾಶಿಸುತ್ತಿದೆ - ಹಳ್ಳಿಗಳು ಕಗ್ಗತ್ತಲೆಯಲ್ಲಿವೆ

ಎನ್.ಹೆಚ್ 10 ಸಿನಿಮಾದ ಕಥೆ: ಭಾರತ ಪ್ರಕಾಶಿಸುತ್ತಿದೆ – ಹಳ್ಳಿಗಳು ಕಗ್ಗತ್ತಲೆಯಲ್ಲಿವೆ

- Advertisement -
- Advertisement -

“ಆರ್ಟಿಕಲ್ 15” ಸಿನೆಮಾ ಆರಂಭವಾಗುವುದೇ 8 ಲೈನ್ ಹೆದ್ದಾರಿಯನ್ನು ತೋರಿಸುವುದರ ಮೂಲಕ. ನಂತರ ಇದು ಒಳಹಾದಿ ಮೂಲಕ ಹಳ್ಳಿಗಳಿಗೆ ತೆರಳುತ್ತದೆ. ಹಳ್ಳಿಗಳಲ್ಲಿನ ಜಾತೀಯತೆ ಸ್ವರೂಪ ಹೇಗಿದೆ ಎಂಬುದನ್ನು ಬಿಚ್ಚಿಡುತ್ತಾ ಹೋಗುತ್ತದೆ. ನಿರ್ದೇಶಕ ಸಿನ್ಹಾ ಆರಂಭದಲ್ಲಿಯೇ ತೋರಿಸುವ ರಾಷ್ಟ್ರೀಯ ಹೆದ್ದಾರಿ ಕೂಡ ಸಾಂಕೇತಿಕ. ಹಿಂದೆ ಈ ರಸ್ತೆ ಬದಿಗಳಲ್ಲಿ “ಭಾರತ ಪ್ರಕಾಶಿಸುತ್ತಿದೆ” ಎಂಬ ಬೃಹತ್ ಫಲಕ ಕಾಣುತ್ತಿತ್ತು. ಇದರ ಅಣಕವನ್ನು ಈ ಸಿನೆಮಾ ಮಾಡುತ್ತದೆ. ಇದು ಬಹು ಪರಿಣಾಮಕಾರಿ.

ಇಂಥದ್ದೇ ಅಣಕವನ್ನು ಕೆಲವರ್ಷಗಳ ಹಿಂದೆ ತೆರೆಕಂಡ ಎನ್.ಹೆಚ್. 10 ಕೂಡ ಮಾಡಿತ್ತು. ವಿಶಾಲವಾದ, ಜಗಮಗಿಸುವ ನುಣ್ಣನೆಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಇರುವ ಹಳ್ಳಿಗಳಲ್ಲಿ ಜಾತೀಯತೆಯ ಭೀಕರ ಕಬಂಧಬಾಹು ಹೇಗಿದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.

ಈ ನಿಟ್ಟಿನಲ್ಲಿ ಹಿಂದಿ ಸಿನೆಮಾ ಎನ್.ಎಚ್. 10 ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ. ಅಂತರ್ಜಾತಿಯ ಪ್ರೇಮಿಗಳ ಆತಂಕ, ನಗರಗಳಲ್ಲಿನ ದುಡಿಯುವ ಮಹಳೆಯರ ಅಭದ್ರತೆ, ಅಸಹಾಯಕ ಆಗಿರುವ ಪೊಲೀಸ್, ಅಪರಾಧಗಳಿಗೆ ‘ಹೆದ್ದಾರಿ’ ಆಗಿರುವ ಹೆದ್ದಾರಿಗಳು, ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಹಣೆಪಟ್ಟಿ ಹೊತ್ತ ರಾಷ್ಟ್ರೀಯ ಹೆದ್ದಾರಿ ಮಗ್ಗುಲುಗಳಲ್ಲಿ ಇರುವ ಹಳ್ಳಿಗಳಲ್ಲಿನ ಜಾತೀಯತೆ ಕಾರಣದಿಂದ ಕೊಳೆತ ಮನಸುಗಳು, ಫ್ಯೂಡಲ್ ಸಿಸ್ಟಂ ನೆರಳಿಗೆ ನೆರಳಾಗಿರುವ ಪೊಲೀಸ್ ಮತ್ತು ಇವೆಲ್ಲದರ ಜೊತೆಗೆ ವಿದ್ಯಾವಂತ ಪುರುಷರ ನಿಸತ್ವ ‘ಇಗೋ’.

ಕಾರ್ಪೊರೇಟ್ ಕಂಪನಿಗಳಲ್ಲಿ ಸಮಯದ ಪರಿಮಿತಿ ಇಲ್ಲದೆ ದುಡಿಯುತ್ತಾ ಅಭದ್ರತೆ ಕಾರಣಕ್ಕೆ ಸದಾ ಆತಂಕದಲ್ಲಿ ನೆರಳಿನಲ್ಲಿರುವ ಮಹಿಳೆಯರ ಪ್ರತಿನಿಧಿಯಂತೆ ಈ ಚಿತ್ರದ ಮೀರಾ ಕಾಣುತ್ತಾಳೆ. ತಡರಾತ್ರಿಗಳಲ್ಲಿಯೂ ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಇವರ ನೆಮ್ಮದಿ ಕಸಿದುಕೊಳ್ಳುತ್ತದೆ. ಆಗಬಹುದಾದ ಅನಾಹುತಗಳ ಅರಿವಿಲ್ಲದೆ ಮಹಾನಗರಗಳಲ್ಲಿ ತಡರಾತ್ರಿ ವಹಿವಾಟು ಜಾರಿಯಲ್ಲಿರಬೇಕು ಎಂದು ಹಂಬಲಿಸುವ ವ್ಯಕ್ತಿಗಳನ್ನು ಪ್ರತಿನಿಧಿಸುವ ಪಾತ್ರವೊಂದರ ವಿವರ ಸಂಕ್ಷಿಪ್ತವಾಗಿದ್ದರೂ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.

ಎಗ್ಗಿಲ್ಲದೆ ಬೆಳೆದ, ಬೆಳೆಯುತ್ತಿರುವ ಮಹಾನಗರಗಳು, ಇದರ ಫಾಯಿದೆ ತೆಗೆದುಕೊಳ್ಳುತ್ತಿರುವ ಪುಂಡು-ಫೋಕರಿಗಳು, ಇವರನ್ನು ನಿಯಂತ್ರಿಸಲಾಗದ ಅಸಹಾಯಕರಾದ ಪೊಲೀಸರು, ಇಂಥ ಪೊಲೀಸರ ಪ್ರತಿನಿಧಿಯಂತೆ ಕಾಣುವ ಠಾಣಾಧಿಕಾರಿಯಿಂದ ಸ್ವಯಂರಕ್ಷಣೆಗಾಗಿ ಗನ್ ತೆಗೆದುಕೊಳ್ಳುವಂತೆ ಮೀರಾ ಮತ್ತು ನೈಲ್ ಭೂಪಾಲನ್ ದಂಪತಿಗೆ ಶಿಫಾರಸು.

ಮೀರಾ ಕೈಗೆ ಗನ್ ಬರುತ್ತದೆ. ರಕ್ಷಣೆ ಸಲುವಾಗಿ ತೆಗೆದುಕೊಳ್ಳುವ ಗನ್ ಇವರ ಅಭದ್ರತೆಗೂ ಕಾರಣವಾಗುತ್ತದೆ. ಈ ಮೂಲಕ ಎಲ್ಲೆಡೆ ಮೊಬೈಲ್, ಇಂಟರ್ನೆಟ್ ನೆಟ್ ವರ್ಕ್. ಅಲ್ಲಲ್ಲಿ ಪೊಲೀಸ್ ಠಾಣೆಗಳು ಇರುವ ನುಣ್ಣನೆ ಮೈ ಹೊದ್ದ ಹೆದ್ದಾರಿ ಬದಿಯ ಹಳ್ಳಿಗಳಲ್ಲಿ ಇಂದಿಗೂ ಜಾರಿಯಲ್ಲಿರುವ ಅಮಾನುಷ ‘ಮಾರ್ಯಾದಾ ಹತ್ಯೆ’ ಅನಾವರಣಗೊಳ್ಳುತ್ತದೆ.

ಪೊಳ್ಳು ಇಗೋ:

ಮಹಾನಗರಗಳ ವಿದ್ಯಾವಂತ ಯುವಕರಲ್ಲಿ ಸಂಗಾತಿಯನ್ನು ಮೆಚ್ಚಿಸುವ, ಹೀರೋಯಿಸಂ ತೋರಿಸುವ ತವಕ ಹೆಚ್ಚಿರುತ್ತದೆ. ಆದರೆ ಹೀಗೆ ಮಾಡಲು ಹೋಗುವ ಮುನ್ನ ಜೊತೆಗಿರುವ; ತನ್ನನ್ನೆ ನಂಬಿದ ಸಂಗಾತಿಯ ಭದ್ರತೆ ಜೊತೆಗೆ ತನ್ನ ಬಲಾಬಲ ಬಗ್ಗೆ ಯೋಚಿಸದೆ ದುಡುಕುವವವರ ಪ್ರತಿನಿಧಿಯಂತೆ ನೈಲ್ ಭೂಪಾಲನ್ ಕಾಣುತ್ತಾನೆ.

ಢಾಭಾ ಆವರಣದಲ್ಲಿ ಯುವ ಪ್ರೇಮಿಗಳಿಬ್ಬರನ್ನು ಥಳಿಸುತ್ತಿರುವ ಗ್ಯಾಂಗಿನ ಕೃತ್ಯವನ್ನು ಹಳ್ಳಿಗರು, ಪ್ರಯಾಣಿಕರು ಮೌನವಾಗಿ ನೋಡುತ್ತಿರುತ್ತಾರೆ. ಭೂಪಾಲನ್ ಇದನ್ನು ಪ್ರಶ್ನಿಸಿ ಏಟು ತಿನ್ನುತ್ತಾನೆ. ಆದರೆ ಅಲ್ಲೆ ಮರು ಏಟು ಹಾಕದೆ ಗ್ಯಾಂಗಿನ ಬೆನ್ನು ಹತ್ತುತ್ತಾನೆ. ಇದಕ್ಕೆ ಕಾರಣ  ಜೊತೆಗಿರುವ ಗನ್ ನೀಡಿದ ಧೈರ್ಯ. ಪತ್ನಿ ಪರಿಪರಿಯಾಗಿ ಬೇಡಿಕೊಂಡರೂ ಈತ ತನ್ನ ಇಗೋ ಬಿಡುವುದಿಲ್ಲ.

ಜೊತೆಗಿರುವ ಗನ್ ಅನ್ನು ಯುವಪ್ರೇಮಿಗಳು ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಈತ ಬಳಸುತ್ತಾನೆಯೇ ? ಅದು ಇಲ್ಲ. ಗ್ಯಾಂಗಿನ ಕೃತ್ಯವನ್ನು ಅಸಹಾಯಕನಂತೆ ನೋಡುತ್ತಾನೆ. ಪಾರಾಗುವ ಯತ್ನದಲ್ಲಿ ತಾನೂ ಅವರಿಗೆ ಸಿಕ್ಕಿ ಬೀಳುವುದಲ್ಲದೆ ಪತ್ನಿಯೂ ಸಿಲುಕಿಕೊಳ್ಳುವಂತೆ ಮಾಡುತ್ತಾನೆ. ಮತ್ತೆ ಪಾರಾಗುವ ಯತ್ನ ಮಾಡುತ್ತಾನೆ. ಆಗ ಘಟಿಸುವುದೆ ಬೇರೆ…

ಜಾತಿಯ ಮರ್ಯಾದೆ ಕಾರಣಕ್ಕೆ ತನ್ನ ಒಡ ಹುಟ್ಟಿದ ತಂಗಿ ಮತ್ತು ಈಕೆಯ ಪ್ರೇಮಿಯನ್ನು ಕೊಲ್ಲುವ ಸತ್ಬೀರ್ ಇಂಥವರೆಲ್ಲರ ಪ್ರತಿನಿಧಿಯಾಗಿ ಕಾಣುತ್ತಾನೆ. ಈ ಕೃತ್ಯಕ್ಕೆ ಸಾಕ್ಷಿಯಾದ ದಂಪತಿಗಳನ್ನು ಮುಗಿಸಲು ಇವನು ಮತ್ತಿವನ ತಂಡ ಬೆನ್ನು ಬೀಳುತ್ತದೆ. ಈ ಕೊಲೆಗಡುಕರಿಂದ ಪಾರಾಗುತ್ತಾ ಮತ್ತೆಮತ್ತೆ ಅಂಥವರೊಂದಿಗೆ ನೆಂಟು ಇರುವವರ ಹಿಡಿತಕ್ಕೆ ಸಿಲುಕಿ ಮತ್ತೆ ಅವರಿಂದ ಪಾರಾಗುತ್ತಾ ಮತ್ತೆ ಅಂಥವರ ಕೈಗೆ ಸಿಲುಕುವ ಮೀರಾ ಸ್ಥಿತಿ ತಲ್ಲಣ ಮೂಡಿಸುತ್ತದೆ.

ಪಾರಾಗುವ ಹಾದಿಯಲ್ಲಿ ಇಂದಿಗೂ ಭಾರತದ ಅನೇಕ ಹಳ್ಳಿಗಳಲ್ಲಿ ಜಾರಿಯಲ್ಲಿರುವ ಫ್ಯೂಡಲ್ ಸಂಸ್ಕೃತಿ, ಜಾತೀಯ ದರ್ಬಾರು, ಪಾಳೆಗಾರಿಕೆ ಮನೋಭಾವದ ಸರಪಂಚರು ಮತ್ತು ಅಸಹಾಯಕತೆಯಿಂದ ಇಂಥವರ ಸೇವಕರಂತೆ ಆಡುವ ಪೊಲೀಸರ ಚಿತ್ರಣ ದೊರೆಯುತ್ತದೆ. ಅಸಹಾಯಕವಾಗಿ ಕಾಣುವ ಮೀರಾ ತನ್ನ ಪ್ರಾಣ ಲೆಕ್ಕಿಸದೆ ಕೊಲೆಗಡುಕರನ್ನು ಬೇಟೆಯಾಡುವ ರೀತಿ ಬಹು ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಈ ಮೂಲಕ ಹೆಣ್ಣಿನಲ್ಲಿರುವ ಕೆಚ್ಚು, ರೋಷ ಸೂಕ್ತ ರೀತಿಯಲ್ಲಿ ಚಿತ್ರಿತವಾಗಿದೆ.

ಸಮಕಾಲೀನ ಭಾರತೀಯ ಸಮಾಜದ ಹುಳುಕಗಳನ್ನು ಎತ್ತಿ ತೋರಿಸುವ ಹಾದಿಯಲ್ಲಿ ಎನ್.ಎಚ್. 10 ಡಾಕ್ಯುಮೆಂಟರಿಯಾಗಿಲ್ಲ. ಜನಪ್ರಿಯ ಸಿನೆಮಾದ ಪರಿಭಾಷೆಯಲ್ಲಿಯೆ ತಾನು ಹೇಳಬೇಕಾದ ಸಂಗತಿಗಳನ್ನು ನಿರ್ದೇಶಕ ನವದೀಪ್ ಸಿಂಗ್ ಹೇಳಿದ್ದಾರೆ. ಚಿತ್ರಕಥೆಯಲ್ಲಿರುವ ಬಿಗಿ, ಕ್ಯಾಮರಾ ಕೆಲಸ ಜೊತೆಗೆ ಎಲ್ಲ ಕಲಾವಿದರ ಅಭಿನಯ ಸಿನೆಮಾವನ್ನು ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ.

ವಿಶೇಷವಾಗಿ ಅನುಷ್ಕಾ ಶರ್ಮ ಅಭಿನಯ ಗಮನ ಸೆಳೆಯುತ್ತದೆ. ದೊಡ್ಡ ವಹಿವಾಟು ಇರುವ ಕಂಪನಿ ಅಧಿಕಾರಿಯಾಗಿ, ತಡರಾತ್ರಿಯಲ್ಲಿ ದಾಳಿ ಮಾಡುವ ಕಾಮಂಧರಿಂದ ಪಾರಾಗುವ ಹೆಣ್ಣಾಗಿ, ಪತಿಯನ್ನು ರಕ್ಷಿಸಿಕೊಳ್ಳಲು ಯತ್ನಿಸುವ ಪತ್ನಿಯಾಗಿ, ನಗರದತ್ತ ಧಾವಿಸಿ ಹೋಗಲು ಆಸ್ಪದ ದೊರೆತರೂ ಕೊಲೆಗಡುಕರ ದಮನಕ್ಕೆ ಹೊರಡುವ ದುರ್ಗೆಯಾಗಿ ಇವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...