Homeಕರ್ನಾಟಕ‘14 ಶಾಸಕರು, 4 ಸಚಿವರು ನಮ್ಮಲ್ಲಿ ಲಂಚ ಕೇಳಿದ್ದಕ್ಕೆ ದಾಖಲೆ ಇವೆ’: ಗುತ್ತಿಗೆದಾರ ಸಂಘದ ಕಾರ್ಯಾಧ್ಯಕ್ಷ

‘14 ಶಾಸಕರು, 4 ಸಚಿವರು ನಮ್ಮಲ್ಲಿ ಲಂಚ ಕೇಳಿದ್ದಕ್ಕೆ ದಾಖಲೆ ಇವೆ’: ಗುತ್ತಿಗೆದಾರ ಸಂಘದ ಕಾರ್ಯಾಧ್ಯಕ್ಷ

- Advertisement -
- Advertisement -

ರಾಜ್ಯದ ಅಧಿಕಾರಿಗಳು, ಶಾಸಕರು ಮತ್ತು ಸಚಿವರು ಎಲ್ಲಾ ಸರ್ಕಾರಿ ಗುತ್ತಿಗೆಗಳಿಗೆ 40% ಲಂಚವನ್ನು ಕೇಳುತ್ತಾರೆ ಎಂದು ಆರೋಪಿಸಿದ ಸುಮಾರು ತಿಂಗಳ ನಂತರ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ (ಕೆಎಸ್‌ಸಿಎ)ವು ತಮ್ಮ ಪ್ರತಿಪಾದನೆಯನ್ನು ನಿರೂಪಿಸಲು ಆಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ 15 ಶಾಸಕರು ಮತ್ತು ನಾಲ್ವರು ಸಚಿವರ ವಿರುದ್ಧ ಭ್ರಷ್ಟಾಚಾರದ ದಾಖಲೆಗಳು ತಮ್ಮ ಬಳಿ ಇದೆ ಎಂದು ಕೆಎಸ್‌ಸಿಎ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಖ್ಯಾತ ಇಂಗ್ಲಿಷ್ ಸುದ್ದಿ ಮಾಧ್ಯಮ ದಿ ನ್ಯೂಸ್ ಮಿನಿಟ್‌ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ರಾಜ್ಯ ಸರ್ಕಾರವು ಬಾಕಿ ಇರುವ ಬಿಲ್‌ಗಳನ್ನು ತೆರವುಗೊಳಿಸದಿದ್ದರೆ, ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಕೆಎಸ್‌ಸಿಎ ಕಾರ್ಯಾಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಲಂಚ ನೀಡಲಾಗುತ್ತಿದೆ ಎಂಬುವುದನ್ನು ನಿರೂಪಿಸಲು ನಮ್ಮ ಬಳಿ ದಾಖಲೆಗಳಿವೆ. ಆದರೆ ಸಂತೋಷ್ ಪಾಟೀಲ್ ನಿಧನದ ನಂತರ ಭ್ರಷ್ಟಾಚಾರದ ದಾಖಲೆಗಳನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ಈ ವಿವಾದದ ಬಿಂದುವಾಗಿದ್ದ ಸಚಿವರನ್ನೂ ಬಂಧಿಸಿರಲಿಲ್ಲ. ಇದು ಏನು ತೋರಿಸುತ್ತದೆ ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ.

ಬಾಕಿ ಇರುವ ಬಿಲ್‌ಗಳನ್ನು ಕ್ಲಿಯರ್ ಮಾಡಲು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದ ಗುತ್ತಿಗೆದಾದ ಸಂತೋಷ್ ಪಾಟೀಲ್ ಅವರು 2022ರ ಏಪ್ರಿಲ್‌ನಲ್ಲಿ ಉಡುಪಿಯ ಹೋಟೆಲ್ ಕೊಠಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.

ಮಂಜುನಾಥ್ ಅವರು ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ಅನ್ನು ಪತ್ರಿಕಾಗೋಷ್ಠಿಯಲ್ಲಿ ಪ್ಲೇ ಮಾಡಿದ್ದರು. ಈ ಸಂಭಾಷಣೆಯಲ್ಲಿ, ಮಂಜುನಾಥ್ ಅವರ ಧ್ವನಿಯು ಕೇಳಿಸುತ್ತದೆ,“(ಗುತ್ತಿಗೆ ಕಾಮಗಾರಿ) ಬಿಲ್ ಮಾಡಬೇಡಿ ಎಂದು ನೀವು ಹೇಗೆ ಹೇಳುತ್ತೀರಿ? ಅದು ತಪ್ಪಲ್ಲವೆ.(ಉಳಿದ ಲಂಚದ ಮೊತ್ತ) ನಾನು ನಿಮಗೆ ನೀಡುತ್ತೇನೆ… 5 ರಿಂದ 6 ಕೋಟಿ ರೂ. ಬಾಕಿ ಇವೆ. ನಾನು ಹೇಗೆ ಜೀವನ ನಡೆಸುವುದು?” ಎಂದು ಕೇಳಿದ್ದರು.

“ಶಾಸಕ ಲಂಚ ಕೇಳಿದ್ದಕ್ಕೆ ನನ್ನ ಬಳಿ ಆಡಿಯೋ ಕ್ಲಿಪ್‌ಗಳು, ವಾಟ್ಸ್‌ಆ್ಯಪ್ ಚಾಟ್‌ಗಳು ಮತ್ತು ಇತರ ದಾಖಲೆಗಳಿವೆ. ಹಾಗಾಗಿ ಇದನ್ನು ಮಾಧ್ಯಮಗಳ ಮುಂದೆ ಇಡಲು ಬಯಸಿದ್ದೇನೆ. ಇತರ ಗುತ್ತಿಗೆದಾರರಿಗೆ ಮಾದರಿಯಾಗಲು ಬೇಕಾಗಿ ನಾನು ಮುಂದೆ ನಿಂತಿದ್ದೇನೆ. 2019 ರಿಂದ ಹಿರಿಯ ಶಾಸಕರೊಬ್ಬರಿಗೆ ನಾನು ಹಣ ಕೊಡಬೇಕಾಗಿತ್ತು” ಎಂದು ಮಂಜುನಾಥ್ ತಿಳಿಸಿದ್ದಾರೆ.

“2019 ರಲ್ಲಿ ನಾನು PWD ಕಚೇರಿಯನ್ನು ನಿರ್ಮಿಸಿದೆ. ಆದರೆ ಅದರ ಬಿಲ್ ಇನ್ನೂ ಕ್ಲಿಯರ್ ಆಗಿಲ್ಲ. ನಾನು ಚಿತ್ರದುರ್ಗದಲ್ಲಿ ವಿಭಾಗ ಕಚೇರಿಯನ್ನು ನಿರ್ಮಿಸಿದ್ದೇನೆ, ಅದಕ್ಕೂ 5% ಕ್ಕಿಂತ ಹೆಚ್ಚು ಲಂಚ ನೀಡಬೇಕಾಗಿತ್ತು. ಮೊದಲ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ನಾನು 250 ಹಾಸಿಗೆಗಳ ಆಸ್ಪತ್ರೆಗಾಗಿ ವೈದ್ಯಕೀಯ ಗ್ಯಾಸ್ ಪೈಪ್‌ಲೈನ್ (MGS) ವ್ಯವಸ್ಥೆಯನ್ನು ನಿರ್ಮಿಸಿದೆ. ಇದು 12 ಕೋಟಿ ರೂಪಾಯಿ ಮೌಲ್ಯದ ಯೋಜನೆಯಾಗಿದ್ದು, ಇದಕ್ಕಾಗಿ ನಾನು 12.5 ಲಕ್ಷ ರೂಪಾಯಿ ಲಂಚ ನೀಡಬೇಕಾಯಿತು” ಎಂದು ಅವರು ಹೇಳಿದ್ದಾರೆ.

ಸುಮಾರು 25,000 ಕೋಟಿ ಮೌಲ್ಯದ ಬಿಲ್‌ಗಳು ಸರ್ಕಾರದ ಬಳಿ ಬಾಕಿ ಇವೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...